ನಿಮ್ಮ ಉಗುರುಗಳಲ್ಲಿ ಕಪ್ಪು ರೇಖೆಗಳು ಕಾಣಿಸ್ತಿದ್ರೆ ಅದು ಶರೀರದಲ್ಲಿ ವಿಟಮಿನ್ ಸಿ, ಜಿಂಕ್ ಮತ್ತು ಬೇರೆ ಪೋಷಕಾಂಶಗಳ ಕೊರತೆ ಇರೋದನ್ನ ಸೂಚಿಸುತ್ತೆ. ಹಾಗಾಗಿ ಪೋಷಕಾಂಶಗಳಿರೋ ಆಹಾರಗಳನ್ನ ಸೇವಿಸಿ. ಒಂದು ವೇಳೆ ಈ ರೇಖೆಗಳಿಂದ ನಕಗಳಲ್ಲಿ ರಕ್ತಸ್ರಾವ ಅಥವಾ ನೋವು ಇದ್ರೆ ತಕ್ಷಣ ವೈದ್ಯರನ್ನ ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ.
ಬಿಳಿ ರೇಖೆಗಳು
ನಿಮ್ಮ ಉಗುರುಗಳಲ್ಲಿ ಬಿಳಿ ರೇಖೆಗಳು ಅಥವಾ ಲೈಟಾಗಿ ಪಟ್ಟಿ ರೀತಿ ಬಿಳಿ ಬಣ್ಣದಲ್ಲಿದ್ರೆ ಅದನ್ನ ಲೈಟಾಗಿ ತಗೋಬೇಡಿ. ಇದು ಕಿಡ್ನಿ ಸಮಸ್ಯೆ ರೀತಿಯ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರುತ್ತೆ. ಹಾಗಾಗಿ, ಉಗುರುಗಳಲ್ಲಿ ಬಿಳಿ ರೇಖೆಗಳಿದ್ರೆ ತಕ್ಷಣ ವೈದ್ಯರನ್ನ ಭೇಟಿ ಮಾಡಿ.