ದೇಶಾದ್ಯಂತ ಒಂದೆಡೆ ಮಳೆಯಿಂದ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ. ರಾಜಧಾನಿ ದೆಹಲಿ ಸೇರಿ ದೇಶದ ಹೆಚ್ಚಿನ ರಾಜ್ಯಗಳು ಪ್ರಸ್ತುತ ಜಲಾವೃತ, ಭೂಕುಸಿತ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಿಂದಾಗಿ ಅನೇಕ ಸ್ಥಳಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿವೆ. ಮಳೆಯಿಂದ ಹದಗೆಡುತ್ತಿರುವ ಪರಿಸ್ಥಿತಿಯ ನಡುವೆ ಈಗ ಹೊಸ ಸಮಸ್ಯೆ ಉದ್ಭವಿಸಿದೆ. ಕಳೆದ ಕೆಲ ದಿನಗಳಲ್ಲಿ, ಕಣ್ಣಿನ ಜ್ವರ ಅಥವಾ ಐ ಫ್ಲೂ (eye flue) ಪ್ರಕರಣಗಳು ಹೆಚ್ಚುತ್ತಿವೆ. ನಮಗೂ ಸಮಸ್ಯೆ ಕಾಡುವ ಮುನ್ನ ಈ ಸೋಂಕು, ಅದರ ರೋಗಲಕ್ಷಣಗಳು ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಿಳಿಯೋಣ.-
ಐ ಫ್ಲೂ ಎಂದರೇನು?
ಕಂಜಂಕ್ಟಿವಿಟಿಸ್ (Conjunctivitis) ಅನ್ನು 'ಪಿಂಕ್ ಐ' ಎಂದೂ ಕರೆಯುತ್ತಾರೆ. ಇದು ಸೋಂಕು, ಉರಿಯೂತವನ್ನು ಉಂಟುಮಾಡುತ್ತದೆ. ಇದು ಕಣ್ಣಿನ ಬಿಳಿ ಭಾಗ ಮತ್ತು ಕಣ್ಣುರೆಪ್ಪೆಗಳ ಒಳ ಪದರವನ್ನು ಆವರಿಸುತ್ತದೆ. ಮಳೆಗಾಲದಲ್ಲಿ, ಕಡಿಮೆ ತಾಪಮಾನ ಮತ್ತು ಹೆಚ್ಚಿನ ಆರ್ದ್ರತೆಯಿಂದಾಗಿ, ಜನರು ಬ್ಯಾಕ್ಟೀರಿಯಾ, ವೈರಸ್ ಮತ್ತು ಅಲರ್ಜಿ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ.ಈ ವೈರಸ್, ಅಲರ್ಜಿ ಕಾರಣದಿಂದಾಗಿ ಐ ಫ್ಲೂ ಸಮಸ್ಯೆ ಕಾಣಿಸಿಕೊಳ್ಳುತ್ತೆ.
ಇದನ್ನು 'ಪಿಂಕ್ ಐ' ಎಂದು ಏಕೆ ಕರೆಯಲಾಗುತ್ತದೆ?
"ಗುಲಾಬಿ ಕಣ್ಣು" (pink eye) ಎಂದೂ ಕರೆಯಲ್ಪಡುವ ಕಂಜಂಕ್ಟಿವಿಟಿಸ್, ಕಂಜಂಕ್ಟಿವಾದಲ್ಲಿ ಸಂಭವಿಸುವ ಉರಿಯೂತವಾಗಿದೆ (ತೆಳುವಾದ ಸ್ಪಷ್ಟ ಪದರ, ಇದು ಕಣ್ಣುರೆಪ್ಪೆಯ ಒಳ ಪದರ ಮತ್ತು ಕಣ್ಣಿನ ಬಿಳಿ ಭಾಗವನ್ನು ಆವರಿಸುತ್ತದೆ). ಇದನ್ನು ಗುಲಾಬಿ ಕಣ್ಣು ಎಂದು ಕರೆಯಲಾಗುತ್ತೆ, ಯಾಕಂದ್ರೆ ಕಂಜಂಕ್ಟಿವಿಟಿಸ್ ಹೆಚ್ಚಾಗಿ ಕಣ್ಣಿನ ಬಿಳಿ ಭಾಗವನ್ನು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. ಬಣ್ಣ ಬದಲಾವಣೆಯಿಂದ ಈ ಸಮಸ್ಯೆಯನ್ನು ಪಿಂಕ್ ಐ ಎನ್ನಲಾಗುತ್ತೆ.
ಕಂಜಂಕ್ಟಿವಿಟಿಸ್ ನ ಲಕ್ಷಣಗಳು
ಕೆಂಪು ಕಣ್ಣುಗಳು (red eyes)
ಕಣ್ಣುಗಳಲ್ಲಿ ಊತ
ತುರಿಕೆ
ಬರ್ನಿಂಗ್ ಸೆನ್ಸೇಶನ್
ಬೆಳಕನ್ನು ನೋಡಲು ಸಾಧ್ಯವಾಗದೇ ಇರೋದು
ಬಿಳಿ ಅಂಟು ಕಣ್ಣಿಂದ ಬರೋದು
ಸಾಮಾನ್ಯಕ್ಕಿಂತ ಹೆಚ್ಚು ಕಣ್ಣೀರು ಬರೋದು.
ಬ್ಯಾಕ್ಟೀರಿಯಾದ ಸೋಂಕು:
ಕಂಜಂಕ್ಟಿವಿಟಿಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ಹೆಚ್ಚು ಸಾಂಕ್ರಾಮಿಕವಾಗಬಹುದು. ಕಲುಷಿತ ಕೈಗಳು, ಮೇಕಪ್ ಅಥವಾ ಕಾಂಟ್ಯಾಕ್ಟ್ ಲೆನ್ಸ್ (contact lense) ಗಳು ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುವುದರಿಂದ ಇದು ಸಂಭವಿಸಬಹುದು.
ಅಲರ್ಜಿ ಹೇಗೆ ಉಂಟಾಗುತ್ತೆ?
ಪರಾಗ, ಧೂಳಿನ ಹುಳಗಳು, ಸಾಕುಪ್ರಾಣಿಗಳ ತುಪ್ಪಳ ಅಥವಾ ಕೆಲವು ಔಷಧಿಗಳಂತಹ ಅಲರ್ಜಿಕಾರಕಗಳಿಗೆ ಕಂಜಂಕ್ಟಿವಾ ಪ್ರತಿಕ್ರಿಯಿಸಿದಾಗ ಅಲರ್ಜಿಕ್ ಕಂಜಂಕ್ಟಿವಿಟಿಸ್ (conjunctivitis) ಉಂಟಾಗುತ್ತದೆ. ಇದು ಸಾಂಕ್ರಾಮಿಕವಲ್ಲ.
ಕಂಜಂಕ್ಟಿವಿಟಿಸ್ ತಡೆಗಟ್ಟುವುದು ಹೇಗೆ?
ಕೈಗಳನ್ನು ನಿಯಮಿತವಾಗಿ ತೊಳೆಯುತ್ತಿರಬೇಕು.
ಕಂಜಂಕ್ಟಿವಿಟಿಸ್ ಕಲುಷಿತ ಕೈಗಳಿಂದಾಗಿ ಮಾತ್ರ ಹರಡುತ್ತದೆ.
ಕಣ್ಣಿನ ಮೇಕಪ್ ಮತ್ತು ಟವೆಲ್ ಗಳಂತಹ ಪರ್ಸನಲ್ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
ಅವಧಿ ಮುಗಿದ ನಂತರ ಕಣ್ಣುಗಳಿಗೆ ಬಳಸುವ ಸೌಂದರ್ಯ ಉತ್ಪನ್ನಗಳನ್ನು ಬಳಸಬೇಡಿ.
ದಿಂಬಿನ ಕವರ್ ಅನ್ನು ಆಗಾಗ್ಗೆ ಬದಲಿಸಿ.
ಟವೆಲ್ ಅನ್ನು ಆಗಾಗ್ಗೆ ತೊಳೆಯಿರಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
ಕಂಜಂಕ್ಟಿವಿಟಿಸ್ ಸಾಂಕ್ರಾಮಿಕವಾಗಿರುವುದರಿಂದ, ಕಣ್ಣಿನ ಜ್ವರ ಇರುವ ಜನರ ಬಳಿ ಹೋಗಬೇಡಿ.