ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಇದ್ರೆ ಈ ಆಹಾರ ಸೇವಿಸೋದನ್ನ ಮರೀಬೇಡಿ

First Published | Feb 20, 2023, 4:55 PM IST

ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸೋದಾದ್ರೆ, ಖಂಡಿತವಾಗಿಯೂ ಆಹಾರದಲ್ಲಿ ಬ್ರೊಕೋಲಿಯನ್ನು ಸೇರಿಸಿ. ಇದರ ಸೇವನೆಯು ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಉತ್ತೇಜಿಸುತ್ತೆ. ಸರಳವಾಗಿ ಹೇಳುವುದಾದರೆ, ಈಸ್ಟ್ರೊಜೆನ್ ಹಾರ್ಮೋನುಗಳನ್ನು ಹೆಚ್ಚಿಸುತ್ತೆ.ಇವುಗಳ ಬಗ್ಗೆ ಇಲ್ಲಿ ಹೆಚ್ಚಾಗಿ ತಿಳಿಯಿರಿ.  

ಆರೋಗ್ಯವಾಗಿರಲು, ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸೋದು ಬಹಳ ಮುಖ್ಯ. ಇದಕ್ಕಾಗಿ, ಹಾರ್ಮೋನುಗಳನ್ನು ಸಮತೋಲನದಲ್ಲಿಡೋದು ಸಹ ಮುಖ್ಯ. ಹಾರ್ಮೋನ್ ಇಂಬ್ಯಾಲೆನ್ಸ್ (Harmone imbalance) ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾರ್ಮೋನ್ ಇಂಬ್ಯಾಲೆನ್ಸ್ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತೆ. ಇದಕ್ಕಾಗಿ, ಈ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಈ ತರಕಾರಿಗಳ ಸೇವನೆಯು ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತೆ -

ನೀವು ಹಾರ್ಮೋನುಗಳ ಮಟ್ಟವನ್ನು ಸಮತೋಲನಗೊಳಿಸಲು ಬಯಸೋದಾದ್ರೆ, ಎಲೆಕೋಸನ್ನು(Cabbage) ಆಹಾರದಲ್ಲಿ ಸೇರಿಸಿ. ಇದರ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೌಷ್ಟಿಕ ಅಂಶ ಮತ್ತು ಸಂಯುಕ್ತಗಳು ಕಂಡುಬರುತ್ತವೆ, ಇದು ದೇಹದಲ್ಲಿನ ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತೆ. 

Tap to resize

ನೀವು ಎಲೆಕೋಸಿನಿಂದ ವಿವಿಧ ರೀತಿಯ ಭಕ್ಷ್ಯ ತಯಾರಿಸಬಹುದು ಮತ್ತು ಅದನ್ನು ತಿನ್ನಬಹುದು. ಅಲ್ಲದೆ, ಎಲೆಕೋಸನ್ನು ಸಲಾಡ್(Salad) ರೂಪದಲ್ಲಿ ಸೇವಿಸಬಹುದು.

ನೀವು ಹಾರ್ಮೋನ್ ಅಸಮತೋಲನದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದುಹಾಕಲು ಬಯಸೋದಾದ್ರೆ, ಖಂಡಿತವಾಗಿಯೂ ಆಹಾರದಲ್ಲಿ ಬ್ರೊಕೋಲಿಯನ್ನು(Broccoli) ಸೇರಿಸಿ

ಬ್ರೊಕೋಲಿ ಸೇವನೆ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ (Estrogen harmone )ಉತ್ತೇಜಿಸುತ್ತೆ. ಸರಳವಾಗಿ ಹೇಳೋದಾದ್ರೆ, ಈಸ್ಟ್ರೊಜೆನ್ ಹಾರ್ಮೋನುಗಳನ್ನು ಹೆಚ್ಚಿಸುತ್ತೆ. ಇದಕ್ಕಾಗಿ, ಖಂಡಿತವಾಗಿಯೂ ಬ್ರೊಕೋಲಿಯನ್ನು ಸೇವಿಸಿ.
 

ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯನ್ನು ನಿವಾರಿಸಲು ಆರೋಗ್ಯ ತಜ್ಞರು ಟೊಮೆಟೊ(Tomato) ತಿನ್ನಲು ಶಿಫಾರಸು ಮಾಡುತ್ತಾರೆ. ಇದನ್ನು ತಿನ್ನೋದ್ರಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಕ್ಕೂ ಪ್ರಯೋಜನವನ್ನು ನೀಡುತ್ತೆ.

ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಇರೋದರಿಂದ ನೀವು ಟೊಮೆಟೊ ಸಲಾಡ್ ತಯಾರಿಸಿ ತಿನ್ನಬಹುದು. ಇದಲ್ಲದೆ, ಟೊಮೆಟೊ ಸೂಪ್(Soup) ಸಹ ಕುಡಿಯಬಹುದು. ಇದರ ಸೇವನೆಯು ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತೆ.

ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಲು ಆವಕಾಡೊ(Avacado) ಸೇವಿಸಬಹುದು. ಆವಕಾಡೊ ಅನೇಕ ಪ್ರಯೋಜನಕಾರಿ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ, ಇದು ಹಾರ್ಮೋನುಗಳನ್ನು ಸಕ್ರಿಯಗೊಳಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುತ್ತೆ.

ಪಾಲಕ್(Palak) ಗರ್ಭಿಣಿಯರಿಗೆ ಒಂದು ವರದಾನಕ್ಕಿಂತ ಕಡಿಮೆಯೇನಲ್ಲ. ಇದನ್ನು ಸೇವಿಸೋದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯಿರೋದಿಲ್ಲ. ಕಬ್ಬಿಣದ ಕೊರತೆಯು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತೆ. ಇದಲ್ಲದೆ, ಪಾಲಕ್ ಸೇವನೆಯು ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತೆ.

Latest Videos

click me!