ತಂದೆಯಾದ ನಂತರ, ಪುರುಷರಲ್ಲೂ ಈ ಎಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

Published : Feb 08, 2023, 05:23 PM IST

ತಾಯಿಯಾದ ನಂತರ ಮಹಿಳೆಯ ಜೀವನವು ಸಂಪೂರ್ಣವಾಗಿ ಬದಲಾಗುವಂತೆ, ಪುರುಷರ ಜೀವನದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ತಂದೆಯಾಗೋದು ಪುರುಷರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ ಮತ್ತು ಇದು ಅವರ ಮೆದುಳಿನಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡುತ್ತೆ ಎಂದು ನಿಮಗೆ ತಿಳಿದಿದ್ಯಾ? ತಂದೆಯಾದ ನಂತರ ಪುರುಷರ ಮೆದುಳಿನಲ್ಲಿ ಯಾವ ರೀತಿಯ ಬದಲಾವಣೆಗಳು ಉಂಟಾಗುತ್ತೆ ಎಂದು ತಿಳಿಯೋಣ.

PREV
16
ತಂದೆಯಾದ ನಂತರ, ಪುರುಷರಲ್ಲೂ ಈ ಎಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ವಿಜ್ಞಾನವು ತಂದೆಯ(Father) ನರ ಮತ್ತು ಹಾರ್ಮೋನುಗಳ ವ್ಯವಸ್ಥೆಗಳನ್ನು ಆಳವಾಗಿ ಅಧ್ಯಯನ ಮಾಡಿದೆ. ತಾಯಂದಿರಂತೆ, ತಂದೆಯ ಮಿದುಳುಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ ಇದೇ ರೀತಿಯ ನರಮಂಡಲವನ್ನು ಬಳಸುತ್ತವೆ ಎಂದು ಪುರಾವೆಗಳು ಸೂಚಿಸುತ್ತವೆ. ಮಗುವಾದ ಬಳಿಕ ತಾಯಂದಿರಲ್ಲಿ ಬದಲಾವಣೆ ಉಂಟಾಗುವಂತೆ, ತಂದೆಯರು ಸಹ ಮೆದುಳು ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತಾರೆ.

26

ಹಾರ್ಮೋನುಗಳ(Harmone) ಬದಲಾವಣೆ ಉಂಟಾಗುತ್ತವೆ
ತಂದೆಯಾದ ನಂತರ ಪುರುಷರು ಹಾರ್ಮೋನುಗಳ ಬದಲಾವಣೆಗಳನ್ನು ಹೊಂದುತ್ತಾರೆ. ಅವು ಈಸ್ಟ್ರೊಜೆನ್, ಆಕ್ಸಿಟೋಸಿನ್, ಪ್ರೊಲ್ಯಾಕ್ಟಿನ್ ಮತ್ತು ಗ್ಲುಕೋಕಾರ್ಟಿಕಾಯ್ಡ್ಸ್ ಎಂಬ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ. ತಮ್ಮ ಮಗುವಿನ ಬಗ್ಗೆ ಹೆಚ್ಚಿನ ಪ್ರೀತಿಯನ್ನು ತೋರಿಸುವ ತಂದೆಯರು ಹೆಚ್ಚಿನ ಮಟ್ಟದ ಆಕ್ಸಿಟೋಸಿನ್ ಹೊಂದಿರುತ್ತಾರೆ..

36

ಹೊಸ ನರಕೋಶಗಳು(Nervous system) ರೂಪುಗೊಳ್ಳುತ್ತವೆ
ತಂದೆಯಾಗೋದು ಪುರುಷರ ನರಕೋಶದ ಮಟ್ಟದ ಮೇಲೂ ಪರಿಣಾಮ ಬೀರುತ್ತೆ. ಮಗುವಿನ ಜನನವು ತಂದೆಯ ಮೆದುಳಿನಲ್ಲಿ ಹೊಸ ನರಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು. ಇದು ಮಗು ತನ್ನ ತಂದೆಯ ಜೀವನದಲ್ಲಿ ತರುವ ಹೊಸ ಬದಲಾವಣೆಯಾಗಿದೆ. ಮೆದುಳಿನ ಹಿಪೊಕ್ಯಾಂಪಸ್ ಭಾಗದಲ್ಲಿ ಜೀವಕೋಶಗಳ ಬೆಳವಣಿಗೆಯು ಹೆಚ್ಚಾಗುತ್ತೆ, ಇದು ಮೆಮೊರಿ  ಮತ್ತು ನೇವಿಗೇಶನ್ ಗೆ ಸಂಬಂಧಿಸಿದೆ.

46

ಸೆನ್ಸಿಟಿವ್(Sensitive) ಆಗಿರ್ತ್ತಾರೆ  
ತಂದೆ ತಮ್ಮ ಮಗುವಿನ ಧ್ವನಿಯ ಬಗ್ಗೆ ತುಂಬಾ  ಸೆನ್ಸಿಟಿವ್ ಆಗಿರ್ತ್ತಾರೆ. ಒಂದು ಸಂಶೋಧನೆಯಲ್ಲಿ, 27 ತಂದೆ ಮತ್ತು 29 ತಾಯಂದಿರನ್ನು ಸಮೀಕ್ಷೆ ಮಾಡಲಾಯಿತು. ತಮ್ಮ ಮಗು ಅಳುವ ಶಬ್ದವನ್ನು ಗುರುತಿಸಲು ಅವರನ್ನು ಕೇಳಲಾಯಿತು. 90% ಸಮಯದಲ್ಲಿ, ಪೋಷಕರು ತಮ್ಮ ಮಗು ಅಳುವ ಶಬ್ದವನ್ನು ಗುರುತಿಸಿದರು ಮತ್ತು ತಾಯಿಯಂತೆ, ತಂದೆ ಕೂಡ ಈ ಕೆಲಸದಲ್ಲಿ ಮುಂದಿದ್ದರು.
 

56

ಅಧ್ಯಯನ(Study) ಏನ್ ಹೇಳುತ್ತೆ 
ಒಂದು ಅಧ್ಯಯನದಲ್ಲಿ, ಸಂಶೋಧಕರು 89 ಹೊಸ ಪೋಷಕರ ಮೆದುಳಿನ ಚಟುವಟಿಕೆಯನ್ನು ನೋಡಿದರು. ತಮ್ಮ ಮಗುವನ್ನು ನೋಡಿಕೊಳ್ಳಲು ಸಹಾಯ ಮಾಡಿದ ಪತಿ -ಪತ್ನಿಇದರಲ್ಲಿ ಸೇರಿದ್ದರು. ಅವರೆಲ್ಲರ ಮೆದುಳಿನ ನೆಟ್ವರ್ಕ್ ಎಮೋಷನಲ್ ಪ್ರೊಸೆಸಿಂಗ್ ಮತ್ತು ಸಾಮಾಜಿಕ ತಿಳುವಳಿಕೆಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ.
 

66

ಮಗುವಿನ ಆಗಮನದ ನಂತರ, ತಾಯಿ(Mother) ಮಾತ್ರವಲ್ಲದೆ ತಂದೆಯ ಮನಸ್ಸು, ನಡವಳಿಕೆ ಮತ್ತು ಜೀವನದ ಮೇಲೂ ಹೆಚ್ಚು ಪರಿಣಾಮ ಬೀರುತ್ತೆ ಮತ್ತು ಅವರು ತಮ್ಮ ಮಗುವನ್ನು ನೋಡಿಕೊಳ್ಳುವಲ್ಲಿ ತಾಯಿಯಷ್ಟೇ ತೊಡಗಿಸಿಕೊಂಡಿದ್ದಾರೆ ಎಂದು ಈಗ ನೀವು ಅರ್ಥಮಾಡಿಕೊಂಡಿದ್ದೀರಿ ಅಲ್ವಾ.

Read more Photos on
click me!

Recommended Stories