
ಇತ್ತೀಚಿಗೆ ಕಳಪೆ ಲೈಫ್ ಸ್ಟೈಲ್ ಮತ್ತು ಇತರೆ ಕಾರಣಗಳಿಂದಾಗಿ, ಪುರುಷರು ಕಡಿಮೆ ವೀರ್ಯಾಣು ಸಂಖ್ಯೆಯ (Sperm Count) ಸಮಸ್ಯೆ ಎದುರಿಸುತ್ತಿದ್ದಾರೆ. ಪುರುಷರಲ್ಲಿ ಕಡಿಮೆ ವೀರ್ಯಾಣು ಸಂಖ್ಯೆ ಸಮಸ್ಯೆಯನ್ನು ಆಲಿಗೋಸ್ಪರ್ಮಿಯಾ ಎನ್ನಲಾಗುತ್ತೆ. ಅದೇ ಸಮಯದಲ್ಲಿ, ವೀರ್ಯವು ರೂಪುಗೊಳ್ಳದಿದ್ದಾಗ, ಅದನ್ನು ಅಜೋಸ್ಪರ್ಮಿಯಾ ಎಂದು ಕರೆಯಲಾಗುತ್ತದೆ.
ಸೀಮನ್‌ನಲ್ಲಿ ಪ್ರತಿ ಮಿಲಿಲೀಟರ್ ಗೆ 15 ಮಿಲಿಯನ್‌ಗಿಂತ ಕಡಿಮೆ ವೀರ್ಯಾಣುವಿದ್ದರೆ, ನಿಮ್ಮ ಸ್ಪರ್ಮ್ ಕೌಂಟ್ ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತೆ. ಪುರುಷರಲ್ಲಿ, ವೀರ್ಯಾಣು ಸಂಖ್ಯೆ ಕಡಿಮೆ ಇದ್ದಾಗ ಹೆಣ್ಣು ಗರ್ಭ ಧರಿಸುವ ಸಾಧ್ಯತೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಆದರೆ ಕಡಿಮೆ ವೀರ್ಯಾಣು ಸಂಖ್ಯೆ ಇರುವ ಪುರುಷರೂ ತಂದೆಯರಾದ ಅನೇಕ ಪ್ರಕರಣಗಳಿವೆ.
ಕಡಿಮೆ ವೀರ್ಯಾಣು ಸಂಖ್ಯೆಯ (Low Sperm Count) ಮುಖ್ಯ ಲಕ್ಷಣವೆಂದರೆ ಪ್ರೆಗ್ನೆಂಟ್ ಆಗೋದರಲ್ಲಿ ಸಮಸ್ಯೆ ಎದುರಿಸಬೇಕಾಗುತ್ತೆ. ಇದಲ್ಲದೆ, ಯಾವುದೇ ಹೆಚ್ಚಿನ ಚಿಹ್ನೆಗಳು ಅಥವಾ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವು ಪುರುಷರಲ್ಲಿ, ಹಾರ್ಮೋನುಗಳ ಬದಲಾವಣೆ ಅಥವಾ ವೀರ್ಯಾಣುವಿನ ಸಾಗಣೆಯಲ್ಲಿ ಅಡಚಣೆಯಂತಹ ಸಮಸ್ಯೆಗಳು ಉಂಟಾಗಬಹುದು.
ಕಡಿಮೆ ವೀರ್ಯಾಣುಗಳ ಸಂಖ್ಯೆಯ ಕೆಲವು ಲಕ್ಷಣಗಳು ಇಲ್ಲಿವೆ
ಲೈಂಗಿಕ ಬಯಕೆ ಕಡಿಮೆಯಾಗುವುದು ಅಲ್ಲದೇ ಲೈಂಗಿಕ ಕಾರ್ಯದಲ್ಲಿ ತೊಂದರೆ ಉಂಟಾಗುತ್ತೆ.
ವೃಷಣಗಳ ಪ್ರದೇಶದಲ್ಲಿ ನೋವು, ಊತ ಮತ್ತು ಗಡ್ಡೆ ರೂಪುಗೊಳ್ಳುವುದು.
ದೇಹ ಮತ್ತು ಮುಖದ ಕೂದಲು ಉದುರುವಿಕೆ ಅಥವಾ ವರ್ಣತಂತುಗಳು ಅಥವಾ ಹಾರ್ಮೋನುಗಳ ಅಸಹಜತೆ ಉಂಟಾಗುತ್ತೆ.
ಅಸುರಕ್ಷಿತ ಲೈಂಗಿಕ ಕ್ರಿಯೆಯ (unsafe sex) ಬಳಿಕವೂ ನೀವು ಗರ್ಭಧರಿಸಲು ತೊಂದರೆ ಎದುರಿಸುತ್ತಿದ್ದರೆ, ಇದಕ್ಕಾಗಿ ನೀವು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ಅದಕ್ಕಾಗಿ ಸ್ವಲ್ಪ ಸಮಯ ನೀವು ಕಾದು ನೋಡಬೇಕು.
ಸೆಕ್ಸ್ ಮಾಡುವ ಬಯಕೆ ಕಡಿಮೆಯಾಗುವುದು ಅಥವಾ ಲೈಂಗಿಕ ಕಾರ್ಯದಲ್ಲಿ ತೊಂದರೆ.
ವೃಷಣದಲ್ಲಿ ಅಥವಾ ಅದರ ಸುತ್ತಲೂ ನೋವು, ಗಡ್ಡೆಯ ರಚನೆ ಅಥವಾ ಊತ
ದೀರ್ಘಕಾಲದ ವೃಷಣಗಳು, ಪ್ರಾಸ್ಟೇಟ್ ಮತ್ತು ಲೈಂಗಿಕ ತೊಂದರೆ
ವೃಷಣಗಳು, ಶಿಶ್ನ ಅಥವಾ ವೃಷಣಗಳಶಸ್ತ್ರಚಿಕಿತ್ಸೆ.
ಈ ಎಲ್ಲಾ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರ ಬಳಿ ಪರೀಕ್ಷೆ ನಡೆಸಬೇಕು.
ಆರೋಗ್ಯ ಸಮಸ್ಯೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯಿಂದಾಗಿ (medical treatment), ನೀವು ಕಡಿಮೆ ವೀರ್ಯಾಣುಗಳ ಸಂಖ್ಯೆಯ ಸಮಸ್ಯೆ ಎದುರಿಸಬೇಕಾಗಬಹುದು. ಆದುದರಿಂದ ಹೆಚ್ಚು ಹೆಚ್ಚು ಔಷಧಿ, ಟ್ಯಾಬ್ಲೆಟ್ ಸೇವಿಸೋದನ್ನು ಅವಾಯ್ಡ್ ಮಾಡಿ.
ಈ ಸಮಸ್ಯೆ ಉಂಟಾದಾಗ, ವೃಷಣಗಳ ರಕ್ತನಾಳಗಳಲ್ಲಿ ಊತ ಉಂಟಾಗುತ್ತದೆ. ಪುರುಷರಲ್ಲಿ ಬಂಜೆತನಕ್ಕೆ ಇದು ಅತ್ಯಂತ ಸಾಮಾನ್ಯ ಕಾರಣವಾಗಿದೆ. ಆದಾಗ್ಯೂ, ವೆರಿಕೋಸೆಲ್ ನಿಂದಾಗಿ ಪುರುಷರಲ್ಲಿ ಬಂಜೆತನಕ್ಕೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ವೆರಿಕೋಸೆಲ್ ನ ಸಮಸ್ಯೆ ಇದ್ದಾಗ ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟವು ಕಡಿಮೆಯಾಗುತ್ತದೆ.
ಅನೇಕ ಬಾರಿ ಸೋಂಕಿನಿಂದಾಗಿ (infection), ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಲೈಂಗಿಕವಾಗಿ ಹರಡುವ ರೋಗಗಳು, ಗೊನೊರಿಯಾ ಮತ್ತು ಎಚ್ಐವಿ (HIV) ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇದೆ.
ಟ್ಯೂಮರ್
ಕ್ಯಾನ್ಸರ್ (Cancer) ಮತ್ತು ಸಾಂಕ್ರಾಮಿಕವಲ್ಲದ ಗೆಡ್ಡೆಗಳು ಪುರುಷರಲ್ಲಿ ಫರ್ಟಿಲಿಟಿ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಟ್ಯೂಮರ್ ಗಳಿಗೆ (tumor) ಚಿಕಿತ್ಸೆ ನೀಡಲು ಶಸ್ತ್ರಚಿಕಿತ್ಸೆ, ವಿಕಿರಣ ಅಥವಾ ಕೀಮೋಥೆರಪಿ (Chemotherapy) ಸಹ ಪುರುಷರಲ್ಲಿ ಫರ್ಟಿಲಿಟಿ (Fertility) ಮೇಲೆ ಪರಿಣಾಮ ಬೀರಬಹುದು.
ಹೈಪೋಥಾಲಮಸ್, ಪಿಟ್ಯುಟರಿ ಮತ್ತು ವೃಷಣಗಳು ಸ್ಪರ್ಮ್ ತಯಾರಿಸಲು ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಈ ಹಾರ್ಮೋನುಗಳಲ್ಲಿನ ಬದಲಾವಣೆಗಳು ವೀರ್ಯಾಣುಗಳ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಉದ್ಯಮದ ರಾಸಾಯನಿಕಗಳಾದ ಬೆಂಜೀನ್, ಟೊಲುಯೆನ್, ಕ್ಸೈಲೀನ್, ಗಿಡಮೂಲಿಕೆಗಳು (Herbs), ಕೀಟನಾಶಕಗಳು, ಸಾವಯವ ದ್ರಾವಕಗಳು, ಪೇಂಟಿಂಗ್ ವಸ್ತುಗಳು ಸ್ಪರ್ಮ್ ಕೌಂಟ್ ಕಡಿಮೆ ಮಾಡಬಹುದು. ಆದುದರಿಂದ ಸಾಧ್ಯವಾದಷ್ಟು ಇವುಗಳನ್ನು ಅವಾಯ್ಡ್ ಮಾಡಿ.
ವಿಕಿರಣವು ವೀರ್ಯಾಣುಗಳ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ವೀರ್ಯಾಣುಗಳ ಉತ್ಪಾದನೆಯು ಸಾಮಾನ್ಯವಾಗಲು ಅನೇಕ ವರ್ಷಗಳನ್ನು ತೆಗೆದುಕೊಳ್ಳಬಹುದು. ಹೆಚ್ಚಿನ ಪ್ರಮಾಣದ ವಿಕಿರಣದಿಂದಾಗಿ, ವೀರ್ಯಾಣುಗಳ ಉತ್ಪಾದನೆಯನ್ನು ಕಡಿಮೆ ಮಾಡಬಹುದು.
ದೀರ್ಘ ಕಾಲದವರೆಗೆ ಕುಳಿತುಕೊಳ್ಳುವುದು, ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಅಥವಾ ಲ್ಯಾಪ್‌ಟಾಪ್ , ಕಂಪ್ಯೂಟರಿನಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡುವುದು ವೃಷಣ ಕೋಶದ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ವೀರ್ಯಾಣುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಸ್ನಾಯು ಬೆಳವಣಿಗೆಗಾಗಿ ನೀವು ಸ್ಟಿರಾಯ್ಡ್ ಗಳು ಇತ್ಯಾದಿ ಸೇವಿಸಿದರೆ, ಅದು ನಿಮ್ಮ ಟೆಸ್ಟಿಕಲ್ಸ್ ಗಳನ್ನು ಕುಗ್ಗಿಸಬಹುದು ಮತ್ತು ವೀರ್ಯಾಣು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಕೊಕೇನ್ ಮತ್ತು ಹೆಂಪ್ ಅನ್ನು ಬಳಸುವುದರಿಂದ ವೀರ್ಯಾಣು ಸಂಖ್ಯೆ ಮತ್ತು ಗುಣಮಟ್ಟದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು.
ಆಲ್ಕೋಹಾಲ್ (alcohol) ಸೇವನೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ವೀರ್ಯಾಣು ಸಂಖ್ಯೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ಒಬೆಸಿಟಿ (Obesity) ಹಾರ್ಮೋನುಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುವ ಒಂದು ಕಾರಣವಾಗಿರಬಹುದು, ಇದು ಪುರುಷರ ಫರ್ಟಿಲಿಟಿಯನ್ನು ಕಡಿಮೆ ಮಾಡುತ್ತದೆ.
ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಕೆಲವೊಂದು ವಿಷಯಗಳ ಬಗ್ಗೆ ನೀವು ಗಮನ ಹರಿಸಬೇಕು. ಅವು ಯಾವುವೆಂದರೆ
ಧೂಮಪಾನ (smoking) ಮಾಡಬೇಡಿ.
ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ.
ಆರೋಗ್ಯಕರ ತೂಕ ಕಾಪಾಡಿಕೊಳ್ಳಿ.
ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಿ,
ಕೀಟನಾಶಕಗಳು, ಭಾರವಾದ ಲೋಹಗಳು ಮತ್ತು ಇತರ ವಿಷಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.