7 ನೇ ತಿಂಗಳಲ್ಲಿ ಈ ಕೆಲಸ ಮಾಡಿದ್ರೆ ನಾರ್ಮಲ್ ಡೆಲಿವರಿ ಸಾಧ್ಯತೆ 70%

First Published | Feb 21, 2023, 4:33 PM IST

ನೀವು ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದರೆ ಮತ್ತು ಹೇಗಾದರೂ ನಾರ್ಮಲ್ ಡೆಲಿವರಿ ಆಗಬೇಕು ಅಂತ ಬಯಸೊದಾದ್ರೆ, ನೀವು ಇಂದಿನಿಂದ ಈ ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳು ಸುಲಭವಾಗಿ ನಾರ್ಮಲ್ ಡೆಲಿವರಿ ಆಗೋದಕ್ಕೆ ಸಹಾಯ ಮಾಡ್ತವೆ. ಹಾಗಾದ್ರೆ ಅಂತಹ ಸಲಹೆಗಳು ಯಾವುವು ನೋಡೋಣ..

ಮಗುವಿಗೆ ಜನ್ಮ ನೀಡೋದು ಮಹಿಳೆಯ ಜೀವನದ ಅತ್ಯಂತ ವಿಶೇಷ ಮತ್ತು ಆಹ್ಲಾದಕರ ಭಾವನೆ. ಮಗು ಗರ್ಭದಲ್ಲಿದ್ದಾಗ, ಮಹಿಳೆಯರ ಜೀವನದ ಅತ್ಯಂತ ವಿಶೇಷ ಅನುಭವ ಪ್ರಾರಂಭವಾಗುತ್ತೆ, ಇದರಲ್ಲಿ ಅವರು ತಮ್ಮ ಹೊಟ್ಟೆಯಲ್ಲಿ ಮಗುವಿನ ನೋವು ಮತ್ತು ಚಲನೆಗಳನ್ನು ಅನುಭವಿಸುತ್ತಾರೆ. ಕಾಲ ಕಳೆದಂತೆ, ಮಗು ಬೆಳೆದಂತೆ, ಮಹಿಳೆಯರಿಗೆ ಸಮಸ್ಯೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಈ ಸಮಸ್ಯೆಗಳೊಂದಿಗೆ, ಸಾಮಾನ್ಯ ಹೆರಿಗೆ(Normal delivery) ಮತ್ತು ಸಿಸೇರಿಯನ್ ಹೆರಿಗೆಯನ್ನು ಹೊಂದಲು ಮಹಿಳೆಯ ಮೇಲಿನ ಒತ್ತಡವೂ ಹೆಚ್ಚಾಗುತ್ತೆ. 
 

ನೀವು ಇತ್ತೀಚೆಗೆ ಗರ್ಭಿಣಿಯಾಗಿದ್ದರೆ(Pregnant) ಮತ್ತು ಹೇಗಾದರೂ ನಾರ್ಮಲ್ ಡೆಲಿವರಿ ಹೊಂದಲು ಬಯಸೊದಾದ್ರೆ, ಇಲ್ಲಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಬಳಸಿಕೊಂಡು ನೀವು ಸುಲಭವಾಗಿ ನಾರ್ಮಲ್ ಡೆಲಿವರಿ ಮೂಲಕ ಆರೋಗ್ಯಕರ ಮಗುವನ್ನು ಪಡೆಯಬಹುದು. ಅದಕ್ಕೆ ಏನು ಮಾಡಬೇಕು ನೋಡೋಣ. 

Tap to resize

1- ಆರೋಗ್ಯಕರ ದೇಹವನ್ನು ಹೊಂದಿರೋದು
ಗರ್ಭಾವಸ್ಥೆಯಲ್ಲಿ, ನೀವು ಒಟ್ಟಾರೆ ಆರೋಗ್ಯವಾಗಿದ್ದರೆ ಮತ್ತು ನಿಮ್ಮ ತೂಕವೂ ಆರೋಗ್ಯಕರವಾಗಿರುತ್ತೆ, ಆದ್ದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆ ಇರೋದಿಲ್ಲ ಎಂದು ತಿಳಿದುಕೊಳ್ಳಿ. ನಾರ್ಮಲ್ ಡೆಲಿವರಿಗೆ ಆರೋಗ್ಯಕರ ದೇಹವು ಬೇಕೇ ಬೇಕು, ಆದ್ದರಿಂದ ವಿಟಮಿನ್ಸ್, ಮಿನರಲ್ಸ್ ಸೇವನೆ ಮತ್ತು ಆರೋಗ್ಯಕರ ಆಹಾರ(Healthy food) ಸೇವಿಸಬೇಕು. 

2- ಒತ್ತಡವನ್ನು(Stress) ತೆಗೆದುಕೊಳ್ಳಬೇಡಿ 
ಜನರು ಏನೇ ಕೆಲಸ ಮಾಡಿದರು ಮಾತಾಡ್ತಾರೆ, ಅದು 100 ಪ್ರತಿಶತ ಸರಿ ಎಂದು ಕೆಲವರು ಹೇಳುತ್ತಾರೆ. ವಿಭಿನ್ನ ಥಿಂಕಿಂಗ್ ಹೊಂದಿರುವ ಬಹಳಷ್ಟು ಜನರನ್ನು ನೀವು ಕಾಣಬಹುದು, ಆದರೆ ನೀವು ಮಾಡಬೇಕಾದ ಒಂದು ವಿಷಯವೆಂದ್ರೆ ಒತ್ತಡವನ್ನು ತೆಗೆದುಕೊಳ್ಳದಿರುವುದು. ಯಾರು ಏನೇ ಹೇಳಿದ್ರು ಅದರ ಬಗ್ಗೆ ಹೆಚ್ಚಿನ ಟೆನ್ಶನ್ ತೆಗೆದುಕೊಳ್ಳಬಾರದು.

ಒತ್ತಡವನ್ನು ತೆಗೆದುಕೊಳ್ಳುವುದು ನಿಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಮತ್ತು ಇದು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಪ್ರೆಗ್ನನ್ಸಿಯಲ್ಲಿ ಏನೇ ಚಿಂತೆ ಇದ್ರು ಸ್ಟ್ರೆಸ್ ತೊಗೋಬಾರದು. ಸಾಧ್ಯವಾದಷ್ಟು ಖುಷಿಯಾಗಿರ್ಬೇಕು(Happy). ಮನಸ್ಸು ಬಿಚ್ಚಿ ಪ್ರೀತಿ ಪಾತ್ರರಲ್ಲಿ ಮಾತನಾಡಿ, ಆವಾಗ ಮನಸ್ಸು ಹಗುರವಾಗುತ್ತೆ. 

3- ವ್ಯಾಯಾಮ(Exercise)
ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ರೆಸ್ಟ್ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ವೈದ್ಯರು ಹೆಚ್ಚಾಗಿ ಆಕ್ಟೀವ್ ಆಗಿರುವಂತೆ ಸಲಹೆ ನೀಡುತ್ತಾರೆ. ಲಘು ವ್ಯಾಯಾಮ ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತೆ , ಆದ್ದರಿಂದ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ, ಆಕ್ಟಿವ್ ಆಗಿರಿ ಮತ್ತು ನಿಮ್ಮ ದೇಹವನ್ನು ಚಾಲನೆಯಲ್ಲಿಡಿ.

4- ನಿಮ್ಮ ಆಪ್ತರನ್ನು ಹತ್ತಿರ ಇಟ್ಟುಕೊಳ್ಳಿ.
ನಿಮಗೆ ತುಂಬಾ ವಿಶೇಷ ಅನಿಸಿದವರನ್ನು ಅಥವಾ ನಿಮ್ಮ ವಿಶ್ವಾಸಾರ್ಹರಲ್ಲಿ ಒಬ್ಬರನ್ನು ನಿಮ್ಮೊಂದಿಗೆ ಇರಿಸಿಕೊಳ್ಳಲು ಪ್ರಾರಂಭಿಸಬೇಕು. ಅದು ನಿಮ್ಮ ಪತಿ(Husband), ತಾಯಿ, ಸಹೋದರಿ, ಸ್ನೇಹಿತ ಆಗಿದ್ದರೂ ಸಹ. ಅವರನ್ನು ಸದಾ ನಿಮ್ಮೊಂದಿಗೆ ಇರುವಂತೆ ನೋಡಿಕೊಳ್ಳೋದು ಮುಖ್ಯ. ಇದರಿಂದ ನೀವು ಹ್ಯಾಪಿಯಾಗಿರುತ್ತೀರಿ. 

ಮನಸ್ಸಿಗೆ ಹತ್ತಿರವಾಗಿರೋರ ಜೊತೆಗೆ ಇರೋದರಿಮ್ದ ನಿಮಗೆ ಆರಾಮದಾಯಕ ಅನುಭವವನ್ನು ನೀಡುತ್ತೆ ಮತ್ತು ನಿಮ್ಮ ಗರ್ಭಧಾರಣೆಯ(Pregnancy) ಕೊನೆಯ ದಿನಗಳನ್ನು ಸರಿಯಾಗಿ ಕಳೆಯಲು ಸಹಾಯ ಮಾಡುತ್ತೆ. ಈ ದಿನಗಳಲ್ಲಿ ಆರೋಗ್ಯಕರ ಮಾನಸಿಕ ಆರೋಗ್ಯವು ತುಂಬಾ ಮುಖ್ಯ, ಇದು ನಿಮ್ಮ ಇಡೀ ದೇಹಕ್ಕೆ ಬಹಳ ಮುಖ್ಯ.

5- ಇಂಜೆಕ್ಷನ್(Injection) ತಪ್ಪಿಸಿ 
ಅನೇಕ ಮಹಿಳೆಯರಿಗೆ 41 ನೇ ವಾರದವರೆಗೆ ಹೆರಿಗೆ ನೋವು ಇರೋದಿಲ್ಲ, ಇದರಿಂದಾಗಿ ವೈದ್ಯರು ಇಂಜೆಕ್ಷನ್ ಅಥವಾ ಔಷಧಿಗಳ ಮೂಲಕ ಹೆರಿಗೆ ನೋವು ಬರುವಂತೆ ಮಾಡುತ್ತಾರೆ. ಕೆಲವೊಮ್ಮೆ ಇದು ಅಗತ್ಯವಾಗಿರುತ್ತೆ ಆದರೆ ಈ ಪ್ರಕ್ರಿಯೆಗೆ ನಿಮ್ಮ ದೇಹವು ಸಿದ್ಧವಾಗಿರೋದಿಲ್ಲ.

ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಈ ಎಲ್ಲಾ ವಿಧಾನಗಳನ್ನು ಬಳಸೋದು ನಿಮ್ಮನ್ನು ನಾರ್ಮಲ್ ಡೆಲಿವರಿಯಿಂದ ದೂರವಿರಿಸುತ್ತೆ. ಆದ್ದರಿಂದ, ಆರೋಗ್ಯಕರ ಗರ್ಭಾವಸ್ಥೆಯಲ್ಲಿ ಯಾವುದೇ ಚುಚ್ಚುಮದ್ದು ಅಥವಾ ಔಷಧಿಯನ್ನು(Medicine) ತಪ್ಪಿಸಬೇಕು. ಹೀಗೆ ಮಾಡೋದರಿಂದ ನಾರ್ಮಲ್ ಡೆಲಿವರಿ ಆಗೋದಂತೂ ನಿಜಾ. 

Latest Videos

click me!