ನ್ಯೂಸ್ ಪೇಪರ್‌ನಲ್ಲಿ ಕಟ್ಟಿದ ಆಹಾರ ಸೇವಿಸುತ್ತೀರಾ? ಅಪಾಯ ಖಚಿತ!

First Published | Oct 21, 2024, 8:53 PM IST

ಪಕೋಡ ಸೇರಿದಂತೆ ಬಿಸಿ ಬಿಸಿಯಾದ ಆಹಾರಗಳನ್ನು ನ್ಯೂಸ್ ಪೇಪರ್ ಸೇರಿದಂತೆ ಮ್ಯಾಗಜೀನ್ ಪೇಪರ್‌ಗಳಲ್ಲಿ ಕಟ್ಟಿಕೊಡುವುದು ಸಾಮಾನ್ಯ. ಒಂದಲ್ಲಾ ಒಂದು ಸಂದರ್ಭದಲ್ಲಿ ಈ ರೀತಿ ಆಹಾರ ಸೇವಿಸಿರುತ್ತೀರಿ. ಆದರೆ ಅಪಾಯ ತಪ್ಪಿಸಲು ಈಗಲೇ ಪದ್ಧತಿಗೆ ನಿಲ್ಲಿಸಿ.
 

ಮನುಷ್ಯನ ಆರೋಗ್ಯದ ಸಮಸ್ಯಗಳು ಜಟಿಲವಾಗುತ್ತಿದೆ. ಲೈಫ್ ಸ್ಟೈಲ್, ಆಹಾರ ಕ್ರಮ, ಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಬಹುತೇಕರು ಆಹಾರ, ಜೀವನ ಪದ್ಧತಿ ಬಗ್ಗೆ ಗಮನಹರಿಸುತ್ತಿದ್ದಾರೆ. ಆದರೆ ಕೆಲ ವಿಚಾರಗಳಲ್ಲಿನ ಸಣ್ಣ ಅಸಡ್ಡೆ ಬಹುದೊಡ್ಡ ಅಪಾಯಕ್ಕೆ ಆಹ್ವಾನ ನೀಡಿದಂತೆ. ಈ ಪೈಕಿ ನ್ಯೂಸ್ ಪೇಪರ್‌ನಲ್ಲಿ ಕಟ್ಟಿದ ಆಹಾರ ಸೇವನೆ ಕೂಡ ಒಂದು.
 

ಬಿಸಿ ಬಿಸಿ ಆಹಾರವನ್ನು ಪ್ಲಾಸ್ಟಿಕ್ ಬ್ಯಾಗ್, ಕವರ್‌ಗಳಲ್ಲಿ ಸುತ್ತಿದ ಅಥವಾ ಹಾಕಿದ ಆಹಾರ ಸೇವಿಸುವುದು ಎಷ್ಟು ಅಪಾಯಕಾರಿಯೋ, ನ್ಯೂಸ್ ಪೇಪರ್, ಮ್ಯಾಗಝೀನ್ ಪೇಪರ್‌ಗಳಲ್ಲಿ ಸುತ್ತಿಕೊಡುವ ಆಹಾರವೂ ಅಷ್ಟೇ ಅಪಾಯಾಕಾರಿ. ಸ್ಟ್ರೀಟ್ ಫುಡ್ ಖರೀದಿ ವೇಳೆ ಪಕೋಡ ಸೇರಿದಂತೆ ಹಲವು ಆಹಾರಗಳು ನ್ಯೂಸ್ ಪೇಪರ್‌ನಲ್ಲೇ ಕಟ್ಟಿಕೊಡುತ್ತಾರೆ.
 

Latest Videos


ಹೆಮಟಾಲಜಿಸ್ಟ್ ಹಾಗೂ ಆನ್ಕಾಲಜಿಸ್ಟ್ ಡಾ. ರವಿ ಕೆ ಗುಪ್ತಾ ಈ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಬಿಸಿ ಬಿಸಿ ಪಕೋಡ, ಬೇಲ್ ಸೇರಿದಂತೆ ನ್ಯೂಸ್ ಪೇಪರ್‌ನಲ್ಲಿ ಸುತ್ತಿದ ಆಹಾರ ಸೇವನೆಯಿಂದ ರಾಸಾಯನಿಕಗಳು ದೇಹ ಸೇರಲಿದೆ. ನ್ಯೂಸ್ ಪೇಪರ್ ಉತ್ಪಾದನೆ ಹಾಗೂ ಅದರ ಮೇಲೆ ಅಕ್ಷರ ಮುದ್ರಣ ಎರಡೂ ಕೂಡ ರಾಸಾಯನಿಕಗಳ ಬಳಕೆಯಿಂದಲೇ ಆಗುತ್ತದೆ.
 

ಇದು ಪಕೋಡಗಿಂತ ಹೆಚ್ಚು ಅಪಾಯಕಾರಿಯಾದ ಆಹಾರ ಸೇವನೆ ವಿಧಾನವಾಗಿದೆ. ನ್ಯೂಸ್ ಪೇಪರ್‌ನಲ್ಲಿರುವ ರಾಸಾಯನಿಕ ಹಾಗೂ ಇಂಕ್ ದೇಹ ಸೇರಲಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ರವಿ ಕೆ ಗುಪ್ತಾ ಹೇಳಿದ್ದಾರೆ.ನ್ಯೂಸ್ ಪೇಪರ್ ಬದಲು ಟಿಶ್ಯು ಪೇಪರ್ ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.
 

ನ್ಯೂಸ್ ಪೇಪರ್ ಅಥವಾ ಪೇಪರ್ ಉತ್ಪಾದನೆಯಲ್ಲಿ ಪೇಪರ್, ರಟ್ಟುಗಳ ಕಸ, ರಾಸಾಯನಿಕ ಸೇರಿದಂತೆ ಇತರ ಕೆಲ ವಸ್ತುಗಳ ಬಳಕೆ ಮಾಡಲಾಗುತ್ತದೆ. ಹೀಗಾಗಿ ಖಾಲಿ ಹಾಳೆಯಲ್ಲಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಆರೋಗ್ಯದ ಕುರಿತು ಕಾಳಜಿ ವಹಿಸಿವುದು ಇಂದಿನ ಜೀವನ ಪದ್ಧತಿಯಲ್ಲಿ ಅತ್ಯವಶ್ಯಕವಾಗಿದೆ.  
 

click me!