ಹುಟ್ಟಿದ ಮಕ್ಕಳ ದೇಹವೇಕೆ ನೀಲಿಯಾಗಿರುತ್ತೆ?

ಅಕ್ರೋಸಯನೋಸಿಸ್ ನೋವುರಹಿತ ಸ್ಥಿತಿಯಾಗಿದ್ದು, ಇದರಲ್ಲಿ ಚರ್ಮದಲ್ಲಿನ ಸಣ್ಣ ರಕ್ತನಾಳಗಳು ಕಿರಿದಾಗುತ್ತವೆ. ಇದರಲ್ಲಿ, ಕೈ ಮತ್ತು ಕಾಲುಗಳ ಬಣ್ಣವು ನೀಲಿ ಬಣ್ಣಕ್ಕೆ ತಿರುಗುತ್ತೆ. ದೇಹದ ಕೇಂದ್ರ ಭಾಗದಲ್ಲಿ ಸೈನೋಸಿಸ್ ಇಲ್ಲದಿದ್ದರೆ ಆರೋಗ್ಯವಂತ ನವಜಾತ ಶಿಶುಗಳಲ್ಲಿ ಅಕ್ರೋಸಯನೋಸಿಸನ್ನು ಕಾಮನ್ ಎಂದು ಪರಿಗಣಿಸಲಾಗುತ್ತೆ. ಇದರ ಬಗ್ಗೆ ಹೆಚ್ಚು ತಿಳಿಯಲು ಈ ಸ್ಟೋರಿ ಓದಿ. 

ಸಾಮಾನ್ಯವಾಗಿ, ನವಜಾತ ಶಿಶುಗಳಲ್ಲಿ(New born) ಅಕ್ರೋಸಯನೋಸಿಸ್ ಹಾನಿಕಾರಕ ವಾಸೊಮೊಟೊರ್ ಬದಲಾವಣೆಯಿಂದ ಉಂಟಾಗಬಹುದು, ಇದು ಜೀವನದ ಮೊದಲ ಕೆಲವು ದಿನಗಳಲ್ಲಿ ತಾನಾಗಿಯೇ ಗುಣವಾಗುತ್ತೆ. ಆದರೆ, ಇತರ ಸಮಸ್ಯೆಗಳಿಂದಾಗಿ ಈ ಸ್ಥಿತಿಯು ಹದಗೆಡಬಹುದು. 

ಹೆಲ್ತ್ಲೈನ್ 2011 ರ ಸಂಶೋಧನೆಯ ಪ್ರಕಾರ, ಸೆಕೆಂಡರಿ ಅಕ್ರೋಸಯನೋಸಿಸ್ ಅನೇಕ ವಿಭಿನ್ನ ರೋಗಗಳಿಂದ ಉಂಟಾಗುತ್ತೆ. ಇವುಗಳಲ್ಲಿ ತಿನ್ನುವ ಅಸ್ವಸ್ಥತೆ, ಮಾನಸಿಕ ಅಸ್ವಸ್ಥತೆ ಮತ್ತು ಕ್ಯಾನ್ಸರ್(Cancer) ಸೇರಿವೆ. ಈ ರೊಗದ ಲಕ್ಷಣಗಳು ಯಾವುವು? ಇನ್ನಿತರ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. 
 


ಅಕ್ರೋಸಯನೋಸಿಸ್(Acrocyanosis) ರೋಗಲಕ್ಷಣಗಳು
ನೀಲಿ ಬಣ್ಣವನ್ನು ಹೊಂದಿರುವ ಕೈ ಮತ್ತು ಪಾದಗಳಲ್ಲಿನ ನೋವು ಈ ಸ್ಥಿತಿಯ ಗಮನಾರ್ಹ ಲಕ್ಷಣ. ಅಕ್ರೋಸಯನೋಸಿಸ್ನ ರೋಗಲಕ್ಷಣಗಳಲ್ಲಿ ಪೀಡಿತ ಪ್ರದೇಶಗಳಲ್ಲಿ ತಂಪು, ಚರ್ಮದ ನೀಲಿ ಬಣ್ಣ, ಬೆರಳುಗಳ ಊತ, ಕೈ ಮತ್ತು ಕಾಲುಗಳಲ್ಲಿ ಅತಿಯಾದ ಬೆವರುವಿಕೆ, ಬಾಯಿಯ ಸುತ್ತಲೂ ಸೈನೋಸಿಸ್ ಮತ್ತು ಕೆಲವು ಸಂದರ್ಭಗಳಲ್ಲಿ ಮುಂಗೈಗಳು, ಕಿವಿ, ತುಟಿ, ಮೂಗು ಅಥವಾ ಮೊಲೆತೊಟ್ಟುಗಳ ಬಣ್ಣವೂ ಮಸುಕಾಗಬಹುದು.

ಆಟೋಇಮ್ಯೂನ್(Auto immune), ನರಸಂಬಂಧಿ, ಸಾಂಕ್ರಾಮಿಕ ಮತ್ತು ಚಯಾಪಚಯ ಕಾರಣಗಳಿಗೆ ರಿಯಾಕ್ಷನಿಂದ ಪ್ರೈಮರಿ ಮತ್ತು ಸೆಕೆಂಡರಿ ಅಕ್ರೋಸಿಸ್ ಸಂಭವಿಸಬಹುದು. ನವಜಾತ ಶಿಶುಗಳಲ್ಲಿ ಅಕ್ರಾಸಿಯನೋಸಿಸ್ ಸಾಮಾನ್ಯವಾಗಿದೆ ಮತ್ತು ಮಗುವಿನ ಜನನದ ನಂತರ ದೇಹ ಮತ್ತು ಪರಿಸರದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಲು ರಕ್ತಪರಿಚಲನಾ ವ್ಯವಸ್ಥೆಗೆ ಸಮಯ ತೆಗೆದುಕೊಳ್ಳುತ್ತೆ, ಆದ್ದರಿಂದ ಅದು ಸಂಭವಿಸಬಹುದು.

ಪ್ರೈಮರಿ ಅಕ್ರೋಸಯನೋಸಿಸ್
ಪ್ರೈಮರಿ ಅಕ್ರೋಸಿನೋಸಿಸ್ ಗೆ ನಿಖರವಾದ ಕಾರಣ ತಿಳಿದಿಲ್ಲ. ನವಜಾತ ಶಿಶುಗಳಲ್ಲಿ, ರಕ್ತ ಪರಿಚಲನೆಯಲ್ಲಿನ(Blood circulation) ಬದಲಾವಣೆಗಳು ಪ್ರಾಥಮಿಕ ಕಾರಣವಾಗಿರಬಹುದು. ಅಂಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ತಲುಪಿಸುವ ರಕ್ತನಾಳಗಳನ್ನು ಕುಗ್ಗಿಸುವ ಮೂಲಕ ಅಕ್ರೋಸಯನೋಸಿಸ್ ಸಂಭವಿಸಬಹುದು.

ಸೆಕೆಂಡರಿ ಅಕ್ರೋಸಯನೋಸಿಸ್
ಸೆಕೆಂಡರಿ ಅಕ್ರೋಸಯನೋಸಿಸ್ ಸಾಮಾನ್ಯವಾಗಿ ಅಂತರ್ಗತ ಸ್ಥಿತಿಯಿಂದ ಉಂಟಾಗುತ್ತೆ ಮತ್ತು ಕೆಲವು ಭಾಗಗಳಲ್ಲಿ ನೋವಿನಿಂದ ಕೂಡಿರುತ್ತೆ. ಇದನ್ನು ಸೆಂಟ್ರಲ್ ಅಕ್ರೋಸಯನೋಸಿಸ್ ಎಂದು ಸಹ ಹೇಳಬಹುದು. ಇದು ಈ ಕೆಳಗಿನ ಪರಿಸ್ಥಿತಿಗಳಲ್ಲಿ ಒಂದರೊಂದಿಗೆ ಸಂಭವಿಸಬಹುದು. 
ಡೌನ್ ಸಿಂಡ್ರೋಮ್(Down syndrome)
ಹೈಪೋಕ್ಸೆಮಿಯಾ
ಕನೆಕ್ಟಿವ್ ಟಿಶ್ಯೂ ಡಿಸೀಸ್
ರೋಸೇಸಿಯಾ
ಅಪೌಷ್ಟಿಕತೆ (malnutrition)
ರಕ್ತದ ಅಸ್ವಸ್ಥತೆ
ಜೀವಾಣುಗಳಿಗೆ ಒಡ್ಡಿಕೊಳ್ಳೋದು
ಸೋಂಕುಗಳು
ಮೈಟೊಕಾಂಡ್ರಿಯಲ್ ಕಾಯಿಲೆ
ಎಹ್ಲರ್ಸ್-ಡ್ಯಾನ್ಲೋಸ್ ಸಿಂಡ್ರೋಮ್
ಬೆನ್ನುಹುರಿ ಗಾಯ ಮತ್ತು ಅಟೋಪಿಕ್ ಡರ್ಮಟೈಟಿಸ್.

ಯಾರು ಅಕ್ರೋಸಯನೋಸಿಸ್ನ ಅಪಾಯದಲಿದ್ದಾರೆ?
ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿರುವವರು, ಸ್ಥಿರ ಶೀತ ತಾಪಮಾನದಲ್ಲಿ ವಾಸಿಸುವವರು, ಮುಖ್ಯವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ರಕ್ತಪರಿಚಲನಾ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಈ ಅಪಾಯದಲ್ಲಿರುತ್ತಾರೆ. ಅಲ್ಲದೇ ಹುಡುಗಿಯರು ಹುಡುಗರಿಗಿಂತ ಸ್ವಲ್ಪ ಹೆಚ್ಚಿನ ಅಪಾಯದಲ್ಲಿರಬಹುದು.

ಅಕ್ರೋಸಯನೋಸಿಸ್ ಚಿಕಿತ್ಸೆ
ಹೆಚ್ಚಿನ ಸಂದರ್ಭಗಳಲ್ಲಿ, ಪ್ರೈಮರಿ ಅಕ್ರಾಸಿಯನೋಸಿಸ್ಗೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಇದಕ್ಕೆ ಔಷಧೋಪಚಾರದ ಅಗತ್ಯವಿರೋದಿಲ್ಲ. ಶೀತ ವಾತಾವರಣದಲ್ಲಿ ಅಕ್ರೋಸಯನೋಸಿಸ್ ತಪ್ಪಿಸಲು ಮಗುವನ್ನು ಬೆಚ್ಚಗಿಡಬೇಕು. ಮಗುವನ್ನು ಶೀತದಿಂದ ರಕ್ಷಿಸಲು, ಸ್ನಾನ ಮಾಡಿದ ನಂತರ ಟವೆಲ್ ನಿಂದ(Towel) ಸುತ್ತಿ.
 

ಸೆಕೆಂಡರಿ ಅಕ್ರೋಸಯನೋಸಿಸ್ ಚಿಕಿತ್ಸೆಯು(Treatment) ಮೂಲ ಕಾರಣ ಮತ್ತು ರೋಗಲಕ್ಷಣಗಳ ಮೇಲೆ ಅವಲಂಬಿತವಾಗಿರುತ್ತೆ. ಮೂಲ ಸ್ಥಿತಿಗೆ ಚಿಕಿತ್ಸೆ ನೀಡಿ ಸೆಕೆಂಡರಿ ಅಕ್ರೋಸಯನೋಸಿಸನ್ನು  ಗುಣಪಡಿಸಬಹುದು. ಆನುವಂಶಿಕ ಸಮಸ್ಯೆಗಳಂತಹ ಕೆಲವು ಪರಿಸ್ಥಿತಿಗಳಿಗೆ ಸೆಕೆಂಡರಿ ಅಕ್ರೋಸಯನೋಸಿಸ್ ತಪ್ಪಿಸಲು ದೀರ್ಘಕಾಲೀನ ನಿರ್ವಹಣೆಯ ಅಗತ್ಯವಿರಬಹುದು.

Latest Videos

click me!