Health Tips: ಟೆಸ್ಟ್ ರಿಸಲ್ಟ್ ನಾರ್ಮಲ್ ಅಂತಾ ಬಂದ್ರೂ, ಈ ಲಕ್ಷಣ ಕಂಡು ಬಂದ್ರೆ ಹುಷಾರಾಗಿರಿ

First Published | Jun 24, 2023, 7:00 AM IST

ದೇಹದಲ್ಲಿ ಯಾವುದೇ ತೊಂದರೆ ಉಂಟಾದಾಗ, ಅದರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಆದರೆ ಕೆಲವೊಮ್ಮೆ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಕೆಲವೊಮ್ಮೆ ನಮ್ಮ ಟೆಸ್ಟ್ ವರದಿಗಳು ಸಾಮಾನ್ಯವಾಗಿದ್ದರೂ, ದೇಹದಲ್ಲಿ ಕಾಣಿಸಿಕೊಳ್ಳುವ ಚಿಹ್ನೆಗಳು, ರೋಗದ ಲಕ್ಷಣವನ್ನು ಸೂಚಿಸುತ್ತೆ. ಹಾಗಾಗಿ, ಅವುಗಳನ್ನು ನಿರ್ಲಕ್ಷ್ಯ ಮಾಡಬಾರದು. 
 

Health symptoms you should not avoid in case if have some health issues pav

ಜೀವನವನ್ನು ಆರಾಮದಾಯಕ ಮತ್ತು ಸಂತೋಷವಾಗಿಸಲು ನಾವು ನಮ್ಮ ಜೀವನದುದ್ದಕ್ಕೂ ಏನಾದರೊಂದು ಮಾಡುತ್ತಲೇ ಇರುತ್ತೇವೆ. ಈ ಎಲ್ಲಾ ಬ್ಯುಸಿ ಜೀವನದ ಮಧ್ಯೆ, ಜನರು ಹೆಚ್ಚಾಗಿ ತಮ್ಮ ಆರೋಗ್ಯವನ್ನು (health) ನಿರ್ಲಕ್ಷಿಸುತ್ತಾರೆ. ಆದರೆ ಎಲ್ಲಾದಕ್ಕಿಂತ ಮುಖ್ಯವಾಗಿ, ಮೊದಲನೆಯದಾಗಿ, ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಏಕೆಂದರೆ ನಮ್ಮ ದೇಹವು ಆರೋಗ್ಯಕರವಾಗಿಲ್ಲದಿದ್ದರೆ ಉಳಿದೆಲ್ಲವೂ ನಿಷ್ಪ್ರಯೋಜಕವಾಗುತ್ತೆ.  
 

Health symptoms you should not avoid in case if have some health issues pav

ಆರೋಗ್ಯಕರ ದೇಹಕ್ಕಾಗಿ, ಸರಿಯಾದ ಜೀವನಶೈಲಿ (lifestyle) ಮತ್ತು ಆಹಾರದ ಬಗ್ಗೆ ಗಮನ ಹರಿಸಬೇಕು. ಇದರ ಜೊತೆ ಜೊತೆಗೆ ಕಾಲಕಾಲಕ್ಕೆ ವೈದ್ಯರ ಬಳಿ ತೆರಳಿ ತಪಾಸಣೆ ಮತ್ತು ಪರೀಕ್ಷೆಗಳನ್ನು ಸಹ ಮಾಡಬೇಕು. ಕೆಲವೊಮ್ಮೆ ಏನಾಗುತ್ತೆ ಅಂದ್ರೆ ಆರೋಗ್ಯ ಸರಿಯಿಲ್ಲ ಎಂದು ಅನಿಸಿ, ನೀವು ಟೆಸ್ಟ್ ಮಾಡಿಸಿಕೊಳ್ಳುತ್ತೀರಿ. ಆದರೆ ಟೆಸ್ಟ್ ರಿಪೋರ್ಟ್ ಎಲ್ಲಾ ಸರಿಯಾಗಿ ಅನ್ನೋದನ್ನ ತೋರಿಸುತ್ತೆ. ಹಾಗಂತ ನೀವು ಸುಮ್ಮನೆ ಕುಳಿತುಕೊಳ್ಳೋದು ಸರಿಯಲ್ಲ. 
 

Tap to resize

ಕೆಲವೊಮ್ಮೆ ಪರೀಕ್ಷಾ ವರದಿಗಳು (Medical test report) ಸಾಮಾನ್ಯವಾಗಿದ್ದರೂ ಸಹ, ಕೆಲವು ವಿಷಯಗಳು ದೇಹದಲ್ಲಿ ತೊಂದರೆಗಳನ್ನು ಸೂಚಿಸುತ್ತವೆ. ಆಯುರ್ವೇದದ ಪ್ರಕಾರ, ದೇಹವು ಆರೋಗ್ಯಕರವಾಗಿದ್ದರೂ ಸಹ ಕೆಲವು ರೋಗಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳನ್ನು ನಾವು ನಿರ್ಲಕ್ಷಿಸಬಾರದು. ಯಾಕಂದ್ರೆ ಈ ಸಣ್ಣಪುಟ್ಟ ಚಿಹ್ನೆಗಳು ನಾವು ಆರೋಗ್ಯವಾಗಿಲ್ಲ ಅನ್ನೋದನ್ನು ಸೂಚಿಸುತ್ತವೆ. ಆ ಸಮಸ್ಯೆಗಳ ಬಗ್ಗೆ ನೋಡೋಣ. 
 

ಈ ಲಕ್ಷಣಗಳನ್ನು ಯಾವತ್ತೂ ಇಗ್ನೋರ್ ಮಾಡಬೇಡಿ
ಆರೋಗ್ಯಕರವಾಗಿರಲು, ಜೀರ್ಣಕ್ರಿಯೆಯನ್ನು (digestion)ಸರಿಯಾಗಿರೋದು ಬಹಳ ಮುಖ್ಯ. ಜೀರ್ಣಕ್ರಿಯೆ ಸರಿಯಾಗಿಲ್ಲದಿದ್ದರೆ ನೀವು ಆರೋಗ್ಯವಾಗಿಲ್ಲ ಎಂದರ್ಥ. ಆಯುರ್ವೇದದ ಪ್ರಕಾರ, ಆಹಾರ ಸೇವಿಸಿದ ನಂತರ, ಹೊಟ್ಟೆಯಲ್ಲಿ ಭಾರವನ್ನು ಅನುಭವಿಸಬಾರದು ಮತ್ತು ಆಲಸ್ಯವನ್ನು ಸಹ ಅನುಭವಿಸಬಾರದು. ಬದಲಾಗಿ ಆಹಾರ ಸೇವಿಸಿದ ನಂತರ, ನೀವು ಹಗುರ ಮತ್ತು ಎನರ್ಜಿಟಿಕ್ ಆಗಿರಬೇಕು.
 

ಕೆಲವು ಜನರು ಬೆಳಿಗ್ಗೆ ಎದ್ದಾಗ ಎನರ್ಜಿಟಿಕ್ ಮತ್ತು ಹ್ಯಾಪಿಯಾಗಿರುತ್ತಾರೆ. ಆದರೆ ಇನ್ನೂ ಕೆಲವರು ಬೆಳಿಗ್ಗೆ ಪೂರ್ಣ ನಿದ್ರೆ ನಂತರವೂ ತಾಜಾತನವನ್ನು ಅನುಭವಿಸುವುದಿಲ್ಲ, ಬದಲಾಗಿ ತುಂಬಾನೆ ಆಯಾಸ, ಮತ್ತೆ ನಿದ್ರೆ ಬರುವಂತಹ ಭಾವನೆ ಅನುಭವಿಸುತ್ತಾರೆ. ಇದು ನಿಮ್ಮ ಆರೋಗ್ಯ ಸಮಸ್ಯೆಯ (health problem) ಲಕ್ಷಣ. 
 

ದೇಹಕ್ಕೆ ಆರೋಗ್ಯವಾಗಿರಲು, ಪ್ರತಿದಿನ ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಸಹ ಮುಖ್ಯ. ಹೊಟ್ಟೆಯಲ್ಲಿ ಮಲಬದ್ಧತೆ (constipation) ಇರುವುದು ಒಳ್ಳೆಯದಲ್ಲ.ನಿಮ್ಮ ದೇಹವು ಆರೋಗ್ಯಕರವಾಗಿದ್ರೆ, ದಿನವಿಡೀ ಕೆಲಸ ಮಾಡಿದ ನಂತರ ರಾತ್ರಿ ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ರೆ ಬರಬೇಕು. ನಿದ್ರೆಯ ಕೊರತೆಯು ಅನಾರೋಗ್ಯಕರ ದೇಹದ ಸಂಕೇತವಾಗಿದೆ. 
 

 ಚರ್ಮವು ಹಳದಿ ಬಣ್ಣಕ್ಕೆ ತಿರುಗುವುದು ಅಥವಾ ಚರ್ಮ ಬಣ್ಣ ಕಳೆದುಕೊಳ್ಳುವುದು ಸಹ ನಿಮ್ಮ ದೇಹದಲ್ಲಿ ಏನೋ ತಪ್ಪಾಗಿದೆ ಎಂಬುದರ ಸಂಕೇತ.
ದೇಹದಿಂದ ಹೊರಬರುವ ಸರಿಯಾದ ಪ್ರಮಾಣದ ಬೆವರು (sweatting) ಮತ್ತು ಮೂತ್ರವು ದೇಹವನ್ನು ವಿಷ ಮುಕ್ತವಾಗಿಡಲು ಮುಖ್ಯವಾಗಿದೆ. ದೇಹವು ಇದನ್ನು ಮಾಡದಿರುವುದು ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸುತ್ತದೆ.

Latest Videos

click me!