ಐಸ್ ಬಾತ್… ಈ ಚಳೀಲಂತೂ ಕೇಳಿದ್ರೆ ಮೈ ನಡುಗುತ್ತೆ, ಆಗೋ ಉಪಯೋಗ ಒಂದೆರಡಲ್ಲ!

First Published | Jan 5, 2024, 4:25 PM IST

ಸೆಲೆಬ್ರಿಟಿಗಳು ಐಸ್ ಸ್ನಾನದ ಮಾಡಿರೋದರ ಬಗ್ಗೆ ಹೇಳಿಕೊಂಡಿದ್ದನ್ನು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋದನ್ನು ನೀವು ನೋಡಿರಬಹುದು ಅಲ್ವಾ? ಯಾಕೀ ಐಸ್ ಬಾತ್ ಮಾಡ್ತಾರೆ? ಇದರಿಂದ ಏನು ಪ್ರಯೋಜನಗಳಿವೆ ಅನ್ನೋದನ್ನು ತಿಳಿಯಿರಿ. 
 

ಜನರು ತಮ್ಮನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ಪ್ರತಿದಿನ ಸ್ನಾನ ಮಾಡುತ್ತಾರೆ. ಆದ್ರೆ, ಜನರು ಸ್ನಾನ ಮಾಡಲು ತಮ್ಮ ಆಯ್ಕೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ನೀರನ್ನು ಆಯ್ಕೆ ಮಾಡುತ್ತಾರೆ. ಕೆಲವರು ಬಿಸಿ ನೀರಿನಿಂದ ಸ್ನಾನ (hot water bath) ಮಾಡಿದರೆ, ಇನ್ನೂ ಕೆಲವರು ಸಾಮಾನ್ಯ ನೀರಿನಿಂದ ಸ್ನಾನ ಮಾಡ್ತಾರೆ. ನಿಜವಾಗಿಯೂ ಯಾವ ನೀರಿನಲ್ಲಿ ಸ್ನಾನ ಮಾಡೊದು ಒಳ್ಳೆಯದು. 
 

ನೀವು ಐಸ್ ನೀರಿನಿಂದ ಯಾವತ್ತಾದ್ರೂ ಸ್ನಾನ ಮಾಡಿದ್ದೀರಾ? ಐಸ್ ನೀರಿನಿಂದ ಸ್ನಾನ (ice water bath) ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ. ಚಳಿಗಾಲದಲ್ಲಿ ಐಸ್ ನೀರಿನ ಸ್ನಾನ ಎಂದು ಕೇಳಿದಾಗ್ಲೇ ಮೈ ಜುಮ್ ಎನ್ನುತ್ತೆ ಅಲ್ವಾ? ಆದರೆ ಅದರ ಕೆಲವು ಪ್ರಯೋಜನಗಳನ್ನು ತಿಳಿದುಕೊಳ್ಳೋಣ-

Latest Videos


ಕಳೆದ ಕೆಲವು ದಿನಗಳಿಂದ, ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಐಸ್ ಬಾತ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡೋದನ್ನು ನೀವು ನೋಡಿರುತ್ತೀರಿ. ಜನರು ಆಗಾಗ್ಗೆ ಚಳಿಯಲ್ಲಿ ಸ್ನಾನ ಮಾಡಲು ಹಿಂಜರಿಯುತ್ತಾರೆ. 
 

ಈ ಋತುವಿನಲ್ಲಿ ಸ್ನಾನ ಮಾಡುವ ಆಲೋಚನೆಯು ನಿಮಗೆ ಚಳಿಯನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಐಸ್ ಬಾತ್ ಅಂದ್ರೆ, ಮೈ ನಡುಗದೇ ಇರುತ್ತಾ?. ಆದರೆ ಈ ಐಸ್ ಬಾತ್, ನಿಮ್ಮ ಆರೋಗ್ಯಕ್ಕೆ (Health benefits) ತುಂಬಾ ಪ್ರಯೋಜನಕಾರಿ. ಐಸ್ ನೀರಿನ ಸ್ನಾನವು ಒಂದು ರೀತಿಯ ಕ್ರಯೋಥೆರಪಿಯಾಗಿದ್ದು, ಇದನ್ನು ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

ಅನೇಕ ಸೆಲೆಬ್ರಿಟಿಗಳು ಆಗಾಗ್ಗೆ ಐಸ್ ನೀರಿನಲ್ಲಿ ಮುಳುಗೋದು, ಐಸ್ ಬಾತ್ ಮಾಡೋದಕ್ಕೆ ಕಾರಣ ಇದರ ಪ್ರಯೋಜನವೇ ಆಗಿದೆ. ಐಸ್ ಸ್ನಾನದ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಅದರ ಕೆಲವು ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳೋಣ-
 

ನಿದ್ರೆಯನ್ನು ಉತ್ತೇಜಿಸುತ್ತೆ (Sound Sleep)

ಐಸ್ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ನಿದ್ರೆ ಸುಧಾರಿಸುತ್ತದೆ. ಐಸ್ ಬಾತ್ ಮಾಡೋದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ, ಇದು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಕಾರಣವಾಗಬಹುದು.

ಹೃದಯಕ್ಕೆ ಪ್ರಯೋಜನಕಾರಿ (healthy heart)
ಐಸ್ ನೀರಲ್ಲಿ ಸ್ನಾನ ಮಾಡುವುದರಿಂದ ಹೃದಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಐಸ್ ಸ್ನಾನ ಮಾಡುವುದರಿಂದ ಬಾಹ್ಯ ನಾಳೀಯ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯಕ (Weight Loss)
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಐಸ್ ನೀರಿನಿಂದ ಸ್ನಾನ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಅಲ್ಪಾವಧಿಯ ಐಸ್ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ಆಹಾರವನ್ನು ಬದಲಾಯಿಸದೆ ಸುಲಭವಾಗಿ ತೂಕ ಇಳಿಸಬಹುದು. 

ನೋವನ್ನು ನಿವಾರಿಸುತ್ತದೆ (Pain Relief)
ಭಾರೀ ವ್ಯಾಯಾಮದ ನಂತರ ನೀವು ಐಸ್ ನೀರಿನಿಂದ ಸ್ನಾನ ಮಾಡಿದರೆ, ಅದು ಸ್ನಾಯು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವು ರಿಲ್ಯಾಕ್ಸ್ ಆಗುತ್ತದೆ.

ಜ್ಞಾಪಕ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸಿ (memory power and energy)
ಐಸ್ ಸ್ನಾನವು ನರಮಂಡಲ ಮತ್ತು ಒತ್ತಡದ ಹಾರ್ಮೋನುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಇದು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

click me!