ಬೆಳಿಗ್ಗೆ 8.30 ನಂತ್ರ ಬ್ರೇಕ್ ಫಾಸ್ಟ್ ಸೇವಿಸುತ್ತೀರಾ? ಅಪಾಯ ಖಂಡಿತ

Suvarna News   | Asianet News
Published : Mar 25, 2021, 03:30 PM IST

ನೀವು ಕೂಡ ರಾತ್ರಿ ತಡವಾಗಿ ನಿದ್ದೆ ಮಾಡುವವರಲ್ಲಿ ಒಬ್ಬರಾಗಿದ್ದರೆ, ಬೆಳಗ್ಗೆ ತಡವಾಗಿ ಎದ್ದು, ಮಧ್ಯಾಹ್ನದ ಊಟದಲ್ಲಿ ಸಮಯದಲ್ಲಿ ಉಪಹಾರ ಸೇವಿಸುತ್ತಿದ್ದರೆ, ಇಂದೇ ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ, ಇಲ್ಲದಿದ್ದರೆ ಮಧುಮೇಹದ ಅಪಾಯವನ್ನು ಎದುರಿಸಬೇಕಾದೀತು ಎಚ್ಚರ. ಹೌದು ಹೊಸ ಅಧ್ಯಯನವು ಬೆಳಗಿನ ಉಪಾಹಾರದ ಪ್ರಯೋಜನಗಳನ್ನು ವಿವರಿಸುತ್ತದೆ. ಜೊತೆಗೆ ತಡವಾಗಿ ಉಪಹಾರ ಸೇವಿಸಿದರೆ ಏನೆಲ್ಲಾ ಸಮಸ್ಯೆ ಕಾಡಬಹುದು ಎಂಬುದನ್ನು ಸಹ ತಿಳಿಸಿದೆ.  

PREV
18
ಬೆಳಿಗ್ಗೆ 8.30 ನಂತ್ರ ಬ್ರೇಕ್ ಫಾಸ್ಟ್ ಸೇವಿಸುತ್ತೀರಾ? ಅಪಾಯ ಖಂಡಿತ

ಬೆಳಗಿನ ಉಪಹಾರ ದಿನದ ಅತಿ ಮುಖ್ಯ, ಆದ್ದರಿಂದ ನೀವು ಏನನ್ನು ತಿನ್ನುತ್ತೀರಿ ಎಂಬುದು ಮಾತ್ರ ಮುಖ್ಯವಲ್ಲ. ಆದರೆ ನೀವು ಏನನ್ನು ತಿನ್ನುತ್ತೀರಿ, ಯಾವಾಗ ತಿನ್ನುತ್ತೀರಿ ಎಂಬುದರ ಸಮಯವೂ ಅಷ್ಟೇ ಮುಖ್ಯ.

28

ಹೊಸ ಸಂಶೋಧನೆಯೊಂದು ಹೇಳುವ ಪ್ರಕಾರ,  ಬ್ರೇಕ್ ಫಾಸ್ಟ್ ಸಮಯವನ್ನು ಮಾತ್ರ ಬದಲಾಯಿಸಿದರೆ ಟೈಪ್ 2 ಮಧುಮೇಹದ ಅಪಾಯವನ್ನು ಸಹ ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. 

38

ಬೆಳಗಿನ ಉಪಹಾರವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
ಈ ಹೊಸ ಸಂಶೋಧನೆಯನ್ನು ಇ೦ಡೋ 2021 ರಲ್ಲಿ ಪ್ರಸ್ತುತಪಡಿಸಲಾಯಿತು, ಈ ಸಂಶೋಧನೆಯು ಬೆಳಗಿನ ತಿಂಡಿಯನ್ನು ಬೇಗನೆ ಸೇವಿಸಿದರೆ, ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿತು.

48

ಅಧ್ಯಯನವು ಉಪವಾಸಕ್ಕೆ ಸಂಬಂಧಿಸಿದೆ, ಆದರೆ  ಉಪವಾಸ ಮಾಡದಿದ್ದರೂ, ಬೆಳಗಿನ ಉಪಾಹಾರವನ್ನು ಸೇವಿಸಿದಾಗ ಹಲವಾರು ಪ್ರಯೋಜನಗಳಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 

58

ಬೆಳಗ್ಗೆ 8.30ಕ್ಕೆ ಮೊದಲು ಉಪಾಹಾರವನ್ನು ಮಾಡಿ
ಒಂದು ಅಧ್ಯಯನದ ಪ್ರಕಾರ, ಬೆಳಗ್ಗಿನ ಜಾವ 8.30ಕ್ಕಿಂತ ಮೊದಲು ಬೆಳಗಿನ ಉಪಾಹಾರವನ್ನು ಸೇವಿಸಿದವರಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಿದ್ದು, ಇನ್ಸುಲಿನ್ ಪ್ರತಿರೋಧದ ತೊಂದರೆಗಳು ಕಡಿಮೆ ಇರುವುದು ಕಂಡು ಬಂದಿದೆ. 

68

ಚಿಕಾಗೋದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಯುನೈಟೆಡ್ ಸ್ಟೇಟ್ಸ್ ನಲ್ಲಿ 10,574 ವಯಸ್ಕರ ಆರೋಗ್ಯ ಮತ್ತು ಆಹಾರ ಅಭ್ಯಾಸಗಳ ದತ್ತಾಂಶಗಳನ್ನು ಪರೀಕ್ಷಿಸಿದರು, ಆದರೆ ಆಹಾರ ಸಮಯವು ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಪ್ರತಿರೋಧದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಪ್ರಯತ್ನಿಸಿದರು.

78

ಆರೋಗ್ಯಕರ ಉಪಾಹಾರವು ಹೆಚ್ಚಿನ ಶಕ್ತಿಯನ್ನು ಸಹ ಒದಗಿಸುತ್ತದೆ
ಸಂಶೋಧಕರು ಕಂಡು ಕೊಂಡಂತೆ, ಬೆಳಿಗ್ಗೆ 8.30ರ ಹೊತ್ತಿಗೆ , ಅದಕ್ಕೂ ಮುನ್ನ ಉಪಾಹಾರ ಸೇವಿಸಿದ ಎಲ್ಲರಿಗೂ ರಕ್ತದಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಿತ್ತು, ಇದು ಬೆಳಗಿನ ಉಪಾಹಾರವು ಹಲವಾರು ರೀತಿಯಲ್ಲಿ ಚಯಾಪಚಯ ಪ್ರಯೋಜನಗಳನ್ನು ಹೊಂದಿದೆ ಎಂದು ತೋರಿಸುತ್ತದೆ. 

88

ಬೆಳಗಿನ ಉಪಾಹಾರವನ್ನು ಬೆಳಗಿನ ಜಾವ ಸೇವಿಸಿದಲ್ಲಿ ತುಂಬಾ ಪ್ರಯೋಜನವಿದೆ. ಆರೋಗ್ಯಕರ ಉಪಾಹಾರವೂ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ದಿನವಿಡೀ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ಬೆಳಗ್ಗಿನ ತಿಂಡಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ನಾರಿನಂಶ ಮತ್ತು ಇಡಿಯ ಧಾನ್ಯಗಳು ಒಳಗೊಂಡಿರುವುದು ತುಂಬಾ ಮುಖ್ಯ.

click me!

Recommended Stories