ಕೋವಿಡ್‌ ಲಸಿಕೆಯಿಂದ್ಲೇ ಹೆಚ್ಚಾಗ್ತಿದ್ಯಾ ಹೃದಯಾಘಾತ? ಅಧ್ಯಯನ ವರದಿ ಹೇಳಿದ್ದೀಗೆ..

First Published Sep 5, 2023, 9:40 AM IST

ಕೋವಿಡ್‌-19 ಲಸಿಕೆಗಳಾದ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗೂ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಭಾರತದಲ್ಲಿ ಬಳಸಲಾಗುವ ಕೋವಿಡ್‌-19 ಲಸಿಕೆಗಳಾದ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗೂ, ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಪಿಎಲ್‌ಒಎಸ್‌ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯು ಹೃದಯಾಘಾತಕ್ಕೂ ಲಸಿಕೆಗೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ವಿಶ್ಲೇಷಿಸಿದೆ. ಅಧ್ಯಯನದಲ್ಲಿ 2021ರ ಆಗಸ್ಟ್‌ ಮತ್ತು 2022ರ ಆಗಸ್ಟ್‌ ನಡುವೆ ದೆಹಲಿಯ ಜಿ.ಬಿ. ಪಂತ್‌ ಆಸ್ಪತ್ರೆಗೆ ದಾಖಲಾದ 1,578 ಜನರ ಡೇಟಾವನ್ನು ಬಳಸಿದೆ. ಇವರಲ್ಲಿ 1,086 (ಶೇ.68 ಜನರು) ಜನರು ಕೋವಿಡ್‌ ಲಸಿಕೆ ಹಾಕಿದ್ದರೆ, 492 (ಶೇ.31.2 ಜನರು) ಜನರು ಲಸಿಕೆ ಹಾಕಲಿಲ್ಲ.

ಲಸಿಕೆ ಹಾಕಿದ ಗುಂಪಿನಲ್ಲಿ 1,047 ಜನರು (ಶೇ.96) ಎರಡು ಡೋಸ್‌ ಲಸಿಕೆಯನ್ನು ಪಡೆದಿದ್ದರೆ 39 ಜನರು (ಶೇ.4) ಒಂದೇ ಡೋಸ್‌ ಪಡೆದಿದ್ದಾರೆ. ಇವರ 30 ದಿನಗಳ ಪರೀಕ್ಷಾ ಅವಧಿಯಲ್ಲಿ 201 (ಶೇ.12.7) ರೋಗಿಗಳಲ್ಲಿ ಎಲ್ಲ ಕಾರಣಗಳಿಂದ ಮರಣವು ಸಂಭವಿಸಿದೆ ಮತ್ತು ಲಸಿಕೆ ಹಾಕಿದ ಗುಂಪಿನಲ್ಲಿ ಮರಣ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. 

ಇದರಿಂದ ಭಾರತದಲ್ಲಿ ಬಳಸಲಾಗುವ ಲಸಿಕೆಗಳು ಸುರಕ್ಷಿತವಾಗಿವೆ. ಹೃದಯಾಘಾತಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಹೃದಯಾಘಾತದ ನಂತರ ಸಾವಿನ ಸಾಧ್ಯತೆ ಕಡಿಮೆ ಎಂದು ಕಂಡುಹಿಡಿಯಲಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಜಿಬಿ ಪಂತ್‌ ಆಸ್ಪತ್ರೆಯ ಮೋಹಿತ್‌ ಗುಪ್ತಾ ಹೇಳಿದ್ದಾರೆ.

ಅಧ್ಯಯನ ನಡೆದಿದ್ದು ಎಲ್ಲಿ?
ಕೋವಿಡ್‌ ಬಳಿಕ ಹೃದಯಾಘಾತ ಹೆಚ್ಚಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಧ್ಯಯನ ನಡೆದಿದೆ

ವಿಶ್ಲೇಷಣೆ ನಡೆದಿದ್ದು ಹೇಗೆ?
ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಲ್ಲಿ ಹೃದಯಾಘಾತ ಬಳಿಕ ಸಾವಿನ ಸಾಧ್ಯತೆ ಕಡಿಮೆ ಎಂಬುದು ಪತ್ತೆ

click me!