ಚಳಿಗಾಲದಲ್ಲಿ ಅಧಿಕವಾಗುತ್ತೆ ವೃದ್ಧರ ಸಾವು ! ಈ ರೀತಿಯಾಗಿ ಕಾಳಜಿ ವಹಿಸಿ

Published : Jan 18, 2023, 05:32 PM IST

ಚಳಿಗಾಲ ಬಂದಾಗ, ಅದು ಕೆಲವು ರೋಗ ಮತ್ತು ತೊಂದರೆಗಳನ್ನು ಸಹ ತರುತ್ತೆ. ಚಳಿಗಾಲ ಅಂದಮೇಲೆ ಇದೆಲ್ಲಾ ಸಾಮಾನ್ಯ. ಆದರೆ ಈ ಸೀಸನ್ ನಲ್ಲಿ ವಯಸ್ಸಾದವರು ವಿಶೇಷವಾಗಿ ಹೆಚ್ಚು ಬಾಧಿತರಾಗುತ್ತಾರೆ. ಆದ್ದರಿಂದ ಚಳಿಗಾಲದಲ್ಲಿ ಅವರನ್ನು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಕೆಲವು ಟಿಪ್ಸ್.

PREV
18
ಚಳಿಗಾಲದಲ್ಲಿ ಅಧಿಕವಾಗುತ್ತೆ ವೃದ್ಧರ ಸಾವು ! ಈ ರೀತಿಯಾಗಿ ಕಾಳಜಿ ವಹಿಸಿ

ಚಳಿಗಾಲ(Winter) ಅಂದ್ರೆ ನೀವು ಎಂಜಾಯ್ ಮಾಡುವ ಚುಮು ಚುಮು ಚಳಿ ಮಾತ್ರವಲ್ಲ, ಈ ಸಮಯದಲ್ಲಿ ಹಲವಾರು ಸಮಸ್ಯೆಗಳು ಸಹ ಕಾಡುತ್ತವೆ. ಈ ಬಗ್ಗೆ ಸಾಂಕ್ರಾಮಿಕ ರೋಗ ಶಾಸ್ತ್ರೀಯ ಅಧ್ಯಯನಗಳನ್ನು ನಡೆಸಲಾಗಿದೆ. ಇದರ ಪ್ರಕಾರ ಚಳಿಗಾಲದಲ್ಲಿ ವಯಸ್ಸಾದವರ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಕಂಡುಬಂದಿದೆ. ವಯಸ್ಸಾದವರು, ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು, ಕಿರಿಯ ಜನರಿಗಿಂತ ಶೀತದಲ್ಲಿ ತಾಪಮಾನವನ್ನು ಕಾಪಾಡಿಕೊಳ್ಳಲು ಕಡಿಮೆ ಸಮರ್ಥರಾಗಿರುತ್ತಾರೆ. ಹಾಗಾಗಿ ಸಾವು ಹೆಚ್ಚಾಗಿ ಸಂಭವಿಸುತ್ತೆ ಎನ್ನಲಾಗುತ್ತೆ.

28

ತಂಪಾದ ತಾಪಮಾನಕ್ಕೆ ಒಡ್ಡಿಕೊಳ್ಳೋದು ಮತ್ತು ಥರ್ಮೋರೆಗ್ಯುಲೇಷನ್ ಹದಗೆಡೋದು, ತಾಪಮಾನದಲ್ಲಿ ಇಳಿಕೆಗೆ ಕಾರಣವಾಗಬಹುದು, ವಯಸ್ಸಾದವರ(Oldage) ಮೇಲೆ ಹೆಚ್ಚಿನ ಉಷ್ಣತೆ (35 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ  ತಾಪಮಾನ) ನೇರ ಪರಿಣಾಮ ಬೀರುತ್ತೆ. ಇದರಿಂದಾಗಿ ಶೀತ, ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸದಂತಹ  ಪರಿಣಾಮಗಳನ್ನು ಬೀರುತ್ತೆ.

38
ಜನರ ಮೇಲೆ ಶೀತದ ಪರಿಣಾಮ ತಪ್ಪಿಸಲು ಇಲ್ಲಿದೆ ನೋಡಿ ಟಿಪ್ಸ್

● ಲೇಯರ್ ನಲ್ಲಿ ಅನೇಕ ಬಟ್ಟೆಗಳನ್ನು ಧರಿಸಿ. ಚಳಿಗಾಲದಲ್ಲಿ ಹೊರಗೆ ಹೋಗುವಾಗ ಸ್ವೆಟರ್ ಧರಿಸೋದನ್ನು ಮರೆಯಬೇಡಿ. ಇದರೊಂದಿಗೆ ಹೀಟಿಂಗ್ ಸಾಧನಗಳೊಂದಿಗೆ(Heating materials) ಬೆಚ್ಚಗಿರಲು ಪ್ರಯತ್ನಿಸಿ.

48

● ದೈಹಿಕವಾಗಿ ಸಕ್ರಿಯರಾಗಿರಿ. ಚಳಿಗಾಲದಲ್ಲಿ, ನಾವೆಲ್ಲರೂ ಆಗಾಗ್ಗೆ ಕಂಬಳಿ ಹೊದ್ದು ಮಲಗ್ತೇವೆ ಮತ್ತು ದೈಹಿಕ ವ್ಯಾಯಾಮ ಮಾಡೋದನ್ನು ನಿಲ್ಲಿಸ್ತೇವೆ. ಈ ಕಾರಣದಿಂದಾಗಿ, ಮೂಳೆಗಳ ತೊಂದರೆ ಉಂಟಾಗುತ್ತೆ. ಮನೆಯೊಳಗೆ ಸುಲಭವಾದ ವ್ಯಾಯಾಮ(Exercise) ಮಾಡುವ ಮೂಲಕ ಮೂಳೆಗೆ ಆಗಬಹುದಾದ ತೊಂದರೆಯನ್ನು ತಡೆಯಬಹುದು.

58

● ಹೈಡ್ರೇಟಾಗಿರಿ (Hydrate) ಚಳಿಗಾಲದಲ್ಲಿ, ಬಾಯಾರಿಕೆ ಕಡಿಮೆಯಾಗುತ್ತೆ ಮತ್ತು ಜನರು ಕಡಿಮೆ ನೀರನ್ನು ಕುಡಿಯಲು ಪ್ರಾರಂಭಿಸುತ್ತಾರೆ. ವಯಸ್ಸಾದ ಜನರು ಈ ಸಮಯದಲ್ಲಿ ಕಡಿಮೆ ಫ್ಲೂಯಿಡ್ ಕುಡಿಯುತ್ತಾರೆ. ಅವರು ಸಾಕಷ್ಟು ನೀರು ಕುಡಿಯುತ್ತಾರೆಂದು ನಾವು ಖಚಿತಪಡಿಸಿಕೊಳ್ಳಬೇಕು

68

● ಶೂ ಸಾಕ್ಸ್(Shoe- socks) ಧರಿಸಿ, ಪಾದಗಳನ್ನು ಮುಚ್ಚಿಕೊಳ್ಳಿ. ವಯಸ್ಸಾದವರು ಬೀಳದಂತೆ ಪಾದಗಳಿಗೆ ಚಪ್ಪಲಿ ಅಥವಾ ಬೂಟುಗಳನ್ನು ಧರಿಸಬೇಕು. ಅವರು ಬಿದ್ದರೆ ಅವರ ಸೊಂಟ ಮತ್ತು ಬೆನ್ನುಮೂಳೆಗೆ ಗಾಯವಾಗೋ ಅಪಾಯವಿರಬಹುದು.

78

● ವಯಸ್ಸಾದವರೊಂದಿಗೆ ನಿಯಮಿತವಾಗಿ ಮಾತನಾಡುತ್ತಲೇ ಇರಿ. ಹೀಗೆ ಮಾಡೋದ್ರಿಂದ, ಅವರನ್ನು ಚಳಿಗಾಲದ ಖಿನ್ನತೆಯಿಂದ(Depression) ತಪ್ಪಿಸಬಹುದು. ಅವರು ಸಹ ಆಕ್ಟೀವ್ ಆಗಿರುವಂತೆ ನೋಡಿಕೊಳ್ಳಬಹುದು. ಚಳಿಗಾಲದಲ್ಲಿ ನೀವು ಅವರನ್ನು ಒಂಟಿಯಾಗಿ ಬಿಡಬೇಡಿ. 

88

● ಪೌಷ್ಟಿಕ ಆಹಾರ ಸೇವಿಸಿ. ಆರೋಗ್ಯ ಕಾಪಾಡಿಕೊಳ್ಳಲು, ವಿಟಮಿನ್ ಡಿ (Vitamin D) ಸಮೃದ್ಧವಾಗಿರುವ ಆಹಾರ ತೆಗೆದುಕೊಳ್ಳಿ. ಜೊತೆಗೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇಡುವಂತಹ ಆಹಾರಗಳನ್ನು ಹಿರಿಯರಿಗೆ ನೀಡೋದನ್ನು ಮರೆಯಬೇಡಿ. ಇದರಿಂದ ಅವರು ಆಕ್ಟೀವ್ ಆಗಿರಲು ಸಹಾಯವಾಗುತ್ತೆ.

Read more Photos on
click me!

Recommended Stories