ನುಗ್ಗೆ ಎಲೆಯಲ್ಲಿ ಹಲವಾರು ಜೀವಸತ್ವಗಳು, ಖನಿಜಗಳು, ಅಗತ್ಯ ಅಮೈನೋ ಆಮ್ಲಗಳಿವೆ. ಇದರಲ್ಲಿ ಕ್ಯಾರೆಟ್‌ಗಿಂತ ನಾಲ್ಕು ಪಟ್ಟು ಹೆಚ್ಚು ವಿಟಮಿನ್ ಎ, ಕಿತ್ತಳೆ ಹಣ್ಣಿಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ ಸಿ, ವಿಟಮಿನ್ ಬಿ1, ಬಿ2, ಬಿ3, ಬಿ6, ಫೋಲೇಟ್, ವಿಟಮಿನ್ ಇ ಮತ್ತು ವಿಟಮಿನ್ ಕೆ ಸೇರಿದಂತೆ ಹಲವು ಪೋಷಕಾಂಶಗಳಿವೆ.
ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಕ್ಯಾಲ್ಸಿಯಂ, ಬಾಳೆಹಣ್ಣಿಗಿಂತ ಮೂರು ಪಟ್ಟು ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಸತು, ಮ್ಯಾಂಗನೀಸ್‌ನಂತಹ ಖನಿಜಗಳಿವೆ. ಅದೇ ರೀತಿ ಮೊಸರಿಗಿಂತ ಎರಡು ಪಟ್ಟು ಪ್ರೋಟೀನ್ ನುಗ್ಗೆ ಎಲೆಯಲ್ಲಿದೆ. ಇದು ಉತ್ತಮ ಪ್ರೋಟೀನ್ ಮೂಲವಾಗಿದೆ.