ತೊಡೆಯ ಫ್ಯಾಟ್ ಹೆಚ್ಚಾಗಿ, ಯಾವುದೇ ಡ್ರೆಸ್ ಧರಿಸಲು ಮುಜುಗರವಾಗ್ತಿದ್ಯಾ? ಹಾಗಿದ್ರೆ ಇದನ್ನ ಟ್ರೈ ಮಾಡಿ

First Published | Dec 29, 2022, 4:00 PM IST

ಲೆಗ್ಗಿಂಗ್ಸ್, ಜೀನ್ಸ್ ಅಥವಾ ಪೈಜಾಮಾ ಧರಿಸಿದ್ರೆ ತೊಡೆ ತುಂಬಾ ಫ್ಯಾಟಾಗಿ ಕಾಣುತ್ತಿದ್ದರೆ, ಅದನ್ನು ಕಡಿಮೆ ಮಾಡಲು ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ತೊಡೆಯ ಫ್ಯಾಟ್  ಕಡಿಮೆ ಮಾಡಲು ಸುಲಭವಾದ ವ್ಯಾಯಾಮಗಳು ಇಲ್ಲಿವೆ.

ದೇಹದ ತೂಕವನ್ನು ಹೆಚ್ಚಿಸಲು ತೊಡೆಗಳ ಫಿಟ್ ನೆಸ್(Fitness) ಬಹಳ ಮುಖ್ಯ. ಆದ್ದರಿಂದ, ತೊಡೆ ಬಲಪಡಿಸಲು ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು, ನೀವು ಮನೆಯಲ್ಲಿ ಸುಲಭವಾಗಿ ಅನುಸರಿಸಬಹುದಾದ ಕೆಲವು ಸುಲಭವಾದ ವ್ಯಾಯಾಮಗಳು ಇಲ್ಲಿವೆ. 

ಬ್ರಿಸ್ಕ್ ವಾಕ್ (Brisk walk): ಬ್ರಿಸ್ಕ್ ವಾಕ್ ತೊಡೆಗೆ ಆಕಾರ  ನೀಡಲು ಬಹಳ ಸುಲಭವಾದ ಮಾರ್ಗವಾಗಿದೆ. ಈ ವಾಕ್ ಮಾಡಿದ ನಂತರ, ಡೈಜೇಷನ್ ರೇಟ್ ಹೆಚ್ಚಾಗುತ್ತೆ. ಇದರಿಂದಾಗಿ ಕೊಬ್ಬು ದೇಹದಿಂದ ವೇಗವಾಗಿ ಕಡಿಮೆಯಾಗುತ್ತೆ. 

Tap to resize

ಬ್ರಿಸ್ಕ್ ವಾಕ್  ಕ್ವಾಡ್ , ಹ್ಯಾಮ್ ಸ್ಟ್ರಿಂಗ್  ಮತ್ತು ಗ್ಲುಟಿಯಲ್ ಸ್ನಾಯುಗಳನ್ನು ಉತ್ತೇಜಿಸುತ್ತೆ . ಇದನ್ನು ಮಾಡೋದರಿಂದ ನೀವು ಟೋನ್ಡ್ ಕಾಲುಗಳನ್ನು ಪಡೆಯುತ್ತೀರಿ. ಹಾಗಾಗಿ ಸಾಧ್ಯವಾದಷ್ಟು ದಪ್ಪ ತೊಡೆ (Thigh) ಇರುವವರು ಬ್ರಿಸ್ಕ್ ವಾಕ್ ಮಾಡಿ.

ಜಾಗಿಂಗ್: ತೊಡೆಗಳ ಕೊಬ್ಬನ್ನು(Fat) ಕಡಿಮೆ ಮಾಡಲು ಓಡುವುದನ್ನು ಅತ್ಯುತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತೆ. ಓಡುವುದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತೆ. ಆದರೆ ಈ ವ್ಯಾಯಾಮವು ಮೊಣಕಾಲುಗಳಿಗೆ ಕಷ್ಟವಾಗಬಹುದು. ಆದ್ದರಿಂದ ಆರಂಭದಲ್ಲಿ ಕಡಿಮೆ ಸಮಯದಿಂದ ಪ್ರಾರಂಭಿಸಿ. ನಂತರ ಹೆಚ್ಚು ಸಮಯ ವಾಕಿಂಗ್, ಜಾಗಿಂಗ್ ಮಾಡಿ.

ಥಾಯ್ ಪ್ರೆಸ್ (Thigh Press): ತೊಡೆಯ ಕೊಬ್ಬನ್ನು ಕಡಿಮೆ ಮಾಡಲು, ಸ್ಟಾಡಿಂಗ್  ಥಾಯ್ ಪ್ರೆಸ್ ಮಾಡಲು ಕಾಲುಗಳನ್ನು ಒಟ್ಟಿಗೆ ಇರಿಸಿ ನೇರವಾಗಿ ನಿಲ್ಲಬೇಕು. ಹೊಟ್ಟೆಯನ್ನು ಉಸಿರಿನಿಂದ ಒಳ ಎಳೆಯಿರಿ ಮತ್ತು ನಿಮ್ಮ ತೊಡೆಗಳನ್ನು ಬಿಗಿಗೊಳಿಸಿ. ಒಂದು ಕಾಲನ್ನು ಮೇಲಕ್ಕೆತ್ತಿ ಇನ್ನೊಂದು ಕಾಲನ್ನು ಮೆಲ್ಲಗೆ ಒತ್ತಿರಿ. ಈ ಭಂಗಿಯಲ್ಲಿ 5 ಸೆಕೆಂಡುಗಳ ಕಾಲ ಇರಿ. 10 ಬಾರಿ ರಿಪೀಟ್ ಮಾಡಿ ಮತ್ತು ನಂತರ ಕಾಲುಗಳನ್ನು ಬದಲಿಸಿ.

ಜಂಪಿಂಗ್(Jumping) ಜಾಕ್: ಜಂಪಿಂಗ್ ಜ್ಯಾಕ್ ಒಂದು ಪರಿಣಾಮಕಾರಿ ಟೋಟಲ್-ಬಾಡಿ ವರ್ಕೌಟ್ ಆಗಿದೆ. ಇದನ್ನು ಮಾಡಲು, ಗಾಳಿಯಲ್ಲಿನ ಪ್ರತಿಯೊಂದು ಜಿಗಿತದಲ್ಲೂ, ಕಾಲುಗಳನ್ನು ಸೊಂಟದ ಅಗಲದಿಂದ ಬೇರ್ಪಡಿಸುವ ಮೂಲಕ ಕೈಗಳನ್ನು ಹೊರಮುಖವಾಗಿ ಮತ್ತು ಮೇಲಕ್ಕೆ ಚಾಚಬೇಕು. ನಂತರ ನೆಲದ ಮೇಲೆ ಮೆಲ್ಲಗೆ ಮಲಗಿ,  ಪಾದಗಳನ್ನು ಮತ್ತು ಕೈಗಳನ್ನು ನಿಮ್ಮ ಪಕ್ಕದಲ್ಲಿ ತರಬೇಕು. ಇದನ್ನು 25 ಬಾರಿ ರಿಪೀಟ್ ಮಾಡಿ. 

ಸುಮೋ ಸ್ಕ್ವಾಟ್ಸ್(Sumo Squats): ಸುಮೋ ಸ್ಕ್ವಾಟ್ ಮಾಡಲು ನೇರವಾಗಿ ನಿಂತುಕೊಳ್ಳಿ. ಕಾಲುಗಳನ್ನು ಸೊಂಟದ ಅಗಲಕ್ಕಿಂತ ಹೆಚ್ಚು ತೆರೆಯಿರಿ ಮತ್ತು ಕಾಲ್ಬೆರಳುಗಳನ್ನು 45 ಡಿಗ್ರಿಗಳಲ್ಲಿ ಹೊರಮುಖವಾಗಿ ಇರಿಸಿ.  ಕೈಗಳನ್ನು ಎದೆಯ ಹತ್ತಿರ ಇಟ್ಟುಕೊಂಡು, ತೊಡೆಗಳು ನೆಲಕ್ಕೆ ಸಮಾನಾಂತರವಾಗುವವರೆಗೆ ಕುಳಿತುಕೊಳ್ಳಲು ಪ್ರಾರಂಭಿಸಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ ಮತ್ತು ಎದ್ದು ನಿಲ್ಲಲು ನಿಮ್ಮ ಹಿಮ್ಮಡಿಯಿಂದ ತಳ್ಳಿ. 

ನೀವು ದಪ್ಪ(Fat) ತೊಡೆಯಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಎಕ್ಸರ್ಸೈಜ್ ಹಾಕ್ಸ್ ಟ್ರೈ ಮಾಡಿ ನೋಡಿ, ಹೇಗೆ ಜಾದುವಿನಂತೆ ನಿಮ್ಮ ಥೈ ಫ್ಯಾಟ್ ಕಡಿಮೆಯಾಗುತ್ತೆ ಎಂದು.   ಜೊತೆಗೆ ನೀವು‌ ಕೂಡ ಸ್ಟೈಲಿಶ್ ಆಗಿ ಕಾಣಿಸುವಿರಿ.

Latest Videos

click me!