ಆಪರೇಷನ್ ಮಾಡುವಾಗ ವೈದ್ಯರು ಹಸಿರು ಬಟ್ಟೆ ಧರಿಸೋದು ಯಾಕೆ ?

First Published | Feb 19, 2023, 10:24 AM IST

ಜನಜೀವನದಲ್ಲಿ ಕೆಲವೊಂದು ತುಂಬಾ ವಿಷಯಗಳು ತುಂಬಾ ಸಾಮಾನ್ಯವಾಗಿ ಹೋಗಿವೆ. ಅದೆಷ್ಟು ಒಗ್ಗಿ ಹೋಗಿದೆಯೆಂದರೆ ಅದು ಯಾಕೆ ಹಾಗೆ ಎಂದು ನಾವು ಪ್ರಶ್ನಿಸಲೇ ಹೋಗುವುದಿಲ್ಲ. ಆದರೆ ಹಲವರ ಪಾಲಿಗೆ ಅದು ಅಚ್ಚರಿಯ ವಿಷಯವಾಗಿ ಉಳಿದಿರುತ್ತದೆ. ಅಂಥಾ ವಿಚಾರಗಳಲ್ಲೊಂದು. ಆಪರೇಷನ್ ಸಮಯದಲ್ಲಿ ವೈದ್ಯರು ಹಸಿರು ಬಟ್ಟೆಯನ್ನು ಧರಿಸೋದು ಯಾಕೆ ಎಂಬುದು. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ನಾವೆಲ್ಲರೂ ಜೀವನದಲ್ಲಿ ಒಂದಲ್ಲಾ ಒಂದು ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇವೆ. ಅಲ್ಲಿನ ವ್ಯವಸ್ಥೆ, ಶಿಸ್ತನ್ನು ನೋಡಿ ಅಚ್ಚರಿಪಟ್ಟಿರುತ್ತೇವೆ. ವೈದ್ಯರು ಸಾಮಾನ್ಯವಾಗಿ ಹಾಸ್ಪಿಟಲ್‌ಗಳಲ್ಲಿ ಬಿಳಿ ಕೋಟನ್ನು ಧರಿಸುತ್ತಾರೆ. ಆದರೆ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಹಸಿರು ಬಣ್ಣದ ಬಟ್ಟೆ ಹಾಕಿಕೊಳ್ಳುವುದನ್ನು ನೀವು ನೋಡಿರಬೇಕು. ಅದ್ಯಾಕೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ.

ಆಪರೇಷನ್ ಮಾಡುವಾಗ ಹಸಿರು ಬಣ್ಣವೇ ಯಾಕೆ, ಬೇರೆ ಯಾವುದೇ ಬಣ್ಣಗಳನ್ನು ಬಳಸಬಹುದಲ್ಲಾ ಎನ್ನಬಹುದು. ಆದರೆ ಆಪರೇಷನ್ ಸಮಯದಲ್ಲಿ ಹಸಿರು ಬಣ್ಣ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಅದೇನೆಂದು ತಿಳಿಯೋಣ.

Tap to resize

ಬೆಳಕಿನಿಂದ ತುಂಬಿದ ಸ್ಥಳದಿಂದ ಡಾರ್ಕ್ ಕೋಣೆಗೆ ಪ್ರವೇಶಿಸಿದಾಗ ಮತ್ತು ನೀವು ಹಸಿರು ಅಥವಾ ನೀಲಿ ಬಣ್ಣದೊಂದಿಗೆ ಸಂಪರ್ಕಕ್ಕೆ ಬಂದರೆ ಇದು ಇತರ ಬಣ್ಣಗಳತ್ತ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶಸ್ತ್ರಚಿಕಿತ್ಸಕರ ಗಮನವು ಹೆಚ್ಚಾಗಿ ಕೆಂಪು ಬಣ್ಣಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ ಬಣ್ಣಗಳು ಶಸ್ತ್ರಚಿಕಿತ್ಸೆ ನೋಡುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಅವುಗಳು ಕೆಂಪು ಬಣ್ಣಕ್ಕೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ.

ಬೆಳಕಿನ ವರ್ಣಪಟಲದಲ್ಲಿ ಹಸಿರು ಮತ್ತು ನೀಲಿ ಬಣ್ಣಗಳು ಕೆಂಪು ಬಣ್ಣಕ್ಕೆ ವಿರುದ್ಧವಾಗಿರುತ್ತವೆ. ಆಪರೇಷನ್ ಸಮಯದಲ್ಲಿ, ಶಸ್ತ್ರಚಿಕಿತ್ಸಕನ ಗಮನವು ಹೆಚ್ಚಾಗಿ ಕೆಂಪು ಬಣ್ಣಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ ಬಣ್ಣಗಳು ಶಸ್ತ್ರಚಿಕಿತ್ಸಕನ ನೋಡುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅವನನ್ನು ಕೆಂಪು ಬಣ್ಣಕ್ಕೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ.

ಟುಡೇಸ್ ಸರ್ಜಿಕಲ್ ನರ್ಸ್‌ನ 1998 ರ ಆವೃತ್ತಿಯಲ್ಲಿ ಇತ್ತೀಚೆಗೆ ವರದಿಯನ್ನು ಸೇರಿಸಲಾಗಿದೆ. ಇದರ ಪ್ರಕಾರ, ಹಸಿರು ಬಟ್ಟೆಯು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ ಎಂದು ಹೇಳಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವೈದ್ಯರು ಆಗಾಗ ನೀಲಿ ಮತ್ತು ಬಿಳಿ ಸಮವಸ್ತ್ರವನ್ನು ಧರಿಸುತ್ತಾರೆ. ಆದರೆ ಅದರ ಮೇಲೆ ರಕ್ತದ ಕಲೆಗಳು ಕಂದು ಬಣ್ಣದಲ್ಲಿ ಕಾಣುವುದರಿಂದ ಹಸಿರು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ.

ದೆಹಲಿಯ ಬಿಎಲ್‌ಕೆ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಜನ್ ಡಾ.ದೀಪಕ್ ನೈನ್ ಅವರ ಪ್ರಕಾರ, ವಿಶ್ವದ ಮೊದಲ ಶಸ್ತ್ರಚಿಕಿತ್ಸಕ ಎಂದು ಪರಿಗಣಿಸಲ್ಪಟ್ಟ ಸುಶ್ರುತ ಅವರು ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಸಿರು ಬಣ್ಣವನ್ನು ಬಳಸುವುದರ ಬಗ್ಗೆ ಬರೆದಿದ್ದಾರೆ ಎಂದು ಹೇಳಿದ್ದಾರೆ.
 

ವೈದ್ಯರು ದೀರ್ಘಕಾಲದಿಂದ ಆಪರೇಷನ್ ಸಮಯದಲ್ಲಿ ನೀಲಿ ಅಥವಾ ಹಸಿರು ಸಮವಸ್ತ್ರವನ್ನು ಧರಿಸುತ್ತಾರೆ. ಆದರೆ ಇದಕ್ಕೆ ನಿರ್ಧಿಷ್ಟವಾಗಿ ಕಾರಣವೇನೆಂದು ತಿಳಿದುಬಂದಿಲ್ಲ. ಹಿಂದೆ, ವೈದ್ಯರು ಮತ್ತು ಎಲ್ಲಾ ಆಸ್ಪತ್ರೆ ಸಿಬ್ಬಂದಿ ಬಿಳಿ ಸಮವಸ್ತ್ರವನ್ನು ಧರಿಸುತ್ತಿದ್ದರು. ಆದರೆ ವೈದ್ಯರು ಇದನ್ನು 1914ರಲ್ಲಿ ಹಸಿರು ಬಣ್ಣಕ್ಕೆ ಬದಲಾಯಿಸಿದರು. ಅಂದಿನಿಂದ, ಈ ಶೈಲಿಯ ಡ್ರೆಸ್ಸಿಂಗ್ ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ, ಕೆಲವು ವೈದ್ಯರು ನೀಲಿ ಬಟ್ಟೆಗಳನ್ನು ಸಹ ಧರಿಸುತ್ತಾರೆ.

ಇನ್ನೊಂದು ಅಧ್ಯಯನದ ಪ್ರಕಾರ, 1930 ರ ದಶಕದಲ್ಲಿ, ಆಸ್ಪತ್ರೆಯ ಅಲಂಕರಣಕಾರರು ರೋಗಿಗಳ ಮನಸ್ಥಿತಿಯನ್ನು ಪ್ರಭಾವಿಸಲು ಹಸಿರು ಬಣ್ಣವನ್ನು ಬಳಸಿದರು. ಇದು ಪ್ರಕೃತಿ, ಬೆಳವಣಿಗೆ ಮತ್ತು ಚೇತರಿಕೆಯೊಂದಿಗೆ ಸಂಬಂಧಗಳನ್ನು ಹೊಂದಿತ್ತು ಎಂದು ತಿಳಿದುಬಂದಿದೆ.

Latest Videos

click me!