Tomato Storage: ಟೊಮೆಟೊ ಫ್ರಿಜ್‌ನಲ್ಲಿಡುವಾಗ 99% ಜನರು ಮಾಡೋ ತಪ್ಪು ಇದೇ ನೋಡಿ!

Published : Jan 09, 2026, 11:45 AM IST

How to Store Tomatoes in Fridge: ಒಂದು ವೇಳೆ ನಿಮ್ಮ ಮನೆಯಲ್ಲಿ ಟೊಮೆಟೊವನ್ನು  ಎರಡರಿಂದ ಮೂರು ದಿನಗಳೊಳಗೆ ಬಳಸುತ್ತಿದ್ದರೆ ಫ್ರಿಜ್‌ನಲ್ಲಿ ಇಡದೆ ಹೊರಗೆ ಸಂಗ್ರಹಿಸುವುದೇ ಉತ್ತಮ.  ಅಂದಹಾಗೆ ಇಲ್ಲಿ ಟೊಮೆಟೊವನ್ನು ಸರಿಯಾಗಿ ಸಂಗ್ರಹಿಸುವುದು ಹೇಗೆಂದು ನೋಡೋಣ.    

PREV
16
ರುಚಿ ಬದಲಾಗುತ್ತೆ

ಸಾಮಾನ್ಯವಾಗಿ ಟೊಮೆಟೊ ಇಲ್ಲದೆ ಕೆಲವು ಖಾದ್ಯಗಳನ್ನು ಮಾಡುವುದಕ್ಕೆ ಬರುವುದಿಲ್ಲ. ಉದಾಹರಣೆಗೆ ಚಟ್ನಿಯಿಂದ ಸಾಂಬಾರ್‌ವರೆಗೆ ಪ್ರತಿಯೊಂದು ಖಾದ್ಯದಲ್ಲೂ ಟೊಮೆಟೊ ಅತ್ಯಗತ್ಯ. ಆದರೆ ನಾವು ಮಾರುಕಟ್ಟೆಯಿಂದ ತರುವ ಟೊಮೆಟೊಗಳನ್ನು ತಕ್ಷಣ ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ತಜ್ಞರು ಟೊಮೆಟೊಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ ಬದಲಾಗುವುದಲ್ಲದೆ ಆರೋಗ್ಯಕ್ಕೂ ಅಪಾಯವಿದೆ ಎಂದು ಎಚ್ಚರಿಸುತ್ತಾರೆ. ಹಾಗಾಗಿ ಇಲ್ಲಿ ಟೊಮೆಟೊವನ್ನು ಸರಿಯಾಗಿ ಸಂಗ್ರಹಿಸುವುದು ಹೇಗೆಂದು ನೋಡೋಣ.

26
ಸುವಾಸನೆ ಕಡಿಮೆಯಾಗಿ ಮೃದುವಾಗುತ್ತವೆ

ಅನೇಕ ಜನರು ಇನ್ನು ಮಾಗದ, ಹಸಿ ಕಾಯಿಯಾಗಿರುವ ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ದೊಡ್ಡ ತಪ್ಪು. ಏಕೆಂದರೆ ಟೊಮೆಟೊಗಳು ನೈಸರ್ಗಿಕವಾಗಿ ಹಣ್ಣಾಗಲು ಮಧ್ಯಮ ಶಾಖ ಮತ್ತು ಗಾಳಿ ಬೇಕಾಗುತ್ತದೆ. ನೀವು ಕಾಯಿಯಾಗಿರುವ ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅವುಗಳ ಹಣ್ಣಾಗುವ ಪ್ರಕ್ರಿಯೆಯು ನಿಲ್ಲುತ್ತದೆ. ಪರಿಣಾಮವಾಗಿ ಅವುಗಳ ನೈಸರ್ಗಿಕ ಸುವಾಸನೆಯೂ ಕಡಿಮೆಯಾಗುತ್ತದೆ ಮತ್ತು ಅವು ಮೃದುವಾಗುತ್ತವೆ. ಕೋಣೆಯ ಉಷ್ಣಾಂಶದಲ್ಲಿ ಮತ್ತು ನೇರ ಸೂರ್ಯನ ಬೆಳಕಿನಿಂದ ದೂರವಿಟ್ಟರೆ ಮಾತ್ರ ಅವು ಸರಿಯಾಗಿ ಹಣ್ಣಾಗುತ್ತವೆ.

36
ಟೊಮೆಟೊಗಳ ಗುಣಮಟ್ಟ ಕಡಿಮೆಯಾಗುತ್ತೆ

ಆದರೆ ಮಾಗಿದ ಟೊಮೆಟೊಗಳನ್ನು ನೀವು ಫ್ರಿಜ್‌ನಲ್ಲಿ ಸಂಗ್ರಹಿಸಬಹುದು. ಐದು ದಿನಗಳಿಗಿಂತ ಹೆಚ್ಚು ಕಾಲ ಅಲ್ಲ. ಅತ್ಯಂತ ಶೀತ ತಾಪಮಾನವು ಟೊಮೆಟೊಗಳ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ಇದು ಟೊಮೆಟೊಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಅವುಗಳನ್ನು ಎರಡರಿಂದ ಮೂರು ದಿನಗಳೊಳಗೆ ಬಳಸುತ್ತಿದ್ದರೆ ಫ್ರಿಜ್‌ನಲ್ಲಿ ಇಡದೆ ಹೊರಗೆ ಸಂಗ್ರಹಿಸುವುದೇ ಉತ್ತಮ. ಈ ರೀತಿಯಾಗಿ ನೀವು ಟೊಮೆಟೊಗಳಲ್ಲಿನ ಪೋಷಕಾಂಶಗಳ ಸಂಪೂರ್ಣ ಪ್ರಯೋಜನ ಪಡೆಯಬಹುದು.

46
ಹೊರಗೆ ಮಾತ್ರ ಚೆನ್ನಾಗಿ ಕಾಣಿಸುತ್ತೆ

ಟೊಮೆಟೊವನ್ನು ಒಂದು ವಾರಕ್ಕಿಂತ ಹೆಚ್ಚು ಕಾಲ ಫ್ರಿಡ್ಜ್ ನಲ್ಲಿ ಇಟ್ಟರೆ ಅವು ಹೊರಗೆ ಚೆನ್ನಾಗಿ ಕಾಣಿಸಬಹುದು. ಆದರೆ ಒಳಗಿನಿಂದ ಕೊಳೆಯಲು ಪ್ರಾರಂಭಿಸುತ್ತವೆ. ಅಂತಹ ಟೊಮೆಟೊಗಳನ್ನು ಸಾಂಬಾರ್, ಕರಿ ಅಥವಾ ಇತರ ಯಾವುದೇ ಅಡುಗೆಗೆ ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

56
ಬೂಸ್ಟ್‌ ಬೆಳೆಯುತ್ತೆ

ಫ್ರಿಜ್‌ನಲ್ಲಿ ಹೆಚ್ಚಿನ ಆರ್ದ್ರತೆ ಇರುವುದರಿಂದ ನಮಗೆ ಅರಿವಿಲ್ಲದೆಯೇ ಟೊಮೆಟೊಗಳ ಮೇಲೆ ಅಚ್ಚು ಅಥವಾ ಬೂಸ್ಟ್‌ ಬೆಳೆಯಲು ಕಾರಣವಾಗಬಹುದು. ಒಂದು ವೇಳೆ ಅಂತಹ ಟೊಮೆಟೊ ತಿಂದರೆ ವಾಕರಿಕೆ, ವಾಂತಿ, ಅತಿಸಾರ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಗಂಭೀರ ಸೋಂಕುಗಳು ಸಹ ಉಂಟಾಗಬಹುದು.

66
ಕಪ್ಪು ಬಣ್ಣದಲ್ಲಿದ್ದರೆ ಬಳಸದಿರಿ

ನೀವೂ ಟೊಮೆಟೊ ಫ್ರೆಶ್ ಆಗಿರಲು ಬಯಸಿದರೆ ಖರೀದಿಸಿದ ತಕ್ಷಣ ಬಳಸಲು ಪ್ರಯತ್ನಿಸಿ. ಅವುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟರೂ ಸಹ ತರಕಾರಿ ಡ್ರಾಯರ್‌ನಲ್ಲಿ ಇರಿಸಿ. ಟೊಮೆಟೊ ಒಳಗೆ ಕಪ್ಪು ಬಣ್ಣದಲ್ಲಿದ್ದರೆ ಅಥವಾ ಕೆಟ್ಟ ವಾಸನೆ ಬಂದರೆ ಅದನ್ನು ಬಳಸಬೇಡಿ. ನೆನಪಿಡಿ ನಿಮ್ಮ ಆರೋಗ್ಯವು ನಿಮ್ಮ ಕೈಯಲ್ಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories