ಸೋಯಾ ಸಾಸ್(Soya sauce) ಚೀನೀ ಭಕ್ಷ್ಯಗಳಲ್ಲಿ ಬಹಳಷ್ಟು ಬಳಸಲಾಗುತ್ತೆ, ಇದು ಖಾದ್ಯದ ರುಚಿ ಮತ್ತು ವಿನ್ಯಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತೆ. ಸೋಯಾ ಸಾಸ್ ಗೋಧಿ ಮತ್ತು ಹುದುಗಿಸಿದ ಸೋಯಾದಿಂದ ತಯಾರಿಸಿದ ಸಾಸ್ ಆಗಿದೆ, ಇದನ್ನು ಹೆಚ್ಚಿನ ದೇಶಗಳು ತಮ್ಮ ಆಹಾರದಲ್ಲಿ ಬಳಸಲು ಪ್ರಾರಂಭಿಸಿವೆ.
ಸಹಜವಾಗಿ, ಸೋಯಾ ಸಾಸ್ ಖಾದ್ಯದ ರುಚಿಯನ್ನು(Taste) ದ್ವಿಗುಣಗೊಳಿಸುತ್ತೆ, ಆದರೆ ಅದರ ಅತಿಯಾದ ಸೇವನೆಆರೋಗ್ಯಕ್ಕೆ ಹಾನಿಕಾರಕ. ಸೋಯಾ ಸಾಸ್ ನ ಅತಿ ಸೇವನೆಯು ಅಲರ್ಜಿಯಿಂದ ಥೈರಾಯ್ಡ್ ವರೆಗೆ ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಸೋಯಾ ಸಾಸ್ ನ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.
ಸೋಯಾ ಸಾಸ್ ನ ಪ್ರಯೋಜನಗಳು
ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ
ಅನೇಕ ಪೋಷಕಾಂಶಗಳ ಜೊತೆಗೆ, ಸೋಯಾ ಸಾಸ್ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಫ್ರೀ ರೇಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತೆ. ಸೋಯಾ ಸಾಸ್ ಸೇವಿಸುವ ಮೂಲಕ ಜೀರ್ಣಕ್ರಿಯೆಯೂ(Digestion) ಉತ್ತಮವಾಗಿರುತ್ತೆ.
ತೂಕ(Weight) ಹೆಚ್ಚಾಗೋದಿಲ್ಲ
ಸೋಯಾ ಸಾಸ್ ನಲ್ಲಿ ಕ್ಯಾಲೊರಿಗಳ ಪ್ರಮಾಣ ತುಂಬಾ ಕಡಿಮೆ ಇದೆ. ಈ ಕಾರಣದಿಂದಾಗಿ ತೂಕವು ನಿಯಂತ್ರಣದಲ್ಲಿರುತ್ತೆ ಆದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸೋದು ಸೂಕ್ತ. ಇದನ್ನು ನೀವು ಬೇರೆ ಬೇರೆ ಅಡುಗೆಗಲಲ್ಲಿ ಮಾಡಿ ಸೇವಿಸಬಹುದು.
ಸೋಡಿಯಂನ(Sodium) ಅತ್ಯುತ್ತಮ ಮೂಲ
ದೇಹದಲ್ಲಿ ಸೋಡಿಯಂ ಕೊರತೆಯಿದ್ದರೆ, ನೀವು ಸೋಯಾ ಸಾಸನ್ನು ಆಹಾರದಲ್ಲಿ ಸೇರಿಸಬಹುದು. ಇದು ದೇಹದಲ್ಲಿ ಸೋಡಿಯಂ ಕೊರತೆಯನ್ನು ನೀಗಿಸುತ್ತೆ. ಸಾಕಷ್ಟು ಪ್ರಮಾಣದ ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತೆ ಮತ್ತು ಇದು ನರ್ವಸ್ ಸಿಸ್ಟಮನ್ನು ಆರೋಗ್ಯಕರವಾಗಿರಿಸುತ್ತೆ.
ಕೆಟ್ಟ ಕೊಲೆಸ್ಟ್ರಾಲ್(cholesterol) ತೆಗೆದುಹಾಕುತ್ತೆ
ಸೋಯಾ ಸಾಸ್ ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲನ್ನು ಸಹ ತೆಗೆದುಹಾಕಲಾಗುತ್ತೆ. ಇದು ಲಿಪೊಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತೆ. ಆದರೆ ಔಷಧಿ, ವ್ಯಾಯಾಮವನ್ನು ಹೊರತುಪಡಿಸಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸೋಯಾ ಸಾಸನ್ನು ಅವಲಂಬಿಸುವ ತಪ್ಪನ್ನು ಮಾಡಬೇಡಿ.
ಸೋಯಾ ಸಾಸ್ ನ ಅನಾನುಕೂಲಗಳು
ಅನಾರೋಗ್ಯಕರ(Unhealthy) ಅಂಶ ಕೂಡ ಇದರಲ್ಲಿದೆ
ಸೋಯಾ ಸಾಸ್ ಅಜಿನೊಮೊಟೊದಂತಹ ಕೆಲವು ಅನಾರೋಗ್ಯಕರ ವಸ್ತುಗಳನ್ನು ಸಹ ಹೊಂದಿರುತ್ತೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಸೋಯಾ ಸಾಸನ್ನು ಅತಿಯಾಗಿ ಸೇವಿಸಬೇಡಿ. ಇದು ಅನಾರೋಗ್ಯವನ್ನುಂಟು ಮಾಡುತ್ತೆ.
ಅಲರ್ಜಿ ಸಮಸ್ಯೆ
ಸೋಯಾ ಸಾಸ್ ನ ಅತಿಯಾದ ಬಳಕೆಯು ಅಲರ್ಜಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ರಾಷೆಸ್, ತಲೆನೋವು(Head ache), ಬೆವರುವಿಕೆ, ರಕ್ತದೊತ್ತಡದ ಸಮಸ್ಯೆಗಳಿಗೆ ಕಾರಣವಾಗಬಹುದು. ಸೋಯಾ ಸಾಸ್ ಆರೋಗ್ಯಕ್ಕೆ ಹಾನಿಕಾರಕವಾದ ಹಿಸ್ಟಮೈನ್ ಹೊಂದಿರುತ್ತೆ.
ಥೈರಾಯ್ಡ್(Thyroid) ಸಮಸ್ಯೆ
ಥೈರಾಯ್ಡ್ ರೋಗಿಗಳು ಸೋಯಾ ಸಾಸ್ ಸೇವಿಸೋದನ್ನು ತಪ್ಪಿಸಬೇಕು. ಯಾಕಂದ್ರೆ ಇದು ಥೈರಾಯ್ಡ್ ಹೆಚ್ಚಿಸುವ ಅಂಶಗಳನ್ನು ಸಹ ಹೊಂದಿರುತ್ತೆ. ಆದ್ದರಿಂದ ಸೋಯಾ ಸಾಸನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ.