2 ಲವಂಗ ಬಾಯಲ್ಲಿಟ್ಟು ರಸ ಹೀರಿದ್ರೆ ಸ್ಮೋಕಿಂಗ್, ಡ್ರಿಂಕಿಂಗ್ ಚಟನೂ ಆಗಬಹುದು ದೂರ!

First Published | Feb 27, 2023, 5:23 PM IST

ಲವಂಗದ ಹಲವಾರು ಪ್ರಯೋಜನಗಳ ಬಗ್ಗೆ ನಾವು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಕೇಳಿದ್ದೇವೆ. ಇದನ್ನು ಹಲವಾರು ವಿಧಗಳಲ್ಲಿ ಬಳಕೆ ಮಾಡಲಾಗುತ್ತೆ. ಆದರೆ ಲವಂಗದಲ್ಲಿರುವ ರಸವು ಸಿಗರೇಟ್ ಮತ್ತು ಆಲ್ಕೋಹಾಲ್ ಚಟವನ್ನು ತೊಡೆದುಹಾಕಲು ಸಹಾಯ ಮಾಡುತ್ತೆ ಅನ್ನೋದು ಗೊತ್ತಾ?  ಅಲ್ಲದೇ ವೀರ್ಯದ ಪ್ರಮಾಣವನ್ನೂ ಹೆಚ್ಚಿಸುವ ಲವಂಗದ ರಸ ಹೀರುವುದರ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ಲವಂಗವು(Cloves) ಪ್ರಯೋಜನಕಾರಿ ಗಿಡಮೂಲಿಕೆಯಾಗಿದ್ದು, ಅದರ ಸೇವನೆಯಿಂದ ಅಸಂಖ್ಯಾತ ಪ್ರಯೋಜನಗಳಿವೆ. ಆದರೆ ಈ ಪ್ರಯೋಜನಗಳಿಗಾಗಿ, ಅದನ್ನು ಸರಿಯಾಗಿ ಸೇವಿಸೋದು ಬಹಳ ಮುಖ್ಯ. ಪ್ರತಿದಿನ 2 ಲವಂಗವನ್ನು ಬಾಯಲ್ಲಿಟ್ಟು, ಅದರ ರಸವನ್ನು ಹೀರುವ ಮೂಲಕ, ಸಿಗರೇಟ್ ಮತ್ತು ಆಲ್ಕೋಹಾಲ್ ಸೇದುವ ಅಭ್ಯಾಸವು ತಕ್ಷಣವೇ ಕೊನೆಗೊಳ್ಳಿಸಬಹುದು. ಲವಂಗದ ರಸವನ್ನು ಹೀರುವ ಪ್ರಯೋಜನ ಮತ್ತು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳೋಣ.
 

ಲವಂಗ ರಸ ಹೀರುವುದರ ಪ್ರಯೋಜನಗಳು ಹೀಗಿವೆ 
ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ 1-2 ಲವಂಗವನ್ನು ಸೇವಿಸಿದ್ರೆ, ನೀವು ಈ ಕೆಳಗಿನ ಸಮಸ್ಯೆಗಳನ್ನು ತೊಡೆದುಹಾಕಬಹುದು.
ಸ್ವೀಟ್ ತಿನ್ನೋ ಚಟ
ಆಲ್ಕೋಹಾಲ್(Alcohol) ವ್ಯಸನ
ಸಿಗರೇಟ್ ಮತ್ತು ಧೂಮಪಾನದ ಚಟ
ಬಾಯಿಯ ದುರ್ವಾಸನೆ
ಹಲ್ಲುನೋವು
ಅಜೀರ್ಣ ಸಮಸ್ಯೆ
ಫಂಗಲ್ ಇಂಫೆಕ್ಷನ್ 
ವಾಕರಿಕೆ ಮತ್ತು ವಾಂತಿ

Tap to resize

ಲವಂಗ ತಿನ್ನಲು ಸರಿಯಾದ ಮಾರ್ಗ ಹೀಗಿದೆ 
ತಜ್ಞರ ಪ್ರಕಾರ, ಲವಂಗವನ್ನು ಬಾಯಿಯಲ್ಲಿ ಇರಿಸಿ ಮತ್ತು ನಿಧಾನವಾಗಿ ಅದರ ರಸ(Juice) ಹೀರಿಕೊಳ್ಳಿ. ಸಾಧ್ಯವಾದಷ್ಟು ಸಮಯದವರೆಗೆ ಅದರ ರಸ ಹೀರಲು ಪ್ರಯತ್ನಿಸಿ. ತಕ್ಷಣ ಅದನ್ನು ಜಗಿಯುವ ಅಥವಾ ನುಂಗುವ ತಪ್ಪನ್ನು ಮಾಡಬೇಡಿ. ಏಕೆಂದರೆ, ಎಲ್ಲಾ ಗುಣಲಕ್ಷಣಗಳು ಲವಂಗದೊಳಗಿನ ಎಣ್ಣೆಯಲ್ಲಿ ಅಡಗಿವೆ, ಇದನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಬಳಸಬಹುದು.

ಈ ಮನೆಮದ್ದು ಹೆಚ್ಚಿನ ಜನರಿಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದರೆ ಕೆಲವು ಜನರ ಮೇಲೆ, ಅದರ ಪರಿಣಾಮವು ಆಗದೆಯೂ ಇರಬಹುದು. ಹಾಗಾದ್ರೆ ಅವರು ಈ ಪರಿಹಾರವನ್ನು ಹೊರತುಪಡಿಸಿ ಇತರ ಚಿಕಿತ್ಸೆಗಳಿಗಾಗಿ ವೈದ್ಯರ ಸಹಾಯವನ್ನು(COnsulting doctor) ತೆಗೆದುಕೊಳ್ಳಬೇಕು.

ಲವಂಗ ಏಕೆ ಪ್ರಯೋಜನಕಾರಿ?
ಲವಂಗ ರಸವು ಯುಜೆನಾಲ್ ಅಂಶವನ್ನು ಹೊಂದಿರುತ್ತೆ, ಇದು ಅರಿವಳಿಕೆ, ನೋವು ನಿವಾರಕ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ(Bacteria) ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ನಿಮಗೆ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತೆ.
 

ಕೆಲ ಸಮಯದ ಹಿಂದೆ ಸಿಗರೇಟ್(Cigeratte) ಚಟ ಬಿಡಿಸಲು ಲವಂಗದ ಸಿಗರೇಟನ್ನು ಸಹ ಉತ್ಪಾದನೆ ಮಾಡಲಾಯಿತು. ಇಂಡೋನೇಷ್ಯಾದಲ್ಲಿ ಉತ್ಪಾದಿಸಲ್ಪಟ್ಟ ಮತ್ತು ಪ್ರಪಂಚದಾದ್ಯಂತ ವಿತರಿಸಲ್ಪಡುವ ಲವಂಗ ಸಿಗರೇಟುಗಳನ್ನು ಲವಂಗದಿಂದ ತಯಾರಿಸಲಾಗುತ್ತದೆ. ಲವಂಗ ಮರದಿಂದ ಒಣಗಿದ, ಹೂವಿನ ಮೊಗ್ಗುಗಳನ್ನು ಬಳಸಿ ಈ ಸಿಗರೇಟ್ ತಯಾರಿಸಲಾಗುತ್ತೆ. ಇದು ಆರೋಗ್ಯಕ್ಕೆ ಉತ್ತಮ ಎಂದು ನಂಬಲಾಗಿತ್ತು. ಆದರೆ ಇದರಿಂದ ಹೆಚ್ಚಿನ ಆರೋಗ್ಯ ಪರಿಣಾಮಗಳಿವೆ. 

ಲವಂಗದ ಸಿಗರೇಟಿನಿಂದ ಹೃದಯಕ್ಕೆ(Heart) ತೊಂದರೆ, ಕ್ಯಾನ್ಸರ್ ಸಮಸ್ಯೆ ಮತ್ತು ಶ್ವಾಸಕೋಶದ ಸಮಸ್ಯೆ ಹೆಚ್ಚಾಗಿರೋದರಿಂದ ಲವಂಗದ ಸಿಗರೇಟನ್ನು ಹೆಚ್ಚಿನ ಕಡೆಗಳಲ್ಲಿ ನಿಷೇಧಿಸಲಾಗಿದೆ. ಅದರ ಬದಲಾಗಿ ನೀವು ನಿಯಮಿತವಾಗಿ ಎರಡು ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು, ಅದರ ರಸವನ್ನು ಹೀರುತ್ತಿದ್ದರೆ, ಸಿಗರೇಟು ಮತ್ತು ಮದ್ಯಪಾನದ ಚಟ ನಿಧಾನವಾಗಿ ಕಡಿಮೆಯಾಗುವುದು. 

Latest Videos

click me!