ಸಾಮಾಜಿಕ ಮಾಧ್ಯಮ ಅಥವಾ ಟಿವಿ ಅಥವಾ ರೇಡಿಯೋ ಅಥವಾ ವೃತ್ತಪತ್ರಿಕೆಯನ್ನು ನೋಡಿದರೆ ಸ್ಥೂಲಕಾಯತೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀವು ತಿಳಿಯಬಹುದು. ಮಾರ್ಚ್ 4 ನ್ನು ವಿಶ್ವ ಬೊಜ್ಜು ದಿನ (World Obesity Day)ಎಂದು ಆಚರಿಸಲಾಗುತ್ತೆ, ಇಂದಿನ ಸಮಯದಲ್ಲಿ ಬೊಜ್ಜಿನ ಕುರಿತು ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆ (WHO) 2016 ರಲ್ಲಿ, 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ 39 ಪ್ರತಿಶತದಷ್ಟು (39 ಪ್ರತಿಶತ ಪುರುಷರು ಮತ್ತು 40 ಪ್ರತಿಶತ ಮಹಿಳೆಯರು) ಅಧಿಕ ತೂಕವನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಆ ವರ್ಷದಲ್ಲಿ ವಿಶ್ವದ ವಯಸ್ಕ ಜನಸಂಖ್ಯೆಯ ಸುಮಾರು 13 ಪ್ರತಿಶತದಷ್ಟು (15 ಪ್ರತಿಶತ ಮಹಿಳೆಯರು ಮತ್ತು 11 ಪ್ರತಿಶತ ಪುರುಷರು) ಬೊಜ್ಜು (obesity) ಹೊಂದಿದ್ದರು ಎಂದು ಅದು ಹಂಚಿಕೊಂಡಿದೆ.