Health Tips: ಕಾಫಿ ಅಡಿಕ್ಷನ್ ನಿಮಗಿದ್ಯಾ? ಹೆಲ್ತ್‌ ಹಾಳಾಗ್ಬಾರ್ದು ಅಂದ್ರೆ ಈ ರೀತಿ ಮಾಡಿ ಕುಡೀರಿ

Published : Mar 25, 2023, 07:00 AM IST

ಕಾಫಿ ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ, ಲಕ್ಷಾಂತರ ಜನರು ತಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ದೇಹಕ್ಕೆ ಬೇಕಾದ ಶಕ್ತಿ ಮತ್ತು ಹುರುಪು ಜೊತೆಗೆ ಹಲವಾರು ಪ್ರಯೋಜನಗಳನ್ನು ಕಾಫಿ ಹೊಂದಿದ್ದರೂ, ಅತಿಯಾಗಿ ಕಾಫಿ ಕುಡಿಯೋದರಿಂದ ಹಾನಿಕಾರಕವಾಗಬಹುದು. 

PREV
111
Health Tips:  ಕಾಫಿ ಅಡಿಕ್ಷನ್ ನಿಮಗಿದ್ಯಾ? ಹೆಲ್ತ್‌ ಹಾಳಾಗ್ಬಾರ್ದು ಅಂದ್ರೆ ಈ ರೀತಿ ಮಾಡಿ ಕುಡೀರಿ

ಕಾಫಿ ಕುಡಿಯೋದರಿಂದ ಹಾನಿ ಕೂಡ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ನೀವು ಕಾಫಿಯನ್ನು ಪೌಷ್ಟಿಕಾಂಶ ಭರಿತವನ್ನಾಗಿ ಮಾಡಬೇಕು. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ? ಪರಿಮಳಕ್ಕೆ ಧಕ್ಕೆಯಾಗದಂತೆ ನಿಮ್ಮ ಕಾಫಿಯನ್ನು ಹೆಚ್ಚು ಪೌಷ್ಟಿಕವಾಗಿಸಲು ವಿವಿಧ ವಿಧಾನಗಳು ಇಲ್ಲಿವೆ. ಇವುಗಳನ್ನು ಟ್ರೈ ಮಾಡಿ ಇನ್ನು ಮುಂದೆ ಕಾಫಿ ಕುಡಿಯಿರಿ.

211

ಹಸುವಿನ ಹಾಲಿನ ಬದಲು ನಟ್ ಮಿಲ್ಕ್ (nut milk) ಅಥವಾ ತೆಂಗಿನ ಹಾಲನ್ನು ಬಳಸಿ: 
ಹಸುವಿನ ಹಾಲಿನಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ, ಇದು ಹೃದ್ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಕಾಫಿ ಮಾಡುವಾಗ ಹಸುವಿನ ಹಾಲಿನ ಬದಲಿಗೆ ಕೊಬ್ಬು ಮತ್ತು ಕ್ಯಾಲೊರಿಗಳು ಕಡಿಮೆ ಇರುವ ಬಾದಾಮಿ ಹಾಲು, ಸೋಯಾ ಹಾಲು ಅಥವಾ ತೆಂಗಿನ ಹಾಲನ್ನು ಪ್ರಯತ್ನಿಸಿ.

311

ದಾಲ್ಚಿನ್ನಿ ಬಳಸಿ (cinnamon)
ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೆಮೊರಿ ಪವರ್ ಹೆಚ್ಚಿಸಲು ಸಹಾಯ ಮಾಡುವ ನೈಸರ್ಗಿಕ ಮಸಾಲೆಯಾಗಿದೆ. ಹೆಚ್ಚುವರಿ ಪರಿಮಳ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ, ನಿಮ್ಮ ಕಾಫಿಗೆ ದಾಲ್ಚಿನ್ನಿ ಪುಡಿ ಬೆರೆಸಿ ಸೇವಿಸಿ.

411

ಕಾಫಿ ಸೇವನೆ ಮಿತವಾಗಿರಲಿ : 
ಕಾಫಿ ಮಿತವಾಗಿ ಸೇವಿಸಿದರೆ ಉತ್ತಮ. ಅತಿಯಾದ ಕಾಫಿ ಸೇವನೆ ಆತಂಕ, ನಿದ್ರಾಹೀನತೆ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಪ್ರತಿದಿನ ಗರಿಷ್ಠ 3 ಕಪ್ ಕಾಫಿ ಕುಡಿಯಿರಿ. ಅದಕ್ಕಿಂತ ಹೆಚ್ಚು ಕುಡಿಯೋದೆ ಬೇಡ.

511

ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ಆರಿಸಿ (good quality coffee beans):
ಅಗ್ಗದ ಬೀನ್ಸ್ ಹೆಚ್ಚು ಮಾಲಿನ್ಯಕಾರಕಗಳು ಮತ್ತು ವಿಷಗಳನ್ನು ಹೊಂದಿರುವುದರಿಂದ ನಿಮ್ಮ ಕಾಫಿ ಬೀಜಗಳ ಗುಣಮಟ್ಟವು ಮುಖ್ಯವಾಗಿದೆ. ಸಾವಯವ, ಉತ್ತಮವಾದ ಮತ್ತು ಏಕ-ಮೂಲದ ಕಾಫಿ ಬೀಜಗಳನ್ನು ಹುಡುಕಿ, ಅವು ಗುಣಮಟ್ಟದಲ್ಲಿ ಹೆಚ್ಚು ಸುಸ್ಥಿರವಾಗಿವೆ.

611

ಸಕ್ಕರೆ ಅಥವಾ ಕೃತಕ ಸಿಹಿಕಾರಕ ಸೇರಿಸಬೇಡಿ : 
ನಿಮ್ಮ ಕಾಫಿಗೆ ಸಕ್ಕರೆ ಅಥವಾ ಕೃತಕ ಸಿಹಿಕಾರಕಗಳನ್ನು (artificial sweetener) ಸೇರಿಸುವ ಬದಲು, ಜೇನುತುಪ್ಪ, ಮೇಪಲ್ ಸಿರಪ್ ಅಥವಾ ಸ್ಟೀವಿಯಾದಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಿ. ಸಕ್ಕರೆ ಮತ್ತು ರಾಸಾಯನಿಕ ಸೇರ್ಪಡೆಗಳ ನಕಾರಾತ್ಮಕ ಪರಿಣಾಮಗಳಿಲ್ಲದೆ ಅವು ಸಿಹಿಯನ್ನು ಒದಗಿಸುತ್ತವೆ.
 

711

ಡಾರ್ಕ್ ರೋಸ್ಟ್ ಕಾಫಿ (dark roast coffee): 
ಇದು ಹಗುರವಾದ ರೋಸ್ಟ್ ಗಳಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ, ಇದು ಆರೋಗ್ಯಕರ ಆಯ್ಕೆಯಾಗಿದೆ. ಇದು ಬಲವಾದ ಪರಿಮಳ ಮತ್ತು ರುಚಿಯನ್ನು ಸಹ ಹೊಂದಿದೆ, ಇದು ಕಾಫಿ ಕುಡಿಯುವವರಲ್ಲಿ ಜನಪ್ರಿಯ ಆಯ್ಕೆಯಾಗಿದೆ.

811

ನಟ್ ಮಿಲ್ಕ್ ಅಥವಾ ತೆಂಗಿನ ಹಾಲನ್ನು ಬಳಸಿ: 
ಹಸುವಿನ ಹಾಲಿನಲ್ಲಿ ಸ್ಯಾಚುರೇಟೆಡ್ ಕೊಬ್ಬು(saturated fat) ಮತ್ತು ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ, ಇದು ಹೃದ್ರೋಗಕ್ಕೆ ಕಾರಣವಾಗಬಹುದು. ಬದಲಾಗಿ, ಕೊಬ್ಬು ಮತ್ತು ಕ್ಯಾಲೊರಿಗಳು ಕಡಿಮೆ ಇರುವ ಬಾದಾಮಿ, ಸೋಯಾ ಅಥವಾ ತೆಂಗಿನ ಹಾಲನ್ನು ಬಳಸಲು ಪ್ರಯತ್ನಿಸಿ.

911

ಬ್ಲ್ಯಾಕ್ ಕಾಫಿ ಕುಡಿಯಿರಿ:
ಕೆನೆ ಮತ್ತು ಸಕ್ಕರೆ ನಿಮ್ಮ ಕಾಫಿಯ ರುಚಿಯನ್ನು ಹೆಚ್ಚಿಸುತ್ತೆ ನಿಜ. ಆದರೆ ಅವು ಹೆಚ್ಚುವರಿ ಕ್ಯಾಲೊರಿಗಳು ಮತ್ತು ಕೊಬ್ಬನ್ನು ಸಹ ಸೇರಿಸುತ್ತವೆ. ಇದು ಯಾವುದೇ ಹೆಚ್ಚುವರಿ ಸಕ್ಕರೆ ಅಥವಾ ಕೊಬ್ಬನ್ನು ಒಳಗೊಂಡಿಲ್ಲದ ಕಾರಣ, ನೀವು ಬ್ಲ್ಯಾಕ್ ಕಾಫಿ (black coffee) ಕುಡಿಯೋದು ಬೆಸ್ಟ್. 

1011

ಕಾಲಜನ್ ಪುಡಿ: 
ಈ ಸಪ್ಲಿಮೆಂಟ್ ಚರ್ಮದ ಆರೋಗ್ಯ, ಕೀಲು ಕಾರ್ಯ ಮತ್ತು ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಹೆಚ್ಚುವರಿ ಆರೋಗ್ಯ ಪ್ರಯೋಜನಗಳಿಗಾಗಿ ನಿಮ್ಮ ಕಾಫಿಗೆ ಒಂದು ಸ್ಕೂಪ್ ಕಾಲಜನ್ ಪುಡಿಯನ್ನು ಸೇರಿಸಿ. 

1111

ಕಾಫಿ ಮಾಡಲು ಡೈರಿ ಹಾಲಿಗೆ ಆರೋಗ್ಯಕರ ಬದಲಿಯಾಗಿ ನೀವು ಬಾದಾಮಿ, ಸೋಯಾ ಮತ್ತು ತೆಂಗಿನ ಹಾಲಿನಂತಹ ಸಸ್ಯ ಆಧಾರಿತ ಹಾಲು (plant based milk) ಸೇರಿಸಬಹುದು. ಅವು ಕಡಿಮೆ ಕ್ಯಾಲೊರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತವೆ ಮತ್ತು ಕೊಲೆಸ್ಟ್ರಾಲ್ ಮುಕ್ತವಾಗಿವೆ. ಕಾಫಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೆಮೊರಿ ಪವರ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಟೈಪ್ 2 ಮಧುಮೇಹ ಮತ್ತು ಪಿತ್ತಜನಕಾಂಗದ ಕಾಯಿಲೆ ಸೇರಿದಂತೆ ಹಲವಾರು ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತೆ. 

Read more Photos on
click me!

Recommended Stories