ಫಾರ್ಮ್‌ನಲ್ಲಿರೋ ವಿರಾಟ್ ಕೊಹ್ಲಿ ಫಿಟ್ ಆಗಿರಲು ಹೊಟ್ಟೆಗೇನು ತಿಂತಾರೆ?

First Published | Nov 15, 2023, 4:24 PM IST

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಸೆಂಚುರಿ, ಡಬಲ್ ಸೆಂಚುರಿ ಬಾರಿಸುವ ಕೊಹ್ಲಿ ಇಷ್ಟೊಂದು ಫಿಟ್ ಆಗಿರೋದಕ್ಕೆ, ಅವರ ಆಹಾರ ಕ್ರಮ ಮುಖ್ಯ ಕಾರಣ.  ಹಾಗಿದ್ರೆ ಅವರ ಡಯಟ್ ಹೇಗಿರುತ್ತೆ ಅನ್ನೋದನ್ನು ನೋಡೋಣ ಬನ್ನಿ.

ಖ್ಯಾತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಫಿಟ್ನೆಸ್  (Fitness), ಡಯಟ್ (Diet) ಬಗ್ಗೆ ಮಾತನಾಡಿದ್ದಾರೆ. ಪೌಷ್ಠಿಕಾಂಶ (Proteins), ಹೈಡ್ರೇಶನ್ (Hydration) ಮತ್ತು ಜೀವಸತ್ವಗಳ (Vitamins) ವಿಷಯದಲ್ಲಿ ಸರಿಯಾದ ಸಮತೋಲನವನ್ನು (Balanced Diet) ಕಾಯ್ದುಕೊಂಡು ಆಹಾರ ಸೇವಿಸುತ್ತಾರಂತೆ.

ಕೊಹ್ಲಿ ತಮ್ಮ ಆಹಾರದಲ್ಲಿ ಪುನರಾವರ್ತನೆ (food repetation) ಮಾಡುತ್ತಲೇ ಇರುತ್ತಾರೆ. ಅವರು ತಿಂಗಳವರೆಗೆ ಒಂದೇ ಆಹಾರ ತಿನ್ನುತ್ತಾರಂತೆ. ಅವರ ಪ್ರಕಾರ, ಈ ಪುನರಾವರ್ತನೆಯು ಪೌಷ್ಠಿಕಾಂಶ ಆಹಾರ ಸೇವನೆ ಅವರ ಸ್ಟ್ರಿಕ್ಟ್ ಡಯಟ್ ನ (strict diet) ಒಂದು ಮುಖ್ಯ ಭಾಗ. 
 

Tap to resize

ಕೊಹ್ಲಿ ಫಿಟ್ನೆಸ್ ಜರ್ನಿಯಲ್ಲಿ (fitn ess journey) ಆಹಾರವೇ ಪ್ರಮುಖ ಸವಾಲಾಗಿತ್ತು.ಮೊದ ಮೊದಲು ಅವರಿಗೂ ಇಂತಹ ಆಹಾರ ತಿನ್ನೋಕೆ ಕಷ್ಟ ಆಗುತ್ತಿತ್ತಂತೆ. ನಂತರ ಯಾವ ಆಹಾರ ಸೇವಿಸಿದ್ರೆ, ಅವರಿಗೆ ಯಾವ ರೀತಿ ಸಹಾಯ ಆಗುತ್ತೆ ಅನ್ನೋದನ್ನು ತಿಳಿದುಕೊಂಡರು.  ಮತ್ತು ಅವರ ಫಿಟ್ನೆಸ್ ಗುರಿಗಳಿಗೆ ಹೊಂದಿಕೆಯಾಗುವ ಬ್ಯಾಲೆನ್ಸ್ ಆಹಾರ ಸೇವಿಸುತ್ತ, ಫಿಟ್ ಆಗಿರೋದನ್ನು ರೂಢಿಸಿಕೊಂಡರು. 
 

ಕೊಹ್ಲಿಯ ಸರಳ ಡಯಟ್ ನಲ್ಲಿ (simple diet) ಅವರ ಆಹಾರದ 90% ಅನ್ನು ಆವಿಯಲ್ಲಿ ಬೇಯಿಸಲಾಗುತ್ತದೆ, ಅಂದರೆ ಅವರು ಬಾಯ್ಲ್ ಮಾಡಿದ ಆಹಾರವನ್ನೇ ಸೇವಿಸುತ್ತಾರೆ. ಮಸಾಲಾ ಪಲ್ಯಗಳಿಗೆಅವರ ಆಹಾರದಲ್ಲಿ ಸ್ಥಾನವಿಲ್ಲ; ಬದಲಾಗಿ, ಅವರು ಉಪ್ಪು, ಮೆಣಸು ಮತ್ತು ಹುಳಿಯಂತಹ ಅಗತ್ಯ ರುಚಿಗಳನ್ನು ಮಾತ್ರ ಸೇವಿಸುತ್ತಾರೆ. .
 

ಎಲ್ಲಾ ಫುಡ್ ಲವರ್ ಗಳಂತೆ, ಕೊಹ್ಲಿ ಆಹಾರ ಯಾವಾಗಲೂ ರುಚಿಯಾಗಿರಬೇಕು ಎಂದು ಕೇಳಲೇ ಇಲ್ಲ. ಬದಲಾಗಿ ಅವರ ಆಹಾರವು ಬಾಯಿಗೆ ಸ್ವಲ್ಪ ಮಟ್ಟಿಗೆ ರುಚಿ ನೀಡುವ, ಆದರೆ ರುಚಿಗಳಿಗಿಂತ ಸರಳತೆ ಮತ್ತು ಪೋಷಕ ತತ್ವಗಳನ್ನು ಒಳಗೊಂಡಿರುತ್ತೆ. 
 

ಕೊಹ್ಲಿ ಸ್ವಲ್ಪ ಡ್ರೆಸ್ಸಿಂಗ್ ಹಾಕಿರೋ ಸಲಾಡ್ (salad with minimal dressing) ತಿನ್ನೋದಕ್ಕೆ ಇಷ್ಟಪಡ್ಟಾರೆ.  ಈ ಸರಳ ಮತ್ತು ಪೌಷ್ಟಿಕ ಆಯ್ಕೆಯು ಅವರ ಶಿಸ್ತುಬದ್ಧ ಡಯಟ್ ಪ್ಲ್ಯಾನ್ ಗೆ ಸರಿಯಾಗಿ ಹೊಂದಾಣಿಕೆಯಾಗುತ್ತೆ. ಅವರು ಫಿಟ್ ಆಗಿ ಇರೋದಕ್ಕೂ ಅವರ ಶಿಸ್ತಿನ ಆಹಾರ ಕ್ರಮ ಕಾರಣ. 
 

ಇನ್ನು ಪ್ಯಾನ್ ಗ್ರಿಲ್ಡ್ (pan grilled food) ಆಹಾರಗಳಲ್ಲಿ ಟ್ವಿಸ್ಟ್ ಸೇರಿಸುವ ಕೊಹ್ಲಿ, ತಮ್ಮ ಆಹಾರಗಳನ್ನು ಆರೋಗ್ಯಯುತವಾದ ಆಲಿವ್ ಆಯಿಲ್ ಜೊತೆ ಗ್ರಿಲ್ ಮಾಡಿ ಸೇವಿಸುತ್ತಾರೆ. ಅವರ ಆಹಾರದ ಆಯ್ಕೆಗಳು ಸೂಕ್ತ ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
 

ಪಂಜಾಬಿಯಾಗಿ, ಕೊಹ್ಲಿ ತಮ್ಮ ಆಹಾರದಲ್ಲಿ ದಾಲ್, ರಾಜ್ಮಾ ಮತ್ತು ಲೋಬಿಯಾವನ್ನು ಸೇರಿಸುವ ಮೂಲಕ ರುಚಿಕರವಾದ ಆಹಾರಗಳನ್ನು ಸಹ ಸೇವಿಸುತ್ತಾರೆ. ಈ ಆಯ್ಕೆಗಳು ಅವರ ಶಿಸ್ತುಬದ್ಧ ಆಹಾರ ಪದ್ಧತಿಗೆ ಸಾಂಸ್ಕೃತಿಕ ಸ್ಪರ್ಶವನ್ನು ನೀಡುತ್ತವೆ. ಒಟ್ಟಲ್ಲಿ ಕೊಹ್ಲಿ ಬೇಯಿಸಿದ ಆಹಾರಗಳನ್ನು (boiled food) ಸೇವಿಸುತ್ತಾ, ಫಿಟ್ ಆಗಿ ಇರೋದಂತೂ ನಿಜ. 
 

Latest Videos

click me!