Lung Cancer: ಹೇಗೆ ಬೇಕಾದರೂ ಬರಬಹುದು, ಬಾರದಂತೆ ಹೀಗ್ ಮಾಡಿ!

First Published | Feb 18, 2023, 4:40 PM IST

ನೀವು ಸ್ಮೋಕ್ ಮಾಡ್ತೀರಾ, ಹಾಗಿದ್ರೆ ನಿಮಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗೋ ಸಾಧ್ಯತೆ ಜಾಸ್ತಿನೇ ಇದೆ. ಹಾಗೇ ನೀವು ಧೂಮಪಾನಿಗಳೊಂದಿಗೆ ವಾಸಿಸುತ್ತಿದ್ದರೆ, ನೀವು ಅದಕ್ಕಿಂತ ಹೆಚ್ಚಿನ ಅಪಾಯದಲ್ಲಿದ್ದೀರಿ, ಹಾಗಿದ್ರೆ ನೀವು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು ಎಂದು ತಿಳಿಯಲು ಮುಂದೆ ಓದಿ.

ಶ್ವಾಸಕೋಶದ ಕ್ಯಾನ್ಸರ್(Lung cancer) ಒಂದು ರೋಗ. ಇದರಲ್ಲಿ ಶ್ವಾಸಕೋಶದ ಅಂಗಾಂಶದಲ್ಲಿ ಅಪಾಯಕಾರಿ ಕೋಶಗಳು ರೂಪುಗೊಳ್ಳುತ್ತವೆ. ಸ್ಮಾಲ್ ಸೆಲ್ ಶ್ವಾಸಕೋಶದ ಕ್ಯಾನ್ಸರ್ ಮತ್ತು ನಾನ್ ಸ್ಮಾಲ್ ಸೆಲ್ ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್‌ನ ಎರಡು ಪ್ರಮುಖ ವಿಧಗಳಾಗಿವೆ. ಶ್ವಾಸಕೋಶದ ಕ್ಯಾನ್ಸರ್ ಪ್ರಪಂಚದಾದ್ಯಂತ ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣಗಳು ಯಾವುವು? 
ತಂಬಾಕು, ಧೂಮಪಾನ, ವಾಯುಮಾಲಿನ್ಯ(Air pollution), ವಿಕಿರಣಕ್ಕೆ ಒಡ್ಡಿಕೊಳ್ಳುವುದು, ಕಲ್ಲಿದ್ದಲು ಮತ್ತು ಬೆರಿಲಿಯಂನಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಮತ್ತು ಕ್ಯಾನ್ಸರ್ ನ ಕುಟುಂಬ ಇತಿಹಾಸ ಶ್ವಾಸಕೋಶದ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಸಾಮಾನ್ಯ ಅಪಾಯಕಾರಿ ಅಂಶಗಳಾಗಿವೆ.

Tap to resize

ತಂಬಾಕು ಸೇವನೆ ತಪ್ಪಿಸಿ
ತಂಬಾಕು ಸೇವನೆಯು ಶ್ವಾಸಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣ. ಇದು ಒಟ್ಟು ಪ್ರಕರಣಗಳಲ್ಲಿ ಸುಮಾರು 90% ರಷ್ಟಿದೆ. ಸಿಗರೇಟು(Cigerate), ಸಿಗಾರ್, ಪೈಪ್ , ಹುಕ್ಕಾ, ಎಲೆಕ್ಟ್ರಾನಿಕ್ ಸಿಗರೇಟು ಮತ್ತು ತಂಬಾಕು ಶ್ವಾಸಕೋಶಗಳಿಗೆ ಅಪಾಯಕಾರಿ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪಾಯವು ಸುಮಾರು 20 ಪಟ್ಟು ಹೆಚ್ಚು. ಆದ್ದರಿಂದ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಅಥವಾ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ತಕ್ಷಣವೇ ಸ್ಮೋಕ್ ಮಾಡೋದನ್ನು ಬಿಡೋದು.

ಸೆಕೆಂಡ್ ಹ್ಯಾಂಡ್ ಹೊಗೆಗೆ (Second hand exposure)ಒಡ್ಡಿಕೊಳ್ಳೋದನ್ನು ತಪ್ಪಿಸಿ
ಸೆಕೆಂಡ್ ಹ್ಯಾಂಡ್ ಹೊಗೆ ಹಾನಿಕಾರಕ ಮತ್ತು ಸಿಗರೇಟುಗಳಂತಹ ಅನೇಕ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತೆ, ಇದು ನಿಮ್ಮ ಶ್ವಾಸಕೋಶದ ಕೋಶಗಳನ್ನು ಹಾನಿಗೊಳಿಸುತ್ತೆ ಮತ್ತು ನಿಮ್ಮ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ. ಹಾಗಾಗಿ ನಿಮ್ಮೊಂದಿಗೆ ವಾಸಿಸುವವರನ್ನು ಧೂಮಪಾನ ಮಾಡದಂತೆ ತಡೆಯಿರಿ ಅಥವಾ ಅವರಿಂದ ದೂರವಿರಿ.

ವಿಕಿರಣ (Radiation) ಮತ್ತು ರಾಸಾಯನಿಕಗಳನ್ನು ತಪ್ಪಿಸಿ
ವಿಕಿರಣಕ್ಕೆ ಒಡ್ಡಿಕೊಳ್ಳೋದು, ವಿಶೇಷವಾಗಿ ರೇಡಾನ್, ಪ್ರಪಂಚದಾದ್ಯಂತ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಅದನ್ನು ತಪ್ಪಿಸಲು ಪ್ರಯತ್ನಿಸಿ. ಆಸ್ಬೆಸ್ಟಾಸ್, ಕಲ್ಲಿದ್ದಲು, ಸಿಲಿಕಾ, ಬೆರಿಲಿಯಂ, ಆರ್ಸೆನಿಕ್, ನಿಕ್ಕಲ್ ಮುಂತಾದ ಹಾನಿಕಾರಕ ರಾಸಾಯನಿಕಗಳಿಗೆ ದೀರ್ಘಕಾಲ ಒಡ್ಡಿಕೊಳ್ಳೋದನ್ನು ತಪ್ಪಿಸಿ.

ಆರೋಗ್ಯಕರ ಆಹಾರ(healthy food) ಮತ್ತು ವ್ಯಾಯಾಮ ಅತ್ಯಗತ್ಯ
ನಿಮ್ಮ ಆಹಾರದಲ್ಲಿ ವಿವಿಧ ಹಣ್ಣು ಮತ್ತು ತರಕಾರಿ ಮತ್ತು ಧಾನ್ಯ ಸೇರಿಸಿ. ಅವು ವಿಟಮಿನ್ಸ್, ಮಿನರಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಪೂರಕಗಳನ್ನು ತೆಗೆದುಕೊಳ್ಳೋದನ್ನು ತಪ್ಪಿಸಿ, ಏಕೆಂದರೆ ಇವು ಹಾನಿಕಾರಕವಾಗಬಹುದು. ಇದಲ್ಲದೆ, ಪ್ರತಿದಿನ ವ್ಯಾಯಾಮ ಮಾಡೋದರಿಂದ ಶ್ವಾಸಕೋಶ ಮತ್ತು ಇತರ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.

ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ
ನಿಮ್ಮ ಶ್ವಾಸಕೋಶಗಳನ್ನು ಕಾಲಕಾಲಕ್ಕೆ ಪರೀಕ್ಷಿಸೋದು ಬೇಗನೆ ಚಿಕಿತ್ಸೆ(Treatment) ಪಡೆದು, ಆರಾಮವಾಗಿರಲು ಸಹಾಯಕವಾಗಿದೆ. ನೀವು ಧೂಮಪಾನ ಮಾಡುತ್ತಿದ್ದರೆ ಅಥವಾ ನಿರ್ದಿಷ್ಟ ವಯಸ್ಸಿನವರಾಗಿದ್ದರೆ, ಶ್ವಾಸಕೋಶದ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗುತ್ತೆ. ನೀವು 50 ರಿಂದ 80 ವರ್ಷ ವಯಸ್ಸಿನವರಾಗಿದ್ದರೆ, ನೀವು 20 ವರ್ಷಗಳ ಕಾಲ ದಿನಕ್ಕೆ ಕನಿಷ್ಠ 1 ಪ್ಯಾಕ್ ಗೆ ಸಮನಾದ ಧೂಮಪಾನ ಮಾಡಿದ್ದೀರಾ? ಅಥವಾ ಕಳೆದ 15 ವರ್ಷಗಳಲ್ಲಿ ನೀವು ಇನ್ನೂ ಧೂಮಪಾನ ಮಾಡುತ್ತಿದ್ದೀರಾ ಅಥವಾ ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ನೀವು ಪರಿಶೀಲಿಸಬೇಕು.

Latest Videos

click me!