ಊಟ ಆದ ಕೂಡಲೇ ಹೊಟ್ಟೆ ಉಬ್ಬರಿಸಿದರೆ ಈ ತಪ್ಪು ಮಾಡ್ತೀರುತ್ತೀರೆಂದರ್ಥ!

Published : Sep 06, 2023, 04:47 PM IST

ಆಹಾರವನ್ನು ಸೇವಿಸಿದ ತಕ್ಷಣ ನಿಮ್ಮ ಹೊಟ್ಟೆ ಬಲೂನಿನಂತೆ ಉಬ್ಬುತ್ತದೆಯೇ? ಪದೇ ಪದೇ ಹೀಗೆ ಆಗೋದರಿಂದ ನಿಮಗೂ ಹೆದರಿಕೆ ಹುಟ್ಟಿ ಕೊಂಡಿರಬಹುದು ಅಲ್ವಾ? ಹಾಗೆ ಆಗೋದಕ್ಕೆ  ಕಾರಣ ಏನು ಮತ್ತು ಅದನ್ನು ತಡೆಗಟ್ಟಲು ಸಲಹೆಗಳೇನು ಅನ್ನೋದನ್ನು ತಿಳಿಯೋಣ.   

PREV
17
ಊಟ ಆದ ಕೂಡಲೇ ಹೊಟ್ಟೆ ಉಬ್ಬರಿಸಿದರೆ ಈ ತಪ್ಪು ಮಾಡ್ತೀರುತ್ತೀರೆಂದರ್ಥ!

ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆಗೆ (digetion problem) ಸಂಬಂಧಿಸಿದ ಸಮಸ್ಯೆಗಳಲ್ಲಿ ಹೊಟ್ಟೆಯ ಉಬ್ಬರ ಅತ್ಯಂತ ಸಾಮಾನ್ಯ ಸಮಸ್ಯೆ. ನೀವು ಆಹಾರ ಸೇವಿಸಿದ ತಕ್ಷಣ ಹೊಟ್ಟೆ ಬಲೂನಿನಂತೆ ಉಬ್ಬುತ್ತದೆ. ಹೊಟ್ಟೆಯಲ್ಲಿ ಬಿಗಿತ, ಒತ್ತಡ(Pressure), ಭಾರದ ಭಾವ ಉಂಟಾಗುತ್ತೆ. ಅನೇಕ ಬಾರಿ ಇದು ಸೌಮ್ಯ ನೋವನ್ನೂ ಉಂಟುಮಾಡುತ್ತದೆ. ಕೆಲವೊಮ್ಮೆ ತೀವ್ರ ನೋವನ್ನು ತರಬಹುದು. ಈ ಬಗ್ಗೆ ಜನರು ಹೆಚ್ಚಾಗಿ ಭಯಗೊಂಡಿರುತ್ತಾರೆ.

27

ಎಲ್ಲರಿಗೂ ಈ ಸಮಸ್ಯೆ ಕಾಣಿಸೋದಿಲ್ಲ. ಆದರೆ ಕೆಲವು ಜನರಿಗೆ ಕೆಲವೊಮ್ಮೆ ಈ ಸಮಸ್ಯೆ ಉಂಟಾಗುತ್ತೆ, ಇನ್ನೂ ಕೆಲವರು ಪ್ರತಿದಿನ ಇದರಿಂದ ತೊಂದರೆಗೀಡಾಗುತ್ತಾರೆ. ಜನರು ಇದನ್ನು ನಿವಾರಿಸಲು ವಿವಿಧ ಔಷಧಿ ಮತ್ತು ಚಿಕಿತ್ಸೆ ಮೊರೆ ಹೋಗ್ತಾರೆ. ನೀವು ಸಹ ಅಂತಹ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಮೊದಲಿಗೆ ಇದು ಯಾಕೆ ಆಗುತ್ತೆ ಅನ್ನೋದನ್ನು ತಿಳಿಯಿರಿ. ಇಲ್ಲಿ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. 

37

ಹೊಟ್ಟೆ ಉಬ್ಬರ ಎಂದರೇನು?
ಉಬ್ಬರವು (bloating) ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಇದರಲ್ಲಿ ವ್ಯಕ್ತಿಯು ಏನೂ ತಿನ್ನದೇ ಇದ್ದರೂ ಹೊಟ್ಟೆ ತುಂಬಿದ ಅನುಭವ ಪಡೆಯುತ್ತಾನೆ, ಜೊತೆಗೆ ಹೊಟ್ಟೆ ಬಿಗಿಯಾಗಿರುವಂತೆ ಅನಿಸುತ್ತೆ. ಸ್ವಲ್ಪ ಆಹಾರ ಸೇವಿಸಿದ ನಂತರವೂ, ಇಡೀ ದೇಹ ಭಾರವಾಗುತ್ತೆ. ಇದನ್ನೇ ಹೊಟ್ಟೆ ಉಬ್ಬರ ಅನ್ನೋದು. 

47

ಹೊಟ್ಟೆ ಉಬ್ಬರ ಕಾಣಿಸಿಕೊಂಡಗ ನೀವು ಹೆಚ್ಚು ಆಹಾರ ಸೇವಿಸಿದ್ದೀರಿ ಎಂದು ನಿಮಗೆ ಅನಿಸುತ್ತದೆ.ಈ ಹೊಟ್ಟೆ ಉಬ್ಬರ ನೋವಿನಿಂದ ಮತ್ತು ವಿಚಿತ್ರ ಸಂಕಟದಿಂದ ಕೂಡಿರುತ್ತೆ..ಈ ಸಮಸ್ಯೆ ಹೆಚ್ಚಾದರೆ ಕೆಲವೊಮ್ಮೆ ಉಸಿರಾಡಲು (breathing problem) ಕಷ್ಟವಾಗಬಹುದು, ಅಷ್ಟೇ ಅಲ್ಲ ದೇಹ ಪೂರ್ತಿ ಬೆವರಲು ಆರಂಭವಾಗುತ್ತೆ. 

57

ಆಹಾರವನ್ನು ಸೇವಿಸಿದ ತಕ್ಷಣ ಹೊಟ್ಟೆ ಉಬ್ಬರ ಏಕೆ ಉಂಟಾಗುತ್ತದೆ?
ತಜ್ಞರ ಪ್ರಕಾರ, ಆಹಾರವನ್ನು ಜೀರ್ಣಿಸಿಕೊಳ್ಳುವ ಕೆಲಸವು ನೇರವಾಗಿ ಜೀರ್ಣಾಂಗ ವ್ಯವಸ್ಥೆಯಲ್ಲಿ (digestion system) ನಡೆಯುವುದಿಲ್ಲ. ಈ ಕೆಲಸವು ನಿಮ್ಮ ಬಾಯಿಯಿಂದ ಪ್ರಾರಂಭವಾಗುತ್ತದೆ. ನೀವು ಆಹಾರವನ್ನು ಸರಿಯಾಗಿ ಅಗಿಯುತ್ತಿದ್ದರೆ ಮತ್ತು ಸೇವಿಸಿದರೆ, ಹೊಟ್ಟೆ ಉಬ್ಬರ ಸಮಸ್ಯೆ ಕಾಡೋದೆ ಇಲ್ಲ.

67

ಅನೇಕ ಜನರು ತಮ್ಮ ಬ್ಯುಸಿ ಲೈಫ್ ಸ್ಟೈಲ್ ನಿಂದಾಗಿ ಅವಸರದಲ್ಲಿ ಆಹಾರವನ್ನು ಸರಿಯಾಗಿ ಜಗಿಯದೆ (not chewing food properly) ಅವಸರದಲ್ಲಿ ತಿನ್ನುತ್ತಾರೆ, ಇದರಿಂದ ಆಹಾರ ಸರಿಯಾಗಿ ಜೀರ್ಣವಾಗೋದಿಲ್ಲ  ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸರಿಯಾಗಿ ಒಡೆಯದ ಆಹಾರವು ಕರುಳಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಹುದುಗುವಿಕೆಯನ್ನು ಹೆಚ್ಚಿಸುತ್ತದೆ, ಇದು ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆಗೆ (Constipation) ಕಾರಣವಾಗಬಹುದು. 

77

ಹೊಟ್ಟೆ ಉಬ್ಬರದಂತಹ ಸಮಸ್ಯೆ ಬಾರದಿರಲು ಆಹಾರವನ್ನು ಚೆನ್ನಾಗಿ ಜಗಿಯಬೇಕು, ಇದರಿಂದ ಅದು ಸರಿಯಾಗಿ ಜೀರ್ಣವಾಗುತ್ತದೆ. ಅಲ್ಲದೇ ನೀವು ವೇಗವಾಗಿ ತಿನ್ನೋದ್ರಿಂದ, ಆಹಾರದ ಜೊತೆಗೆ ಗಾಳಿಯು ಹೊಟ್ಟೆಯನ್ನು ತುಂಬಲು ಪ್ರಾರಂಭಿಸುತ್ತದೆ, ಇದು ತಿಂದ ನಂತರ ಉಬ್ಬರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಆರಾಮವಾಗಿ, ಚೆನ್ನಾಗಿ ಅಗಿದು ಅಹಾರ ಸೇವಿಸೋದು ಉತ್ತಮ. 
 

Read more Photos on
click me!

Recommended Stories