Liquid Diet: ಕ್ರಿಕೆಟಿಗ ಶೇನ್ ವಾರ್ನ್‌ ಪ್ರಾಣಕ್ಕೆ ಕುತ್ತಾಯಿತಾ ಇದು?

Published : Apr 08, 2025, 01:20 PM ISTUpdated : Apr 08, 2025, 01:26 PM IST

ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಲೆಜೆಂಡರಿ ಎಂದೇ ಖ್ಯಾತರಾದ ಸ್ಪಿನ್ ಬೌಲರ್ ಶೇನ್ ವಾರ್ನ್ ಸಾಯಲೇನು ಕಾರಣ ಎನ್ನೋದಿನ್ನೂ ನಿಗೂಢ. ಆದರೆ, ಕೊನೆಯುಸಿರೆಳೆಯುವ ಮುನ್ನ ಲಿಕ್ವಿಡ್ ಡಯಟ್‌ನಲ್ಲಿದ್ದರು. ಏನದು?   

PREV
16
Liquid Diet: ಕ್ರಿಕೆಟಿಗ ಶೇನ್ ವಾರ್ನ್‌ ಪ್ರಾಣಕ್ಕೆ ಕುತ್ತಾಯಿತಾ ಇದು?

ಆಸ್ಟ್ರೇಲಿಯದ ಲೆಜೆಂಡರಿ ಕ್ರಿಕೆಟಿಗ, ಲೆಗ್ ಸ್ಪಿನ್‌ (Leg Spin)ನಲ್ಲಿ ಇತಿಹಾಸ ಸೃಷ್ಟಿಸಿದ ಶೇನ್ ವಾರ್ನ್ (Shane Warne)ಗೆ ಇನ್ನೂ ಸಾಯುವ ವಯಸ್ಸಾಗಿರಲಿಲ್ಲ. 52 ವರ್ಷವಿರುವಾಗಲೇ ಥಾಯ್ಲೆಂಡ್ (Thailand)ನಲ್ಲಿ ಅಸುನೀಗಿದರು.

26
Image Credit: Getty Images

ಸಾವಿನ ಕಾರಣ ಸ್ಪಷ್ಟವಾಗಿ ಇಲ್ಲದೇ ಹೋದರೂ, ಶವಪರೀಕ್ಷೆ ವರದಿ ಪ್ರಕಾರ ಅವರದ್ದು ಸಹಜ ಸಾವು. ಆದರೆ, ಸ್ಪಿನ್ ಮಾಸ್ಟರ್ ತೀವ್ರ ಲಿಕ್ವಿಡ್ ಡಯಟ್ (ದ್ರವ ಆಹಾರ ಮಾತ್ರ) (Liquid Diet) ಆರಂಭಿಸಿದ್ದರು. ಇದೂ ಅವರ ಸಾವಿಗೆ ಇರಬಹುದು ಕಾರಣವೆಂದು ಹೆಲ್ತ್ ಎಕ್ಸ್‌ಪರ್ಟ್‌ಗಳು (Health Experts) ಅಭಿಪ್ರಾಯಪಟ್ಟಿದ್ದರು. 

36

ಹೆಚ್ಚುತ್ತಿದ್ದ ದೇಹ ತೂಕದ ಬಗ್ಗೆ ಶೇನ್ ವಾರ್ನ್‌ಗೆ ಸಿಕ್ಕಾಪಟ್ಟೆ ಆತಂಕವಿತ್ತಂತೆ. ಅದಕ್ಕೆ ಆಹಾರ ತಜ್ಞರ ಸಲಹೆ ಮೇರೆಗೆ ಲಿಕ್ವಿಡ್ ಡಯಟ್ ಶುರು ಮಾಡಿಕೊಂಡಿದ್ದರು.

46

.'ಆಪರೇಷನ್ ಷ್ರೆಡ್ ಶುರುವಾಗಿದೆ. ಹಲವು ವರ್ಷಗಳ ಹಿಂದಿನ ಆಕಾರಕ್ಕೆ ಮರಳಲಿದ್ದೇನೆ!' ಎಂದು ಸಾಯೋ ಕೆಲವು ಸಮಯದ ಮುನ್ನ ಟ್ವೀಟ್ ಮಾಡಿದ್ದರು ಈ ಕ್ರಿಕೆಟಿಗ. 

56

ಲಿಕ್ವಿಡ್ ಡಯಟ್ ವಾರ್ನ್‌ಗೆ ಹೊಸತಲ್ಲ. ಕೋವಿಡ್‌ (Covid 19) ಅವರನ್ನು ಕಾಡಿತ್ತು. ಇಮ್ಯುನಿಟಿ (Immunity) ದುರ್ಬಲವಾದಾಗ ಲಿಕ್ವಿಡ್ ಡಯಟ್ ಮಾಡಿದ್ದರು. 

66
Image Credit: Getty Images

ದೀರ್ಘಾವಧಿಯ ವಾರ್ನ್ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್, ಶೇನ್ ತೂಕ ಇಳಿಸಿಕೊಳ್ಳಲು ಮತ್ತು ಸಂಪೂರ್ಣ ಫಿಟ್ನೆಸ್ (Fitness) ಅನ್ನು ಮರಳಿ ಪಡೆಯಲು ಡಯಟ್ ಮಾಡುತ್ತಿದ್ದಾರೆ ಎಂದಿದ್ದರು. ಥಾಯ್ಲೆಂಡ್ ಪ್ರವಾಸದಲ್ಲಿದ್ದ ಶೇನ್ ಮೃತರಾದರು. ಥಾಯ್ಲೆಂಡ್‌ನ ವಿಲ್ಲಾ (Villa)ದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು  ಕಂಡುಬಂದಿದ್ದರು. 

Read more Photos on
click me!

Recommended Stories