ತೂಕ ಹೆಚ್ಚಿಸಿಕೊಳ್ಳೋ ಯೋಚನೆ ಇದ್ದರೆ ಇಲ್ಲಿದೆ ಬೆಸ್ಟ್ ಫುಡ್

First Published Jan 20, 2023, 4:59 PM IST

ಪೀನಟ್ ಬಟರ್ ಉತ್ತಮ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತೆ ಮತ್ತು ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ, ಇದನ್ನು ತಿನ್ನುವ ಮೂಲಕ ತೆಳ್ಳಗಿನ ಜನರು ಸುಲಭವಾಗಿ ತಮ್ಮ ತೂಕ ಹೆಚ್ಚಿಸಬಹುದು. ಆದ್ದರಿಂದ ಇದನ್ನು ಹೇಗೆ ಸೇವಿಸೋದು ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ನೀವು ತುಂಬಾ ತೆಳ್ಳಗಿದ್ದರೆ ಮತ್ತು ತೂಕ ಹೆಚ್ಚಿಸಲು (Weight gain) ಎಲ್ಲಾ ಪ್ರಯತ್ನಗಳನ್ನು ಮಾಡಿ ಸುಸ್ತಾಗಿದ್ರೆ, ನಿಮ್ಮ ಆಹಾರದಲ್ಲಿ ಪೀನಟ್ ಬಟರ್ ಸೇರಿಸಬೇಕು. ಇದು ಹೆಚ್ಚಿನ ಕ್ಯಾಲೋರಿ ಆಹಾರವಾಗಿದ್ದು, ನೈಸರ್ಗಿಕ ರೀತಿಯಲ್ಲಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತೆ. ಆದರೆ ಇದಕ್ಕಾಗಿ, ನೀವು ಅದನ್ನು ಸರಿಯಾಗಿ ಸೇವಿಸಬೇಕು. 

ಪೌಷ್ಠಿಕಾಂಶ ಭರಿತ ಅಧಿಕ ಕ್ಯಾಲೊರಿ ಆಹಾರಗಳನ್ನು ತೂಕ ಹೆಚ್ಚಳಕ್ಕೆ ತುಂಬಾ ಪರಿಣಾಮಕಾರಿ , ಅವುಗಳಲ್ಲಿ ಒಂದು ಪೀನಟ್ ಬಟರ್ (Peanut butter). ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಜೊತೆಗೆ, ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಇತರ ವಿಟಮಿನ್ಸ್ ಮತ್ತು ಮಿನರಲ್ಸ್ ಇದರಲ್ಲಿ ಇವೆ. 

ತೂಕ ಹೆಚ್ಚಿಸಲು ಪೀನಟ್ ಬಟರ್ ಸೇವಿಸೋದು ಹೇಗೆ?

- ನೀವು ಪೀನಟ್ ಬಟರನ್ನು ಶೇಕ್ ಅಥವಾ ಸ್ಮೂಥಿಯೊಂದಿಗೆ ಬೆರೆಸಿ ಕುಡಿಯಬಹುದು.
- ಬ್ರೌನ್ ಬ್ರೆಡ್(Brown bread) ಮೇಲೆ ಪೀನಟ್ ಬಟರ್ ಹಚ್ಚಿ ಸಹ ತಿನ್ನಬಹುದು, ಇದು ತುಂಬಾ ರುಚಿಕರ ಮತ್ತು ಆರೋಗ್ಯಕರ. 

- ಬ್ರೆಡ್ ತಿನ್ನಲು ಬಯಸದವರು, ಪೀನಟ್ ಬಟರನ್ನು ರೊಟ್ಟಿ ಮೇಲೆ ಸಹ ಹಾಕಿ ತಿನ್ನಬಹುದು.
- ಪೀನಟ್ ಬಟರನ್ನು ಓಟ್ಸ್ (Oats) ಅಥವಾ ಓಟ್ ಮೀಲ್ ನೊಂದಿಗೆ ಬೆರೆಸಿ ಬ್ರೇಕ್ ಫಾಸ್ಟ್ ಗೆ ತಿನ್ನಬಹುದು.

- ಪೀನಟ್ ಬಟರನ್ನು ಬಾಳೆಹಣ್ಣು ಅಥವಾ ಸೇಬಿನೊಂದಿಗೆ(Apple) ಸಂಜೆ ಸ್ನಾಕ್ಸ್ ರೀತಿ ಸೇವಿಸಬಹುದು.
- ಮಲ್ಟಿಗ್ರೈನ್ ಅಥವಾ ಗೋಧಿ ಬಿಸ್ಕತ್ತುಗಳೊಂದಿಗೆ ಸಹ ಪೀನಟ್ ಬಟರನ್ನು ತಿನ್ನಬಹುದು. 
- ತೂಕ ಹೆಚ್ಚಿಸಲು ಪೀನಟ್ ಬಟರನ್ನು ಹಾಲಿನೊಂದಿಗೆ ಸೇವಿಸಬಹುದು. ಹೌದು ನೀವು ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬಹುದು. 

ಪೀನಟ್ ಬಟರ್ ತಿನ್ನುವುದರ ಪ್ರಯೋಜನಗಳು ಹೀಗಿವೆ

- ಪೀನಟ್ ಬಟರ್  ಹೃದಯಕ್ಕೆ(Heart) ತುಂಬಾ ಆರೋಗ್ಯಕರ. ಇದು ಹೃದಯದ ಸಮಸ್ಯೆ ನಿವಾರಿಸಿ ಆರೋಗ್ಯಕರವಾಗಿರಿಸುತ್ತೆ.
- ಸಕ್ಕರೆ, ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯತೆಯಂತಹ ಸಮಸ್ಯೆಗಳಿಗೆ ಪೀನಟ್ ಬಟರ್ ಪ್ರಯೋಜನಕಾರಿ.

- ಬಾಡಿ ಬಿಲ್ಡರ್ಸ್(Body builders) ಪೀನಟ್ ಬಟರ್ ಸೇವಿಸಬೇಕು. ಅವರ ಸ್ನಾಯುಗಳಿಗೆ ಇದು ತುಂಬಾ ಒಳ್ಳೇದು. 
-ಪ್ರೋಟೀನ್ ಸಮೃದ್ಧವಾಗಿರುವುದರಿಂದ, ಪೀನಟ್ ಬಟರ್ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. 

- ಪೀನಟ್ ಬಟರ್ ಇದು ಹೆಚ್ಚು ಫೈಬರ್ ಹೊಂದಿರುತ್ತೆ, ಇದರಿಂದಾಗಿ ಇದು ಜೀರ್ಣಕ್ರಿಯೆಯನ್ನು(Digestion) ಆರೋಗ್ಯಕರವಾಗಿರಿಸುತ್ತೆ.
- ಹಾಗೆಯೇ ಪೀನಟ್ ಬಟರ್ ದೇಹದ ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹ ಸಹಾಯ ಮಾಡುತ್ತೆ. 

click me!