ಕರಿದ ಆಹಾರ ಎಷ್ಟ್ ಬೇಕಾದ್ರೂ ತಿನ್ತೀನಿ ಅನ್ನೋ ಪೈಕಿನಾ? ತಯಾರಿಸುವಾಗ ಈ ಟಿಪ್ಸ್ ನೆನಪಿರ್ಲಿ

First Published | Mar 23, 2023, 2:52 PM IST

ಕರಿದ ಆಹಾರವನ್ನು ತಿನ್ನೋಕೆ ಯಾರ್ ತಾನೇ ಇಷ್ಟಪಡಲ್ಲ ಹೇಳಿ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪ್ಲೇಟ್‌ನ್ನು ದೂರ ತಳ್ಬೇಕು ಅಷ್ಟೆ. ಆದ್ರೆ ಡೀಪ್‌ ಫ್ರೈಡ್ ಆಹಾರ ತಯಾರಿಸುವಾಗ ಈ ವಿಚಾರ ಗಮನಿಸ್ಕೊಂಡ್ರೆ ಆರೋಗ್ಯಕ್ಕೇನೂ ತೊಂದ್ರೆಯಾಗಲ್ಲ.

ಸಾಮಾನ್ಯವಾಗಿ ಎಲ್ಲರೂ ಡೀಪ್-ಫ್ರೈಡ್ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ನೋಡೋಕೆ ಯಮ್ಮೀ ಆಗಿರುವುರ ಜೊತೆಗೆ ತಿನ್ನಲು ಸಖತ್ತಾಗಿರುತ್ತದೆ. ಆದರೆ ಬಾಯಿಗೆ ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಇಂಥಾ ಆಹಾರಗಳಿಂದ ಅನಿವಾರ್ಯವಾಗು ದೂರವಿರಬೇಕಾಗುತ್ತದೆ. ಹೆಚ್ಚಿನ ಎಣ್ಣೆ ಮತ್ತು ಕೊಬ್ಬಿನಂಶದ ಕಾರಣದಿಂದಾಗಿ ಡೀಪ್‌ ಫ್ರೈಡ್ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸುತ್ತೇವೆ. 

ಡೀಪ್ ಫ್ರೈಡ್ ಆಹಾರದಲ್ಲಿ ಬಳಸೋ ಅತಿಯಾದ ಎಣ್ಣೆಯ ಅಂಶ ಆರೋಗ್ಯ ಸಮಸ್ಯೆ ಕಾರಣವಾಗುತ್ತದೆ. ಹೀಗಾಗಿ ಬಾಯಲ್ಲಿ ನೀರೂರಿದ್ರೂ ಇಂಥಾ ಆಹಾರಗಳನ್ನು ತಿನ್ನೋ ಹಾಗಿಲ್ಲ. ಹಾಗಂತ ನೀವು ಬೇಸರ ಪಟ್ಕೊಳ್‌ಬೇಕಾಗಿಲ್ಲ. ಇನ್ಮುಂದೆ ನೀವು ಡೀಫ್ ಫ್ರೈಡ್ ಆಹಾರವನ್ನು ಸಹ ತಿನ್ಬೋದು. ಆದ್ರೆ ಅದನ್ನು ತಯಾರಿಸುವಾಗ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ ಸಾಕು.

Latest Videos


ತಾಜಾ ಎಣ್ಣೆಯನ್ನು ಬಳಸಿ
ನೀವು ಡೀಪ್‌ ಫ್ರೈಡ್ ಅಹಾರವನ್ನು ತುಂಬಾ ಇಷ್ಟಪಡುತ್ತಿದ್ದರೆ ಯಾವಾಗಲೂ ಇಂಥಾ ಫುಡ್ ತಯಾರಿಸುವ ತಾಜಾ ಎಣ್ಣೆಯನ್ನಷ್ಟೇ ಬಳಸಿ. ಇದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ತರಕಾರಿಗಳನ್ನು ಬಳಸಿ ಅಡುಗೆ ಮಾಡುತ್ತಿದ್ದರೆ, ಅವುಗಳು ಮತ್ತು ಅಡುಗೆಗೆ ಬಳಸುವ ಇತರ ಪದಾರ್ಥಗಳು ಫ್ರೆಶ್ ಆಗಿರಲಿ. ಇದರಿಂದ ಆಹಾರವೂ ಹೆಲ್ದೀಯಾಗಿರುತ್ತದೆ

ಆರೋಗ್ಯಕರ ಹಿಟ್ಟನ್ನು ಬಳಸಿ
ಡೀಪ್-ಫ್ರೈಡ್ ಆಹಾರ ತಯಾರಿಕೆಯಲ್ಲಿ ಸಾಮಾನ್ಯವಾಗಿ ಹಿಟ್ಟು ಅಥವಾ ಪುಡಿಯನ್ನು ಹೊರ ಲೇಪನವಾಗಿ ಬಳಸಲಾಗುತ್ತದೆ. ಅದಕ್ಕಾಗಿ, ಸಂಸ್ಕರಿಸಿದ ಹಿಟ್ಟನ್ನು ಬಳಸುವ ಬದಲು ಅಕ್ಕಿ, ಜೋಳದ ಹಿಟ್ಟು ಅಥವಾ ರಾಗಿ ಹಿಟ್ಟಿನಂತಹ ಅಂಟು ಮುಕ್ತ ಹಿಟ್ಟುಗಳನ್ನು ಬಳಸಲು ಪ್ರಾರಂಭಿಸಿ.

ಅಡುಗೆ ಸೋಡಾ ಸೇರಿಸಿ
ಡೀಪ್‌ ಫ್ರೈಡ್ ಆಹಾರ ತಯಾರಿಸುವಾಗ ಹಿಟ್ಟಿಗೆ ಒಂದು ಪಿಂಚ್ ಅಡಿಗೆ ಸೋಡಾವನ್ನು ಸೇರಿಸುವುದು ಒಳ್ಳೆಯದು. ಏಕೆಂದರೆ ಅಡಿಗೆ ಸೋಡಾದಿಂದ ಬಿಡುಗಡೆಯಾಗುವ ಗುಳ್ಳೆಗಳು ಆಹಾರದಲ್ಲಿ ತೈಲ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ತೈಲ ತಾಪಮಾನವನ್ನು ಪರಿಶೀಲಿಸುವುದರಲ್ಲಿ ಎಕ್ಸ್‌ಪರ್ಟ್ ಅಲ್ಲವಾಗಿದ್ದರೆ , ತೈಲ ತಾಪಮಾನವನ್ನು ಪರಿಶೀಲಿಸಲು ಅಡಿಗೆ ಥರ್ಮಾಮೀಟರ್ ಅನ್ನು ಬಳಸಲು ಪ್ರಾರಂಭಿಸಿ.

ಆರೋಗ್ಯಕರ ಎಣ್ಣೆಯನ್ನು ಬಳಸಿ
ಹುರಿಯುವ ಉದ್ದೇಶಗಳಿಗಾಗಿ, ಸಂಸ್ಕರಿಸಿದ ಎಣ್ಣೆಯನ್ನು ತಪ್ಪಿಸಿ. ಸಾಸಿವೆ ಎಣ್ಣೆ, ತುಪ್ಪ ಅಥವಾ ಆಲಿವ್ ಎಣ್ಣೆಯನ್ನು ಬಳಸಲು ಪ್ರಾರಂಭಿಸಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇಲ್ಲದಿರುವ ಕಾರಣ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವುದಿಲ್ಲ.

ಪೇಪರ್ ಟವೆಲ್ ಬಳಸಿ
ಆಹಾರವನ್ನು ಹುರಿದ ನಂತರ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಅದನ್ನು ಒಂದೆರಡು ನಿಮಿಷಗಳ ಕಾಲ ಪೇಪರ್ ಟವೆಲ್‌ಗೆ ವರ್ಗಾಯಿಸಲು ಖಚಿತಪಡಿಸಿಕೊಳ್ಳಿ. ಸ್ಟೀಲ್‌ ಪ್ಲೇಟ್‌ಗಳಲ್ಲಿ ಹಾಕುವುದನ್ನು ಮಾಡಬೇಡಿ. ಇದರಿಂದ ಆಹಾರಲ್ಲಿ ಎಣ್ಣೆ ಹಾಗೆಯೇ ಇರುತ್ತದೆ. ಇದು ನೇರವಾಗಿ ಆಹಾರದ ಮೂಲಕ ಹೊಟ್ಟೆಯನ್ನು ಸೇರುತ್ತದೆ. ಆರೋಗ್ಯ ಹದಗೆಡಲು ಕಾರಣವಾಗುತ್ತದೆ.

click me!