ಚಳಿಗಾಲದಲ್ಲಿ ಕಂಡುಬರುವ ತಾಜಾ-ಹಸಿರು ಬಟಾಣಿಗಳು(Green peas) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಸಿರು ಬಟಾಣಿ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡುವುದರ ಜೊತೆಗೆ ರಕ್ತದೊತ್ತಡವನ್ನು (ಬಿಪಿ) ನಿಯಂತ್ರಣದಲ್ಲಿಡುತ್ತವೆ. ಮಧುಮೇಹ ರೋಗಿಗಳಿಗೆ ಹಸಿರು ಬಟಾಣಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಸಿರು ಬಟಾಣಿಗಳ ನಿರಂತರ ಸೇವನೆಯು ದೇಹದ ತೂಕವನ್ನು ಸಹ ಕಡಿಮೆ ಮಾಡುತ್ತೆ. ಈ ಗುಣಗಳಿಂದಾಗಿ, ಹಸಿರು ಬಟಾಣಿಗಳನ್ನು ಮ್ಯಾಗಿಯಿಂದ ವೆಜ್ ಬಿರಿಯಾನಿಯವರೆಗೆ ಎಲ್ಲದರಲ್ಲೂ ಬಳಸಲಾಗುತ್ತೆ.
ಬಟಾಣಿ ಆಂಟಿ-ಆಕ್ಸಿಡೆಂಟ್‌ಗಳ ನಿಧಿ: ಹಸಿರು ಬಟಾಣಿ ಕಬ್ಬಿಣ, ಜಿಂಕ್, ಮ್ಯಾಂಗನೀಸ್ ಮತ್ತು ಕಾಪರ್ ಹೊಂದಿದೆ, ಇದು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತೆ. ಅಲ್ಲದೆ, ಬಟಾಣಿಯಲ್ಲಿ ಸಾಕಷ್ಟು ಆಂಟಿ-ಆಕ್ಸಿಡೆಂಟ್ಗಳು ಕಂಡುಬರುತ್ತವೆ, ಅವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ರೋಗಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.
ಬಟಾಣಿಯಲ್ಲಿರುವ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿ ಕಣ್ಣಿನ(Eye) ದೃಷ್ಟಿಯನ್ನು ಹೆಚ್ಚಿಸುತ್ತವೆ. ಹಸಿರು ಬಟಾಣಿಗಳು ಹೃದಯ, ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡುತ್ತವೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ. ಆದುದರಿಂದ ಇದನ್ನು ನಿಯಮಿತವಾಗಿ ಸೇವಿಸೋದನ್ನು ಮರೆಯಬೇಡಿ.
ಹಿಮ್ಮಡಿ ಮತ್ತು ತುಟಿಗಳನ್ನು ಬಿರುಕು ಬಿಡದಂತೆ ರಕ್ಷಿಸುತ್ತೆ: ಬಟಾಣಿಗಳಲ್ಲಿ ವಿಟಮಿನ್-ಎ ಮತ್ತು ಇ ಹೇರಳವಾಗಿ ಕಂಡುಬರುತ್ತವೆ. ಈ ಎರಡೂ ಜೀವಸತ್ವಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಶೀತದಲ್ಲಿ ತುಟಿ ಮತ್ತು ಹಿಮ್ಮಡಿ ಒಡೆಯುವ ಸಮಸ್ಯೆ ಸಾಮಾನ್ಯವಾಗಿದೆ. ಹಾಗಾಗಿ, ಹಸಿರು ಬಟಾಣಿ ತಿನ್ನುವುದು ಒಳ್ಳೇದು.
ಫೈಬರ್ ನಿಂದಾಗಿ ಬಟಾಣಿ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತೆ: ಹಸಿರು ಬಟಾಣಿಗಳಲ್ಲಿ ನಾರಿನಂಶ, ವಿಟಮಿನ್ಸ್ (Vitamins)ಮತ್ತು ಮಿನರಲ್ಸ್ ಸಮೃದ್ಧವಾಗಿವೆ. ನಾರಿನಂಶ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಇದು ಪ್ರೋಟೀನ್ ಸಹ ಹೊಂದಿರುತ್ತೆ, ಇದು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ಇದು ಕೊಲೆಸ್ಟ್ರಾಲ್ ಸಹ ಕಡಿಮೆ ಮಾಡುತ್ತೆ,ಹಾಗೇ ಬಟಾಣಿ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ದೂರವಿಡುತ್ತೆ.
ಬಟಾಣಿ ಚರ್ಮವನ್ನು ಸ್ವಚ್ಛಗೊಳಿಸುತ್ತೆ ಮತ್ತು ಮುಖಕ್ಕೆ ಹೊಳಪನ್ನು ತರುತ್ತೆ: ಹಸಿರು ಬಟಾಣಿಗಳು ರುಚಿ ಮತ್ತು ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಅಗತ್ಯ. ಹಸಿರು ಬಟಾಣಿಯನ್ನು ರುಬ್ಬಿ ಮುಖಕ್ಕೆ ಹಚ್ಚಿದರೆ, ಅದು ನೈಸರ್ಗಿಕ ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತೆ. ಹಸಿರು ಬಟಾಣಿಗಳು ಚರ್ಮವನ್ನು ಸ್ವಚ್ಛಗೊಳಿಸುತ್ತವೆ ಮತ್ತು ಮುಖಕ್ಕೆ ಹೊಳಪನ್ನು ತರುತ್ತವೆ.
ಬಟಾಣಿಗಳು ಅಲ್ಜೈಮರ್ಸ್ ಸಮಸ್ಯೆ (alzheimer) ಸಹ ದೂರವಿಡುತ್ತವೆ: ಪಾಲಿಮಯೋಥೆಲ್ಲಾನಮೈಡ್ ಹಸಿರು ಬಟಾಣಿಗಳಲ್ಲಿ ಕಂಡುಬರುತ್ತೆ. ಅಲ್ಝೈಮರ್ ವಿರುದ್ಧ ಹೋರಾಡಲು ಪಾಲಿಮಯೋಥೈಲೆನಮೈಡ್ ಸಹಾಯ ಮಾಡುತ್ತೆ ಎಂದು ಯುಎಸ್ ಮತ್ತು ಯುರೋಪ್ನಲ್ಲಿ ಇತ್ತೀಚಿನ ಸಂಶೋಧನೆಗಳು ತೋರಿಸಿವೆ. ಬಟಾಣಿಯಲ್ಲಿ ಕಂಡುಬರುವ ಸೆಲೆನಿಯಂ ಸಂಧಿವಾತ, ಕೀಲು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತೆ.
ನಿಮಗೆ ಗ್ಯಾಸ್(Gas) ಸಮಸ್ಯೆ ಇದ್ದರೆ, ಬಟಾಣಿಯನ್ನು ಎಚ್ಚರಿಕೆಯಿಂದ ತಿನ್ನಿ. ಬಟಾಣಿಯಿಂದ ಹಲವಾರು ಪ್ರಯೋಜನಗಳಿವೆ ನಿಜಾ. ಆದರೆ ಅನೇಕ ಗುಣಲಕ್ಷಣಗಳನ್ನು ಹೊಂದಿರುವ ಬಟಾಣಿಯನ್ನು ಹೆಚ್ಚು ತಿಂದರೆ, ಅದು ಗ್ಯಾಸ್ ಉಂಟುಮಾಡುತ್ತೆ. ಆದ್ದರಿಂದ, ಗ್ಯಾಸ್ ಸಮಸ್ಯೆ ಇದ್ದರೆ, ಬಟಾಣಿಯನ್ನು ಸ್ವಲ್ಪ ಎಚ್ಚರಿಕೆಯಿಂದ ತಿನ್ನಿ.