ಮಂಗಳಮುಖಿಯರಿಗೂ ಪ್ರತಿ ತಿಂಗಳು ಋತುಸ್ರಾವ ಆಗುತ್ತಾ?

First Published | Aug 24, 2023, 5:09 PM IST

ಋತುಚಕ್ರದ ವಿಷಯಕ್ಕೆ ಬಂದಾಗ, ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಮಾತ್ರ ಯೋಚನೆ ಮಾಡಲಾಗುತ್ತೆ. ಋತುಚಕ್ರ ಅಂದಮೇಲೆ ಅದು ಮಹಿಳೆಯರಿಗೆ ತಾನೆ ಆಗೋದು ಎಂದು ನೀವೂ ಯೋಚಿಸಬಹುದು. ಆದರೆ ಹುಡುಗಿಯರು ಮತ್ತು ಮಹಿಳೆಯರಿಗಿಂತ ಹೆಚ್ಚಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿರುವ ತೃತೀಯ ಲಿಂಗಿಗಳ ದೊಡ್ಡ ಸಮುದಾಯವೆ ಇದೆ. 
 

ಮಹಿಳೆ ಅಂದ ಮೇಲೆ ಒಂದು ವಯಸ್ಸಿಗೆ ಬಂದಾಗ ಋತುಮತಿಯಾಗೋದು (menstruation), ಅಲ್ಲಿಂದ ಪ್ರತಿತಿಂಗಳು 25 ರಿಂದ 30 ದಿವಗಳಿಗೊಮ್ಮೆ 5 ದಿನಗಳ ಕಾಲ ಋತುಸ್ರಾವ ಆಗೋದು ಸಾಮಾನ್ಯ. ಆದರೆ ಮಹಿಳೆಯರಿಗೆ ಮಾತ್ರನಾ ಇದೆಲ್ಲಾ ಆಗೋದು? ಖಂಡಿತಾ ಅಲ್ಲ, ಇದನ್ನ ಅನುಭವಿಸುವ ಮತ್ತೊಂದು ಗುಂಪು ಸಹ ಇದೆ. 
 

ಋತುಚಕ್ರದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮಹಿಳೆಯರು ಮತ್ತು ಹುಡುಗಿಯರು ಪ್ರತಿತಿಂಗಳು ಅನುಭವಿಸುವ ಯಾತನೆ ನೆನಪಾಗುತ್ತೆ. ಆದರೆ ಮಹಿಳೆಯರಿಗೆ ಮಾತ್ರವಲ್ಲದೇ, ತೃತೀಯ ಲಿಂಗಿಗಳಿಗೂ (transgender) ಸಹ ಋತುಸ್ರಾವ ಆಗುತ್ತೆ, ಅದರ ಬಗ್ಗೆ ಮಾತ್ರ ಯಾರೂ ಸಹ ಮಾತನಾಡೋದಿಲ್ಲ. ಮಂಗಳಮುಖಿಯರಿಗೂ ಋತುಸ್ರಾವವಾಗುತ್ತದೆಯೇ? ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಬಂದಿರಬೇಕು.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

Latest Videos


ಮಹಿಳೆಯರಂತೆ, ಅವರಿಗೂ ಸಮಸ್ಯೆಗಳಿವೆ: ಕೇವಲ ಮಹಿಳೆಯರು ಮಾತ್ರ ಋತುಸ್ರಾವದ ನೋವನ್ನು ಅನುಭವಿಸೋದಿಲ್ಲ. ಜೊತೆಗೆ ತೃತೀಯ ಲಿಂಗಿ ಪುರುಷರು ಮತ್ತು ಗರ್ಭಾಶಯ, ಯೋನಿ, ಫೆಲೋಪಿಯನ್ ನಾಳಗಳು ಮತ್ತು ಅಂಡಾಶಯಗಳನ್ನು ಹೊಂದಿರುವ ಲಿಂಗ ವ್ಯತ್ಯಾಸಗಳನ್ನು ಹೊಂದಿರುವ ಜನರು ಸಹ ಋತುಸ್ರಾವವನ್ನು (periods) ಹೊಂದಿರುತ್ತಾರೆ. ಕೆಲವು  ತೃತೀಯ ಲಿಂಗಿಗಳು ಸಹ ಮಹಿಳೆಯರಂತೆ ಋತುಚಕ್ರವನ್ನು ಹೊಂದುತ್ತಾರೆ. ಆದರೆ ಇದು ಅವರಿಗೆ ಕಠಿನ ಅನುಭವವನ್ನು ನೀಡುತ್ತೆ. 

ಚಿಕ್ಕ ವಯಸ್ಸಿನಲ್ಲಿಯೇ ಟೆಸ್ಟೋಸ್ಟೆರಾನ್ ತೆಗೆದುಕೊಳ್ಳಲು ಪ್ರಾರಂಭಿಸುವುದು: ಮಾಹಿತಿಯ ಪ್ರಕಾರ, ತೃತೀಯ ಲಿಂಗಿಗಳು ಚಿಕ್ಕ ವಯಸ್ಸಿನಲ್ಲಿಯೇ ಲಿಂಗ ಸಂಬಂಧಿತ ದೈಹಿಕ ಬದಲಾವಣೆಗಳನ್ನು ತಡೆಗಟ್ಟಲು ಹಾರ್ಮೋನುಗಳ ಬದಲಾವಣೆಗಳು ಅಥವಾ ಲಿಂಗ ಬದಲಾವಣೆಗಳಿಗೆ ಒಳಗಾಗುತ್ತಾರೆ.  ಇನ್ನೂ, ಕೆಲವು ತೃತೀಯ ಲಿಂಗಿಗಳು ಚಿಕ್ಕ ವಯಸ್ಸಿನಲ್ಲಿಯೇ ಟೆಸ್ಟೋಸ್ಟೆರಾನ್ (testosterone) ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಅವರಿಗೆ ಋತುಚಕ್ರ ಬರುವುದಿಲ್ಲ. 

ಮಾಹಿತಿಯ ಪ್ರಕಾರ, ಒಂದು ವೇಳೆ ತೃತೀಯ ಲಿಂಗಿಗಳು ಟೆಸ್ಟೋಸ್ಟೆರಾನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಮತ್ತೆ ಋತುಚಕ್ರವನ್ನು ಪಡೆಯಲು ಪ್ರಾರಂಭಿಸುತ್ತಾರೆ.  ಋತುಚಕ್ರವು ಶಾಶ್ವತವಾಗಿ ನಿಲ್ಲುವ ಮೊದಲು ಕೆಲವು ಬದಲಾವಣೆಗಳು ಇರಬಹುದು. ಆದರೆ ತೃತೀಯ ಲಿಂಗಿ ಮಹಿಳೆಯರಿಗೆ ಋತುಚಕ್ರ ಉಂಟಾಗೋದು ಸಾಮಾನ್ಯ. 
 

ಇದು ಮಾತ್ರವಲ್ಲ, ತೃತೀಯ ಲಿಂಗಿಗಳು ಮೂಡ್ ಸ್ವಿಂಗ್ (mood swing) ಹೊಂದಿರುತ್ತಾರೆ. ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ಯುನೆಸ್ಕೋ ವರದಿಯು 31 ಪ್ರತಿಶತದಷ್ಟು ತೃತೀಯ ಲಿಂಗಿಗಳಳಿಗೆ ಋತುಸ್ರಾವವಾಗುತ್ತೆ, ಆದರೆ ಈ ಬಗ್ಗೆ ಅವರಿಗೆ ತಿಳಿದಿಲ್ಲ.  
 

ತೃತೀಯ ಲಿಂಗಿಗಳಲ್ಲಿ ಹೆಚ್ಚಿನವರು ಮಹಿಳೆಯರಂತೆಯೇ ಋತುಸ್ರಾವವನ್ನು ಹೊಂದಿರುತ್ತಾರೆ. ಇವರು ತೃತೀಯ ಲಿಂಗಿ ಮಹಿಳೆಯರು. ಆದಾಗ್ಯೂ, ಅವರ ದೇಹದಲ್ಲಿ ಕೆಲವು ವಿಷಯಗಳಿವೆ, ಇವು ಮಹಿಳೆಯರಿಗಿಂತ ವಿಭಿನ್ನವಾಗಿರುತ್ತೆ, ಈ ಕಾರಣದಿಂದಾಗಿ ಅವರು ತಮ್ಮನ್ನು ಟ್ರಾನ್ಸ್ ಎಂದು ಕರೆದುಕೊಳ್ಳುತ್ತಾರೆ.  

click me!