ಪೂರ್ವಜರು ತಿಳಿಸಿದ ನಿಯಮ ಫಾಲೋ ಮಾಡಿದ್ರೆ ದೀರ್ಘಾಯಸ್ಸು ಗ್ಯಾರಂಟಿ !

Published : Dec 16, 2022, 04:52 PM IST

ವಿಶ್ವದಾದ್ಯಂತ ಹೆಚ್ಚಿನ ಜನರು ಜೀವನಶೈಲಿಗೆ ಸಂಬಂಧಿಸಿದ ರೋಗಗಳ ಹೆಚ್ಚುತ್ತಿರುವ ಟ್ರೆಂಡಿಂದ ತೊಂದರೆಗೀಡಾಗಿದ್ದಾರೆ ಎಂದು ವೈದ್ಯರು ಹೇಳುತ್ತಾರೆ. ಆದರೆ ನಾವು ಕೆಲವು ನಿಯಮಗಳನ್ನು ಪಾಲಿಸಿದ್ರೆ ಸಮಸ್ಯೆ ದೂರ ಮಾಡಬಹುದು. ಹೌದು, ಭಾರತೀಯ ಸಂಪ್ರದಾಯಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಇಲ್ಲಿವೆ, ಅವು ನಮ್ಮನ್ನು ರೋಗಗಳಿಂದ ದೂರವಿಡುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.    

PREV
112
ಪೂರ್ವಜರು ತಿಳಿಸಿದ ನಿಯಮ ಫಾಲೋ ಮಾಡಿದ್ರೆ ದೀರ್ಘಾಯಸ್ಸು ಗ್ಯಾರಂಟಿ !

ಪ್ರಪಂಚದಲ್ಲಿ ಹೆಚ್ಚಿನ ಜನರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹೆಚ್ಚಿನ ಜನರು ಸಮಸ್ಯೆಗೆ ಒಳಗಾಗಲು ಮುಖ್ಯ ಕಾರಣ ಎಂದರೆ ಲೈಫ್ ಸ್ಟೈಲ್ (Lifestyle) ನಲ್ಲಿ ಬದಲಾವಣೆ. ಈ ಒತ್ತಡದ ಜೀವನದಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿದೆ. ಇದರಿಂದಾಗಿಯೇ ಜನರು ಹೆಚ್ಚು ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ನೀವು ಆರೋಗ್ಯದಿಂದ ಇರಬೇಕು ಎಂದು ಬಯಸಿದ್ರೆ ನಮ್ಮ ಪೂರ್ವಜರು ಮಾಡಿದಂತಹ ನಿಯಮಗಳನ್ನು ನೀವು ಪಾಲಿಸಬೇಕು. ಬನ್ನಿ ಅವುಗಳ ಬಗ್ಗೆ ತಿಳಿಯೋಣ.

212
ಅರ್ಲಿ ಟು ಬೆಡ್ ಮತ್ತು ಅರ್ಲಿ ಟು ರೈಸ್...

ನಾವೆಲ್ಲರೂ ಬಾಲ್ಯದಲ್ಲಿ ಇದನ್ನು ಓದಿದ್ದೇವೆ, ಆದರೆ ನಾವು ದೊಡ್ಡವರಾದಾಗ, ಕೆಲವೇ ಜನರು ಅದನ್ನು ಅನುಸರಿಸಲು ಸಾಧ್ಯವಾಗುತ್ತೆ. ಭಾರತೀಯ ಸಂಪ್ರದಾಯದ ಕೆಲವು ನಿಯಮಗಳು ನಿಜವಾಗಿಯೂ ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ವಿಜ್ಞಾನ ಸಹ ಈಗ ಇದನ್ನು ನಂಬುತ್ತೆ. ಅನೇಕ ವೈದ್ಯರು ದೀರ್ಘಾಯುಷ್ಯ(Long life) ಬದುಕಲು ಹಳೆಯ ವಿಧಾನದಲ್ಲಿ ನಮ್ಮ ಪೂರ್ವಜರು ಬದುಕಿದ್ದಂತೆಯೇ ಬದುಕಲು ಸಲಹೆ ನೀಡುತ್ತಿದ್ದಾರೆ.  ಭಾರತೀಯ ಸಂಪ್ರದಾಯದಿಂದ ಕಲಿಯಲು ಅನೇಕ ವಿಷಯಗಳಿವೆ. ನೀವು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನವನ್ನು ಬದಲಾಯಿಸಬಹುದಾದ 10 ನಿಯಮಗಳು ಇಲ್ಲಿವೆ.

312

ಸೂರ್ಯೋದಯಕ್ಕೆ(Sun rise) ಮುಂಚಿತವಾಗಿ ಏಳುವುದು  ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು  ಮೆಲನಿನ್ ಮತ್ತು ಕಾರ್ಟಿಸೋಲ್ ಹಾರ್ಮೋನುಗಳನ್ನು ಸಮತೋಲನಗೊಳಿಸುವಲ್ಲಿ ತುಂಬಾ ಒಳ್ಳೆಯದು. ಅದು ನಮಗೆ ಸಂತೋಷ ನೀಡುತ್ತೆ. ತಡವಾಗಿ ಏಳುವ ಜನರಿಗಿಂತ ಬೇಗನೆ ಏಳುವವರಿಗೆ ಹೆಚ್ಚಿನ ಸಮಯ ಸಿಗುತ್ತೆ. ಇದು ನಮ್ಮ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಿಸುತ್ತೆ .

412

ಎರಡನೇ ನಿಯಮವೆಂದರೆ ಬೆಳಿಗ್ಗೆ ಎದ್ದ ನಂತರ ದೇವರಿಗೆ(God) ಕೃತಜ್ಞತೆ ಸಲ್ಲಿಸೋದು. ನಿಮ್ಮ ಬಳಿ ಏನಿದೆಯೋ ಅದಕ್ಕಾಗಿ ಕೃತಜ್ಞತೆಯ ಪ್ರಜ್ಞೆ ಇರಲಿ. ಇದು ಮನಸ್ಸನ್ನು ದುಃಖಗೊಳಿಸೋದಿಲ್ಲ. ಸೂರ್ಯ, ಭೂಮಿ, ಗಾಳಿ, ನೀರು, ಮರ ಮತ್ತು ಸಸ್ಯಗಳಿಗೆ ಕೃತಜ್ಞತೆ ಸಲ್ಲಿಸೋದನ್ನು ಮರೆಯಬೇಡಿ. ಏಕೆಂದರೆ ಅವುಗಳಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. 
 

512

ಮೂರನೆಯ ನಿಯಮವೆಂದರೆ ಯೋಗಾಸನ(Yoga), ಪ್ರಾಣಾಯಾಮ, ಧ್ಯಾನ (Meditation), ಮುಂದ್ರಾ, ಬಂಧ, ಗತಿ ಇತ್ಯಾದಿಗಳನ್ನು ನಿಯಮಿತವಾಗಿ ಮಾಡಿ. ಮುಂಜಾನೆ (Morning) ಎದ್ದ ಕೂಡಲೇ ಅಥವಾ ಸಂಜೆ ಅರ್ಧ ಗಂಟೆಗಳ ಸಮಯವಾದರೂ ಯೋಗಾಸನ, ಪ್ರಾಣಾಯಾಮ (Pranayama) ಮಾಡಬೇಕು. ಇದು ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.

612

ನಾಲ್ಕನೇ ನಿಯಮವೆಂದರೆ ಸೂರ್ಯನಿಗೆ (Sun) ಪ್ರಾರ್ಥನೆ ಸಲ್ಲಿಸೋದು. ಇದನ್ನು ಮಾಡೋದರಿಂದ, ನಮ್ಮ ಕಣ್ಣುಗಳು ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತೆ. ವಿಟಮಿನ್ ಡಿ ಲಭ್ಯವಾಗುತ್ತದೆ. ಹಾಗಾಗಿ, ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ಸೂರ್ಯನಿಗೆ ಪ್ರಾರ್ಥನೆ ಮಾಡೋದು ಉತ್ತಮ. ಇದನ್ನು ಆದಷ್ಟು ಬೆಳಗ್ಗೆ ಮಾಡಿದರೆ ಉತ್ತಮ. 
 

712

ಐದನೇ ಕೆಲಸವೆಂದರೆ ಸ್ನಾನದ(Bath) ನಂತರ ಪ್ರಾರ್ಥಿಸೋದು. ಬೆಳಿಗ್ಗೆ ಸ್ನಾನ ಮಾಡೋದರಿಂದ ರಕ್ತದೊತ್ತಡ ಸಾಮಾನ್ಯವಾಗಿರುತ್ತೆ, ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಹ ಕಾಪಾಡುತ್ತೆ. ಸ್ನಾನ ಮಾಡಿ ಬಂದು ದೇವರಿಗೆ ಪ್ರಾರ್ಥಿಸಿದರೆ ಮನಸ್ಸು ಶಾಂತವಾಗುತ್ತೆ. 

812

ಆರನೆಯ ನಿಯಮವೆಂದರೆ ನೆಲದ ಮೇಲೆ ಕುಳಿತು ತಿನ್ನುವುದು. ವಜ್ರಾಸನದಲ್ಲಿ(Vajrasana) ನೆಲದ ಮೇಲೆ ಕುಳಿತು ಆಹಾರ ತಿನ್ನುವುದು ಹೊಟ್ಟೆ ದೊಡ್ಡದಾಗೋದು ಮತ್ತು ಸ್ಥೂಲಕಾಯ ಸಮಸ್ಯೆ ಬಾರದಂತೆ ತಡೆಯುತ್ತೆ. ಹೀಗೆ ಮಾಡೋದರಿಂದ ಕೀಲುಗಳಲ್ಲಿ ನೋವು ಉಂಟಾಗೋದಿಲ್ಲ ಮತ್ತು ಅಸಿಡಿಟಿ ಮತ್ತು ಜೀರ್ಣಕ್ರಿಯೆಯ ಯಾವುದೇ ಸಮಸ್ಯೆ ಇರೋದಿಲ್ಲ. 
 

912

ಏಳನೇ ನಿಯಮ ನಿಮ್ಮ ಕೈಗಳಿಂದ(Hand) ತಿನ್ನಿ. ಚಾಕು ಮತ್ತು ಫೋರ್ಕ್ ಬಿಡಿ. ಸ್ವಚ್ಛ ಕೈಗಳಿಂದ ಆಹಾರ ಸೇವಿಸಿ. ಇದು ಭಾರತದ ಸಾಂಪ್ರದಾಯಿಕ ಮಾರ್ಗ. ನಮ್ಮ ಕೈ ಬೆರಳುಗಳಲ್ಲಿ ನರದ ತುದಿಗಳಿವೆ. ಅವು ಮೆದುಳಿಗೆ ಸಂಪರ್ಕ ಹೊಂದಿವೆ. ನಾವು ಆಹಾರವನ್ನು ಮುಟ್ಟಿದಾಗ, ಮೆದುಳಿಗೆ ಆಹಾರ ಬರುತ್ತಿದೆ ಎಂಬ ಸಂಕೇತ ಸಿಗುತ್ತೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸೃಷ್ಟಿಸುತ್ತೆ.  

1012

ಎಂಟನೇ ವಿಧಾನವೆಂದರೆ ಆಯುರ್ವೇದ ಮಸಾಜ್ (Massage). ಹಿಂದಿನ ಕಾಲದಿಂದ ಮಸಾಜ್ ಮಾಡೋದು ಉತ್ತಮ ಆರೋಗ್ಯಕ್ಕೆ ದಾರಿ. ಮಕ್ಕಳಿಗೂ ಸಹ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಿಸಲಾಗುತ್ತೆ, ಅದು ನಮ್ಮ ಅನೇಕ ರೋಗಗಳನ್ನು ತೆಗೆದುಹಾಕುತ್ತೆ. ಹಾಗಾಗಿ ಆಗಾಗ ಎಣ್ಣೆ ಹಾಕಿ ಮಸಾಜ್ ಮಾಡೋದು ಆರೋಗ್ಯಕ್ಕೆ ಒಳ್ಳೆದು. 

1112

ಒಂಬತ್ತನೇ ನಿಯಮವು ಮನೆಯಲ್ಲಿ ತಯಾರಿಸಿದ ಆಹಾರ (Home made food)ಸೇವಿಸೋದು. ಭಾರತದಲ್ಲಿ ತಯಾರಿಸಿದ ಸಾಂಪ್ರದಾಯಿಕ ಭಕ್ಷ್ಯಗಳು ಅನೇಕ ಮಸಾಲೆ ಮತ್ತು ಗಿಡಮೂಲಿಕೆ ಹೊಂದಿರುತ್ತವೆ. ಅವು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಸಾಂಪ್ರದಾಯಿಕವಾಗಿ, ಮನೆಯಲ್ಲಿ ಬೇಯಿಸಿದ ಆಹಾರವು ನಮ್ಮ ಆರೋಗ್ಯಕ್ಕೆ ಒಳ್ಳೆಯದು. 

1212

ಹತ್ತನೇ ನಿಯಮವೆಂದರೆ ಕುಟುಂಬ ಪ್ರೀತಿ ಮತ್ತು ಬಂಧ. ಪ್ರಪಂಚದಾದ್ಯಂತ ಕುಟುಂಬಗಳು (Family) ಒಡೆಯುತ್ತಿವೆ ಆದರೆ ಅವಿಭಕ್ತ ಕುಟುಂಬವು ಭಾರತೀಯ ಸಂಸ್ಕೃತಿಯ ಭಾಗ. ನೀವು ಖಿನ್ನತೆ, ತೊಂದರೆ ಅಥವಾ ಒಂಟಿತನದಲ್ಲಿದ್ದಾಗ, ಕುಟುಂಬದ ಪ್ರಾಮುಖ್ಯತೆಯನ್ನು ನೀವು ತಿಳಿಯುತ್ತೀರಿ. ಹಾಗಾಗಿ ಈ ನಿಯಮಗಳನ್ನು ಪಾಲಿಸಿದರೆ ನೀವೂ ದೀರ್ಘಾಯುಷಿಯಾಗಬಹುದು.   

Read more Photos on
click me!

Recommended Stories