ಈ ಆರೋಗ್ಯ ಸಮಸ್ಯೆ ಇರೋರು ಬದನೆಕಾಯಿ ತಿನ್ನದಿದ್ದರೆ ಒಳಿತು

Published : Mar 28, 2023, 03:36 PM IST

ಬದನೆಕಾಯಿ ಒಂದು ತರಕಾರಿಯಾಗಿದ್ದು, ಅದರಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಅಷ್ಟೇ ಯಾಕೆ ಅವು ತಿನ್ನಲು ತುಂಬಾ ರುಚಿಕರವಾಗಿರುತ್ತವೆ, ಹಾಗಾಗಿ ಅದರಿಂದ ಜನರು ಏನೆನೋ ಡಿಶ್ ತಯಾರಿಸಿ ತಿನ್ನುತ್ತಾರೆ. ಆದರೆ ಇದನ್ನು ಕೆಲವು ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳಲ್ಲಿ ಸೇವಿಸಬಾರದು ಅನ್ನೋದು ಗೊತ್ತಾ? ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.   

PREV
18
ಈ ಆರೋಗ್ಯ ಸಮಸ್ಯೆ ಇರೋರು ಬದನೆಕಾಯಿ ತಿನ್ನದಿದ್ದರೆ ಒಳಿತು

ಬದನೆಕಾಯಿ (Brinjal) ನೀವು ಪ್ರತಿ ಋತುವಿನಲ್ಲಿ ತಿನ್ನಬಹುದಾದ ತರಕಾರಿ. ಅದು ಎಣ್ಣೆಗಾಯಿಯಾಗಿರಲಿ, ಸಾಂಬಾರ್ ಅಥವಾ ಗ್ರೇವಿ ಏನೇ ಆಗಿರಲಿ, ಅದರ ರುಚಿ ಪ್ರತಿಯೊಂದು ರೂಪದಲ್ಲಿಯೂ ಅದ್ಭುತವಾಗಿದೆ ಮತ್ತು ವಿದೇಶಗಳಲ್ಲಿ ಇದರಿಂದ ಅನೇಕ ಇತರ ಭಕ್ಷ್ಯಗಳನ್ನು ತಯಾರಿಸಲಾಗುತ್ತೆ. 

28

ಬದನೆಕಾಯಿ ನೇರಳೆ ಬಣ್ಣವನ್ನು ಹೊರತುಪಡಿಸಿ, ಇದು ಹಸಿರು(Green) ಮತ್ತು ಬಿಳಿ ಬಣ್ಣಗಳಲ್ಲಿಯೂ ಲಭ್ಯವಿದೆ. ವಿವಿಧ ಬಣ್ಣ, ರೂಪ ಮತ್ತು ಗಾತ್ರಗಳನ್ನು ಹೊಂದಿರುವ ಬದನೆಕಾಯಿ ಅನೇಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ನಮ್ಮ ದೇಹಕ್ಕೆ ಇದು ಬೇಕು, ಆದರೆ ಕೆಲವು ರೋಗಗಳಲ್ಲಿ, ಇದರ ಸೇವನೆಯು ಪ್ರಯೋಜನದ ಬದಲು ಹಾನಿಯನ್ನು ಉಂಟುಮಾಡಬಹುದು, ಆದ್ದರಿಂದ ಅದರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ. 

38

ಬದನೆಕಾಯಿಯಲ್ಲಿರುವ ಪೋಷಕಾಂಶಗಳು
ಬದನೆಕಾಯಿ ಬಣ್ಣವು ಅದರಲ್ಲಿ ಕಂಡುಬರುವ ನಾಸುನಿನ್ ಎಂಬ ನೇರಳೆ(Purple) ಆಂಥೋಸಯಾನಿನ್ ನಿಂದ ಉಂಟಾಗುತ್ತೆ, ಇದು ಉತ್ತಮ ಉತ್ಕರ್ಷಣ ನಿರೋಧಕ. ಇದು ಸಾಮಾನ್ಯವಾಗಿ ಬದನೆಕಾಯಿಗಳಲ್ಲಿ ಕಂಡುಬರುತ್ತೆ . 

48

ಬದನೆಕಾಯಿ ಮತ್ತೊಂದು ಪ್ರಯೋಜನಕಾರಿ ಉತ್ಕರ್ಷಣ ನಿರೋಧಕ ಕ್ಲೋರೋಜೆನಿಕ್ ಆಮ್ಲವನ್ನು ಹೊಂದಿದೆ. ಇದು ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ. ಇದರೊಂದಿಗೆ, ಈ ಅಂಶವು ತೂಕವನ್ನು ಕಳೆದುಕೊಳ್ಳೋದರಿಂದ ಹಿಡಿದು ರಕ್ತದೊತ್ತಡ (Blood pressure) ಸಾಮಾನ್ಯವಾಗಿರಿಸಲು ಸಹಾಯ ಮಾಡುತ್ತೆ.. 

58

ಬದನೆಕಾಯಿಯಲ್ಲಿ ಅನೇಕ ವಿಟಮಿನ್ಸ್(Vitamins) ಮತ್ತು ಮಿನರಲ್ಸ್ ಇವೆ. ಇದರಲ್ಲಿ ವಿಟಮಿನ್ ಸಿ, ಕೆ, ವಿಟಮಿನ್ ಬಿ 1, ಬಿ 3, ಬಿ 6 ಮತ್ತು ಮೆಗ್ನೀಸಿಯಮ್, ರಂಜಕ, ಕ್ಯಾಲ್ಸಿಯಂ, ಸೋಡಿಯಂ, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್, ಸತುವಿನಂತಹ ಅಂಶಗಳಿವೆ.

68

ಈ ಜನರು ಬದನೆಕಾಯಿಯನ್ನು ಸೇವಿಸಬಾರದು
ಬದನೆಕಾಯಿಯಲ್ಲಿ ಆಕ್ಸಲೇಟ್ ಕಂಡುಬರುತ್ತೆ. ಈ ಕಾರಣದಿಂದಾಗಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆ, ಇದು ಮೂಳೆಗಳಿಗೆ ಸೂಕ್ತವಲ್ಲ. ಆದ್ದರಿಂದ ನಿಮ್ಮ ಮೂಳೆಗಳು(Bones) ಈಗಾಗಲೇ ದುರ್ಬಲವಾಗಿದ್ದರೆ, ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

78

ಮೂತ್ರಪಿಂಡದ ಕಲ್ಲಿನ(Kidney stone) ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಬದನೆಕಾಯಿಯನ್ನು ಸೇವಿಸಬಾರದು. ನಿಮಗೆ ರಕ್ತಹೀನತೆ ಇದ್ದರೆ ಅಂದರೆ ರಕ್ತದ ಕೊರತೆ ಇದ್ದರೆ, ನೀವು ಬದನೆಕಾಯಿಯನ್ನು ಸಹ ಸೇವಿಸಬಾರದು.

88

ಮೂಗಿನ ರಕ್ತಸ್ರಾವ ಅಥವಾ ರಕ್ತಸಿಕ್ತ ಮೂಲವ್ಯಾಧಿಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದರ ಸೇವನೆ ಹಾನಿಕಾರಕ.
ಬದನೆಕಾಯಿಯ ಅತಿಯಾದ ಸೇವನೆಯು ಹೊಟ್ಟೆ ನೋವು, ವಾಂತಿ, ತಲೆನೋವು, ತುರಿಕೆ(Itching) ಅಥವಾ ಕೀಲು ನೋವಿಗೆ ಕಾರಣವಾಗಬಹುದು. 
ಸಂಧಿವಾತದ ಸಮಸ್ಯೆ ಇದ್ದರೆ, ನೀವು ಬದನೆಕಾಯಿಯನ್ನು ಸೇವಿಸುವಂತಿಲ್ಲ.

Read more Photos on
click me!

Recommended Stories