Winter: ನವಜಾತ ಶಿಶುವಿಗೆ ಸೂರ್ಯನ ಬೆಳಕು ಎಷ್ಟು ಅಗತ್ಯ?

Published : Dec 28, 2022, 03:37 PM IST

ಸೂರ್ಯನ ಬೆಳಕು ಮನುಷ್ಯನ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದೆ. ಅದರಲ್ಲೂ ಮಕ್ಕಳಿಗೆ ಸೂರ್ಯನ ಬೆಳಕು ಅಗತ್ಯವಿದೆ. ಚಳಿಗಾಲದಲ್ಲಿ, ನವಜಾತ ಶಿಶುವನ್ನು ಸೂರ್ಯನ ಬೆಳಕಿಗೆ ಸ್ವಲ್ಪ ಸಮಯ ಒಡ್ಡಬೇಕು. ಇದು ಅವರ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತೆ. ಮಗುವಿನ ದೇಹಕ್ಕೆ ಸೂರ್ಯನ ಬೆಳಕಿನ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ..   

PREV
112
Winter: ನವಜಾತ ಶಿಶುವಿಗೆ ಸೂರ್ಯನ ಬೆಳಕು ಎಷ್ಟು ಅಗತ್ಯ?

ಪ್ರಾಚೀನ ಕಾಲದಿಂದಲೂ, ಅಜ್ಜಿಯರು ಮಕ್ಕಳನ್ನು ಸೂರ್ಯನ ಬೆಳಕಿಗೆ ಹಿಡಿಯಲು ಸಲಹೆ ನೀಡುತ್ತಿರೋದನ್ನ ನೀವು ನೋಡಿರಬಹುದು. ನವಜಾತ ಶಿಶುಗಳ (Infants) ರಕ್ತಕ್ಕೆ ಸೂರ್ಯನ ಬೆಳಕನ್ನು ಪ್ರಯೋಜನಕಾರಿ. ಸೂರ್ಯನ ಶಾಖ ಮಾತ್ರವಲ್ಲ, ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತೆ. ಇದರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ಅನ್ನೋದರ ಬಗ್ಗೆ ತಿಳಿಯಲು ಮುಂದೆ ಓದಿ…

212

ಅನೇಕ ಜನರು ಶಿಶುವನ್ನು ಬಿಸಿಲಿನಲ್ಲಿ(Sunlight) ತೆಗೆದುಕೊಂಡು ಹೋಗೋದು ಮಗುವಿನ ಆರೋಗ್ಯ ಹೆಚ್ಚಿಸುತ್ತೆ ಎಂದು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಕೆಲವು ಮುನ್ನೆಚ್ಚರಿಕೆಗಳೊಂದಿಗೆ ಶಿಶುವನ್ನು ಬಿಸಿಲಿನಲ್ಲಿ ತೆಗೆದುಕೊಂಡು ಹೋದರೆ, ಮಗುವಿನ ದೇಹ ಆರೋಗ್ಯಕರವಾಗಿ ಉಳಿಯುತ್ತೆ. ನವಜಾತ ಶಿಶುಗಳಿಗೆ ಸೂರ್ಯನ ಬೆಳಕಿನ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ.   

312
ಚಳಿಗಾಲದಲ್ಲಿ ನವಜಾತ ಶಿಶುವಿಗೆ ಸೂರ್ಯನನ್ನು ತೋರಿಸೋದು ಏಕೆ ಮುಖ್ಯ?

ಚಳಿಗಾಲದ ಸೂರ್ಯನ ಬೆಳಕು ನವಜಾತ ಮಗುವಿನ ಕೂದಲಿಗೆ ತುಂಬಾ ಸಹಕಾರಿ. ಸೂರ್ಯನ ಬೆಳಕು ದೇಹವನ್ನು ರೋಗ ಮತ್ತು ಸೋಂಕಿನಿಂದ (Infection) ರಕ್ಷಿಸುತ್ತೆ. ಸೂರ್ಯನ ಶಾಖ ದೇಹದಲ್ಲಿ ಶಕ್ತಿಯನ್ನು ಉಳಿಯುವಂತೆ ಮಾಡುತ್ತೆ.  

412

ನೀವು ಬೆಳಿಗ್ಗೆ 9 ರಿಂದ 11 ರವರೆಗೆ ಶಿಶುವನ್ನು ಬಿಸಿಲಿಗೆ ತೆಗೆದುಕೊಂಡು ಹೋಗಬಹುದು. ಮಧ್ಯಾಹ್ನದ ಪ್ರಖರ ಬಿಸಿಲಿನಲ್ಲಿ ಶಿಶುವನ್ನು ಕರೆದೊಯ್ಯುವುದನ್ನು ತಪ್ಪಿಸಿ. ಶಿಶುವಿಗೆ 15 ರಿಂದ 30ನಿಮಿಷಗಳ ಬಿಸಿಲು ಸಾಕು. ಇದಕ್ಕಿಂತ ಹೆಚ್ಚು ಕಾಲ ಮಗುವನ್ನು ಸೂರ್ಯನ (Sun) ಬಳಿಗೆ ಕರೆದೊಯ್ಯಬೇಡಿ. ಶಿಶುವಿಗೆ ಚಳಿಗಾಲದ ಸೂರ್ಯನ ಬೆಳಕಿನ ಪ್ರಯೋಜನಗಳನ್ನು ತಿಳಿಯಿರಿ-         

512
ಚಳಿಗಾಲದಲ್ಲಿ ಸೂರ್ಯನ ಬೆಳಕು ಮೂಳೆಗಳಿಗೆ(Bone) ಪ್ರಯೋಜನಕಾರಿ

ನವಜಾತ ಶಿಶುವನ್ನು ಸ್ವಲ್ಪ ಸಮಯದವರೆಗೆ ಬಿಸಿಲಿಗೆ ಕರೆದೊಯ್ಯುವುದು ಅವರ ಮೂಳೆಗಳಿಗೆ ಪ್ರಯೋಜನಕಾರಿ. ವಿಟಮಿನ್ ಡಿ ಸಹಾಯದಿಂದ ದೇಹದಲ್ಲಿ ಕ್ಯಾಲ್ಸಿಯಂ (Calcium) ಹೀರಿಕೊಳ್ಳಲು ಸಹಾಯ ಮಾಡುತ್ತೆ. ಪ್ರಿ ಮೆಚ್ಯೂರ್ ಮಕ್ಕಳ (Pre Mature Babies) ದೇಹ ವಿಟಮಿನ್ ಡಿ ಕೊರತೆಯನ್ನು ಹೊಂದಿರಬಹುದು. ಹಾಗಾಗಿ, ಮಗುವನ್ನು ಬೆಳಿಗ್ಗೆ ಸ್ವಲ್ಪ ಸಮಯದವರೆಗೆ ಬಿಸಿಲಿಗೆ  ಕರೆದೊಯ್ಯಿರಿ.  

612
ಕಾಮಾಲೆಯಿಂದ ರಕ್ಷಿಸುತ್ತೆ

ದೇಹವನ್ನು ಬಿಸಿಲಿಗೆ ಒಡ್ಡೋದು ಕಾಮಾಲೆಯ (Jaundice) ಅಪಾಯವನ್ನು ಕಡಿಮೆ ಮಾಡುತ್ತೆ. ಅನೇಕ ಅಧ್ಯಯನಗಳಲ್ಲಿ, ಸೂರ್ಯನ ಬೆಳಕು ಬಿಲ್ರುಬಿನ್ ಮುರಿಯಲು ಸಹಾಯ ಮಾಡುತ್ತೆ ಎಂದು ವರದಿಯಾಗಿದೆ. ಬಿಲ್ರುಬಿನ್ ಹೆಚ್ಚಳದಿಂದಾಗಿ, ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತೆ. 

712

ಹುಟ್ಟಿದ ಮಕ್ಕಳಿಗೆ ಸಾಮಾನ್ವಯಾಗಿ ಜಾಂಡೀಸ್ ಕಾಡುತ್ತೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಬಿಸಿಲಿಗೆ ಮಕ್ಕಳನ್ನು ಹಿಡಿಯುವುದು. ಇಷ್ಟು ಮಾಡಿದರೆ ಸಾಕು, ಚರ್ಮದ ಬಣ್ಣ ಬದಲಾಗುವ ಮೂಲಕ ರೋಗ ನಿಯಂತ್ರಣಕ್ಕೆ ಬರುತ್ತೆ. 

812
ಮಗುವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ ಏನಾಗುತ್ತೆ ಗೊತ್ತಾ?

ಚಳಿಗಾಲದ ಸೂರ್ಯನ ಬೆಳಕು ನವಜಾತ ಶಿಶುವಿನ ಬುದ್ದಿ ವಿಕಸನಕ್ಕೆ ಪ್ರಯೋಜನಕಾರಿ. ಇದು ಸೆರೊಟೋನೆರ್ಜಿಕ್ ಗಳ ವೇಗವನ್ನು ಹೆಚ್ಚಿಸುತ್ತೆ. ದೇಹದಲ್ಲಿನ ಸೆರೊಟೋನಿನ್ ಮತ್ತು ಹಾರ್ಮೋನುಗಳು (Harmone) ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ. ದೇಹವನ್ನು ಸ್ವಲ್ಪ ಸಮಯ ಬಿಸಿಲಿಗೆ ಒಡ್ಡಿದರೆ ಸೆರೊಟಾನ್ ಬಿಡುಗಡೆಯ ಸರಿಯಾದ ಮಟ್ಟ ಕಾಪಾಡಿಕೊಳ್ಳಲಾಗುತ್ತೆ. 
 

912
ಚಳಿಗಾಲದ(Winter) ಬಿಸಿಲಿಗೆ ಮಗುವನ್ನು ಒಡ್ಡುವುದು ಹೇಗೆ?

 ಒಂದು ಸಣ್ಣ ನಿರ್ಲಕ್ಷ್ಯವು ದೇಹದ ಚರ್ಮವನ್ನು ಹಾನಿಗೊಳಿಸಬಹುದು. ಶಿಶುವನ್ನು ಬಿಸಿಲಿನಲ್ಲಿ ತೆಗೆದುಕೊಂಡು ಹೋಗೋ ಮೊದಲು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ- 
 

1012

1. ಮಗುವಿನ ದೇಹದ ಚರ್ಮವು ಸೂರ್ಯನಿಂದ ಕೆಂಪು ಬಣ್ಣಕ್ಕೆ ತಿರುಗಬಾರದು ಎಂಬುದನ್ನು ನೆನಪಿನಲ್ಲಿಡಿ. ಮಗುವಿನ ಚರ್ಮವು(Skin) ನಾಜೂಕಾಗಿರುತ್ತೆ.
2. ಇದರೊಂದಿಗೆ, ಸೂರ್ಯನ ನಿರ್ಜಲೀಕರಣದಿಂದ ದೇಹವನ್ನು ರಕ್ಷಿಸಲು ಮಗುವಿಗೆ ಸ್ತನ್ಯಪಾನ ಮಾಡಿ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತೆ.  

1112

3. ಶಿಶುವನ್ನು ಸೂರ್ಯನ ಬೆಳಕಿಗೆ ಒಡ್ಡುವ ಮೊದಲು ಟೋಪಿಯನ್ನು ಧರಿಸಿ. ಇದು ಶಿಶುವಿನ ಕಣ್ಣು ಮತ್ತು ಮುಖದ ಮೇಲೆ ನೇರ ಸೂರ್ಯನ ಬೆಳಕು ಬೀಳದಂತೆ ಕಾಪಾಡುತ್ತೆ.  

4. ನವಜಾತ ಮಗುವನ್ನು ಬಿಸಿಲಿಗೆ ಕರೆದೊಯ್ಯೋ ಮೊದಲು, ಆರಾಮದಾಯಕ ಬಟ್ಟೆಗಳನ್ನು(Cloth) ಹಾಕಿ. ಮಗುವಿನ ದೇಹದ ಚರ್ಮವು ಸೂಕ್ಷ್ಮವಾಗಿರುತ್ತೆ, ಆದ್ದರಿಂದ ನೇರ ಸೂರ್ಯನ ಬೆಳಕಿನಿಂದ ರಕ್ಷಿಸೋದು ಮುಖ್ಯ. 

1212

5. ಸೂರ್ಯನ ಬೆಳಕು ಜೊತೆ ಗಾಳಿಯು ವೇಗವಾಗಿ ಬೀಸುತ್ತಿದ್ದರೆ ಆ ಸಮಯದಲ್ಲಿ ಮಗುವನ್ನು ಹೊರಗೆ ಕೊಂಡೊಯ್ಯಬೇಡಿ.

6.  ನವಜಾತ ಮಗುವನ್ನು ಸನ್ ಬಾತ್ ಗೆ (Sun bath)ಕರೆದೊಯ್ಯುತ್ತಿದ್ದರೆ, ಸಮಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರಕಾಶಮಾನವಾದ ಬಿಸಿಲಿನಲ್ಲಿ ಒಯ್ಯುವ ಬದಲು ಬೆಳಗಿನ ಸೂರ್ಯನ ಲಾಭವನ್ನು ಪಡೆದುಕೊಳ್ಳಿ.  

Read more Photos on
click me!

Recommended Stories