ಕಣ್ಣಿನ ದೃಷ್ಟಿ ಹೆಚ್ಚಿಸಲು, ಬಿಪಿ ನಿಯಂತ್ರಿಸಲು ಕರಬೂಜ ಸಹಕಾರಿ!

First Published | Mar 26, 2021, 2:13 PM IST

ಬೇಸಿಗೆ ಕಾಲದಲ್ಲಿ  ಮಾವು, ಲಿಚ್ಚಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಈ ಎಲ್ಲಾ ಬೇಸಿಗೆಯ ಋತುಮಾನದ ಹಣ್ಣುಗಳು. ಟೇಸ್ಟಿಯಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇಂದು ನಾವು ಕರಬೂಜ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಕರಬೂಜ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಪವರ್ ಹೌಸ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅಂಶವೂ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 

ಬೊಜ್ಜು ನಿಯಂತ್ರಿಸುವ ಕರಬೂಜ ಹಣ್ಣು .ಕಲ್ಲಂಗಡಿಯಂತೆ ಕರಬೂಜದಲ್ಲೂ ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನಂಶವಿದೆ ಮತ್ತು ಕೊಬ್ಬು ಇರುವುದಿಲ್ಲ. ಕರಬೂಜ ಹಣ್ಣನ್ನು ಸೇವಿಸಿ ದೀರ್ಘಕಾಲ ಹೊಟ್ಟೆ ತುಂಬಿದಂತೆ ಅನಿಸುತ್ತದೆ.
ಕರಬೂಜ ಹಣ್ಣನ್ನು ಸೇವಿಸಿದರೆ ಸ್ನ್ಯಾಕ್ಸ್ ಸೇವಿಸಿ ಆಗುವ ಅನಗತ್ಯ ಕ್ಯಾಲೋರಿಗಳ ಭಯವಿರುವುದಿಲ್ಲ. ಇದು ತೂಕವನ್ನುನಿಯಂತ್ರಣದಲ್ಲಿಡುತ್ತದೆ ಮತ್ತು ಒಬೆಸಿಟಿ ಸಮಸ್ಯೆ ಇಲ್ಲದಂತೆ ಮಾಡುತ್ತದೆ.
Tap to resize

ಮಸ್ಕ್ಮೆಲಿಯನ್ ದೃಷ್ಟಿಗೆ ಒಳ್ಳೆಯದುಕ್ಯಾರೆಟ್‌ನಂತೆ, ಕರಬೂಜ ಹಣ್ಣುಗಳಲ್ಲಿಯೂ ಬೀಟಾ ಕ್ಯಾರೋಟಿನ್ ಅಂಶವಿದ್ದು, ಕರಬೂಜ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಮತ್ತು ಇದರಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ಪ್ರಯೋಜನಕಾರಿ.
ಬೇಸಿಗೆಯಲ್ಲಿ ಕರಬೂಜ ಹಣ್ಣನ್ನು ನಿಯಮಿತವಾಗಿ ತಿನ್ನಬೇಕು ಇದರಿಂದ ಕಣ್ಣುಗಳ ದೃಷ್ಟಿ ಹಾಗೇ ಇರುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಇರುವುದಿಲ್ಲ.
ಕರಬೂಜ ಅಧಿಕ ಬಿಪಿಯನ್ನು ನಿಯಂತ್ರಿಸುತ್ತದೆಅಧಿಕ ರಕ್ತದೊತ್ತಡದ ರೋಗಿಗಳಿಗೆ ಕರಬೂಜ ಹಣ್ಣು ಕೂಡ ಪ್ರಯೋಜನಕಾರಿ. ಕರಬೂಜದಲ್ಲಿ ಪೊಟ್ಯಾಷಿಯಂ ಹೇರಳವಾಗಿದ್ದು, ರಕ್ತನಾಳಗಳನ್ನು ಶಮನಗೊಳಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ.
ಶೀತ-ಕೆಮ್ಮನ್ನು ದೂರ ಮಾಡುತ್ತದೆಶೀತ ಕೆಮ್ಮು ಮತ್ತು ಮೂಗಿನ ದಟ್ಟಣೆಯ ಸಮಸ್ಯೆ ಅನೇಕರಲ್ಲಿ ಕಂಡುಬರುತ್ತದೆ. ಕರಬೂಜ ಹಣ್ಣನ್ನು ಸೇವಿಸಿದರೆ, ಹೆಚ್ಚುವರಿ ಲೋಳೆ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ, ಇದು ಶೀತ ದಮ್ಮು ಮೊದಲಾದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಕರಬೂಜ ಬೀಜಗಳನ್ನು ಸಲಾಡ್ ಅಥವಾ ಮೊಸರಿನೊಂದಿಗೆ ಬೆರೆಸಿಕೊಳ್ಳಬಹುದು. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ.
ಒತ್ತಡ ನಿವಾರಣೆಗೆ ಕರಬೂಜ ಹಣ್ಣು ಸಹಕಾರಿ.ಕರಬೂಜದಲ್ಲಿ ಕಂಡುಬರುವ ಪೊಟ್ಯಾಷಿಯಂ ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ರಕ್ತವು ಸಾಕಷ್ಟು ಪ್ರಮಾಣದಲ್ಲಿ ಮೆದುಳನ್ನು ತಲುಪಿದಾಗ, ಮೆದುಳು ಶಾಂತವಾಗಿ ಉಳಿಯುತ್ತದೆ ಮತ್ತು ಒತ್ತಡವೂ ಕಡಿಮೆಯಾಗುತ್ತದೆ.
ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಕರಬೂಜ ಹಣ್ಣು ಬಿಳಿ ರಕ್ತ ಕಣಗಳ ರಚನೆಯನ್ನು ಹೆಚ್ಚಿಸುತ್ತದೆ, ಇದರಿಂದ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚುತ್ತದೆ.

Latest Videos

click me!