33 ವರ್ಷದ ಬಾಡಿ ಬಿಲ್ಡರ್‌ ಹೃದಯಾಘಾತದಿಂದ ನಿಧನ, ಮತ್ತೆ ಆತಂಕ ಹೆಚ್ಚಿಸಿದ ಜಿಮ್ ಕಸರತ್ತು!

Published : Nov 24, 2023, 04:31 PM IST

ಕೇವಲ 33 ವರ್ಷ. ಬಾಡಿಬಿಲ್ಡಿಂಗ್‌ನಲ್ಲಿ ಜಗತ್ ಪ್ರಸಿದ್ಧವಾಗಿದ್ದ. ಕಟ್ಟುಮಸ್ತಾದ ಬಾಡಿ ಬೆಳೆಸಿ ಎಲ್ಲರಿಗೂ ಮಾದರಿಯಾಗಿದ್ದ. ಸಾಮಾಜಿಕ ಮಾಧ್ಯಮದ ಮೂಲಕ ಹಲವರಿಗೆ ಬಾಡಿ ಬಿಲ್ಡಿಂಗ್ ಸಲಹೆ ನೀಡುತ್ತಿದ್ದ. ಜಿಮ್‌ನಲ್ಲಿ ಹಲವು ಸೆಲೆಬ್ರೆಟಿಗಳಿಗೆ ತರಬೇಟಿ ನೀಡುತ್ತಿದ್ದ ಈತನಿಗೆ ಹೃದಯಾಘಾತವಾಗಿದೆ.  

PREV
18
33 ವರ್ಷದ ಬಾಡಿ ಬಿಲ್ಡರ್‌ ಹೃದಯಾಘಾತದಿಂದ ನಿಧನ, ಮತ್ತೆ ಆತಂಕ ಹೆಚ್ಚಿಸಿದ ಜಿಮ್ ಕಸರತ್ತು!

ಜಿಮ್ ಕಸರತ್ತು ಹಲವರು ಬಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ಬಳಿಕ ಜಿಮ್ ವರ್ಕೌಟ್ ಕುರಿತು ಪರ ವಿರೋಧಗಳು ಎದ್ದಿತ್ತು. ಇದಕ್ಕೆ ಪೂರಕವಾಗಿ ಸತತವಾಗಿ ಹಲವು ಘಟನೆಗಳು ನಡೆದಿತ್ತು. ಇದೀಗ ಮತ್ತೊಂದು ಸೇರಿಕೊಂಡಿದೆ.
 

28

33 ವರ್ಷದ ಬಾಡಿ ಬಿಲ್ಡರ್, ಬ್ರೆಜಿಲ್‌ನ ಸಾವೋ ಪೌಲೋದ ಖ್ಯಾತ ಡಾಕ್ಟರ್ ರೊಡೋಲ್ಫ್ ಡ್ಯುರೇಟ್ ರಿಬೈರೋ ಡೋಸ್ ಸ್ಯಾಂಟೋಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

38

ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಸಂದರ್ಭದಲ್ಲೇ ಸ್ಯಾಂಟೋಸ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಅಷ್ಟರೊಳಗೆ ತೀವ್ರ ಹೃದಯಾಘಾತದಿಂದ ಸ್ಯಾಂಟೋಸ್ ಮೃತಪಟ್ಟಿದ್ದಾರೆ.

48

ನವೆಂಬರ್ 19 ರಂದು ಸ್ಯಾಂಟೋಸ್ ಆಸ್ಪತ್ಪೆಗೆ ದಾಖಲಾಗಿದ್ದಾರೆ. ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಿದರೂ ಸ್ಯಾಂಟೋಸ್ ಬದುಕುಳಿಯಲಿಲ್ಲ, ಅಪಾರ ಶಿಷ್ಯ ವರ್ಗ ಸಂತಾಪ ಸೂಚಿಸಿದೆ.

58

ಸ್ಯಾಂಟೋಸ್ ಸಾವಿಗೆ ಅನಾಬೋಲಿಕ್ ಸ್ಟಿರಾಯ್ಡ್ ಬಳಕೆ ಕಾರಣ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಸ್ಯಾಂಟೋಸ್‌ಗೆ ಚಿಕಿತ್ಸೆ ನೀಡಿದ ವೈದ್ಯರು ನಿರಾಕರಿಸಿದ್ದಾರೆ.

68

ಪಿತ್ತಜನಂಕಾಂಗದಲ್ಲಿ ಬೆಳೆದ ಹಾನಿಕಾರಕವಲ್ಲದ ಗೆಡ್ಡೆಯಲ್ಲಿ ರಕ್ತಸ್ರಾವವಾಗಿದೆ. ಇದೇ ವೇಳೆ ಹೃದಯ ಸ್ತಂಭನ ಎದುರಾಗಿದೆ. ತೀವ್ರ ಹೃದಯಾಘಾತದಿಂದ ಸ್ಯಾಂಟೋಸ್ ನಿರಾಕರಿಸಿದ್ದಾರೆ ಎಂದಿದ್ದಾರೆ.
 

78

ನ್ಯೂಟ್ರಿನಸ್ಟಿಸ್ ಆಗಿಯೂ ಸ್ಯಾಂಟೋಸ್ ಜನಪ್ರಿಯರಾಗಿದ್ದಾರೆ. ಜಿಮ್ ವರ್ಕೌಟ್ ವೇಳೆ ತೆಗೆದಕೊಲ್ಳಬೇಕಾದ ಆಹಾರ, ಜೀವನ ಕ್ರಮ ಸೇರಿದಂತೆ ಹಲವು ರೀತಿಯ ಸಲಹೆಗಳನ್ನು ನೀಡುತ್ತಿದ್ದರು.

88

ಸ್ಯಾಂಟೋಸ್ ಪತ್ನಿ ಕೂಡ ಬಾಡಿ ಬಿಲ್ಡರ್ ಆಗಿದ್ದಾರೆ. ಇಬ್ಬರೂ ಜಿಮ್ ನಡೆಸುತ್ತಿದ್ದಾರೆ. ಇದೀಗ ಪತಿ ಸ್ಯಾಂಟೋಸ್ ಹಠಾತ್ ನಿಧನದಿಂದ ಪತ್ನಿ ಆಘಾತಕ್ಕೊಳಗಾಗಿದ್ದಾರೆ.

Read more Photos on
click me!

Recommended Stories