ತೂಕ ಇಳಿಸಿಕೊಳ್ಳಲು ನೀವು ಬ್ರೌನ್ ಶುಗರ್ ಸೇವಿಸ್ತೀರಾ? ನಿಜಾ ಏನು ಗೊತ್ತಾ?

First Published | Nov 25, 2023, 4:58 PM IST

ತೂಕ ಇಳಿಸಲು ಜನರು ಏನೇನೋ ಟ್ರಿಕ್ಸ್, ಟಿಪ್ಸ್ ಟ್ರೈ ಮಾಡುತ್ತಲೇ ಇರುತ್ತಾರೆ. ಅವುಗಳಲ್ಲಿ ಒಂದು ಬ್ರೌನ್ ಶುಗರ್ ಬಳಸೋದು. ನೀವು ಸಹ ತೂಕ ಇಳಿಸಲು ಬಿಳಿ ಸಕ್ಕರೆಯ ಬದಲು ಕಂದು ಸಕ್ಕ ತಿನ್ನುತ್ತೀರಾ? ಹಾಗಿದ್ರೆ ಈ ವಿಷ್ಯಗಳನ್ನು ನೀವು ತಿಳಿಯಲೇಬೇಕು. 
 

ಈ ಮಾಡರ್ನ್ ಯುಗದಲ್ಲಿ ಪ್ರತಿಯೊಬ್ಬರೂ ತಾವು ಸಣ್ಣಗಿರಬೇಕು (weight loss) ಎಂದು ಬಯಸುತ್ತಾರೆ. ಅದಕ್ಕಾಗಿ ತೂಕ ಇಳಿಸಲು, ಜಿಮ್ (Gym), ವರ್ಕೌಟ್ (Workout), ಡಯಟ್ (Diet) ಎಂದೆಲ್ಲಾ ಬೇರೆ, ಬೇರೆ ಟೆಕ್ನಿಕ್ ಗಳನ್ನು ಬಳಸುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚೆಗೆ ಸಕ್ಕರೆಯನ್ನು (Sugar) ಅವಾಯ್ಡ್ ಮಾಡಲು ಬೇರೆ ರೀತಿಯ ಆಹಾರಕ್ರಮಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. 
 

ತೂಕ ಇಳಿಸುವ ಜರ್ನಿಯಲ್ಲಿ ಜನರು ಸಕ್ಕರೆ ತಿನ್ನುವುದನ್ನು ಅವಾಯ್ಡ್ ಮಾಡುತ್ತಾರೆ. ಏಕೆಂದರೆ ಸಕ್ಕರೆಯಲ್ಲಿ ಕ್ಯಾಲೊರಿಗಳ ಪ್ರಮಾಣವು ಹೆಚ್ಚಾಗಿರುತ್ತದೆ ಮತ್ತು ಅದು ದೇಹದಲ್ಲಿ ವೇಗವಾಗಿ ಸಂಗ್ರಹವಾಗುತ್ತದೆ ಎನ್ನುವ ಕಾರಣಕ್ಕಾಗಿ, ಜನರು ಬ್ರೌನ್ ಶುಗರ್ (brown sugar) ಅಥವಾ ಕಂದು ಸಕ್ಕರೆಯನ್ನು ಆರೋಗ್ಯಕರವೆಂದು ಪರಿಗಣಿಸುತ್ತಾರೆ. ಹಾಗಾಗಿ ಅದನ್ನೇ ಸೇವಿಸುತ್ತಾರೆ.
 

Latest Videos


ಬ್ರೌನ್ ಶುಗರ್ ನಿಜವಾಗಿಯೂ ತೂಕ ಇಳಿಸಲು ಸಹಾಯ ಮಾಡುತ್ತದೆಯೇ? ಅಥವಾ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುತ್ತದೆಯೇ? ಇದು ನಿಜವಾಗಿಯೂ ಬೊಜ್ಜನ್ನು ನಿಯಂತ್ರಿಸಲು (control obesity) ಸಹಾಯ ಮಾಡುತ್ತದೆಯೇ? ಇದಕ್ಕೆ ಉತ್ತರವನ್ನು ತಜ್ಞರಿಂದ ತಿಳಿದುಕೊಳ್ಳೋಣ.  ಇದರ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ನೋಡೋಣ. 

ಬ್ರೌನ್ ಶುಗರ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆಯೇ?
ಕಬ್ಬಿನ ರಸ ಕುದಿಸಿದಾಗ, ಕ್ರಿಸ್ಟಲ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆವಾಗ, ಸಕ್ಕರೆಯ ರಚನೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ಕಂದು ಬಣ್ಣದ ದ್ರವ ರೂಪುಗೊಳ್ಳುತ್ತದೆ, ಅದನ್ನು ಕಾಕಂಬಿ ಎಂದು ಕರೆಯಲಾಗುತ್ತದೆ. ಅನೇಕ ಬಾರಿ ಅದನ್ನು ಬೇರ್ಪಡಿಸಿ ಸಕ್ಕರೆಯನ್ನು ಸಂಸ್ಕರಿಸಲಾಗುತ್ತದೆ (processed sugar). ಆದರೆ ಇನ್ನೊಂದು ವಿಧಾನದಲ್ಲಿ ಈ ಕಂದು ದ್ರವವನ್ನು ಅದಕ್ಕೆ ಸೇರಿಸಲಾಗುತ್ತದೆ, ಇದು ಕಂದು ಸಕ್ಕರೆಯನ್ನು ತಯಾರಿಸುತ್ತದೆ. 

ಬಿಳಿ ಸಕ್ಕರೆ ಯಾವುದೇ ಪೋಷಕಾಂಶಗಳನ್ನು ಹೊಂದಿಲ್ಲವಾದರೂ, ಮೊಲಾಸಿಸ್ ಮೆಗ್ನೀಸಿಯಮ್ ಸೆಲೆನಿಯಂನಂತಹ ಸಣ್ಣ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ. ಮತ್ತು ಇದರ ಲಾಭ ಪಡೆಯಲು, ನೀವು ಸಾಕಷ್ಟು ಸಕ್ಕರೆ ತಿನ್ನಬೇಕು.  ಆದರೆ ಈ ಸಕ್ಕರೆಯನ್ನು ಹೆಚ್ಚು ತಿನ್ನೋದು ಆರೊಗ್ಯಕ್ಕೆ ಹಾನಿಕಾರಕ. 
 

ತಜ್ಞರ ಪ್ರಕಾರ, ಕಂದು ಸಕ್ಕರೆಯು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಏಕೆಂದರೆ ನಿಮ್ಮ ದೇಹವು ಬಿಳಿ ಸಕ್ಕರೆಯಂತೆಯೇ ಕಂದು ಸಕ್ಕರೆಯನ್ನು ಸಂಸ್ಕರಿಸುತ್ತದೆ. ಎರಡೂ ಜಿಐ ಅನ್ನು ಹೊಂದಿವೆ ಅಂದರೆ ಗ್ಲೈಸೆಮಿಕ್ ಸೂಚ್ಯಂಕ ಸಹ ಸಮಾನವಾಗಿದೆ. ಎರಡೂ ಸಕ್ಕರೆಗಳನ್ನು ಸೇವಿಸಿದ ನಂತರ ರಕ್ತದ ಸಕ್ಕರೆ ಸಮಾನವಾಗಿ (blood sugar level) ಹೆಚ್ಚಾಗುತ್ತದೆ. ಅಂದರೆ, ಕಂದು ಸಕ್ಕರೆಯನ್ನು ಸ್ವಯಂ ತೃಪ್ತಿಗಾಗಿ ತಿನ್ನಬಹುದು. ಇದರಿಂದ ತೂಕ ಇಳಿಕೆ ಆಗೋದಂತೂ ಸುಳ್ಳು. ಆದ್ದರಿಂದ ನೀವು ತೂಕವನ್ನು ಕಾಪಾಡಿಕೊಳ್ಳಲು ಬಯಸಿದರೆ, ಕನಿಷ್ಠ ಸಕ್ಕರೆ ಸೇವಿಸಿ.

click me!