ಇತ್ತೀಚಿನ ದಿನಗಳಲ್ಲಿ, ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ (Lifestyle) ಮತ್ತು ಆಹಾರದ (Food) ಬಗ್ಗೆ ನಿರ್ಲಕ್ಷ್ಯವು ಜನರನ್ನು ನಿರಂತರವಾಗಿ ಅನೇಕ ಸಮಸ್ಯೆಗಳಿಗೆ ಒಳಗಾಗುವಂತೆ ಮಾಡಿದೆ. ದೇಹದ ಸರ್ವತೋಮುಖ ಅಭಿವೃದ್ಧಿಗೆ (Overall Development of ody) ಮತ್ತು ಆರೋಗ್ಯವಾಗಿರಲು ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ, ಆಹಾರ ಮತ್ತು ಪಾನೀಯಗಳ ಬಗ್ಗೆ ಜನರ ನಿರ್ಲಕ್ಷ್ಯವು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅಕಾಲಿಕವಾಗಿ ಕೂದಲು (white hair problem) ಬೆಳ್ಳಗಾಗುವುದು ಈ ಸಮಸ್ಯೆಗಳಲ್ಲಿ ಒಂದಾಗಿದೆ. ಜನರು ಹೆಚ್ಚಾಗಿ ಈ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಜನರು ಹೆಚ್ಚಾಗಿ ಹೇರ್ ಡೈ (hair dye) ಬಳಸುತ್ತಾರೆ. ಆದರೆ ಕೂದಲಿನ ಸೌಂದರ್ವ ಹೆಚ್ಚಿಸಲು ನೀವು ಬಳಸುವ ಹೇರ್ ಡೈ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಿಮಗೆ ತಿಳಿದಿದೆಯೇ. ಹೌದು, ಹೇರ್ ಡೈ ನಿರಂತರ ಬಳಕೆಯು ಮೂತ್ರಕೋಶದ ಕ್ಯಾನ್ಸರ್ (kidney cancer) ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೇರ್ ಡೈಯ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ-
ಹೇರ್ ಡೈಯಲ್ಲಿರುವ ಹಾನಿಕಾರಕ ರಾಸಾಯನಿಕಗಳು
2013 ರಲ್ಲಿ ನಡೆಸಿದ ಅಧ್ಯಯನದಲ್ಲಿ, ಕೂದಲನ್ನು ಕಪ್ಪಾಗಿಸುವ ಕೂದಲಿನ ಬಣ್ಣದಲ್ಲಿ ಕೆಲವು ರಾಸಾಯನಿಕಗಳು (Chemical) ಇವೆ ಅನ್ನೋದು ತಿಳಿದುಬಂದಿದೆ, ಇದು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ರಾಸಾಯನಿಕಗಳು ತಲೆಯ ಮೂಲಕ ರಕ್ತದ ಹರಿವನ್ನು ಪ್ರವೇಶಿಸಿ, ಬಳಿಕ ಮೂತ್ರಕೋಶದ ಸೂಕ್ಷ್ಮ ಕೋಶಗಳನ್ನು ಹಾನಿಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ.
ಹೇರ್ ಡೈಗಳು ಹಲವಾರು ರಾಸಾಯನಿಕಗಳಿಂದ ಮಾಡಲ್ಪಟ್ಟಿವೆ, ಅವುಗಳಲ್ಲಿ ಕೆಲವು ಕ್ಯಾನ್ಸರ್ ಕಾರಕ ಎಂದು ಗುರುತಿಸಲಾಗಿದೆ. ಸುಗಂಧಯುಕ್ತ ಅಮೈನ್ಗಳು ಮತ್ತು ಅಮೋನಿಯಂ ಸಂಯುಕ್ತಗಳು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ತಿಳಿದುಬಂದಿದೆ.
ರಾಸಾಯನಿಕಗಳು ದೇಹವನ್ನು ಹೇಗೆ ಪ್ರವೇಶಿಸುತ್ತವೆ?
ಒಬ್ಬ ವ್ಯಕ್ತಿಯು ಈ ಕೆಮಿಕಲ್ ಹೇರ್ ಡೈಯನ್ನು (chemical hair dye)ಬಳಸಿದಾಗ, ಅವು ಚರ್ಮಕ್ಕೆ ಸೇರುತ್ತದೆ ಮತ್ತು ತೊಳೆದ ನಂತರವೂ ಕೂದಲಿನ ಬೇರುಗಳಿಗೆ ಅಂಟಿಕೊಳ್ಳುತ್ತವೆ. ನಾವು ಬೆವರಿದಾಗ, ಈ ಸಂಯುಕ್ತಗಳು ನೆತ್ತಿಯನ್ನು ಪ್ರವೇಶಿಸುತ್ತವೆ ಮತ್ತು ರಕ್ತದ ಜೊತೆ ಬೆರೆಯುತ್ತವೆ. ದೇಹದಿಂದ ಈ ಸಂಯುಕ್ತಗಳನ್ನು ತೆಗೆದು ಹಾಕಲು ಮೂತ್ರವಿಸರ್ಜನೆ ಏಕೈಕ ಮಾರ್ಗವಾಗಿರುವುದರಿಂದ, ಈ ಎಲ್ಲಾ ಹಾನಿಕಾರಕ ರಾಸಾಯನಿಕಗಳು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತವೆ, ಇದು ಮೂತ್ರಕೋಶದ ಕ್ಯಾನ್ಸರ್ನ ಆರಂಭಕ್ಕೆ ಕಾರಣವಾಗುತ್ತದೆ.
ಚರ್ಮದ ಸಮಸ್ಯೆಗಳ ಅಪಾಯ (skin problem)
ಮೂತ್ರಕೋಶದ ಕ್ಯಾನ್ಸರ್ ಜೊತೆಗೆ, ಹೇರ್ ಡೈ ವಿವಿಧ ಚರ್ಮದ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತೆ. ಹೇರ್ ಡೈ ಬಳಸುವ ಜನರು ಉರಿಯೂತ, ಚರ್ಮದ ಗಾಯಗಳು ಮತ್ತು ಆಟೋಇಮ್ಯೂನ್ ಸಮಸ್ಯೆಗಳಂತಹ ಚರ್ಮದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಅನ್ನೋದು ತಿಳಿದು ಬಂದಿದೆ.
ರೋಗಲಕ್ಷಣಗಳು ಮತ್ತು ಅಪಾಯದ ಅಂಶಗಳು
ಹೇರ್ ಡೈಯ ಹೊರತಾಗಿ, ತಂಬಾಕು, ದೀರ್ಘಕಾಲದ ಸೋಂಕು, ದೀರ್ಘಕಾಲದ ಮೂತ್ರಕೋಶದ ಕಿರಿಕಿರಿ ಮುಂತಾದ ಇತರ ಅಂಶಗಳು ಸಹ ಮೂತ್ರಕೋಶದ ಕ್ಯಾನ್ಸರ್ಗೆ ಕಾರಣವಾಗಬಹುದು. ಅದೇ ಸಮಯದಲ್ಲಿ, ಮೂತ್ರವಿಸರ್ಜನೆಯ ಸಮಯದಲ್ಲಿ ಬರ್ನಿಂಗ್, ಮೂತ್ರನಾಳದ ಸೋಂಕುಗಳು (urinary track infection) ಸಹ ಇದರ ಲಕ್ಷಣಗಳಾಗಿವೆ.