ಹಿಮೋಫಿಲಿಯಾ (Hemophilia) ಅನ್ನೋದು ಅನುವಂಶಿಕ ಕಾಯಿಲೆ. ಆದರೆ ಸಣ್ಣ ಗಾಯ ಸಹ ಹಿಮೋಫಿಲಿಯಾ ರೋಗಿಗಳಿಗೆ ಅಪಾಯ. ಅನೇಕ ಪ್ರಕರಣಗಳಲ್ಲಿ, ರೋಗಿಯು ಆಂತರಿಕ ರಕ್ತಸ್ರಾವವಾಗುತ್ತದೆ. ಆದ್ದರಿಂದ ಇದು ಮಾರಣಾಂತಿವೂ ಆಗಬಹುದು. ಈ ರೋಗದ ಚಿಕಿತ್ಸೆ ತುಂಬಾ ಕಷ್ಟ, ಆದರೆ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ನಿಯಂತ್ರಣದಲ್ಲಿಡಬಹುದು.
ಹಿಮೋಫಿಲಿಯಾ ರೋಗಿಗಳು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು(Healthy food) ತೆಗೆದುಕೊಳ್ಳಬೇಕು, ಇದು ದೇಹದಲ್ಲಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಆದರೆ ಅವರು ಸೇವಿಸುವ ವಸ್ತುಗಳು ಅವರ ಸ್ಥಿತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರೋದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಹಿಮೋಫಿಲಿಯಾದಲ್ಲಿ ಏನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು, ಈ ವಿಷಯದ ಬಗ್ಗೆ ಮಾಹಿತಿ ಪಡೆಯಲು ಈ ಸ್ಟೋರಿ ಓದಿ. ಹಿಮೋಫಿಲಿಯಾದಲ್ಲಿ ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ -
ಹಿಮೋಫಿಲಿಯಾದಲ್ಲಿ ಏನು ತಿನ್ನಬೇಕು
ಕಬ್ಬಿಣ(Iron)
ಹಿಮೋಫಿಲಿಯಾ ರೋಗಿಗಳು ತಮ್ಮ ಆಹಾರದಲ್ಲಿ ಕಬ್ಬಿಣಾಂಶ ಭರಿತ ಆಹಾರವನ್ನು ಸೇರಿಸಬೇಕು. ಕಬ್ಬಿಣವು ದೇಹದಲ್ಲಿ ಹಿಮೋಗ್ಲೋಬಿನ್ ರಚನೆಗೆ ಸಹಾಯ ಮಾಡುತ್ತೆ. ಹಿಮೋಫಿಲಿಯಾ ರೋಗಿಗಳಿಗೆ ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ಯಾಕಂದ್ರೆ ದೇಹದಿಂದ ರಕ್ತ ಹೆಚ್ಚು ಹರಿದಾಗ, ಕಬ್ಬಿಣದ ಕೊರತೆ ಉಂಟಾಗುತ್ತೆ. ಇದಕ್ಕಾಗಿ, ರೆಡ್ ಮೀಟ್, ಮೀನು, ಪಾಲಕ್, ಬ್ರೊಕೋಲಿ, ಒಣಗಿದ ಬೀನ್ಸ್, ಧಾನ್ಯ, ಸೀಡ್ಸ್ ಮತ್ತು ಒಣದ್ರಾಕ್ಷಿಗಳಂತಹ ಹಸಿರು ತರಕಾರಿಗಳನ್ನು ತಿನ್ನುತ್ತಿರಬೇಕು.
ಕ್ಯಾಲ್ಸಿಯಂ (Calcium)
ಹಿಮೋಫಿಲಿಯಾ ರೋಗಿಗಳು ಕ್ಯಾಲ್ಸಿಯಂ ಭರಿತ ಆಹಾರ ಸೇರಿಸಬೇಕು. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತೆ ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿರಿಸುತ್ತೆ. ಹಿಮೋಫಿಲಿಯಾ ರೋಗಿಗಳು ತಮ್ಮ ಹಲ್ಲುಗಳ ಬಗ್ಗೆ ಸರಿಯಾದ ಕಾಳಜಿ ವಹಿಸೋದು ಬಹಳ ಮುಖ್ಯ, ಯಾಕಂದ್ರೆ ಅವರು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ ರಕ್ತಸ್ರಾವವಾಗಬಹುದು. ಹಿಮೋಫಿಲಿಯಾ ರೋಗಿಗಳಿಗೆ ಇದು ಒಳ್ಳೆದಲ್ಲ. ಇದಕ್ಕಾಗಿ, ಕಡಿಮೆ ಕೊಬ್ಬಿನ ಹಾಲು, ಕಡಿಮೆ ಕೊಬ್ಬಿನ ಚೀಸ್, ಮೊಸರು, ದ್ವಿದಳ ಧಾನ್ಯ, ಸೋಯಾ ಹಾಲು, ಬಾದಾಮಿ ಮತ್ತು ಪಾಲಕ್ ಮತ್ತು ಬ್ರೊಕೋಲಿಯಂತಹ ಹಸಿರು ಎಲೆಗಳ ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು.
ವಿಟಮಿನ್-ಕೆ (Vitamin K)
ವಿಟಮಿನ್-ಕೆ ದೇಹದಲ್ಲಿ ಪ್ರೋಥ್ರಾಂಬಿನನ್ನು ಉತ್ಪಾದಿಸಲು ಸಹಾಯ ಮಾಡುತ್ತೆ, ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತೆ. ಹಾಗೆಯೇ ಇದು ಗ್ಲೈಕೋಜೆನನ್ನು ತಯಾರಿಸುತ್ತೆ, ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತೆ. ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರ ಸೇವಿಸೋದು ಅತಿ ರಕ್ತಸ್ರಾವವನ್ನು ನಿಯಂತ್ರಿಸುತ್ತೆ. ಇದಕ್ಕಾಗಿ, ಆಹಾರದಲ್ಲಿ ಪಾಲಕ್, ಬ್ರೊಕೋಲಿ, ಎಲೆಕೋಸು, ಟರ್ನಿಪ್ಸ್, ಓಟ್ಸ್, ಆಲಿವ್ ಎಣ್ಣೆ ಮತ್ತು ಗ್ರೀನ್ ಟೀಯನ್ನು ಸೇರಿಸಿ.
ವಿಟಮಿನ್-ಬಿ(Vitamin B)
ಹಿಮೋಫಿಲಿಯಾ ರೋಗಿಗಳು ವಿಟಮಿನ್-ಬಿ ಸಮೃದ್ಧ ವಸ್ತುಗಳನ್ನು ಸೇವಿಸಬೇಕು. ಇದು ರೈಬೋಫ್ಲೇವಿನ್ ಮತ್ತು ನಿಯಾಸಿನ್ನಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತೆ. ಇದಕ್ಕಾಗಿ,ಬಾಳೆಹಣ್ಣು, ಬಟಾಣಿ, ಮೀನು, ಚೀಸ್, ಕಾರ್ನ್, ಕಿತ್ತಳೆ ರಸ, ಕಡಲೆಕಾಯಿ ಬೆಣ್ಣೆ, ಮೊಟ್ಟೆಯ ಹಳದಿ, ಧಾನ್ಯಗಳು ಮತ್ತು ಸೋಯಾಬೀನ್ಗಳನ್ನು ಆಹಾರದಲ್ಲಿ ಸೇರಿಸಬೇಕು.
ವಿಟಮಿನ್-ಸಿ (VItamin C)
ಹಿಮೋಫಿಲಿಯಾ ಇರುವವರು ವಿಟಮಿನ್-ಸಿ ಹೊಂದಿರುವ ವಸ್ತುಗಳನ್ನು ಸೇವಿಸಬೇಕು. ಇದು ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಜೊತೆಗೆ ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತೆ. ವಿಟಮಿನ್ ಸಿ ಹೊಂದಿರುವ ವಸ್ತುಗಳನ್ನು ಸೇವಿಸೋದರಿಂದ ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತೆ. ವಿಟಮಿನ್-ಸಿ ಗಾಗಿ, ಕಿತ್ತಳೆ, ಸೇಬು, ಸ್ಟ್ರಾಬೆರಿ, ಪಪ್ಪಾಯಿ, ಕಿವಿ, ಬ್ಲೂಬೆರ್ರಿ, ಅನಾನಸ್, ಪಾಲಕ್ ಮತ್ತು ಮೊಳಕೆ ಕಾಳುಗಳನ್ನು ಸೇವಿಸಿ.
ಹಿಮೋಫಿಲಿಯಾದಲ್ಲಿ ಏನನ್ನು ತಪ್ಪಿಸಬೇಕು
ಹಿಮೋಫಿಲಿಯಾ ರೋಗಿಗಳು ಹೆಚ್ಚಿನ ಕೊಬ್ಬು ಮತ್ತು ಕರಿದ ಆಹಾರ ಸೇವಿಸೋದನ್ನು ತಪ್ಪಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಪೇಸ್ಟ್ರಿ, ಪಿಜ್ಜಾ(Pizza), ಕುಕೀಗಳಂತಹ ಟ್ರಾನ್ಸ್ ಕೊಬ್ಬು ಭರಿತ ಪ್ಯಾಲೆಟ್ ಗಳನ್ನು ಸೇವಿಸಬೇಡಿ. ಜೊತೆಗೆ, ತಂಪು ಪಾನೀಯ, ಕ್ಯಾಂಡಿ, ಸೋಡಾ, ಚಾಕೊಲೇಟ್ ಮತ್ತು ಹೆಚ್ಚಿನ ಸಕ್ಕರೆ ವಸ್ತುಗಳನ್ನು ತಿನ್ನೋದನ್ನು ತಪ್ಪಿಸಿ. ಹಾಗೆಯೇ ಮರೆತು ಕೂಡ ಆಲ್ಕೋಹಾಲ್ ಸೇವಿಸಬಾರದು.