ಅನಂತ್‌ ಅಂಬಾನಿ ಬರೋಬ್ಬರಿ 108 ಕೆಜಿ ಇಳಿಸಿಕೊಳ್ಳಲು ಟ್ರೈನರ್‌ ಮಾಡಿದ್ದೇನು?

First Published | Jul 26, 2023, 1:27 PM IST

2016ರಲ್ಲಿ ಅನಂತ್ ಅಂಬಾನಿ ವೈಟ್ ಲಾಸ್ ಜರ್ನಿ ಹೆಚ್ಚು ಸುದ್ದಿಯಾಗಿತ್ತು. 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡು ಸುದ್ದಿಯಲ್ಲಿದ್ದರು. ಬರೋಬ್ಬರಿ 108 ಕೆಜಿ ತೂಕವಿದ್ದ ಅನಂತ್ ಅಂಬಾನಿ, ಈ ವೈಟ್ ಕಡಿಮೆ ಮಾಡಲು ಟ್ರೈನರ್‌ ಮಾಡಿದ್ದೇನು?

2016ರಲ್ಲಿ ಅನಂತ್ ಅಂಬಾನಿ ವೈಟ್ ಲಾಸ್ ಜರ್ನಿ ಹೆಚ್ಚು ಸುದ್ದಿಯಾಗಿತ್ತು. 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡು ಸುದ್ದಿಯಲ್ಲಿದ್ದರು. ಅವರ ಫಿಟ್ನೆಸ್ ರೂಪಾಂತರವು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅನಂತ್ ಅಂಬಾನಿ ವೈಟ್ ಲಾಸ್ ಜರ್ನಿ ಸ್ಥೂಲಕಾಯತೆ ಮತ್ತು ವಿಪರೀತ ತೂಕ ಹೆಚ್ಚಾಗುವಿಕೆಯಿಂದ ಬಳಲುತ್ತಿರುವ ಅನೇಕರಿಗೆ ಪ್ರೇರಣೆಯಾಯಿತು. ಸೆಲೆಬ್ರಿಟಿಗಳಿಂದ ಹಿಡಿದು ಫಿಟ್‌ನೆಸ್‌ ಫ್ರೀಕ್‌ಗಳು ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಫಿಟ್‌ನೆಟ್‌ ಟ್ರೈನರ್‌ ವಿನೋದ್ ಚನ್ನಾ ಎಂಬವರು ಅನಂತ್ ಅಂಬಾನಿಯ ಕೋಚ್ ಆಗಿದ್ದರು. ಇವರೂ ಈಗಾಗಲೇ ತುಂಬಾ ಸೆಲೆಬ್ರಿಟಿಗಳಿಗೂ ಫಿಟ್‌ನೆಸ್ ಕೋಚ್ ಆಗಿದ್ದಾರೆ. ಇವರು ಅನಂತ್‌ ಅಂಬಾನಿ ತೂಕ ಇಳಿಸಿಕೊಳ್ಳಲು ಏನು ಮಾಡಿದರು ಎಂಬ ಮಾಹಿತಿ ಇಲ್ಲಿದೆ. ಅನಂತ್ ಅಂಬಾನಿ, 18 ತಿಂಗಳಲ್ಲಿ ತಮ್ಮ ತೂಕವನ್ನು 108 ಕೆಜಿಯಷ್ಟು ಕಡಿಮೆ ಮಾಡಿಕೊಂಡರು. ಇದಕ್ಕೆ ವಿನೋದ್‌ ಚನ್ನಾ ಕಠಿಣವಾದ ತಾಲೀಮು ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದರು.

Tap to resize

ಅನಂತ್ ಅಂಬಾನಿಗೆ ಅಸ್ತಮಾವು ಇರುವ ಕಾರಣ ಸಾಕಷ್ಟು ಸ್ಟಿರಾಯ್ಡ್‌ಗಳನ್ನು ನೀಡಬೇಕಾಗುತ್ತದೆ ಎಂದು ನೀತಾ ಅಂಬಾನಿ 2017ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದರಿಂದಾಗಿ ಬೊಜ್ಜುತನ ಉಂಟಾಗಿದೆ ಎಂದು ತಿಳಿಸಿದ್ದರು. ಸಾಮಾನ್ಯ ತೂಕದಲ್ಲಿದ್ದ ಅನಂತ್ ಅಂಬಾನಿಯ ತೂಕ ದಿಢೀರ್ ಹೆಚ್ಚಾಗಲು ಅಸ್ತಮಾಗೆ ತೆಗೆದುಕೊಳ್ಳುವ ಔಷಧಿ, ಸ್ಟಿರಾಯ್ಡ್‌ಗಳೇ ಕಾರಣ ಎಂದು ತಿಳಿದುಬಂದಿತ್ತು. 

ಸಂದರ್ಶನವೊಂದರಲ್ಲಿ ಫಿಟ್‌ನೆಟ್‌ ಟ್ರೈನರ್‌ ವಿನೋದ್ ಚನ್ನಾ, ತೂಕ ಇಳಿಕೆಗೆ ಅನಂತ್ ಅಂಬಾನಿ ಅವರಿಗಿದ್ದ ಡೆಡಿಕೇಶನ್‌ ಇಷ್ಟು ಸುಲಭವಾಗಿ ವೈಟ್ ಲಾಸ್ ಮಾಡಿಕೊಳ್ಳಲು ಕಾರಣವಾಯಿತು ಎಂದು ತಿಳಿಸಿದ್ದರು. ವಿನೋದ್ ಚನ್ನಾ ಅವರು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಮತ್ತು ಜನಪ್ರಿಯ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಲ್ಲಿ ಒಬ್ಬರು. ಅವರು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿಯವರ ವೈಯಕ್ತಿಕ ತರಬೇತುದಾರರಾಗಿದ್ದರು. 

ಅನಂತ್ ಅಂಬಾನಿ ಅವರು ತೀವ್ರವಾದ ಡಯಟ್ ಮತ್ತು ವರ್ಕೌಟ್ ಕಾರ್ಯಕ್ರಮದಿಂದಾಗಿ ಕೇವಲ 18 ತಿಂಗಳಲ್ಲಿ 108 ಕೆಜಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಿದವರು ವಿನೋದ್ ಚನ್ನಾ. ಚನ್ನ ಪ್ರಕಾರ, ಅನಂತ್ ಅಂಬಾನಿ ಅವರು ಅತಿಯಾಗಿ ತಿನ್ನುವ ಅಭ್ಯಾಸ ಮತ್ತು ಜಂಕ್ ಫುಡ್ ಅನ್ನು ಇಷ್ಟಪಡುವ ಕಾರಣ ಅವರು ಡಯೆಟ್ ಅನುಸರಿಸುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಪ್ರೋಟೀನ್, ಕಡಿಮೆ ಕಾರ್ಬ್ ಮತ್ತು ಫೈಬರ್‌ಗಳನ್ನು ಒಳಗೊಂಡಿರುವ ಆಹಾರವನ್ನು ಚನ್ನಾ, ಅನಂತ್ ಅಂಬಾನಿಗೆ ಸೂಚಿಸಿದ್ದರು.

ಅನಂತ್ ಅಂಬಾನಿಯವರಲ್ಲದೆ, ವಿನೋದ್ ಚನ್ನಾ ಅವರು ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ ಮತ್ತು ಅನನ್ಯಾ ಬಿರ್ಲಾ ಸೇರಿದಂತೆ ಇತರ ಎ-ಲಿಸ್ಟ್ ಕ್ಲೈಂಟ್‌ಗಳನ್ನು ಹೊಂದಿದ್ದಾರೆ. 

ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ ಕುಂದ್ರಾ, ಹರ್ಷವರ್ಧನ್ ರಾಣೆ, ವಿವೇಕ್ ಒಬೆರಾಯ್, ಅರ್ಜುನ್ ರಾಂಪಾಲ್, ಇತ್ಯಾದಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ಅವರು ತಮ್ಮ ಗ್ರಾಹಕರನ್ನಾಗಿ ಹೊಂದಿದ್ದಾರೆ. ವಿನೋದ್ ಚನ್ನಾ ಅವರು 12 ಸೆಷನ್‌ಗಳಿಗೆ 1.5 ಲಕ್ಷ ರೂ. ಪಡೆಯುತ್ತಾರೆ. ವಿನೋದ್ ಚನ್ನ ಅವರು ತಮ್ಮ ಜೀವನದಲ್ಲಿ ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದಾರೆ.

Latest Videos

click me!