ಪದೇ ಪದೇ ಬಿಕ್ಕಳಿಕೆ, ಕಣ್ಣು ಮಿಟುಕಿಸೋದು ಭಯಾನಕ ರೋಗದ ಲಕ್ಷಣವಂತೆ !

First Published | Feb 27, 2023, 4:13 PM IST

ಬಿಕ್ಕಳಿಕೆ ಅಥವಾ ಕಣ್ಣು ಮಿಟುಕಿಸೋದು ಎಲ್ಲರೂ ಸಾಮಾನ್ಯವಾಗಿ ಮಾಡುವ ಪ್ರಕ್ರಿಯೆ. ಆದರೆ ನಿಮಗೆ ಗೊತ್ತಾ? ಈ ವಿಷಯಗಳು ಅಪರೂಪದ ಕಾಯಿಲೆಯ ಲಕ್ಷಣವಾಗಿರಬಹುದು. ಹೌದು, ಅದು ಟುರೆಟ್ ಸಿಂಡ್ರೋಮ್ ರೋಗವಾಗಿರಬಹುದು. ಏನಿದು ರೋಗ? ಈ ರೋಗಲಕ್ಷಣ, ಟೆಸ್ಟ್  ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.

ಬಿಕ್ಕಳಿಕೆ(Hiccups) ಅಥವಾ ಕಣ್ಣು ಮಿಟುಕಿಸೋದು ಎಲ್ಲರೂ ಸಾಮಾನ್ಯವಾಗಿ ಮಾಡುವ ಪ್ರಕ್ರಿಯೆ. ಆದರೆ ನಿಮಗೆ ಗೊತ್ತಾ? ಈ ವಿಷಯಗಳು ಅಪರೂಪದ ಕಾಯಿಲೆಯ ಲಕ್ಷಣವಾಗಿರಬಹುದು. ಹೌದು, ಅದು ಟುರೆಟ್ ಸಿಂಡ್ರೋಮ್ ಆಗಿರಬಹುದು. ಏನಿದು ರೋಗ? ಈ ರೋಗಲಕ್ಷಣ, ಟೆಸ್ಟ್  ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.

ರಾಣಿ ಮುಖರ್ಜಿ ಅವರ ಹೊಸ ಚಿತ್ರ 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ'(Misses chaterjee vs Norway) ಟ್ರೈಲರ್ ಸಾಕಷ್ಟು ಪ್ರಶಂಸೆ ಪಡೆಯುತ್ತಿದೆ. ಜನರು ಅವರ ನಟನೆಯನ್ನು ಸಾಕಷ್ಟು ಹೊಗಳುತ್ತಿದ್ದಾರೆ. ಆದರೆ ಬಾಲಿವುಡ್ ನಟಿ ರಾಣಿ ಮುಖರ್ಜಿ ಇಷ್ಟು ಗಂಭೀರವಾಗಿ ನಟಿಸುತ್ತಿರುವುದು ಇದೇ ಮೊದಲೇನಲ್ಲ. ಅವರು 'ಹಿಚ್ಕಿ' ಚಿತ್ರದಲ್ಲಿ ತಮ್ಮ ಪ್ರಬುದ್ಧ ಅಭಿನಯದಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು..

Tap to resize

ರಾಣಿ ಮುಖರ್ಜಿ ಅವರ ಚಿತ್ರ ಹಿಚ್ಕಿ(Hichki) ತನ್ನ ದೇಹದ ಮೇಲೆ ನಿಯಂತ್ರಣವಿಲ್ಲದ ಮಹಿಳೆಯ ಕಥೆಯನ್ನು ಆಧರಿಸಿದೆ. ಈ ರೋಗ ನರವ್ಯೂಹಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಅವರು ಪದೇ ಪದೇ ಬಿಕ್ಕಳಿಕೆ ಮತ್ತು ಕೆಲವು ವಿಚಿತ್ರ ದೈಹಿಕ ಚಲನೆಗಳನ್ನು ಮಾಡುವ ರೋಗವನ್ನು ಹೊಂದಿದ್ದರು. ಈ ರೋಗವು ಅಪಾಯಕಾರಿ ಯಾಕಂದ್ರೆ ಅದನ್ನು ಕಂಡು ಹಿಡಿಯಲು ಯಾವುದೇ ಪರೀಕ್ಷೆ ಅಥವಾ ಬಲವಾದ ಚಿಕಿತ್ಸೆ ಇಲ್ಲ.

ಈ ರೋಗದ ಹೆಸರು ಏನು?
ಈ ನರವೈಜ್ಞಾನಿಕ ಅಸ್ವಸ್ಥತೆಯನ್ನು ಟುರೆಟ್ ಸಿಂಡ್ರೋಮ್(Tourette syndrome) ಎಂದು ಕರೆಯಲಾಗುತ್ತೆ. ಇದು ನರವ್ಯೂಹಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆ. ಟುರೆಟ್ ಸಿಂಡ್ರೋಮ್  ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಸಲುವಾಗಿ, 'ಹಿಚ್ಕಿ' ಚಿತ್ರದ ಟ್ರೈಲರ್ನಲ್ಲಿ ನಮ್ಮ ಮೆದುಳಿನಲ್ಲಿ ಬಹಳಷ್ಟು ತಂತಿಗಳು ಸಂಪರ್ಕಗೊಳ್ಳದಿದ್ದಾಗ, ಮತ್ತೆ ಮತ್ತೆ ಆಘಾತ ಉಂಟಾಗುತ್ತೆ ಎಂದು ಹೇಳುತ್ತಾರೆ. ಈ ಕಾರಣದಿಂದಾಗಿ ವಿಚಿತ್ರ ಶಬ್ದಗಳು ಹೊರಬರಬಹುದು ಅಥವಾ ಚಲನೆ ಉಂಟಾಗುತ್ತೆ.

ಟುರೆಟ್ ಸಿಂಡ್ರೋಮ್ ರೋಗ ಯಾವ ರೀತಿ ಇರುತ್ತೆ?
ಈ ಸಿಂಡ್ರೋಮ್ ಇದ್ದವರಲ್ಲಿ ಹಠಾತ್ ನಡುಕ(Shiver), ಚಟುವಟಿಕೆ ಅಥವಾ ಶಬ್ದಗಳಿಗೆ ಕಾರಣವಾಗುತ್ತೆ. ಹೀಗೆ ಆಗೋದನ್ನು ಟಿಕ್ಸ್ ಎಂದು ಕರೆಯಲಾಗುತ್ತೆ. ಈ ರೋಗದಿಂದ ಬಳಲುತ್ತಿರುವ ರೋಗಿಗಳು ಚಲನೆಗಳನ್ನು ನಿಯಂತ್ರಿಸಲು ಅಸಮರ್ಥರಾಗಿರುತ್ತಾರೆ ಮತ್ತು ಅವರು ಬಯಸದಿದ್ದರೂ ಸಹ ಮತ್ತೆ ಮತ್ತೆ ವಿಚಿತ್ರ ಕ್ರಿಯೆಗಳನ್ನು ಮಾಡುತ್ತಾರೆ.

ಅನೇಕ ರೀತಿಯ ಟ್ರಿಕ್ಸ್ ಇವೆ...
ಎರಡು ಪ್ರಮುಖ ರೀತಿಯ ಟ್ರಿಕ್ಸ್ ಇವೆ, ಅವುಗಳಲ್ಲಿ ಒಂದು ಮೋಟಾರ್ ಟಿಕ್ಸ್, ಅವು ಕಣ್ಣು ಮಿಟುಕಿಸೋದು(Eye blinking), ಕೈಕುಲುಕುವುದು ಮುಂತಾದ ದೇಹದ ಚಲನೆಗೆ ಸಂಬಂಧಿಸಿವೆ. ಎರಡನೆಯದು ವೋಕಲ್ ಟಿಕ್ಸ್, ಇದು ಧ್ವನಿಯೊಂದಿಗೆ ಸಂಪರ್ಕ ಹೊಂದಿದೆ, ಉದಾಹರಣೆಗೆ ನಿರಂತರ ಬಿಕ್ಕಳಿಕೆ, ಹಮ್ಮಿಂಗ್ ಶಬ್ದ, ಪದವನ್ನು ಕೂಗುವುದು ಇತ್ಯಾದಿ.

ಇದನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ, ಅವುಗಳನ್ನು ಸಿಂಪಲ್ ಟ್ರಿಕ್ಸ್ ಮತ್ತು ಕಾಂಪ್ಲೆಕ್ಸ್ ಟ್ರಿಕ್ಸ್ ಎಂದು ಕರೆಯಲಾಗುತ್ತದೆ. ಟಿಕ್ ದೇಹದ ಒಂದು ಭಾಗಕ್ಕೆ ಜೋಡಿಸಿದ್ರೆ, ಅದನ್ನು ಸಿಂಪಲ್ ಎಂದು ಕರೆಯಲಾಗುತ್ತೆ ಮತ್ತು ಅದನ್ನು ಎರಡು ಅಥವಾ ಹೆಚ್ಚು ಭಾಗಗಳಿಗೆ ಸಂಪರ್ಕಿಸಿದಾಗ, ಅದನ್ನು ಕಾಂಪ್ಲೆಕ್ಸ್(Complex) ಎಂದು ಕರೆಯಲಾಗುತ್ತೆ . 

ಟುರೆಟ್ ಸಿಂಡ್ರೋಮ್ ನ ವಿಚಿತ್ರ ಲಕ್ಷಣಗಳು ಹೀಗಿವೆ 
ಎನ್ಐಎನ್ಡಿಎಸ್ ಪ್ರಕಾರ, ಟುರೆಟ್ ಸಿಂಡ್ರೋಮ್ನ ಕೆಲವು ರೋಗಲಕ್ಷಣಗಳು ಈ ಕೆಳಗಿನಂತಿರಬಹುದು. 
ಕಣ್ಣು ಮಿಟುಕಿಸೋದು ಅಥವಾ ಕಣ್ಣಿನ ಇತರ ಚಲನೆಗಳು
ಮುಖದ ಮೇಲೆ ನಗು
ಭುಜ ಅಲುಗಾಡಿಸೋದು 
ತಲೆ ಅಥವಾ ಭುಜವನ್ನು ಅಲ್ಲಾಡಿಸೋದು
ಗಂಟಲನ್ನು ಸ್ವಚ್ಛಗೊಳಿಸುವ ಶಬ್ದ
ದೊಡ್ಡ ಶಬ್ದ ಮಾಡೋದು(Loud Noise) 
ಗುಡುಗಿನ ಶಬ್ದ, ಇತ್ಯಾದಿ.

ಯಾವುದೇ ಪರೀಕ್ಷೆಗಳಿಲ್ಲ ಮತ್ತು ಚಿಕಿತ್ಸೆಗಳಿಲ್ಲ(Treatment)
ಟುರೆಟ್ ಸಿಂಡ್ರೋಮ್ ಗುರುತಿಸಲು ಯಾವುದೇ ನಿರ್ದಿಷ್ಟ ಪರೀಕ್ಷೆ ಇಲ್ಲ. ಬದಲಾಗಿ, ನಿಮ್ಮ ಟ್ರಿಕ್ಸ್  ನೋಡುವ ಮೂಲಕ ವೈದ್ಯರು ಇದನ್ನು ದೃಢೀಕರಿಸಬಹುದು. ಹಾಗೆ, ಈ ಅಸ್ವಸ್ಥತೆಗೆ ಯಾವುದೇ ಚಿಕಿತ್ಸೆ ಸಹ ಇಲ್ಲ, ಅದನ್ನು ನಿರ್ವಹಿಸಲು ವಿಧಾನಗಳನ್ನು ಮಾತ್ರ ಅಳವಡಿಸಿಕೊಳ್ಳಬಹುದು.

Latest Videos

click me!