ಅನಗತ್ಯ ಗರ್ಭಧಾರಣೆ ತಪ್ಪಿಸಲು ಕಾಪರ್-ಟಿ ಬಳಸೋರು ಇದನ್ನ ಓದಲೇಬೇಕು!

First Published | Aug 23, 2023, 7:40 PM IST

ಅನಗತ್ಯ ಗರ್ಭಧಾರಣೆ ತಪ್ಪಿಸಲು ಕಾಪರ್-ಟಿ ಸುರಕ್ಷಿತ ಮಾರ್ಗವೆಂದು ಪರಿಗಣಿಸಲಾಗಿದೆ. ಒಮ್ಮೆ ಇದನ್ನು ಅಳವಡಿಸಿದ ನಂತರ, ದೀರ್ಘಕಾಲದವರೆಗೆ ಗರ್ಭಧಾರಣೆಯ ಭಯವಿರೋದಿಲ್ಲ, ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳನ್ನು ಸಹ ಕಾಣಬಹುದು.
 

ಅನಗತ್ಯ ಗರ್ಭಧಾರಣೆಯನ್ನು (to avoid unwanted pregnancy) ತಪ್ಪಿಸಲು, ಮಹಿಳೆಯರಿಗೆ ಜನನ ನಿಯಂತ್ರಣ ಮಾತ್ರೆಗಳು, ಕಾಂಡೊಮ್ ಸೇರಿ ವಿವಿಧ ಆಯ್ಕೆಗಳಿವೆ, ಆದರೆ ಇಂದಿಗೂ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಮಹಿಳೆಯರು ಕಾಪರ್ ಟೀಯನ್ನು ಉತ್ತಮ ಮಾರ್ಗ ಎಂದು ಬಳಸುತ್ತಾರೆ. ಹಾಗೇ ನೋಡಿದ್ರೆ, ಕಾಪರ್-ಟಿ ಬಳಕೆ ಕೈಗೆಟುಕುವ ಮತ್ತು ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಇದನ್ನ ಅಳವಡಿಸಿದ್ರೆ ಮಹಿಳೆಯರಿಗೆ ಮೂರು ಅಥವಾ ಐದು ವರ್ಷಗಳವರೆಗೆ ಅನಗತ್ಯ ಗರ್ಭಧಾರಣೆಯ ಭಯವಿರುವುದಿಲ್ಲ.ಆದರೆ ಕಾಪರ್ -ಟಿ ಬಳಸೋದರಿಮ್ದ ಅಡ್ಡಪರಿಣಾಮಗಳು ಇವೆ. 

ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಯಾವುದೇ ಮಹಿಳೆ ಕಾಪರ್-ಟಿ (Copper T) ಬಳಸೋದಾದರೆ, ಅದಕ್ಕೂ ಮೊದಲು ಅದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ. ಅಲ್ಲದೆ, ಕಾಪರ್-ಟಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ತಜ್ಞರು ಈ ಬಗ್ಗೆ ಏನು ಹೇಳುತ್ತಾರೆಂದು ತಿಳಿಯೋಣ.
 

Tap to resize

ಕಾಪರ್-ಟಿ ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?
ಕಾಪರ್-ಟಿ ಎಂದರೆ ಇಂಗ್ಲಿಷ್ ಅಕ್ಷರ 'ಟಿ' ಆಕಾರದಲ್ಲಿರುವ ಗರ್ಭನಿರೋಧಕ (contraceptive device)ಸಾಧನ. ವೈದ್ಯರು ಇದನ್ನು ಗರ್ಭಾಶಯದ ಒಳಗೆ ಅಳವಡಿಸುತ್ತಾರೆ. ಈ ಸಾಧನವನ್ನು ಅನ್ವಯಿಸಿದ ನಂತರ, ವೀರ್ಯಾಣುವಿನ ಚಲನಶೀಲತೆ ಕಡಿಮೆಯಾಗುತ್ತದೆ, ಇದು ಅನಗತ್ಯ ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಕಾಪರ್-ಟಿ ಬಗ್ಗೆ ತಜ್ಞರು ಏನು ಹೇಳುತ್ತಾರೆ
ಕಾಪರ್-ಟಿ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಇವೆಯೇ? ಎಂದು ತಜ್ಞರನ್ನು ಕೇಳಿದ್ರೆ ಅವರು ಈ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಾರೆ. ಕಾಪರ್-ಟಿ ಅಳವಡಿಸೋದರಿಂದ, ಹೊಟ್ಟೆಯ ಕೆಳಭಾಗದಲ್ಲಿ (ಸೊಂಟ) ನೋವು ಉಂಟಾಗಬಹುದು. ಇದಲ್ಲದೆ, ಋತುಚಕ್ರದ ಮಾದರಿಯಲ್ಲಿ ಬದಲಾವಣೆ ಇರಬಹುದು. ಮೂತ್ರದ ಸೋಂಕು ಬರುವ ಸಾಧ್ಯತೆಗಳೂ ಇರುತ್ತವೆ. ಆದರೆ ಎಲ್ಲರಿಗೂ ಅಥವಾ ಎಲ್ಲಾ ಸಂದರ್ಭದಲ್ಲೂ ಈ ಸಮಸ್ಯೆ ಕಾಡುವ ಸಾಧ್ಯತೆ ಇಲ್ಲ.

ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು
ಕಾಪರ್-ಟಿಯಿಂದಾಗಿ ಕೆಲವು ಸಂದರ್ಭಗಳಲ್ಲಿ, ಮಹಿಳೆಯರು ಅನಾನುಕೂಲತೆಯನ್ನು ಅನುಭವಿಸಬಹುದು ಅಥವಾ ರಕ್ತಸ್ರಾವದ ಸಮಸ್ಯೆಗಳನ್ನು (bleeding problem) ಹೊಂದಿರಬಹುದು. ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ವೈದ್ಯರನ್ನು ಸಂಪರ್ಕಿಸಬೇಕು. ಕಾಪರ್-ಟಿ ಪರಿಪಕ್ವತೆಯ ಅವಧಿ 3 ರಿಂದ 5 ವರ್ಷಗಳವರೆಗೆ ಇದ್ದರೂ, ಇದು ಸಾಧನದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಉತ್ತಮ ವೈದ್ಯರ ಸಲಹೆಯೊಂದಿಗೆ ಮಾತ್ರ ಕಾಪರ್-ಟಿ ಬಳಸಿ.

ಕಾಪರ್-ಟಿ ಹೊರತೆಗೆಯುವ ಪ್ರಕ್ರಿಯೆ
ಕಾಪರ್-ಟಿ ಅನ್ನು ಒಮ್ಮೆ ಅಳವಡಿಸಿದ ನಂತರ ಮೂರರಿಂದ ಐದು ವರ್ಷಗಳವರೆಗೆ ಬಾಳಿಕೆ ಬರುತ್ತೆ, ಆದರೆ ಈ ಸಮಯದ ಮಧ್ಯದಲ್ಲೂ ಸಹ ಕಾಪರ್-ಟಿ ಅನ್ನು ಸಹ ತೆಗೆದುಹಾಕಬಹುದು. ಅವಧಿ ಪೂರ್ಣಗೊಳ್ಳುವ ಮೊದಲು ಅಥವಾ ನಂತರ ನೀವು ಕಾಪರ್-ಟಿ ತೆಗೆದುಹಾಕಬೇಕಾದರೆ, ವೈದ್ಯರನ್ನು ಭೇಟಿ ಮಾಡುವ ಮೂಲಕ ಇದನ್ನು ತೆಗೆದು ಹಾಕಬಹುದು. 

Latest Videos

click me!