ನಟರಾಜಾಸನ ಮಾಡೋ ಮೂಲಕ 18 ರೋಗಕ್ಕೆ ಸುಲಭವಾಗಿ ಹೇಳಬಹುದು ಗುಡ್ ಬೈ!

First Published | Feb 21, 2023, 5:55 PM IST

ನಟರಾಜಾಸನವನ್ನು ಶಿವನ ಆಶೀರ್ವಾದವೆಂದು ಪರಿಗಣಿಸಲಾಗುತ್ತೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡೋದ್ರಿಂದ, ದೇಹದ 18 ರೋಗಗಳು ನಿವಾರಣೆಯಾಗುತ್ತವೆ. ಅದನ್ನು ಮಾಡಲು ಸರಿಯಾದ ಮಾರ್ಗ ಯಾವುದು? ಇದರಿಂದ ಯಾವೆಲ್ಲ ರೋಗ ನಿವಾರಣೆಯಾಗುತ್ತೆ? ಎಂದು ಇಲ್ಲಿ ತಿಳಿಯೋಣ. 

ಶಿವನು (Lord shiva) ಮಾನವ ಕಲ್ಯಾಣಕ್ಕಾಗಿ ಧ್ಯಾನ, ತಪಸ್ಸು ಮುಂತಾದ ಅನೇಕ ಚಿಕಿತ್ಸೆಗಳನ್ನು ನೀಡಿದ್ದಾನೆ. ಆದರೆ ಶಿವನ ನೆಚ್ಚಿನ ಮುದ್ರಾ ನಟರಾಜಾಸನ ಯೋಗದ ಬಗ್ಗೆ ನಿಮಗೆ ತಿಳಿದಿದ್ಯಾ? ನಟರಾಜಾಸನವನ್ನು ಮಹಾದೇವನ ನೃತ್ಯ ಭಂಗಿಗಳಿಂದ ಪಡೆಯಲಾಗಿದೆ, ಇದನ್ನು ಭರತನಾಟ್ಯದ ಆಧಾರವೆಂದು ಪರಿಗಣಿಸಲಾಗಿದೆ. ಈ ಆಸನದಿಂದ ಹಲವು ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯೋಣ. 
 

ನಟರಾಜಾಸನದ(Natarajasana) ಪ್ರಯೋಜನಗಳು? 
ನಟರಾಜಾಸನವು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇಂಟರ್ನ್ಯಾಷನಲ್ ಜರ್ನಲ್ ಆಫ್ ರಿಸರ್ಚ್ ಪಬ್ಲಿಕೇಷನ್ ಅಂಡ್ ರಿವ್ಯೂನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಇದರ ನಿಯಮಿತ ಅಭ್ಯಾಸವು ಹೊಟ್ಟೆ ಮತ್ತು ಜೀರ್ಣಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸುತ್ತೆ. ಜೀರ್ಣಕ್ರಿಯೆಯ ಕೊರತೆಯಿಂದಾಗಿ, 18 ರೋಗಗಳು ದೇಹವನ್ನು ಸುತ್ತುವರೆದಿವೆ. ನಟರಾಜಾಸನದಿಂದ ಈ ರೋಗಗಳನ್ನು ನಿವಾರಿಸಬಹುದು.
 

Tap to resize

ನಟರಾಜಾಸನದಿಂದ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು ನೋಡೋಣ. 
ಮಲಬದ್ಧತೆ(Constipation)
ಪೈಲ್ಸ್
ಅತಿಸಾರ
ಎದೆಯುರಿ ಮತ್ತು ಅಸಿಡಿಟಿ 
ಮೂತ್ರವಿಸರ್ಜನೆ
ವಾಕರಿಕೆ, ವಾಂತಿ
ಹೊಟ್ಟೆಯಲ್ಲಿ ನೋವು
ಆಹಾರವನ್ನು ನುಂಗಲು ಕಷ್ಟ
ಹೆಚ್ಚುತ್ತಿರುವ ಒಬೆಸಿಟಿ 
ತುಂಬಾ ತೆಳ್ಳಗಿರೋದು
ಸ್ಟೋನ್ ಸಮಸ್ಯೆ
ಹೊಟ್ಟೆ ಹುಣ್ಣು
ಎಲ್ಲಾ ರೀತಿಯ ಹೆಪಟೈಟಿಸ್
ಪ್ಯಾಂಕ್ರಿಯಾಟೈಟಿಸ್
ಪೆಪ್ಟಿಕ್ ಅಲ್ಸರ್
ಪಿತ್ತಜನಕಾಂಗದ ಕಾಯಿಲೆಗಳು
ಮೂತ್ರಪಿಂಡದ ಕಾಯಿಲೆಗಳು

ನಟರಾಜಾಸನ ಮಾಡೋದರಿಂದ ಆಗೋ ಇತರ ಅದ್ಭುತ ಪ್ರಯೋಜನಗಳು ಹೀಗಿವೆ 
ದೇಹದಾದ್ಯಂತ ರಕ್ತದ ಹರಿವನ್ನು ಸುಧಾರಿಸುತ್ತೆ 
ಒತ್ತಡವನ್ನು(Stress) ನಿವಾರಿಸುತ್ತೆ ಮತ್ತು ಶಾಂತಿ ನೀಡುತ್ತೆ 
ಬೆನ್ನುಮೂಳೆಯನ್ನು ಗಟ್ಟಿಯಾಗಿರುವಂತೆ ಮಾಡುತ್ತೆ 
ಏಕಾಗ್ರತೆಯ ಸಾಮರ್ಥ್ಯ ಹೆಚ್ಚಿಸುತ್ತೆ 
ದೇಹದ ಚಕ್ರಗಳನ್ನು ಸಕ್ರಿಯಗೊಳಿಸುತ್ತೆ 

ನಟರಾಜಾಸನ ಮಾಡುವ ವಿಧಾನ
ಮೊದಲನೆಯದಾಗಿ, ನಿಂತುಕೊಳ್ಳಿ(Stand up).
ನಂತರ ದೀರ್ಘವಾಗಿ ಉಸಿರಾಡಿ ಮತ್ತು ದೇಹದ ಭಾರವನ್ನು ಎಡಗಾಲಿನ ಮೇಲೆ ಹಾಕುವಾಗ ಬಲ ಹಿಮ್ಮಡಿಯನ್ನು ಗಾಳಿಯಲ್ಲಿ ಹಿಂದಕ್ಕೆ ಎತ್ತಿ.
 

ಬಲ ಹಿಮ್ಮಡಿಯನ್ನು ಸಾಧ್ಯವಾದಷ್ಟು ಎತ್ತರಕ್ಕೆ ಎತ್ತಿ, ಸಾಧ್ಯವಾದರೆ ಅದನ್ನು ಸೊಂಟಕ್ಕೆ ಸಮನಾಗಿ ತರಲು ಪ್ರಯತ್ನಿಸಿ.
ಈಗ ಎಡಗಾಲನ್ನು(Left leg) ಬಲಪಡಿಸುವ ಮೂಲಕ ಸಮತೋಲನ ಮಾಡಿ ಮತ್ತು ಬಲಗೈಯಿಂದ ಬಲ ಪಾದವನ್ನು ಹಿಡಿದುಕೊಳ್ಳಿ.

ಎಡಗೈಯನ್ನು ಮುಂದಕ್ಕೆ ಚಾಚಿ ಮತ್ತು ಈ ಭಂಗಿಯಲ್ಲಿ ಬ್ಯಾಲೆನ್ಸ್(Balance) ಕಾಪಾಡಿಕೊಳ್ಳಿ.
ನೀವು 20-30 ಸೆಕೆಂಡುಗಳ ಕಾಲ ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು ಮತ್ತು ನಂತರ ಅದೇ ಪ್ರಕ್ರಿಯೆಯನ್ನು ಇನ್ನೊಂದು ಕಾಲಿನಿಂದ ರಿಪೀಟ್ ಮಾಡಬೇಕು.

ಈ ಮುನ್ನೆಚ್ಚರಿಕೆಗಳನ್ನು ನೆನಪಿನಲ್ಲಿಡಿ
ಕಡಿಮೆ ರಕ್ತದೊತ್ತಡದಲ್ಲಿ(Low blood pressure) ಈ ಯೋಗಾಸನವನ್ನು ಮಾಡಬೇಡಿ.
ಆರಂಭದಲ್ಲಿ, ಗಾಯದ ಅಪಾಯವಿರೋದರಿಂದ ಯೋಗ ತಜ್ಞರ ಸಹಾಯವನ್ನು ತೆಗೆದುಕೊಳ್ಳಿ.
ಬೆಳಿಗ್ಗೆ ನಟರಾಜಾಸನ ಮಾಡಿ,ಇದು ತುಂಬಾ ಉತ್ತಮ.

ನಟರಾಜಾಸನ ಮಾಡೋ ಮೊದಲು ನೀವು ಈ ಆಸನ ಮಾಡಬೇಕು
ಸಂಶೋಧನೆಯ ಪ್ರಕಾರ, ನೀವು ನಟರಾಜಾಸನ ಮಾಡಲು ಹೊರಟಿದ್ದರೆ, ಮೊದಲು ನೀವು ಕೆಲವು ಸುಲಭವಾದ ಯೋಗಾಸನಗಳನ್ನು ಮಾಡಬೇಕು. ಮೊದಲಿಗೆ ಧನುರಾಸನ(Dhanurasana), ಉಷ್ಠಾಸನ ಮತ್ತು ವೃಕ್ಷಾಸನ ಮಾಡಿ ಬಳಿಕ ನಟರಾಜಾಸನ ಮಾಡೋದರಿಂದ ಈ ಆಸನ ಮಾಡಲು ಸುಲಭವಾಗುತ್ತೆ. 

Latest Videos

click me!