ಆರಂಭಲ್ಲೇ ಗುರುತಿಸೋದು ಇನ್ನು ಸುಲಭ, ಕ್ಯಾನ್ಸರ್ ಅಂದ್ರೆ ಇನ್ನು ಭಯ ಬಿಟ್ಹಾಕಿ

First Published Nov 6, 2022, 1:02 PM IST

ಕ್ಯಾನ್ಸರ್ ಅನ್ನೋದು ಜೀವವನ್ನು ಹಿಂಡಿ ಹಿಪ್ಪೆ ಮಾಡುವಂಥ ಮಹಾಮಾರಿ. ಇದು ಯಾವುದೇ ಲಕ್ಷಣಗಳನ್ನೂ ತೋರಿಸದೆ ಕೊನೆಯಲ್ಲಿ ಒಮ್ಮಿಂದೊಮ್ಮೆಲೆ ಜೀವವನ್ನೇ ನಡುಗಿಸಿ ಬಿಡುವ ಮಾರಣಾಂತಿಕ ಕಾಯಿಲೆ. ಈ ಸಮಸ್ಯೆಯನ್ನು ಆರಂಭದಲ್ಲಿ ಗುರುತಿಸುವುದು ಕಷ್ಟ ಅನ್ನೋದೆ ಒಂದು ದೊಡ್ಡ ತಲೆ ನೋವಾಗಿತ್ತು. ಆದರೆ ಇದೀಗ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಬಹುದು ಅನ್ನೋದು ಸಹ ತಿಳಿದು ಬಂದಿದೆ. ಅದಕ್ಕೇನು ಮಾಡಬೇಕು ತಿಳಿಯೋಣ. 

ದೇಹದಲ್ಲಿ ಹರಡುವ ಮೊದಲು ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ರೋಗಿಯ ಜೀವವನ್ನು ಉಳಿಸುವುದು ಸುಲಭ. ಹಾಗಾಗಿಯೇ, ಸಾಮಾನ್ಯ ಕ್ಯಾನ್ಸರ್ ಪತ್ತೆ ಹಚ್ಚಲು ವೈದ್ಯರು ನಿಯಮಿತ ಸ್ಕ್ರೀನಿಂಗ್ (Screening) ಮಾಡಲು ಶಿಫಾರಸು ಮಾಡುತ್ತಾರೆ. ಆದರೆ ಪ್ರಸ್ತುತ, ವಿವಿಧ ರೀತಿಯ ಕ್ಯಾನ್ಸರ್ ತನಿಖೆ ಮಾಡಲು ವಿಭಿನ್ನ ವಿಧಾನಗಳನ್ನು ಬಳಸಬಹುದಾಗಿದೆ. ಉದಾಹರಣೆಗೆ ಕರುಳಿನ ಕ್ಯಾನ್ಸರ್ (Intestine Cancer) ಪರೀಕ್ಷಿಸಲು ಕೊಲೊನೊಸ್ಕೋಪಿ, ಸ್ತನ ಕ್ಯಾನ್ಸರ್ (breast cancer) ಪರೀಕ್ಷಿಸಲು ಮ್ಯಾಮೊಗ್ರಾಮ್ ಗಳು, ಇತ್ಯಾದಿ.

ಸಮಯ, ಸಂಪನ್ಮೂಲಗಳು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಪ್ರತ್ಯೇಕ ಪರೀಕ್ಷೆ ನಡೆಸುವುದು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿಜ್ಞಾನಿಗಳು ಕೇವಲ ಒಂದು ರಕ್ತ ಪರೀಕ್ಷೆಯಿಂದ (blood test) ಅನೇಕ ರೀತಿಯ ಕ್ಯಾನ್ಸರ್ ಪತ್ತೆ ಮಾಡಲು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ರಕ್ತ ಪರೀಕ್ಷೆ ಮಾಡಿಸೋದು ಸಹ ಸುಲಭ ಮತ್ತು ಕಡಿಮೆ ವೆಚ್ಚದಾಯಕ. ವಿಜ್ಞಾನಿಗಳು ಈ ದಿಕ್ಕಿನಲ್ಲಿ ಮಲ್ಟಿ-ಕ್ಯಾನ್ಸರ್ ಆರಂಭಿಕ ಪತ್ತೆ (MCED) ಪರೀಕ್ಷೆಗೆ ಒಂದು ಮಾರ್ಗ ಕಂಡುಕೊಂಡಿದ್ದಾರೆ.

ದೇಹದಲ್ಲಿರುವ ಗೆಡ್ಡೆ ಕೋಶಗಳು ಸೇರಿ ಎಲ್ಲಾ ರೀತಿಯ ಜೀವಕೋಶಗಳು (Cells) ಸತ್ತಾಗ, ಅವುಗಳ ಡಿಎನ್ಎ ರಕ್ತಪ್ರವಾಹಕ್ಕೆ ಬರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಎಂಸಿಇಡಿ ಪರೀಕ್ಷೆಯು ರಕ್ತದ ಹರಿವಿನಲ್ಲಿ ಗೆಡ್ಡೆಯ ಡಿಎನ್ಎ ಪ್ರಮಾಣವನ್ನು ಕಂಡುಹಿಡಿಯುತ್ತದೆ. ಪ್ರಸರಣಗೊಳ್ಳುವ ಈ 'ಕೋಶ-ಮುಕ್ತ' DNA ಅದು ಯಾವ ರೀತಿಯ ಕೋಶದಿಂದ ಬಂದಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದರರ್ಥ ಇದು ಸಾಮಾನ್ಯ ಜೀವಕೋಶ ಅಥವಾ ಕ್ಯಾನ್ಸರ್ ಕೋಶಕ್ಕೆ (cancer cell) ಸೇರಿದೆ. 

ಅಂದಹಾಗೆ, ರಕ್ತದಲ್ಲಿ ಪರಿಚಲನೆಯಲ್ಲಿರುವ ಗೆಡ್ಡೆಯ ಡಿಎನ್ ಎಯನ್ನು ಪರೀಕ್ಷಿಸುವುದು ಹೊಸದೇನಲ್ಲ. ಈ ಲಿಕ್ವಿಡ್ ಬಯಾಪ್ಸಿಯನ್ನು (liquid biopsy) ಸಾಮಾನ್ಯವಾಗಿ ರಕ್ತ ಪರೀಕ್ಷೆ ಎಂದು ಕರೆಯಲಾಗುತ್ತದೆ ಮತ್ತು ಮುಂದುವರಿದ ಹಂತವನ್ನು ಹೊಂದಿರುವ ಕ್ಯಾನ್ಸರ್ ರೋಗಿಗಳನ್ನು ಪರೀಕ್ಷಿಸಲು ಸಹ ಬಳಸಲಾಗುತ್ತದೆ. 

ವೈದ್ಯರು ಈ ರಕ್ತ ಪರೀಕ್ಷೆಯೊಂದಿಗೆ ಗೆಡ್ಡೆಯ DNA ಯ ರೂಪಾಂತರಗಳನ್ನು ಪತ್ತೆಹಚ್ಚುತ್ತಾರೆ, ಇದು ಚಿಕಿತ್ಸೆಯನ್ನು ನಿರ್ಧರಿಸಲು ಅವರಿಗೆ ಸಹಾಯ ಮಾಡುತ್ತೆ. ಮುಂದುವರಿದ ಹಂತದ ಕ್ಯಾನ್ಸರ್ ರೋಗಿಗಳ ರಕ್ತದಲ್ಲಿ ಪರಿಚಲನೆಯ ಡಿಎನ್ಎ ಪ್ರಮಾಣವು ಆರಂಭಿಕ ಹಂತಕ್ಕಿಂತ ಹೆಚ್ಚಾಗಿರುವುದರಿಂದ, ಅವರಲ್ಲಿ ಆನುವಂಶಿಕ ಬದಲಾವಣೆಗಳನ್ನು ಗುರುತಿಸುವುದು ಸುಲಭವಾಗುತ್ತದೆ.

ಎಂಸಿಇಡಿ ಪರೀಕ್ಷೆಯು ಪ್ರಸ್ತುತ ಲಿಕ್ವಿಡ್ ಬಯಾಪ್ಸಿಗಿಂತ (Liquid Biopsy) ಭಿನ್ನವಾಗಿದೆ, ಏಕೆಂದರೆ ಇದು ಹೆಚ್ಚಿನ ಗೆಡ್ಡೆಯ ಕೋಶಗಳು ಇಲ್ಲದ ಆರಂಭಿಕ ಹಂತದಲ್ಲಿನ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತದೆ. ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚುವುದು ಸವಾಲಿನ ಸಂಗತಿಯಾಗಿದೆ, ಏಕೆಂದರೆ ಕ್ಯಾನ್ಸರ್ ರಹಿತ ಜೀವಕೋಶಗಳು ಸಹ ರಕ್ತಪ್ರವಾಹಕ್ಕೆ ಡಿಎನ್ಎಯನ್ನು ಬಿಡುಗಡೆ ಮಾಡುತ್ತವೆ. 

ರಕ್ತಪ್ರವಾಹದಲ್ಲಿರುವ ಹೆಚ್ಚಿನ ಡಿಎನ್‌ಎ, ಕ್ಯಾನ್ಸರ್ ಅಲ್ಲದ ಜೀವಕೋಶಗಳಿಂದ ಬರುವುದರಿಂದ, ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯುವುದು ಕಷ್ಟ. ಜೀವಕೋಶಗಳು ಸ್ವಾಭಾವಿಕವಾಗಿ ಹಳೆಯದಾಗಿದ್ದರೂ, ಅಸಹಜ ಡಿಎನ್ಎ ಬಿಡುಗಡೆಯಾಗುತ್ತದೆ, ಇದು ಪರಿಚಲನೆಯಲ್ಲಿರುವ ಕ್ಯಾನ್ಸರ್ ಡಿಎನ್ಎಯನ್ನು (Cancer DNA) ಕಂಡುಹಿಡಿಯುವಲ್ಲಿ ಗೊಂದಲ ಸೃಷ್ಟಿಸುತ್ತದೆ. ರಕ್ತದ ಪ್ರವಾಹಕ್ಕೆ ಬರುವ ವಯಸ್ಸಾದ ಜೀವಕೋಶಗಳ DNA ಪ್ರಕ್ರಿಯೆಯನ್ನು ಕ್ಲೋನಲ್ ಹೆಮಾಟೋಪ್ಯೋಸಿಸ್ ಎಂದು ಕರೆಯಲಾಗುತ್ತದೆ.

ಹೊಸ ಪರೀಕ್ಷೆಯಲ್ಲಿ, ಸಾಮಾನ್ಯ ಜೀವಕೋಶಗಳ ಡಿಎನ್ಎ ಹಸ್ತಕ್ಷೇಪ ಮಾಡದ 'ಮಾಲಿಕ್ಯುಲಾರ್ ಬಾರ್ಕೋಡ್' ನ ಒಂದು ಪ್ರಕಾರದ ಮೂಲಕ ಕ್ಯಾನ್ಸರ್ ಡಿಎನ್ಎಯನ್ನು ಗುರುತಿಸಬಹುದು. ಇದು ಬಾರ್ ಕೋಡ್ ಡಿಎನ್‌ಎ ಮಿಥೈಲೇಶನ್‌ನಿಂದ ಉಂಟಾಗುತ್ತದೆ, ಇದು ಪ್ರತಿಯೊಂದು ವಿಧದ ಜೀವಕೋಶದ ಮೇಲ್ಮೈಯಲ್ಲಿ ಕಂಡುಬರುವ DNAಯಲ್ಲಿ ಸ್ವಾಭಾವಿಕವಾಗಿ ಪರಸ್ಪರ ಭಿನ್ನವಾಗಿರುತ್ತದೆ. ಉದಾಹರಣೆಗೆ, ಶ್ವಾಸಕೋಶದ ಅಂಗಾಂಶವು ವಿಭಿನ್ನ ರೀತಿಯ ಡಿಎನ್ಎ ಮಿಥೈಲೇಶನ್ ಹೊಂದಿದೆ, ಆದರೆ ಸ್ತನ ಅಂಗಾಂಶವು ವಿಭಿನ್ನ ಪ್ರಕಾರವನ್ನು ಹೊಂದಿದೆ.

ಇಷ್ಟೇ ಅಲ್ಲ, ಕ್ಯಾನ್ಸರ್ ಕೋಶಗಳ ಡಿಎನ್ಎ ಮಿಥೈಲೇಶನ್ ಮಾದರಿಯೂ ಅಸಹಜವಾಗಿರುತ್ತೆ, ಇದು ಅವುಗಳನ್ನು ಕ್ಯಾನ್ಸರ್ ಪ್ರಕಾರದೊಂದಿಗೆ ಸಂಯೋಜಿಸುತ್ತದೆ. ಈ ರೀತಿಯಲ್ಲಿ, ವಿವಿಧ ರೀತಿಯ ಡಿಎನ್ಎ ಮೆಥೈಲೇಶನ್ ಮಾದರಿಗಳ ಕ್ಯಾಟಲಾಗ್ ರಚಿಸುವ ಮೂಲಕ, ಎಂಸಿಇಡಿ ಪರೀಕ್ಷೆಯನ್ನು ಡಿಎನ್ಎಯ ನಿರ್ದಿಷ್ಟ ಖಂಡದ ಮೇಲೆ ಕೇಂದ್ರೀಕರಿಸಬಹುದು, ಇದು ಕ್ಯಾನ್ಸರ್ ಮತ್ತು ಸಾಮಾನ್ಯ ಜೀವಕೋಶಗಳನ್ನು ಬೇರ್ಪಡಿಸುತ್ತದೆ ಮತ್ತು ಕ್ಯಾನ್ಸರ್ ಸಂಭವಿಸುವ ಸ್ಥಳವನ್ನು ಗುರುತಿಸುತ್ತದೆ. 

ಎಂಸಿಇಡಿ ಪರೀಕ್ಷೆಯ (MCED test) ಕ್ಲಿನಿಕಲ್ ಬಳಕೆಗೆ ಇನ್ನೂ ಹಲವಾರು ವರ್ಷಗಳು ಬೇಕಾಗಬಹುದು, ಆದರೆ ಆ ಚೌಕಟ್ಟನ್ನು ಸಿದ್ಧಪಡಿಸುವತ್ತ ಕೆಲಸ ಪ್ರಾರಂಭವಾಗಿದೆ. ಸಂಶೋಧಕರು ಮತ್ತು ವೈದ್ಯರು ಯಾರನ್ನು ಪರೀಕ್ಷಿಸಬೇಕು, ಯಾವ ವಯಸ್ಸಿನಲ್ಲಿ ಮತ್ತು ವ್ಯಕ್ತಿಯ ಅಥವಾ ಕುಟುಂಬದ ವೈದ್ಯಕೀಯ ಇತಿಹಾಸವು ಯಾವ ಪಾತ್ರ ವಹಿಸುತ್ತದೆ ಎಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.

click me!