ಸಲಾಡ್ (salad) ಅನ್ನು ಪ್ರಪಂಚದಾದ್ಯಂತ ಆಹಾರದೊಂದಿಗೆ ತಿನ್ನಲಾಗುತ್ತದೆ. ಏಕೆಂದರೆ, ಇದು ಹಸಿರು ಎಲೆ, ತರಕಾರಿಗಳನ್ನು ಒಳಗೊಂಡಿದೆ. ಈ ತರಕಾರಿಗಳು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ. ಆದರೆ ಕೆಲವರು ಕೇವಲ ಸಲಾಡ್ ತಿನ್ನಲು ಇಷ್ಟ ಪಡ್ತಾರೆ. ಯಾಕಂದ್ರೆ ಆಹಾರದೊಂದಿಗೆ ಸಲಾಡ್ ತಿನ್ನುವುದು ದೇಹಕ್ಕೆ ಹಾನಿ ಮಾಡುತ್ತದೆ ಎಂದು ಜನ ನಂಬ್ತಾರೆ. ಆದರೆ ಸರಿಯಾದ ಮಾಹಿತಿ ಏನು, ನಾವು ಆಹಾರದೊಂದಿಗೆ ಸಲಾಡ್ ತಿನ್ನಬೇಕೇ ಅಥವಾ ಬೇಡವೇ? ಈ ಬಗ್ಗೆ ನೀವು ತಿಳಿಯಲು ಮುಂದೆ ಓದಿ…
ಸಲಾಡ್ ತಿನ್ನುವುದರ ಪ್ರಯೋಜನ ಏನು?
ಮರಗಳು ಮತ್ತು ಸಸ್ಯಗಳಿಂದ ಸಿಗುವ ಆಹಾರ ಪದಾರ್ಥಗಳಲ್ಲಿ ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಪಾಲಿಫಿನಾನ್‌ಗಳಂತ ಅನೇಕ ಪ್ರಯೋಜನಕಾರಿ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು (health benefits) ನೀಡುತ್ತದೆ.
ಆಹಾರದಲ್ಲಿ ಸಸ್ಯ ನಾರುಗಳನ್ನು (plant fibre) ಸೇರಿಸುವುದರಿಂದ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದು ಉತ್ತಮ ಕರುಳಿನ ಆರೋಗ್ಯ ಮತ್ತು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾಗಿದೆ. ಇದರಿಂದಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಸುಲಭವಾಗಿ ಕಾಡೋದಿಲ್ಲ.
ಸಲಾಡ್ ಗಳಲ್ಲಿರುವ ಫೈಬರ್ ನ ಸೈಡ್ ಎಫೆಕ್ಟ್ ಏನು? (side effects of fibres)
ಹೆಚ್ಚು ಫೈಬರ್ ಸೇರಿಸುವುದರಿಂದ ಮೊದಲೇ ಅಸ್ತಿತ್ವದಲ್ಲಿರುವ ಕರುಳಿನ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಾಗೋ ಚಾನ್ಸ್ ಇದೆ. ಇದಕ್ಕಾಗಿಯೇ ಸಸ್ಯ ನಾರಿನ ಅತಿಯಾದ ಸೇವನೆಯು ಹೆಚ್ಚಾಗಿ ಹೊಟ್ಟೆಯುಬ್ಬರ, ಅತಿಸಾರ ಮತ್ತು ನಿರಂತರ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹೊಟ್ಟೆಯ ಸಮಸ್ಯೆಗಳು ಮತ್ತು ಆಟೋಇಮ್ಯೂನ್ ಸಮಸ್ಯೆಗಳಿಂದ (auto imune problem) ಬಳಲುತ್ತಿರುವ ಹೆಚ್ಚಿನ ಜನರು ಸಂಪೂರ್ಣವಾಗಿ ಮಾಂಸಾಹಾರ ಅಳವಡಿಸಿಕೊಳ್ಳುವುದರಿಂದ ಪರಿಹಾರವನ್ನು ಪಡೆಯುತ್ತಾರೆ, ಅಂದರೆ ಮಾಂಸ, ಮೊಟ್ಟೆಗಳು, ಮೂಳೆ ಸಾರು ಮುಂತಾದ ಕೇವಲ ಅಥವಾ ಹೆಚ್ಚಿನ ಪ್ರಾಣಿ ಆಹಾರಗಳನ್ನು ಮಾತ್ರ ಹೊಂದಿರುವ ಆಹಾರ ಸೇವಿಸೋದು ಉತ್ತಮ.
ಹಾಗಿದ್ರೆ ನೀವು ಸಲಾಡ್ ತಿನ್ನಬೇಕೇ?
ಇದು ಸಂಪೂರ್ಣವಾಗಿ ನಿಮ್ಮ ಜೈವಿಕ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತದೆ ಅಂದರೆ ಸಲಾಡ್ ತಿನ್ನೋದ್ರಿಂದ ಕೆಲವರಿಗೆ ಸಮಸ್ಯೆ ಉಂಟಾಗುತ್ತೆ, ಇನ್ನೂ ಕೆಲವರಿಗೆ ಏನೂ ಸಮಸ್ಯೆ ಇರೋದಿಲ್ಲ..ಆದಾಗ್ಯೂ, ಹೊಟ್ಟೆಯ ತೊಂದರೆಗಳು, ಕರುಳಿನ ಸಮಸ್ಯೆಗಳು ಅಥವಾ ಶಾಶ್ವತ ಸಮಸ್ಯೆಗಳಿಂದ ಬಳಲುತ್ತಿರುವ ಜನರು ತರಕಾರಿಗಳನ್ನು ಸೇವಿಸುವಾಗ ಜಾಗರೂಕರಾಗಿರಬೇಕು.
ಹಾಗಿದ್ರೆ ಯಾರು ಸಲಾಡ್ ತಿನ್ನಬಹುದು?
ತರಕಾರಿಗಳು ಸೇರಿದಂತೆ ಸಮತೋಲಿತ ಪ್ರಮಾಣದ ಆಹಾರ ಪದಾರ್ಥಗಳನ್ನು (balanced food) ಸೇವಿಸುವುದರಿಂದ ಹೆಚ್ಚಿನ ಜನರಿಗೆ ಯಾವುದೇ ಸಮಸ್ಯೆ ಇರೋದಿಲ್ಲ. ಕೆಲವೊಂದು ಆಹಾರಗಳನ್ನು ನೆನೆಸುವುದು, ಹುದುಗಿಸುವುದು, ಹಣ್ಣಾಗಿಸುವುದು ಮತ್ತು ಅಡುಗೆ ಮಾಡುವ ವಿಧಾನಗಳ ಮೂಲಕ ಸಮಸ್ಯೆ ಕಡಿಮೆ ಮಾಡಬಹುದು. ಇದಕ್ಕಾಗಿ, ಸಲಾಡ್ ತಿನ್ನುವ ಮೊದಲು ನೀವು ತರಕಾರಿಗಳನ್ನು ಲಘುವಾಗಿ ಬೇಯಿಸಬಹುದು.
ಆಹಾರದೊಂದಿಗೆ ಸಲಾಡ್ ತಿನ್ನಬಹುದೇ?
ತರಕಾರಿಗಳನ್ನು ಸೇರಿಸುವುದು ನಿಮ್ಮ ಊಟವನ್ನು ಕಲರ್ ಫುಲ್ ಅಥವಾ ವೆರೈಟಿಯಾಗಿ ಮಾಡಲು ಸಹಾಯ ಮಾಡುತ್ತದೆ ಮತ್ತು ಆಹಾರವನ್ನು ಹೆಚ್ಚು ಎಂಜಾಯ್ ಮಾಡಿ ಸೇವಿಸಬಹುದು. ತುಪ್ಪ ಮತ್ತು ತೆಂಗಿನ ಎಣ್ಣೆಯಂತಹ ಕೊಬ್ಬುಗಳಲ್ಲಿ ತರಕಾರಿಗಳನ್ನು ಬೇಯಿಸುವ ಮೂಲಕ, ಇದನ್ನು ಈ ಆರೋಗ್ಯಕರ ಕೊಬ್ಬಿನ ವಾಹಕವಾಗಿಯೂ ಬಳಸಬಹುದು.