ಮಾರ್ಕೆಟ್ಟಲ್ಲಿ ಸಿಗೋ ಪ್ರೋಟೀನ್ ಪೌಡರ್ ಬಿಡಿ, ಮನೆಯಲ್ಲೇ ಮಾಡ್ಬಹುದು ನೋಡಿ!

First Published | Aug 9, 2022, 1:37 PM IST

ಕಳೆದ ಕೆಲವು ವರ್ಷಗಳಲ್ಲಿ ಯುವಕರಲ್ಲಿ ಫಿಟ್ನೆಸ್ ಕ್ರೇಜ್ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ದೇಹವನ್ನು ಫಿಟ್ ಮತ್ತು ಮಾಸ್ಕ್ಯುಲರ್ ಮಾಡಲು ಬಯಸ್ತಾರೆ. ಇದರಿಂದ ಇತರರನ್ನು ಆಕರ್ಷಿಸಬಹುದು ಎಂದು ನಂಬುತ್ತಾರೆ. ಹಾಗಾಗಿ, ಯುವಕರು ಜಿಮ್‌ಗೆ ಹೋಗಿ ಗಂಟೆಗಳ ಕಾಲ ಬೆವರು ಸುರಿಸ್ತಾರೆ. ಫಿಟ್ ಆಗಿರಲು, ಯುವಕರು ಜಿಮ್ ನಂತರ ತಕ್ಷಣವೇ ಪ್ರೋಟೀನ್ ಪೌಡರ್ ಸೇವಿಸ್ತಾರೆ. ಪ್ರೋಟೀನ್ ಪೌಡರ್ ಸೇವನೆಯು ಬಾಡಿ ಬಿಲ್ಡಿಂಗ್‌ಗೆ ಸಹಾಯ ಮಾಡುತ್ತೆ. ಆದರೆ ಪ್ರೊಟೀನ್ ಪೌಡರ್‌ಗೆ ಎಷ್ಟು ಹಣ ಸುರಿಯೋದು ಅಲ್ವಾ?

ಸಾಮಾನ್ಯವಾಗಿ ಪ್ರೋಟೀನ್ ಪೌಡರ್ (Protein powder) ಸ್ವಲ್ಪ ದುಬಾರಿ. ಇದನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೆಲವು ಜನರು ಪ್ರೋಟೀನ್ ಪೌಡರ್ ಸೇವಿಸಲು ಹೆದರುತ್ತಾರೆ ಏಕೆಂದರೆ ಇದು ತಮ್ಮ ದೇಹದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತೆ ಎಂದು ಕೊಳ್ಳುತ್ತಾರೆ. ಈಗ ಯಾವುದೇ ಪರಿಣಾಮ ತೋರಿಸದ ಅನೇಕ ಪ್ರೋಟೀನ್ ಪೌಡರ್ ಸಹ ಮಾರುಕಟ್ಟೆಯಲ್ಲಿದೆ, ಆದರೆ ಕೆಲವು ವರ್ಷಗಳ ನಂತರ, ಅವು ದೇಹದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು. ಹಾಗಿದ್ರೆ ನೀವೇನು ಮಾಡಬಹುದು?

 ಮಾರ್ಕೆಟ್ಟಿನಲ್ಲಿ (Market) ಸಿಗೋ ಪ್ರೋಟೀನ್ ಪೌಡರ್ ತಿನ್ನಲು ಹೆದರುವ ಕೆಲವೇ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಅದನ್ನು ಮನೆಯಲ್ಲಿಯೇ ತಯಾರಿಸಬಹುದು. ಅದನ್ನು ತಯಾರಿಸೋದು ಹೇಗೆ? ಅದಕ್ಕೆ ಏನೆಲ್ಲಾ ಬೇಕಾಗಬಹುದು ಅನ್ನೋದನ್ನು ನೋಡೋಣ. 

Latest Videos


ಪ್ರೋಟೀನ್ ಪೌಡರ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಮಖಾನಾ - 10 ರಿಂದ 15 
ಬಾದಾಮಿ - 10 ರಿಂದ 15
ವಾಲ್ನಟ್ಸ್(Walnut) - 2 ರಿಂದ 3
ಸೋಂಪು - 1 ಟೀ ಚಮಚ 
ಸಕ್ಕರೆ - 1 ಟೀ ಚಮಚ 
ಹಸಿರು ಏಲಕ್ಕಿ-2 
ಕರಿಮೆಣಸು - ಒಂದು ಚಿಟಿಕೆ
1 ಟೀಸ್ಪೂನ್ ಮಿಕ್ಸ್ ಸೀಡ್ಸ್ 

 ಈ ಎಲ್ಲಾ ವಸ್ತುಗಳು ಪ್ರೋಟೀನ್ ಮತ್ತು ಅನೇಕ ವಿಟಮಿನ್‌ಗಳಿಂದ(Vitamins) ಸಮೃದ್ಧವಾಗಿವೆ, ಇದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವನೆ ಮಾಡೋದರಿಂದ ದೇಹಕ್ಕೆ ಯಾವುದೇ ಹಾನಿ ಉಂಟು ಮಾಡೋದಿಲ್ಲ. ಅಂದರೆ ಸೈಡ್ ಎಫೆಕ್ಟ್ ಕೂಡ ಇರೋದಿಲ್ಲ. ನೀವು ತಲೆಕೆಡಿಸಿ ಕೊಳ್ಳದೆ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು.

ಮನೆಯಲ್ಲಿಯೇ ಪ್ರೋಟೀನ್ ಪೌಡರ್ ತಯಾರಿಸೋದು ಹೇಗೆ?

ಬಾದಾಮಿ ಮತ್ತು ಮಖಾನಾಗಳನ್ನು(Makhana) ಪ್ಯಾನ್‌ನಲ್ಲಿ ಫ್ರೈ ಮಾಡಿ. ಅದು ತಣ್ಣಗಾದ ಮೇಲೆ ಬೇರೆ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ರುಬ್ಬಿ ಪೌಡರ್ ಮಾಡಿ., ಈ ಪುಡಿಯನ್ನು ಒಂದು ಬಾಟಲಿಯಲ್ಲಿ ಮುಚ್ಚಿಡಿ. ಗಾಳಿಯಾಡದ ಡಬ್ಬಿಯಲ್ಲಿ ಇದನ್ನು ಮುಚ್ಚಿಡಿ. ಹಾಲಿಗೆ ಒಂದು ಟೀಚಮಚ ಪ್ರೋಟೀನ್ ಪೌಡರ್ ಸೇರಿಸಿ ಪ್ರತಿದಿನ ಇದನ್ನು ಕುಡಿಯಿರಿ.

ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪೌಡರ್ ಪ್ರಯೋಜನಗಳು

ಮಾರುಕಟ್ಟೆಯಲ್ಲಿ ಅನೇಕ ರೀತಿಯ ಪ್ರೋಟೀನ್ ಪೌಡರ್‌ಗಳಿವೆ. ಇದರಲ್ಲಿ ಸಕ್ಕರೆಯ ಪ್ರಮಾಣ ತುಂಬಾ ಹೆಚ್ಚಾಗಿರುತ್ತೆ. ಅವು ದೇಹಕ್ಕೆ ತುಂಬಾ ಅಪಾಯ. ಹಾಗಾಗಿ, ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪೌಡರ್ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ನೀವು ಉತ್ತಮ ರುಚಿಯನ್ನು ಬಯಸಿದರೆ, ನೀವು ಅದಕ್ಕೆ ಕೋಕೋ ಪೌಡರ್(Cocoa powder) ಸಹ ಸೇರಿಸಬಹುದು, ಇದು ತುಂಬಾನೆ ಟೇಸ್ಟಿಯಾಗಿರುತ್ತೆ.
 

click me!