ಕುಡಿಯೋ ಹಾಲಿಗೂ, ಸ್ತನದ ಕ್ಯಾನ್ಸರ್‌ಗೂ ಏನಾದರೂ ಲಿಂಕ್ ಇದ್ಯಾ?

First Published | Feb 7, 2023, 5:43 PM IST

ಹಾಲಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹಾಲಿನ ಬೆಲೆ ಏರಿಕೆಯಿಂದ ನೀವು ಸಹ ಅತೃಪ್ತರಾಗಿರಬಹುದು ಆದರೆ ಕೆಲವು ಜನರು ಈ ಸುದ್ದಿಯಿಂದ ತಲೆಕೆಡಿಸಿಕೊಳ್ಳಬಾರದು ಏಕೆಂದರೆ ಅಂತಹ ಜನರಿಗೆ ಹಾಲು ಕುಡಿಯುವುದರಿಂದ ಪ್ರಯೋಜನಗಳಿಲ್ಲ ಆದರೆ ಅನಾನುಕೂಲಗಳಿವೆ. ಹಾಲು ಕುಡಿಯುವುದರಿಂದ ಆಗುವ ಅನಾನುಕೂಲಗಳು ಯಾವುವು ಎಂದು ತಿಳಿದುಕೊಳ್ಳೋಣ.

ಹಾಲು ನಿಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ರತಿದಿನ ಸೇವಿಸಲಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯಲು ಸೂಚಿಸಲಾಗಿದೆ. ಹಾಲನ್ನು ಪ್ರತಿದಿನ ತಿನ್ನುವ ಅನೇಕ ಆಹಾರಗಳಲ್ಲೂ ಸಹ ಬಳಸಲಾಗುತ್ತದೆ. ಹಾಲು ಕುಡಿಯುವುದರಿಂದ (drinking milk) ಪೌಷ್ಟಿಕಾಂಶ ಸಿಗುತ್ತದೆ ಎನ್ನಲಾಗುತ್ತೆ. ಆದರೆ ಕೆಲವರಿಗೆ ಹಾಲು ಸೇವಿಸೋದರಿಂದ ಅನಾರೋಗ್ಯ ಉಂಟಾಗುತ್ತೆ ಗೊತ್ತಾ? 
 

ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು?

ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೆಂದರೆ ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಲು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 2 (Vitamin B2), ವಿಟಮಿನ್ ಬಿ 12, ಪೊಟ್ಯಾಷಿಯಮ್, ರಂಜಕ, ವಿಟಮಿನ್ ಎ ಮತ್ತು ವಿಟಮಿನ್ ಡಿ ಯ ಭಂಡಾರವಾಗಿದೆ.

Latest Videos


ಹಾಲು ಕುಡಿಯುವುದರಿಂದ ಏನೆಲ್ಲಾ ತೊಂದ್ರೆ ಉಂಟಾಗುತ್ತೆ?

ನಿಯಮಿತವಾಗಿ ಹಾಲು ಕುಡಿಯುವುದರಿಂದ ಪ್ರಯೋಜನಗಳು ಹಲವಾರಿವೆ. ರೋಗನಿರೋಧಕ ಶಕ್ತಿ (immunity power) ಬಲಗೊಳ್ಳುತ್ತದೆ, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ, ಕೂದಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ, ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತೆ. ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಹಾಲು ಕುಡಿಯುವುದರಿಂದ ಕೆಲವು ಅನಾನುಕೂಲತೆಗಳಿವೆ. ಅವುಗಳ ಬಗ್ಗೆ ತಿಳಿಯೋಣ. 
 

ಮೂಳೆಗಳು ದುರ್ಬಲಗೊಳ್ಳುವ ಅಪಾಯ

ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ ಕಂಡುಬರುತ್ತದೆ. ಆದರೆ ಹಸುವಿನ ಹಾಲು ಕುಡಿಯುವವರ ಮೂಳೆಗಳು ದುರ್ಬಲವಾಗಬಹುದು (weak bones) ಎಂದು ಪೆಟಾ ವರದಿ ಹೇಳುತ್ತದೆ. ಪ್ರಾಣಿಗಳ ಪ್ರೋಟೀನ್ಸ್ ವಿಭಜನೆಯಾದಾಗ ಆಮ್ಲವನ್ನು ಉತ್ಪಾದಿಸುತ್ತವೆ ಮತ್ತು ಕ್ಯಾಲ್ಸಿಯಂ ಆಮ್ಲ ತಟಸ್ಥಗೊಳಿಸುತ್ತದೆ ಎಂದು ಪೆಟಾ ನಂಬುತ್ತದೆ. ಆಮ್ಲವನ್ನು ತಟಸ್ಥಗೊಳಿಸಲು ಮತ್ತು ಹೊರಹಾಕಲು ದೇಹವು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಬಳಸಬೇಕಾಗುತ್ತದೆ. ಒಂದು ಲೋಟ ಹಾಲು ಮೂಳೆಯಲ್ಲಿನ ಕ್ಯಾಲ್ಸಿಯಂನ್ನು ತೆಗೆದು ಹಾಕುತ್ತೆ. 

Breast Cancer

ಸ್ತನ ಕ್ಯಾನ್ಸರ್ ಅಪಾಯ
ಎನ್ಸಿಬಿಐ ವರದಿಯ ಪ್ರಕಾರ, ಹಾಲು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ ಮತ್ತು ಅವುಗಳ ಸೇವನೆಯು ಸ್ತನ ಕ್ಯಾನ್ಸರ್ (breast cancer) ಅಪಾಯವನ್ನು ಹೆಚ್ಚಿಸುತ್ತದೆ. ಸುಮಾರು 10,000 ಮಹಿಳೆಯರ ಮೇಲೆ ನಡೆಸಿದ ಅಧ್ಯಯನವು ಕಡಿಮೆ ಕೊಬ್ಬಿನ ಆಹಾರ ಸೇವಿಸುವ ಮಹಿಳೆಯರಿಗೆ ಮತ್ತೆ ಸ್ತನ ಕ್ಯಾನ್ಸರ್ ಬರುವ ಅಪಾಯ 23% ಕಡಿಮೆ ಎಂದು ಕಂಡುಹಿಡಿದಿದೆ.

 

 ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಹೆಚ್ಚಿನ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ (prostate cancer) ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧಕರು 32 ವಿಭಿನ್ನ ಅಧ್ಯಯನಗಳ ಡೇಟಾವನ್ನು ವಿಶ್ಲೇಷಿಸಿದರು ಮತ್ತು ಹೆಚ್ಚಿನ ಕೊಬ್ಬಿನ ಹಾಲು, ಇತರ ಡೈರಿ ಉತ್ಪನ್ನಗಳು ಅಥವಾ ಚೀಸ್ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸ್ಯಾಚುರೇಟೆಡ್ ಕೊಬ್ಬು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತೆ
pcrm.org ವರದಿಯ ಪ್ರಕಾರ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಅಪಧಮನಿಗಳ ಮೇಲೆ ಒತ್ತಡ ಹೇರುವುದರಿಂದ ಸ್ಯಾಚುರೇಟೆಡ್ ಕೊಬ್ಬನ್ನು (Saturated fat) ಹೊಂದಿರುತ್ತೆ. ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಕೊಲೆಸ್ಟ್ರಾಲ್ ಅನ್ನು ಸಹ ಹೊಂದಿರುತ್ತವೆ. ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವ ವಸ್ತುಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ.

ಲ್ಯಾಕ್ಟೋಸ್ ಇನ್ ಟಾಲರೆನ್ಸ್
ಲ್ಯಾಕ್ಟೋಸ್ ಇನ್ ಟಾಲರೆನ್ಸ್ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ. ಈ ಅಸ್ವಸ್ಥತೆಯಲ್ಲಿ ನಿಮ್ಮ ದೇಹವು ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಹಾಲು ಮತ್ತು ಹಾಲಿನ ಉತ್ಪನ್ನಗಳ ಅಲರ್ಜಿಗೆ ಕಾರಣವಾಗಬಹುದು. ಶಿಶುಗಳು ಮತ್ತು ಮಕ್ಕಳು ಕಿಣ್ವಗಳನ್ನು ಉತ್ಪಾದಿಸುತ್ತಾರೆ, ಇದು ಲ್ಯಾಕ್ಟೋಸ್ ಅನ್ನು ಒಡೆಯುತ್ತದೆ ಆದರೆ ಅವರು ವಯಸ್ಸಾದಂತೆ ಈ ಸಾಮರ್ಥ್ಯ ಕಡಿಮೆಯಾಗಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು (lactose intolerance) ಹೊಂದಿರುವುದು ಹೊಟ್ಟೆ ನೋವು, (stomach pain) ಅತಿಸಾರ ಮತ್ತು ಗ್ಯಾಸ್ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾಲಿನ ಪ್ರೋಟೀನ್ ಮತ್ತು ಮಧುಮೇಹ

ಹಸುವಿನ ಹಾಲು ಕುಡಿಯುವುದರಿಂದ ಟೈಪ್ 1 ಮಧುಮೇಹದ (type 1 diabetes) ಅಪಾಯವೂ ಇದೆ. 2001 ರಲ್ಲಿ 3,000 ಮಕ್ಕಳ ಮೇಲೆ ನಡೆಸಿದ ಅಧ್ಯಯನವು ಹಸುವಿನ ಹಾಲು ಕುಡಿಯೋದ್ರಿಂದ ಟೈಪ್ 1 ಮಧುಮೇಹದ ಉಂಟಾಗುತ್ತೆ ಎಂದು ಕಂಡುಹಿಡಿದಿದೆ. ಇದಲ್ಲದೆ, ಈ ಅಧ್ಯಯನದಲ್ಲಿ, ಮೊದಲ ಮೂರು ತಿಂಗಳು ಹಸುವಿನ ಹಾಲನ್ನು ಕುಡಿಯದ ಶಿಶುಗಳು ಟೈಪ್ 1 ಮಧುಮೇಹ ಅಪಾಯ ಹೊಂದುವ ಸಾಧ್ಯತೆ 30 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಹಾಲು ಕುಡಿಯೋದ್ರಿಂದ ಇನ್ನೇನು ಸಮಸ್ಯೆಗಳಿವೆ?
ಹಸುವಿನ ಹಾಲು ಮತ್ತು ಹಾಲಿನ ಉತ್ಪನ್ನಗಳ (milk product) ಅತಿಯಾದ ಸೇವನೆಯು ಮೊಡವೆ, ಅಂಡಾಶಯದ ಕ್ಯಾನ್ಸರ್, ಹಾಲಿನ ಅಲರ್ಜಿ ಮತ್ತು ತೂಕ ಹೆಚ್ಚಳ ಮೊದಲಾದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಹಾಲು ಕುಡಿಯೋ ಮುನ್ನ ಯೋಚಿಸಿ, ಮತ್ತೆ ಕುಡಿಯಿರಿ.

click me!