ವಯಸ್ಸು 35 ಆಯ್ತು, ಮಗು ಮಾಡಿ ಕೊಳ್ಳೋ ಪ್ಲ್ಯಾನ್ ಇದ್ಯಾ? ಇವು ಬೆಸ್ಟ್

First Published Nov 23, 2023, 5:51 PM IST

ಯಾವುದೋ ಕಾರಣಕ್ಕಾಗಿ ಇದೀಗ ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಲು ಬಯಸದವರಿಗೆ, ಆದರೆ ಭವಿಷ್ಯದಲ್ಲಿ ತಮ್ಮದೇ ಆದ ಮಗುವನ್ನು ಪಡೆಯಲು ಬಯಸುವವರಿಗೆ ಫಲವತ್ತತೆ ಸಂರಕ್ಷಣೆ  (ಫರ್ಟಿಲಿಟಿ ಪ್ರಿಸರ್ವೆಶನ್ ) ತುಂಬಾನೆ ಸಹಾಯ ಮಾಡಬಹುದು. ಇದು ವಯಸ್ಸಾದ ದಂಪತಿಗಳಿಂದ ಹಿಡಿದು ಒಂಟಿ ಪುರುಷರು ಅಥವಾ ಮಹಿಳೆಯರಿಗೂ ಸಹಾಯ ಮಾಡುತ್ತೆ.
 

ಫರ್ಟಿಲಿಟಿ ಪ್ರಿಸರ್ವೆಶನ್ (Fertility Preservation) ವಿವಿಧ ವೈದ್ಯಕೀಯ ತಂತ್ರಗಳು ಮತ್ತು ಕಾರ್ಯ ವಿಧಾನಗಳಿಂದ ಮಾಡಲಾಗುತ್ತದೆ. ಇದರ ಉದ್ದೇಶವೆಂದರೆ ನೀವು ವಯಸ್ಸಾದಾಗಲೂ ಗರ್ಭಧರಿಸುವ ಸಾಮರ್ಥ್ಯವನ್ನು ಹಾಗೆಯೇ ಉಳಿಸುವುದು. ತಮ್ಮ ಫರ್ಟಿಲಿಟಿಗೆ ಅಪಾಯವನ್ನುಂಟುಮಾಡುವ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಇದು ವರದಾನ. ಕೆಲವು ಕಾರಣಗಳಿಗಾಗಿ ತಡವಾಗಿ ಪ್ರೆಗ್ನೆಂಟ್ ಆಗಲು ಪ್ಲ್ಯಾನ್ ಮಾಡುತ್ತಿದ್ದರೆ, ಅಂದರೆ 35 ವರ್ಷದ ನಂತರ, ಐವಿಎಫ್ (ಇನ್ ವಿಟ್ರೊ ಫಲೀಕರಣ) ನಿಮಗೆ 5 ಆಯ್ಕೆಗಳನ್ನು ಒದಗಿಸುತ್ತದೆ.

ಫರ್ಟಿಲಿಟಿ ಪ್ರಿಸರ್ವೆಶನ್ (Fertility Preservation) ಯಾವಾಗ ಅಗತ್ಯ? 
ಫರ್ಟಿಲಿಟಿ ಪ್ರಿಸರ್ವೆಶನ್ ಭವಿಷ್ಯದಲ್ಲಿ ಮಗುವಾಗಲು ಸಹಾಯ ಮಾಡುತ್ತೆ. ವೈದ್ಯಕೀಯ ಚಿಕಿತ್ಸೆ ಮತ್ತು ಹೆಚ್ಚುತ್ತಿರುವ ವಯಸ್ಸಿನಿಂದಾಗಿ ಫಲವತ್ತತೆ ಕಡಿಮೆಯಾಗುವ ಅಥವಾ ಲಿಂಗ ಬದಲಾವಣೆಯ ಸಂದರ್ಭದಲ್ಲಿ ಫರ್ಟಿಲಿಟಿ ಪ್ರಿಸರ್ವೆಶನ್ (fertility preservation) ಸಹಾಯಕ. ಇದನ್ನು ಹೇಗೆ ಮಾಡಲಾಗುತ್ತದೆ ಮತ್ತು ಅದರ ಅಡಿಯಲ್ಲಿ ಯಾವ ಆಯ್ಕೆಗಳನ್ನು ಪ್ರಯತ್ನಿಸಬಹುದು ತಿಳಿಯೋಣ.

ಫರ್ಟಿಲಿಟಿ ಪ್ರಿಸರ್ವೆಶನ್ ಈ 5 ಆಯ್ಕೆಗಳೊಂದಿಗೆ ಪಡೆಯಬಹುದು  
ಅಂಡಾಣುಗಳು ಮತ್ತು ವೀರ್ಯಾಣು ಫ್ರೀಜಿಂಗ್: (sperm and egg freezing)

ಇದನ್ನು ಊಸೈಟ್ ಕ್ರಯೋಪ್ರೆಸರ್ವೇಶನ್ ಎಂದೂ ಕರೆಯಲಾಗುತ್ತದೆ. ಈ ವಿಧಾನದಲ್ಲಿ, ಮಹಿಳೆಯರಿಗೆ ಅಂಡಾಣು ಫ್ರೀಜಿಂಗ್ ಮತ್ತು ಪುರುಷರಿಗೆ ವೀರ್ಯಾಣು ಫ್ರೀಜಿಂಗ್ ಮಾಡಲಾಗುತ್ತದೆ. ಇದರಲ್ಲಿ, ಪುರುಷ ಮತ್ತು ಮಹಿಳೆಯರಿಂದ ಅಂಡಾಣುಗಳು ಅಥವಾ ವೀರ್ಯವನ್ನು ತೆಗೆದು ಸಂಗ್ರಹಿಸಲಾಗುತ್ತದೆ. ದಂಪತಿಗಳು ಗರ್ಭಧರಿಸಲು ಸಿದ್ಧರಾದಾಗ, ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಪ್ರಕ್ರಿಯೆಯನ್ನು ಇವುಗಳ ಸಹಾಯದಿಂದ ಮಾಡಬಹುದು. ಈ ವಿಧಾನವು ಕ್ಯಾನ್ಸರ್ ರೋಗಿಗಳಿಗೆ, ಒಂಟಿ ಮಹಿಳೆಯರಿಗೆ ಅಥವಾ ಪುರುಷರಿಗೂ ಉಪಯುಕ್ತ.

 

ಆಂಬ್ರಿಯೋ ಫ್ರೀಜಿಂಗ್: (Embryo freezing)
ಇನ್ ವಿಟ್ರೊ ಫರ್ಟಿಲೈಸೇಶನ್ (IVF) ನಂತಹ ಸಹಾಯಕ ಸಂತಾನೋತ್ಪತ್ತಿ ತಂತ್ರಗಳ ಆಯ್ಕೆ ಪರಿಗಣಿಸುತ್ತಿರುವ ಮಹಿಳೆಯರಿಗೆ ಇದು ಉತ್ತಮ ಆಯ್ಕೆ. ಈ ವಿಧಾನದಲ್ಲಿ, ಅಂಡಾಣುಗಳು ಮತ್ತು ವೀರ್ಯಾಣುಗಳ ಫರ್ಟಿಲೈಸೇಶನ್ ನಿಂದ ತಯಾರಿಸಿದ ಭ್ರೂಣವನ್ನು ಹೆಪ್ಪುಗಟ್ಟಿಸಬಹುದು ಮತ್ತು ಸುರಕ್ಷಿತವಾಗಿಡಬಹುದು. ಇದನ್ನು ನಂತರ ತೆಗೆದು ಗರ್ಭದಲ್ಲಿ ಸ್ಥಾಪಿಸಬಹುದು. ದಂಪತಿಗಳು ತಮ್ಮ ವೃತ್ತಿಜೀವನ (Career), ವೈಯಕ್ತಿಕ ಆಸಕ್ತಿ ಅಥವಾ ಯಾವುದೇ ವೈದ್ಯಕೀಯ ಸ್ಥಿತಿಯಂತಹ ಕಾರಣಗಳಿಂದಾಗಿ ಈಗ ಮಕ್ಕಳನ್ನು ಹೊಂದಲು ಬಯಸದಿದ್ದಾಗ ಈ ವಿಧಾನವು ಬಹಳ ಉಪಯುಕ್ತವಾಗಿದೆ.

 

ಓವರಿಯನ್ ಟಿಶ್ಯೂ ಫ್ರೀಜಿಂಗ್ (ovarian tissue freezing)
ಅತ್ಯಾಧುನಿಕ ವಿಧಾನವಾದ ಇದರಲ್ಲಿ ಅಂಡಾಶಯದ ಸಣ್ಣ ತುಂಡನ್ನು ತೆಗೆದು ಹೆಪ್ಪುಗಟ್ಟಿಸಲಾಗುತ್ತದೆ, ಇದರಿಂದ ಭವಿಷ್ಯದಲ್ಲಿ ಐವಿಎಫ್ ನಂತಹ ಕಾರ್ಯವಿಧಾನಕ್ಕೆ ಬಳಸಬಹುದು. ಈ ವಿಧಾನವಿನ್ನೂ ಪ್ರಾಯೋಗಿಕ ಹಂತದಲ್ಲಿದೆ, ಆದರೆ ಪ್ರೌಢಾವಸ್ಥೆಗೆ ಬರುವ ಹುಡುಗಿಯರಿಗೆ ಇದು ಉಪಯುಕ್ತ.

ಓವರಿಯನ್ ಸಪ್ರೆಶನ್: (ovarian suppression)
ಮಹಿಳೆಯರ ಫರ್ಟಿಲಿಟಿ ರಕ್ಷಿಸಲು ಕೀಮೋಥೆರಪಿ ಅಥವಾ ರೇಡಿಯೋಥೆರಪಿಯಂತಹ ಚಿಕಿತ್ಸೆಗಳಿಂದ ಉಂಟಾಗುವ ಹಾನಿಯಿಂದ ಅಂಡಾಶಯಗಳನ್ನು ರಕ್ಷಿಸಲು ಹಾರ್ಮೋನುಗಳ ಔಷಧಿಗಳನ್ನು ಬಳಸಬಹುದು. ಈ ಪ್ರಕ್ರಿಯೆಯಲ್ಲಿ, ಅಂಡಾಶಯದ ಕೆಲಸವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗುತ್ತದೆ, ಇದರಿಂದಾಗಿ ಚಿಕಿತ್ಸೆಗೆ ಒಳಗಾಗುವಾಗ ಫಲವತ್ತತೆಗೆ ಯಾವುದೇ ಹಾನಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಫರ್ಟಿಲಿಟಿ ಕಾಪಾಡಲು ಸರ್ಜರಿ: (surgery for fertility preservation)
ಕ್ಯಾನ್ಸರ್ (Cancer) ಅಥವಾ ಇತರ ಯಾವುದೇ ವೈದ್ಯಕೀಯ ಸಮಸ್ಯೆ ಇರುವ ಜನರು ಶಸ್ತ್ರಚಿಕಿತ್ಸೆಯ ಸಹಾಯದಿಂದ ತಮ್ಮ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಫಲವತ್ತತೆಯನ್ನು ಕಾಪಾಡಿಕೊಳ್ಳಲು ಅಂಡಾಶಯದ ವರ್ಗಾವಣೆ ಅಥವಾ ವೃಷಣ ವೀರ್ಯಾಣು ಹೊರತೆಗೆಯುವಿಕೆ ಸರ್ಜರಿ ಮಾಡಿಸಿಕೊಳ್ಳಬಹುದು. 

fertility

ಫರ್ಟಿಲಿಟಿ ಪ್ರಿಸರ್ವೇಶನ್ ಸಮಯದಲ್ಲಿ ನೆನಪಿನಲ್ಲಿಡಬೇಕಾದ ಇನ್ನೂ ಕೆಲವು ವಿಷಯಗಳಿವೆ. 
ಔಷಧಿಗಳು ಮತ್ತು ಹಾರ್ಮೋನು ಚಿಕಿತ್ಸೆಗಳು:

ಕೆಲವು ಔಷಧಿಗಳು ಮತ್ತು ಹಾರ್ಮೋನುಗಳ ಚಿಕಿತ್ಸೆಗಳ ಸಹಾಯದಿಂದ ಫಲವತ್ತತೆಯನ್ನು (fertility) ತಾತ್ಕಾಲಿಕವಾಗಿ ತಡೆಗಟ್ಟಬಹುದು ಅಥವಾ ಸಂರಕ್ಷಿಸಬಹುದು. ಲಿಂಗ ಬದಲಾವಣೆಗೆ ಒಳಗಾಗುವ ಜನರಿಗೆ ಇದು ಉಪಯುಕ್ತ ವಿಧಾನ.

ಇದರಿಂದ ಗರ್ಭದಲ್ಲಿ ಸಾಮಾನ್ಯ ಸಂಖ್ಯೆಯ ಭ್ರೂಣಗಳನ್ನು ಮಾತ್ರ ಸ್ಥಾಪಿಸಲು ಆದ್ಯತೆ ನೀಡಬಹುದು. ಗರ್ಭಾಶಯದಲ್ಲಿ ಸ್ಥಾಪಿಸುವ ಮೊದಲು ಆನುವಂಶಿಕ ಅಸ್ವಸ್ಥತೆಗಳಿಂದ ಮುಕ್ತವಾದ ಭ್ರೂಣಗಳನ್ನು ಆಯ್ಕೆ ಮಾಡಲು ಫರ್ಟಿಲಿಟಿ ಪ್ರಿಸರ್ವೇಶನ್ ವಿಧಾನಗಳೊಂದಿಗೆ ಪಿಜಿಟಿಯನ್ನು ಬಳಸಬಹುದು.
 

ಕೌನ್ಸೆಲಿಂಗ್ ಮತ್ತು ಬೆಂಬಲ: (Counseling and Support)
ಫರ್ಟಿಲಿಟಿ ಪ್ರಿಸರ್ವೇಶನ್ ಮಾನಸಿಕ ಬೆಂಬಲ ಮತ್ತು ಕೌನ್ಸೆಲಿಂಗ್ ಸಹ ಒಳಗೊಂಡಿರುತ್ತದೆ, ಏಕೆಂದರೆ ಪ್ರಕ್ರಿಯೆಯು ಸಂಕೀರ್ಣ ಮತ್ತು ಭಾವನಾತ್ಮಕವಾಗಿರುತ್ತದೆ. ಆದ್ದರಿಂದ, ವ್ಯಕ್ತಿಯ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಈ ಪ್ರಕ್ರಿಯೆಗಳ ಪರಿಣಾಮ ಬೀಳುವ ಸಾಧ್ಯತೆ ಇರೋದರಿಂದ ಕೌನ್ಸೆಲಿಂಗ್ ಮುಖ್ಯ.

click me!