ಲೈಂಗಿಕವಾಗಿ ಹರಡುವ ಸೋಂಕು (STD) ಅಥವಾ ಎಸ್ಟಿಡಿ ಎಂಬುದು ಲೈಂಗಿಕ ಸಂಭೋಗದ ಸಮಯದಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ಸೋಂಕು. ಈ ಲೈಂಗಿಕ ರೋಗಗಳ (sexual transmitted syndrome) ಪರಿಣಾಮಗಳು ತುಂಬಾ ಭಯಾನಕವಾಗಿರುತ್ತವೆ, ಆದ್ದರಿಂದ ಅವುಗಳನ್ನು ಲಘುವಾಗಿ ಪರಿಗಣಿಸಬಾರದು. ಈ ಸೋಂಕಿನ ಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಲೈಂಗಿಕ ಸೋಂಕು ಎರಡು ರೀತಿಯಲ್ಲಿ ಸಂಭವಿಸುತ್ತದೆ, ಒಂದು ಅಸುರಕ್ಷಿತ ಲೈಂಗಿಕತೆಯ (unsafe sex) ಮೂಲಕ ಮತ್ತು ಇನ್ನೊಂದು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಲೈಂಗಿಕ ಸೋಂಕುಗಳನ್ನು ಹೊಂದಿರುತ್ತಾರೆ. ಸಂಗಾತಿಗಳಲ್ಲಿ ಒಬ್ಬರಿಗೆ ಸೋಂಕು ಇದ್ದರೆ, ಇನ್ನೊಬ್ಬ ಸಂಗಾತಿಯು ಸಂಬಂಧವನ್ನು ಹೊಂದುವ ಮೂಲಕ ಸೋಂಕಿಗೆ ಒಳಗಾಗುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ವಿಶ್ವಾದ್ಯಂತ ಪ್ರತಿದಿನ ಒಂದು ಮಿಲಿಯನ್ ಜನರು ಲೈಂಗಿಕವಾಗಿ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ. ಎಚ್ಐವಿ / ಏಡ್ಸ್, ಸ್ಕೆನ್ಕ್ರೋಯ್ಡ್, ಸಿಫಿಲಿಸ್, ಗೊನೊರಿಯಾ, ಮೈಕೊಪ್ಲಾಸ್ಮಾ ಜೆನೆಟಲಿಯಂ, ಕಾಂಡಿಲೋಮಾ, ಟ್ರೈಕೊಮೋನಿಯಾಸಿಸ್, ಹ್ಯೂಮನ್ ಪ್ಯಾಪಿಲೋಮಾವೈರಸ್ ಸೋಂಕು, ಹರ್ಪಿಸ್ ಜೆನೆಟಲಿಸ್, ಹೆಪಟೈಟಿಸ್, ಪ್ಯೂಬಿಕ್ ಲೈಸ್ ಸೇರಿದಂತೆ ಅನೇಕ ರೀತಿಯ ಲೈಂಗಿಕ ಸೋಂಕುಗಳಿವೆ.
ಲೈಂಗಿಕ ಸೋಂಕಿನಲ್ಲಿ, ಕೆಲವು ರೋಗಗಳನ್ನು ಔಷಧಿಗಳಿಂದ ಗುಣಪಡಿಸಿದರೆ, ಮತ್ತೆ ಕೆಲವು ರೋಗಗಳನ್ನು ಗುಣಪಡಿಸಲಾಗುವುದಿಲ್ಲ. ಕೆಲವು ಲೈಂಗಿಕ ಕಾಯಿಲೆಗಳನ್ನು ಜೀವನಪರ್ಯಂತ ಸಹಿಸಬೇಕಾಗಿ ಬರುತ್ತೆ. ಕೆಲವು ರೋಗಿಗಳು ಬಹಳ ಸಮಯದ ನಂತರ ವೈದ್ಯರ ಬಳಿಗೆ ಹೋಗುತ್ತಾರೆ, ಸಮಸ್ಯೆ ಗಂಭೀರವಾದರೆ ಪ್ರಾಣ ಸಹ ಹೋಗಬಹುದು. ಈ ಲೇಖನದಲ್ಲಿ, ನಾವು ಲೈಂಗಿಕ ಕಾಯಿಲೆಗಳ ಬಗ್ಗೆ ವಿಶೇಷವಾಗಿ ಪುರುಷರಲ್ಲಿ ಕಂಡುಬರುವ ಲೈಂಗಿಕ ಸೋಂಕಿನ ಬಗ್ಗೆ ಮಾಹಿತಿ ನೀಡುತ್ತೇವೆ.
ಪುರುಷರಲ್ಲಿ ಲೈಂಗಿಕ ಸೋಂಕಿನ ಲಕ್ಷಣಗಳು: ಪುರುಷರಲ್ಲಿ ಲೈಂಗಿಕ ಸೋಂಕಿನ ಮೊದಲ ಲಕ್ಷಣವೆಂದರೆ ಜನನಾಂಗಗಳಲ್ಲಿ ತುರಿಕೆ ಮತ್ತು ನೋವು. ಅಲ್ಲದೇ ಪದೇ ಪದೇ ಮೂತ್ರವಿಸರ್ಜನೆ ಅಥವಾ ಮೂತ್ರ ವಿಸರ್ಜಿಸುವ ಬಯಕೆ, ಮೂತ್ರ ವಿಸರ್ಜಿಸುವಾಗ ಅಥವಾ ಮಲವಿಸರ್ಜನೆ ಮಾಡುವಾಗ ಕೈಕಾಲುಗಳಲ್ಲಿ ನೋವು (pain in legs), ಜೊತೆಗೆ ಜನನಾಂಗಗಳಿಂದ ನಿರಂತರ ವಿಸರ್ಜನೆ ಕೂಡ ಲೈಂಗಿಕ ಸೋಂಕಿನ ಲಕ್ಷಣವಾಗಿರಬಹುದು.
ಜನನಾಂಗಗಳ ಮೇಲೆ ಗುಳ್ಳೆಗಳು ಅಥವಾ ಗಾಯಗಳು ಸಹ ಲೈಂಗಿಕ ಸೋಂಕಿನ ಲಕ್ಷಣವಾಗಿರಬಹುದು. ಅನೇಕ ಬಾರಿ ರೋಗಿಗಳು ಈ ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಸಮಸ್ಯೆ ಹೆಚ್ಚಾಗುತ್ತದೆ. ನೀವು ಅಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ವೈದ್ಯರನ್ನು (consult your doctor) ಭೇಟಿ ಮಾಡಿ.
ಲೈಂಗಿಕ ಅಪಸಾಮಾನ್ಯ ಕ್ರಿಯೆಗೆ ಕಾರಣವೇನು?: ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮತ್ತು ಈ ಸಮಯದಲ್ಲಿ ಕಾಂಡೋಮ್ ಬಳಸದ ಪುರುಷರು ಲೈಂಗಿಕ ಕಾಯಿಲೆಗಳ ಹೆಚ್ಚಿನ ಅಪಾಯದಲ್ಲಿದ್ದಾರೆ. ಒಬ್ಬರು ಬಳಸಿದ ಸೂಜಿಯನ್ನು ಮತ್ತೊಬ್ಬರು ಉಪಯೋಗಿಸುವ ಮೂಲಕವೂ ಸೋಂಕು ಹರಡಬಹುದು. ಕೂದಲು ಅಥವಾ ಗಡ್ಡವನ್ನು ಕತ್ತರಿಸುವಾಗ, ಇನ್ನೊಬ್ಬರು ಬಳಸಿದ ಬ್ಲೇಡ್, ರೇಜರ್ ಬಳಸುವುದರಿಂದಲೂ ಇದು ಹರಡಬಹುದು. ಹಾಗಾಗಿ ಅವುಗಳನ್ನು ಚೆನ್ನಾಗಿ ಕ್ಲೀನ್ ಮಾಡಿ ಬಳಸಬೇಕು.
ಲೈಂಗಿಕವಾಗಿ ಹರಡುವ ರೋಗಗಳ ತಡೆಗಟ್ಟುವಿಕೆ ಹೇಗೆ?
ನಿಮ್ಮ ಸಂಗಾತಿಯೊಂದಿಗೆ ಮಾತ್ರ ದೈಹಿಕ ಸಂಬಂಧ ಹೊಂದಿರಿ. ಸಂಬಂಧವನ್ನು ಬೆಳೆಸುವಾಗ ಕಾಂಡೋಮ್ ಬಳಸಲು ಮರೆಯದಿರಿ.ಇ
ಬ್ಬರಿಗೂ ಯಾವುದೇ ಲೈಂಗಿಕ ಕಾಯಿಲೆ ಇದೆಯೇ? ಅನ್ನೋದನ್ನು ಪರೀಕ್ಷಿಸಿ.
ಲೈಂಗಿಕ ಕ್ರಿಯೆಯ (sex) ಮೊದಲು ಮತ್ತು ನಂತರ ಜನನಾಂಗಗಳನ್ನು ಸಾಬೂನಿನಿಂದ ತೊಳೆಯಿರಿ.
ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ತಪ್ಪಿಸಿ, ಅವರ ಲೈಂಗಿಕ ಆರೋಗ್ಯ ಹೇಗಿರುತ್ತದೆ ಎಂದು ನಿಮಗೆ ತಿಳಿದಿಲ್ಲ.
ಮತ್ತೊಬ್ಬರು ಬಳಸಿದ ಒಳ ಉಡುಪುಗಳನ್ನು (innerwear) ಧರಿಸಬೇಡಿ.