ಮಕ್ಕಳು ಖುಷಿ ಪಡುತ್ತವೆ ಅಂತ ಸಿಕ್ಕಾಪಟ್ಟೆ ಚಿಪ್ಸ್ ಕೊಟ್ಟರೆ ಹಲ್ಲು ಹಾಳಾಗುತ್ತೆ!
First Published | Jun 2, 2022, 3:32 PM ISTಮಗು ಆರೋಗ್ಯವಾಗಿರಬೇಕು, ಅವರ ಬೆಳವಣಿಗೆ ಉತ್ತಮವಾಗಿರಬೇಕು ಎಂದು ಪೋಷಕರು ಬಯಸುತ್ತಾರೆ. ಅನೇಕ ಬಾರಿ, ಚಿಕ್ಕ ಮಕ್ಕಳು ತಿನ್ನಲು ಮತ್ತು ಕುಡಿಯಲು ಹಟ ಮಾಡುತ್ತಾರೆ, ಇದು ಪೋಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಮಗುವನ್ನು ಪ್ರೀತಿ (Love) ಮಾಡೋದು ಉತ್ತಮ, ಆದ್ರೆ ತಿನ್ನುವ ಮತ್ತು ಕುಡಿಯುವ ವಿಷಯಕ್ಕೆ ಬಂದಾಗ, ಮಗು ಕೇಳೋದ್ದನ್ನೆಲ್ಲಾ ಕೊಡಿಸೋದು ತಪ್ಪು, ಪೋಷಕರಾಗಿ, ಮಗುವಿನ ಆಹಾರದ ಡಿಮ್ಯಾಂಡ್ ಅನ್ನು ಪೂರೈಸುವ ಮೂಲಕ, ನೀವು ಅವನ ಆರೋಗ್ಯದ ಬಗ್ಗೆ ಅಜಾಗರೂಕರಾಗಿದ್ದೀರಿ ಎಂದು ನಿಮಗೆ ತಿಳಿದಿದೆಯೇ?