ಡಯೆಟ್‌ ಅಂತ ಕಷ್ಟಪಡೋದು ಬೇಡ; ಈ ಬದಲಾವಣೆ ಮಾಡ್ಕೊಂಡ್ರೆ ನೀವು ಸಣ್ಣ ಆಗೋದು ಪಕ್ಕಾ!

Published : Jun 06, 2026, 04:47 PM IST

How to lose weight without exercise in a week: ವಾಕಿಂಗ್, ಜಿಮ್ ಅಂತ ಕಸರತ್ತು ಮಾಡದೆ ಸುಲಭವಾಗಿ ತೂಕ ಇಳಿಸಬೇಕಾ? ಹಾಗಿದ್ರೆ ನಿಮಗಾಗಿಯೇ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ. ಇವುಗಳನ್ನು ಪಾಲಿಸಿದರೆ, ನೀವು ಊಹಿಸದಷ್ಟು ಸುಲಭವಾಗಿ ನಿಮ್ಮ ತೂಕದಲ್ಲಿ ಬದಲಾವಣೆ ಕಾಣಬಹುದು. 

PREV
15
ಏನಿದು, ಕೈ ಬದಲಿಸಿ ತಿನ್ನಬೇಕಾ?

ಹೌದು! ನೀವು ಸಾಮಾನ್ಯವಾಗಿ ಬಲಗೈಯಲ್ಲಿ ತಿನ್ನುವವರಾಗಿದ್ದರೆ, ಎಡಗೈಯಲ್ಲಿ ತಿನ್ನಲು ಪ್ರಯತ್ನಿಸಿ. ಇದು ನಿಮ್ಮನ್ನು ನಿಧಾನವಾಗಿ ತಿನ್ನುವಂತೆ ಮಾಡುತ್ತದೆ. ಹೊಟ್ಟೆ ತುಂಬಿದೆ ಎಂಬ ಸಿಗ್ನಲ್ ಮೆದುಳಿಗೆ ತಲುಪಲು 20 ನಿಮಿಷ ಬೇಕು. ನಿಧಾನವಾಗಿ ತಿಂದರೆ, ಅತಿಯಾಗಿ ತಿನ್ನುವುದನ್ನು ತಾನಾಗಿಯೇ ತಡೆಯಬಹುದು.

25
ನೀಲಿ ಬಣ್ಣದ ಪ್ಲೇಟ್‌

ಕೆಂಪು, ಹಳದಿ ಬಣ್ಣದ ಪ್ಲೇಟ್‌ಗಳು ಹಸಿವನ್ನು ಹೆಚ್ಚಿಸುತ್ತವೆ (ಅದಕ್ಕೇ ಹೋಟೆಲ್‌ಗಳಲ್ಲಿ ಈ ಬಣ್ಣ ಬಳಸುತ್ತಾರೆ!). ಆದರೆ, ನೀವು ನೀಲಿ ಬಣ್ಣದ (Blue) ಪ್ಲೇಟ್‌ ಬಳಸಿ ಊಟ ಮಾಡಿ ನೋಡಿ. ವೈಜ್ಞಾನಿಕವಾಗಿ, ನೀಲಿ ಬಣ್ಣವು ಹಸಿವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸುತ್ತದೆ. ಇದರಿಂದ ಊಟದ ಪ್ರಮಾಣವೂ ತಾನಾಗಿಯೇ ಕಡಿಮೆಯಾಗುತ್ತದೆ. ಇದೊಂದು ಸಿಂಪಲ್ ಸೈಕಾಲಜಿ ಟ್ರಿಕ್!

35
ಬಿಸಿ ನೀರು ಕುಡಿಯಿರಿ

ಊಟಕ್ಕೆ ಕೂರುವ 15 ನಿಮಿಷಗಳ ಮೊದಲು ಒಂದು ದೊಡ್ಡ ಲೋಟ ಬಿಸಿ ನೀರು ಕುಡಿಯಿರಿ. ಇದು ನಿಮ್ಮ ಹೊಟ್ಟೆಯನ್ನು ಸ್ವಲ್ಪ ಮಟ್ಟಿಗೆ ತುಂಬಿಸಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹಾಗೆಯೇ, ಪ್ರತಿ ತುತ್ತು ಊಟದ ನಂತರವೂ ಒಂದು ಸಿಪ್ ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ.

45
ಜಗಿದು ತಿನ್ನಿ

ರೀಲ್ಸ್ ನೋಡುತ್ತಾ ತಿಂದರೆ, ಎಷ್ಟು ತಿನ್ನುತ್ತಿದ್ದೇವೆ ಎಂಬುದೇ ತಿಳಿಯುವುದಿಲ್ಲ! ಮೊಬೈಲ್, ಟಿವಿ ಆಫ್ ಮಾಡಿ, ಆಹಾರದ ಪರಿಮಳ ಮತ್ತು ರುಚಿಯನ್ನು ಆಸ್ವಾದಿಸುತ್ತಾ, ಚೆನ್ನಾಗಿ ಜಗಿದು ತಿನ್ನಿ (Mindful Eating). ಹೀಗೆ ತಿಂದರೆ, ಕಡಿಮೆ ಆಹಾರವೇ ನಿಮಗೆ ಹೆಚ್ಚಿನ ತೃಪ್ತಿ ನೀಡುತ್ತದೆ.

55
ತರಕಾರಿ ತಿನ್ನಿ

ಹೆವಿ ಊಟವನ್ನು ನೇರವಾಗಿ ತಿನ್ನಬೇಡಿ. ಮೊದಲು ಒಂದು ಕಪ್ ತರಕಾರಿ ಸೂಪ್ ಅಥವಾ ಸೌತೆಕಾಯಿ ಸಲಾಡ್ ಸೇವಿಸಿ. ನಂತರ ಮುಖ್ಯ ಊಟವನ್ನು ಸೇವಿಸಿದರೆ, ಹೊಟ್ಟೆ ಬೇಗನೆ ತುಂಬುತ್ತದೆ. ಇದರಿಂದ ಅನಗತ್ಯ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳು ದೇಹ ಸೇರುವುದನ್ನು ತಡೆಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories