ಈ ರೀತಿಯಾಗಿ ನಿಮ್ಮ ಸ್ಕ್ರೀನ್ ಟೈಮ್ ಕಡಿಮೆ ಮಾಡೋದನ್ನು ಕಲಿಯಿರಿ

First Published Oct 23, 2022, 11:23 AM IST

ಆರೋಗ್ಯದ ಮೇಲೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯ ಪರಿಣಾಮಗಳನ್ನು ತಿಳಿಯಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ನಮ್ಮಲ್ಲಿ ಅನೇಕರು ತಮ್ಮ ಹೆಚ್ಚಿನ ಸಮಯವನ್ನು ಸೆಲ್ ಫೋನ್ ಗಳು, ಟಿವಿ, ಲ್ಯಾಪ್ ಟಾಪ್ ನೋಡೋದ್ರಲ್ಲಿ ಕಳೆದುಬಿಡ್ತಾರೆ. ಆದರೆ ನಿಮಗೆ ಗೊತ್ತಾ? ನಿಮ್ಮ ಕಣ್ಣುಗಳ ಮೇಲೆ ಒತ್ತಡ ಹೇರುವ ಯಾವುದೇ ಕೆಲಸವನ್ನು ಅತಿಯಾಗಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ನಿದ್ರಿಸಲು ಕಷ್ಟವಾಗುವುದರ ಜೊತೆಗೆ, ಪರದೆಯ ಮೇಲೆ ದೀರ್ಘಕಾಲದವರೆಗೆ ಉಳಿಯುವುದು ತಲೆನೋವು ಮತ್ತು ಕುತ್ತಿಗೆ, ಭುಜಗಳು ಮತ್ತು ಬೆನ್ನಿನಲ್ಲಿ ನೋವನ್ನು ಉಂಟುಮಾಡಬಹುದು.

ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಎಂಟು ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ಸ್ಕ್ರೀನ್ ಮುಂದೆ ಕಳೆಯುವಂತೆ ಮಾಡುವ ಕೆಲಸ ಹೊಂದಿದ್ದೇವೆ. ಒಂದು ವೇಳೆ, ಪರದೆಯ ಸಮಯವು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದರೆ, ಅದನ್ನು ಅಥವಾ ಅದರ ಪರಿಣಾಮವನ್ನು ಕಡಿಮೆ ಮಾಡಲು ಕೆಲವು ಕ್ರಮಗಳಿವೆ. ನೀವು ಸಹ ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದರೆ, ನಿಮ್ಮ ಸ್ಕ್ರೀನ್ ಸಮಯವನ್ನು (screen time) ಹೇಗೆ ಕಡಿಮೆ ಮಾಡಬಹುದು ಅನ್ನೋದು ಇಲ್ಲಿದೆ ನೋಡಿ…

ನಿಮ್ಮ ಸ್ಕ್ರೀನ್ ಸಮಯವನ್ನು ನೀವು ಹೇಗೆ ಕಡಿಮೆ ಮಾಡಬಹುದು? 

ಫೋನ್ ಬಳಕೆಯನ್ನು ಟ್ರ್ಯಾಕ್ ಮಾಡಿ
ನಿಮ್ಮ ಫೋನ್ ಅನ್ನು ದಿಟ್ಟಿಸಿ ನೋಡುತ್ತಾ ನೀವು ನಿಜವಾಗಿಯೂ ಎಷ್ಟು ಸಮಯ ವೇಸ್ಟ್ ಮಾಡ್ತೀರಿ ಅನ್ನೋದನ್ನು ಟ್ರ್ಯಾಕ್ ಮಾಡಿ. ಇದರಲ್ಲಿ ನಿಮಗೆ ಸಹಾಯ ಮಾಡಲು ಅನೇಕ ಪರಿಕರಗಳು ಲಭ್ಯವಿವೆ. ಅದರ ನಂತರ ನೀವು ಸಮಯದ ಮಿತಿಯನ್ನು ಹೊಂದಿಸಲು ಈ ವಿವರಗಳನ್ನು ಬಳಸಬಹುದು. ಉದಾಹರಣೆಗೆ, ನೀವು ಅದನ್ನು ಅತಿಯಾಗಿ ಬಳಸುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ, ಫೋನ್ ಬಳಸಿದ ಎರಡು ಗಂಟೆಗಳ ನಂತರ ನೀವು ಹೆಚ್ಚು ಬಳಸುವ ಅಪ್ಲಿಕೇಶನ್ ಅನ್ನು ಮುಚ್ಚಲು ನೀವು ನಿರ್ಧರಿಸಬಹುದು.

ಮಲಗುವ ಕೋಣೆಯಿಂದ ಫೋನ್ ಹೊರಗಿಡಿ
ನಮ್ಮಲ್ಲಿ ಹೆಚ್ಚಿನವರು ಫೋನ್ ಗಳನ್ನು ಅಲಾರಂಗಳಾಗಿ (phone alarm) ಬಳಸುತ್ತೇವೆ. ಇನ್ನೂ ನಮ್ಮಲ್ಲಿ ಹೆಚ್ಚಿನವರು ಮಲಗುವ ಮೊದಲು ತಮ್ಮ ಫೋನ್ ನೋಡಿಕೊಂಡೇ ಮಲಗುತ್ತಾರೆ. ಮಲಗುವ ಮೊದಲು ಮತ್ತು ನಂತರ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದು (ಪರದೆಯಿಂದ ಹೊರಸೂಸುವ ಬೆಳಕು ಮತ್ತು ನಮ್ಮ ಕಣ್ಣುಗಳಿಗೆ ಅತ್ಯಂತ ಹಾನಿಕಾರಕವಾಗಿದೆ) ನಮ್ಮ ಕಣ್ಣುಗಳಿಗೆ ಹಾನಿಯುಂಟುಮಾಡಬಹುದು. ಆದುದರಿಂದ ಫೋನ್ ಅನ್ನು ನಿಮ್ಮ ಕೋಣೆಯಿಂದ ಹೊರಗಿಡಲು ಟ್ರೈ ಮಾಡಿ. ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಸೈಲೆಂಟ್ ಮೋಡ್ ನಲ್ಲಿಡಿ
ಈ ಸಲಹೆಯನ್ನು ರಜಾದಿನಗಳು ಅಥವಾ ವಾರಾಂತ್ಯಗಳಲ್ಲಿ ಮಾತ್ರ ಪ್ರಯತ್ನಿಸಬಾರದು, ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಫೋನ್ ಬಳಸಬೇಕಾಗುತ್ತದೆ. ಆದರೂ, ನಿಮ್ಮ ಫೋನ್ ಅನ್ನು ಕೆಲವು ಗಂಟೆಗಳ ಕಾಲ ಸೈಲೆಂಟ್ ನಲ್ಲಿಡಲು (silent mode) ಅಥವಾ ಸ್ವಿಚ್ ಆಫ್ ಮಾಡಲು ಪ್ರಯತ್ನಿಸಿ. ವೀಕೆಂಡ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ಊಟದ ಸಮಯದವರೆಗೆ ಇದನ್ನು ಮಾಡಿ. ನಿಮ್ಮ ಫೋನ್ ಅನ್ನು ನಿಮ್ಮಿಂದ ದೂರವಿಡುವ ಗಂಟೆಗಳನ್ನು ಕ್ರಮೇಣ ಹೆಚ್ಚಿಸಿ. ಇದು ಹೆಚ್ಚು ಫೋನ್ ಬಳಕೆ ಮಾಡೋದನ್ನು ತಪ್ಪಿಸುತ್ತೆ.

ಆಹಾರ ತಿನ್ನುವಾಗ ಫೋನ್ ಬಳಸಬೇಡಿ
ಸೋಶಿಯಲ್ ಮೀಡಿಯಾ ಮತ್ತು ಇತರ ವಿಷಯಗಳನ್ನು ಊಟ ಮಾಡುವ ಸಮಯದಲ್ಲಿ ನೋಡೋದು ನಿಮಗೆ ಇಷ್ಟವಾಗಬಹುದು. ಆದರೆ ಇದನ್ನು ಮಾಡೋದರಿಂದ ಕಣ್ಣುಗಳಿಗೂ ಹಾನಿಯಾಗುತ್ತೆ, ಜೊತೆಗೆ ಆಹಾರ ಸೇವನೆ ಬಗ್ಗೆಯೂ ನಿಮಗೆ ತಿಳಿಯೋದಿಲ್ಲ. ಆದುದರಿಂದ ಊಟ ಮಾಡುವ ಸಮಯದಲ್ಲಿ ಫೋನ್ ದೂರ ಇಡುವ ಮೂಲಕ ನಿಮ್ಮ ಕಣ್ಣಿಗೆ ವಿಶ್ರಾಂತಿ ನೀಡಿ, ಜೊತೆಗೆ ಆಹಾರವನ್ನು ಎಂಜಾಯ್ ಮಾಡಿ.

ಅಲಾರಂಗಳು ಮತ್ತು ಟೈಮರ್ ಸೆಟ್ ಮಾಡಿ 
ಹೆಚ್ಚಿನ ಜನರಿಗೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುವುದು ಆನಂದದಾಯಕ ಮತ್ತು ತಮ್ಮ ಸ್ಟೇಟಸ್ ಕಾಪಾಡಿಕೊಳ್ಳಲು ಅಗತ್ಯವಾಗಿದೆ. ಆದರೆ ಇದರಿಂದ ತುಂಬಾ ಸಮಯ ವ್ಯರ್ಥವಾಗುತ್ತೆ. ನೀವು ಫೇಸ್ಬುಕ್, ಇನ್ಸ್ಟಾಗ್ರಾಮ್ ಅಥವಾ ಇತರ ಸೋಶಿಯಲ್ ಮೀಡಿಯಾ (social media) ನೋಡಲು ಇಂತಿಷ್ಟು ಸಮಯವನ್ನು ನಿಗಧಿ ಪಡಿಸಿ, ಅದಕ್ಕಿಂತ ಹೆಚ್ಚಿನ ಸಮಯ ನೀವು ಮೊಬೈಲ್ ನೋಡಲೇಬೇಡಿ.
 

ಇತರ ಚಟುವಟಿಕೆಗಳಲ್ಲಿ ತೊಡಗಿಸಿ
ಬೇಸರವನ್ನು ತಪ್ಪಿಸಲು ನಮ್ಮಲ್ಲಿ ಅನೇಕರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೋಡುತ್ತಲೇ ಇರುತ್ತಾರೆ. ಮುಂದಿನ ಬಾರಿ ನಿಮಗೆ ಸ್ವಲ್ಪ ಬಿಡುವಿನ ಸಮಯವಿದ್ದಾಗ, ಸೋಶಿಯಲ್ ಮೀಡೀಯಾ ಬಿಟ್ಟು ಪುಸ್ತಕವನ್ನು ತೆಗೆದುಕೊಳ್ಳುವುದು, ಕೆಲವು ಸೃಜನಶೀಲ ಕೆಲಸಗಳನ್ನು (intresting activities) ಮಾಡುವುದು ಅಥವಾ ವಾಕಿಂಗ್ ಹೋಗುವುದು ಬೆಸ್ಟ್. ನಿಮ್ಮ ಫೀಡ್ ಗೆ ಸ್ಕ್ರಾಲ್ ಮಾಡುವುದಕ್ಕಿಂತ ಫೋನ್ ಕರೆಯಲ್ಲಿ ಸ್ನೇಹಿತರೊಂದಿಗೆ ಮಾತನಾಡುವುದು ಉತ್ತಮ.

click me!